Breaking News

ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿ:ಅಧಿಕಾರಿಗಳ ಮೇಲೆ ಕಲ್ಲು ತೂರಾಟ

ಬೆಳಗಾವಿ: ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ 20ಕ್ಕೂ ಹೆಚ್ಚು ದಂಧೆಕೋರರು ಕಲ್ಲುತೂರಾಟ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಯಮಕನಮರಡಿಯಲ್ಲಿ ನಡೆದಿದೆ. ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳ ಮೇಲೆಯೇ ಮುಗಿಬಿದ್ದ ದಂಧೆಕೋರರು ಕಲ್ಲುತೂರಾಟ ನಡೆಸಿ, ಇಲಾಖೆ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಘಟನೆಯಲ್ಲಿ ಚಾಲಕ …

Read More »

ಆಟೋ ಸಂಚಾರ, ಪಾರ್ಕ್, 2 ಗಂಟೆವರೆಗೆ ಅಂಗಡಿ ಓಪನ್; ಲಾಕ್ಡೌನ್ ಸಡಿಲಿಕೆ -11 ಜಿಲ್ಲೆಗಳಲ್ಲಿ ಯಥಾಸ್ಥಿತಿ

ಬೆಂಗಳೂರು: ಕೊರೋನಾ ತಡೆಗೆ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಮೇರೆಗೆ ಈಗಿರುವ ನಿರ್ಬಂಧಗಳಲ್ಲಿ ಕೆಲವು ಮಾರ್ಪಾಡು, ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ, ಅಂದರೆ ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, …

Read More »

ಚಿಕ್ಕ ಸಾಹುಕಾರರ ಹುಟ್ಟು ಹಬ್ಬ ಶುಭ ಕೋರಿದ ಸಂತೋಷ್ ಜಾರಕಿಹೊಳಿ

ಗೋಕಾಕ: ಗೋಕಾಕ ಎಂದ್ರೆ ಜಾರಕಿಹೊಳಿ ಬಂಧುಗಳ ಭದ್ರ ಕೋಟೆ ರಾಜ್ಯ ರಾಜಕಾರಣದಲ್ಲಿ ಅಣ್ಣ ತಮ್ಮಂದಿರು ಬ್ಯುಸಿ ಇದ್ರೆ ಗೋಕಾಕ ನಗರದ ಛೋಟಾ ನವಾಬ ಅಂದ್ರೆ ಶ್ರೀ ಲಖನ ಜಾರಕಿಹೊಳಿ ಅವರು, ಗೋಕಾಕ ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಜಿಲ್ಲೆ ಗಳಲ್ಲಿ ಕೂಡ ಇವರದೇ ಆದ ಒಂದು ಯುವಕರ ಪಡೆ ಇದೆ. ಗೋಕಾಕ ಉದ್ಯಮಿ ಹಾಗೂ ಗೋಕಾಕ ನಲ್ಲಿ ನಡೆಯುವ ಪ್ರತಿಯೊಂದು ಚುಟುವತಿಕೆಗು ಸದಾ ಮುನ್ನುಡಿಯಲ್ಲಿ ಇರುವವರು. ಕ್ರಿಕೆಟ್ ಪಂದ್ಯಾವಳಿ, ಆಗಿರಬಹುದು …

Read More »

ಸರ್ಕಸ್ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ: ಲಾಕ್‍ಡೌನ್ ಆಗುವ ಮೊದಲು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಸರ್ಕಸ್ ಪ್ರದರ್ಶಿಸಲು ಸರ್ಕಸ್ ಕಲಾವಿದರು ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರದರ್ಶನ ಇಲ್ಲದೆ ಹಣ, ಊಟವಿಲ್ಲದೆ ಕೊರಗುತ್ತಿದ್ದ ಸರ್ಕಸ್ ಕಲಾವಿದರಿಗೆ ಶಾಸಕ ಗಣೆಶ್ ಹುಕ್ಕೇರಿ ದಿನಸಿ ಸಾಮಾಗ್ರಿ ವಿತರಿಸಿದ್ದಾರೆ. ಸರ್ಕಸ್ ಕಂಪನಿಯ ಕಲಾವಿದರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಸುಮಾರು ಆರವತ್ತಕ್ಕೂ ಹೆಚ್ಚು ಕಲಾವಿದರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ರೇಶನ್ ಹಾಗೂ ಗೃಹಪಯೋಗಿ ಸಾಮಗ್ರಿಗಳನ್ನು …

Read More »

ವಿಜಯೇಂದ್ರ ಮಠ ಸುತ್ತಾಟ ಗುಟ್ಟು?

ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಸಚಿವರು, ಬಿಜೆಪಿ ನಾಯಕರು ಬಲವಾಗಿ ಪ್ರತಿಪಾದಿಸಿದ್ದರೂ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಅವರು ಮಠಗಳನ್ನು ಸುತ್ತಲಾರಂಭಿಸಿರುವುದು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಯಡಿಯೂರಪ್ಪನವರ ವಿರೋಧಿ ಎಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ಇತ್ತೀಚೆಗೆ ಹಲವು ಮಠಗಳಿಗೆ ಭೇಟಿ ಕೊಟ್ಟಿದ್ದರು. ದೆಹಲಿ ಮಟ್ಟದಲ್ಲಿ ಬಿಜೆಪಿಯೊಳಗೆ ‘ಹಿಡಿತ’ ಹೊಂದಿರುವ …

Read More »

ನಮ್ಮೊಂದಿಗೆ ದೇವರಿದ್ದಾನೆ, ನಮಗೆ ಲಸಿಕೆ ಬೇಡ: ಕೊರೋನಾ ಲಸಿಕೆ ಪಡೆಯಲು ಗದಗದ ಜನರ ವಿರೋಧ

ಗದಗ: ಗಾಢ ನಂಬಿಕೆಗಳು ಕೂಡ ಕೆಲವೊಮ್ಮೆ ಜನರನ್ನು ಅಪಾಯಕ್ಕೆ ಸಿಲುಕಿಸಿಬಿಡುತ್ತವೆ. ದೇವರ ಮೇಲೆ ಗಾಢ ನಂಬಿಕೆ ಇಟ್ಟಿರುವ ಗದಗ ಜಿಲ್ಲೆಯ ದಾವಲ್ ಮಲ್ಲಿಕ್ ಗ್ರಾಮಸ್ಥರು ಕೊರೋನಾ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಗ್ಗೆ ಅನುಮಾನ ಬೇಡ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದು ಎಂದು ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಗ್ರಾಮಸ್ಥರು ಈ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗದಗ ತಾಲೂಕಿನ ಮುಳಗುಂದದ ದಾವಲ್ ಮಲ್ಲಿಕ್ ದರ್ಗಾ ಬಳಿಯ ವ್ಯಾಪಾರಿಗಳು ಲಸಿಕೆ …

Read More »

ಪೆಟ್ರೋಲ್, ಡಿಸೇಲ್ ದರ ಹೆಚ್ಚಿಸಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ : ಸಿದ್ದು ಕಿಡಿ

ಬೆಂಗಳೂರು : ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿರುದ್ಧವೇ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಡೀಸೆಲ್ ದರ 100 ರೂ. ಗಡಿ ದಾಟಿದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂಬ ಜನ ಸಾಮಾನ್ಯರ ಆಕ್ರೊಶದ ಬೆನ್ನಿಗೆ ಈಗ ಕಾಂಗ್ರೆಸ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನು ಕೂಡ ನೀಡಿದೆ. ಈ ಬಗ್ಗೆ ಟ್ವೀಟರ್ ಖಾತೆಯ ಮೂಲಕ …

Read More »

ನಾನು ಸಹಿ ಹಾಕಿಲ್ಲ, ಯಾವುದೇ ಊಹಾ ಪೋಹಗಳಿಗೆ ಕಿವಿಗೊಡುವ ಅಗತ್ಯವಿಲ್ಲ .: –ಶಶಿಕಲಾ ಜೊಲ್ಲೆ ,

ಗದಗ: ಕೋವಿಡ್‌ 2ನೇ ಅಲೆಯ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಗದಗ ಜಿಲ್ಲೆಯ ಇಬ್ಬರು ಸಹಿತ ರಾಜ್ಯದಲ್ಲಿ 32 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಜಿಲ್ಲೆಯಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮರಣ ಹೊಂದಿದ್ದು, ಅವರ ಕುಟುಂಬಕ್ಕೆ 30 ಲ.ರೂ. ಪರಿಹಾರ ನೀಡಲಾಗಿದೆ. ಕೋವಿಡ್‌ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ರಾಜ್ಯ ಸರಕಾರ ದಿಂದ ಬಾಲ ಸೇವಾ ಯೋಜನೆಯನ್ನು ಜಾರಿಗೆ ತರಲಾಗಿದೆ. …

Read More »

ಮತ್ತೂಮ್ಮೆ ಅನಾಥ ಮಕ್ಕಳ ಸರ್ವೇ: ಸಚಿವೆ ಜೊಲ್ಲೆ

ಕೊಪ್ಪಳ: ಕೋವಿಡ್‌ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಸರಕಾರವೇ ಆಸರೆಯಾಗ ಲಿದೆ. ಕೆಲವು ಕಾರಣಗಳಿಂದ ಮಕ್ಕಳ ಅಂಕಿಅಂಶದಲ್ಲಿ ಸಣ್ಣಪುಟ್ಟ ಲೋಪಗಳಿರಬಹುದು. ಹಾಗಾಗಿ ಸರಕಾರದಿಂದ ಮತ್ತೂಮ್ಮೆ ಸರ್ವೇ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಥ ಮಕ್ಕಳ ಪಾಲನೆಯನ್ನು ಸರಕಾರವೇ ನೋಡಿ ಕೊಳ್ಳಲಿದೆ. ಕೆಲವು ಜಿಲ್ಲೆಗಳಲ್ಲಿ ಅನಾಥ ಮಕ್ಕಳ ಕುರಿತು ವರದಿಯಾಗಿಲ್ಲ. ಹಾಗಾಗಿ ಮತ್ತೂಮ್ಮೆ ಸರ್ವೇಗೆ ಸೂಚಿಸಲಾಗಿದೆ. ಬಾಲ …

Read More »

ಬೆಳಗಾವಿ,ದಕ್ಷಿಣ ಕನ್ನಡ ಸೇರಿದಂತೆ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್‌ಡೌನ್ ವಿಸ್ತರಣೆ

  ದಕ್ಷಿಣ ಕನ್ನಡ ಸೇರಿದಂತೆ 11 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಜೂನ್ 14 ರ ಬೆಳಿಗ್ಗೆ 6 ರಿಂದ ಪ್ರಸ್ತುತ ಲಾಕ್‌ಡೌನ್ ಕೊನೆಗೊಳಿಸಲು ನಿರ್ಧರಿಸಿದೆ. ‌ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಮಂಡ್ಯ ಬೆಳಗಾವಿ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳು, 5% ಕ್ಕಿಂತ ಹೆಚ್ಚಿನ ಸಕಾರಾತ್ಮಕ ದರವನ್ನು ಹೊಂದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಸಂಪೂರ್ಣ ಲಾಕ್‌ಡೌನ್ ಮತ್ತೊಂದು ವಾರ ಮುಂದುವರಿಯುತ್ತದೆ. …

Read More »