Breaking News

ಕಬ್ಬಿನ ಗದ್ದೆಯಲ್ಲಿ ಮಹಿಳೆಯೋರ್ವರ ಶವ ಪತ್ತೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಕೂಕಿನ ಕೋಳಿಗುಡ್ಡ ಗ್ರಾಮದ ಬಳಿ ಕಬ್ಬಿನ ಗದ್ದೆಯಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಗೋಕಾಕ್—ಅಥಣಿ ರಾಜ್ಯ ಹೆದ್ದಾರಿ 31 ರ ಹತ್ತಿರ ಇರುವ ಕಬ್ಬಿನ ಗದ್ದೆಯಲ್ಲಿ ಸುಮಾರು 35 ವರ್ಷದ ಮಹಿಳೆ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ತಂದ್ದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಹಾರೂಗೇರಿ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಮಹಿಳೆ ಯಾರು ಎಂದು ಗುರುತು ಪತ್ತೆಯಾಗಿಲ್ಲ. …

Read More »

ಮೈಸೂರು ದಸರಾಗೆ ಭರ್ಜರಿ ತಯಾರಿ.. ನಾಡ ಹಬ್ಬಕ್ಕೆ ಮೆರಗು ನೀಡಲು ಗಜಪಡೆ ರೆಡಿ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಜಪಡೆ ಆಯ್ಕೆಯ ಕಸರತ್ತಿನಲ್ಲಿ ತೊಡಗಿದೆ. 4 ಆನೆ, ಕ್ಯಾಂಪ್‌ಗಳಿಗೆ ತೆರಳಿ 11 ಗಂಡಾನೆ, 3 ಹೆಣ್ಣಾನೆಯುಳ್ಳ ತಾತ್ಕಾಲಿಕ ಪಟ್ಟಿ ರೆಡಿಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಇಂದಿನಿಂದ ಆರಂಭಿಸಿದೆ. ಮೈಸೂರು ವನ್ಯಜೀವಿ ಭಾಗದ ಡಿಸಿಎಫ್ ಡಾ. ವಿ.ಕರಿಕಾಳನ್, ಪಶುವೈದ್ಯರಾದ ಡಾ.ರಮೇಶ್, ಡಾ.ಚಿಟ್ಟಿಯಪ್ಪ ಹಾಗೂ …

Read More »

ಜಿಮ್​​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ, ದೇವರಕೊಂಡ

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಜೋಡಿ ಟಾಲಿವುಡ್​ ಅಂಗಳದಲ್ಲಿ ಈಗಾಗಲೇ ಸಖತ್​ ಫೇರ್ ಎನಿಸಿಕೊಂಡಿದೆ. ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳ ಬಳಿಕ ಈ ಜೋಡಿ ಸಿನಿ ಪ್ರೇಕ್ಷಕರ ಹೃದಯವನ್ನ ಗೆದ್ದಿತ್ತು. ಇನ್ನು ಇಬ್ಬರ ಸಂಬಂಧದ ಬಗ್ಗೆ ಅಂತೆ ಕಂತೆಗಳು ಆಗಾಗ ಕೇಳೆ ಬರುತ್ತಲೇ ಇರುತ್ತೆ. ಸದ್ಯ ಇಬ್ಬರು ಈಗ ಒಟ್ಟಿಗೆ ಸಿನಿಮಾ ಮಾಡದೆ ಇದ್ದರೂ ಕೂಡ ವಿಜಯ್​, ರಶ್ಮಿಕಾ ಅಗಾಗ ಭೇಟಿಯಾಗಿ ಸದಾ ಸುದ್ದಿಯಾಗುತ್ತಾರೆ. ಇದೀಗ ರಶ್ಮಿಕಾ …

Read More »

ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ.. ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಭಕ್ತಿಯ ಝೇಂಕಾರ

ರಾಯಚೂರು: ಕಲಿಯುಗದ ಕಾಮಧೇನು.. ಬೇಡಿದ ವರ ಕರುಣಿಸೋ.. ತುಂಗಾ ತೀರದಿ ನೆಲೆಸಿದ ಪ್ರಭು, ಶ್ರೀ ರಾಘವೇಂದ್ರ ಸ್ವಾಮಿಗಳು. ಸದಾ ಭಕ್ತಿಯ ಝೇಂಕಾರ ತುಂಬಿ ತುಳುಕೋ ರಾಯರ ಸನ್ನಿಧಿಯಲ್ಲಿ ನಿನ್ನೆಯಿಂದ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೀತಾ ಇದೆ. ಸ್ವಾಮಿಯ ಭಕ್ತಗಣ ತುಂಗೆಯಲ್ಲಿ ಮಿಂದೆದ್ದು ರಾಯರ ದರ್ಶನ ಪಡೆದು ಪುನೀತರಾದ್ರು.     ರಾಯರ ಆವರಣದಲ್ಲಿ ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ.. ವಿವಿಧ ವಾದ್ಯಗಳಿಂದ ಗುರು ಸಾರ್ವಭೌಮರ ಸನ್ನಿಧಿಯಲ್ಲಿ ಭಕ್ತಿಯ ಝೇಂಕಾರ.. ತುಂಗಾ …

Read More »

ತಾಲಿಬಾನ್ ಜೊತೆಗೆ ಪಾಕ್​ ISI ಮುಖ್ಯಸ್ಥನ ಕಳ್ಳಾಟ.. ಅಫ್ಘಾನ್ ಅರಾಜಕತೆಯ ಹಿಂದೆ ಪಾಕ್ ಕೈವಾಡ?

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿ ಇಂದಿಗೆ ಒಂದು ವಾರವಾಗ್ತಿದೆ. ಒಡಲಾಳದಲ್ಲಿ ಸಾಕಷ್ಟು ನೋವು, ಹತಾಶೆ, ವಿಕೃತಿಯ ಹುದುಗಿಸಿಕೊಂಡಿರುವ ಆ ದೇಶದಲ್ಲೀಗ ನರರಾಕ್ಷಸರದ್ದೇ ಪಾರುಪತ್ಯ.. ಆದ್ರೆ, ಇವೆಲ್ಲಾ ಅಮಾನವೀಯತೆಯ ಹಿಂದೆ ಪಾಕಿಸ್ತಾನದ ಐಎಸ್​ಐ ಕೈವಾಡ ಇದೆ ಅಂತಾ ಹೇಳಲಾಗ್ತಿತ್ತು.. ಬಟ್​ ಈಗ ಅದು ಕನ್ಫರ್ಮ್​ ಆಗಿದೆ. ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಬೆಟ್ಟ ಗುಡ್ಡಗಳ ದೇಶ ಅಫ್ಘಾನಿಸ್ತಾನ ತತ್ತರಿಸಿ ಹೋಗ್ತಿದೆ. ಇವತ್ತಿಗೆ ಸರಿಯಾಗಿ ಒಂದು ವಾರದ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದ ಅಫ್ಘಾನಿಸ್ತಾನವನ್ನು …

Read More »

ದೆಹಲಿಗೆ ಹೋದ್ರೂ ಸಿಗದ ‘ಆನಂದ’; ಇನ್ನೂ 3 ದಿನ ಆನಂದ್ ಸಿಂಗ್ ಮೌನ..!

ಬೆಂಗಳೂರು: ದೇವರ ಪೂಜೆ, ರಾಜಕೀಯ ವೈರಾಗ್ಯ, ಸಿಎಂ ಸಂಧಾನ, ದೆಹಲಿ ಭೇಟಿ.. ಇಷ್ಟೆಲ್ಲಾ ಸರ್ಕಸ್ ನಡೆದ್ರೂ ಆನಂದ್​ ಸಿಂಗ್​​​​ಗೆ ಮಾತ್ರ ಆನಂದವಾಗಿರೋ ಖಾತೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಆನಂದ್​ ಸಿಂಗ್​​​​​ ನಡೆ ಏನಾಗಿರಬಹುದು ಅನ್ನೋ ಆತಂಕ ಸಿಎಂಗೆ ಕಾಡ್ತಿದೆ. ಇದೇ ಕಾರಣಕ್ಕೆ ಸಿಎಂ ಬೊಮ್ಮಾಯಿ, ಆನಂದ್​​ ಸಿಂಗ್​​​ಗೆ 3 ದಿನ ಸುಮ್ಮನಿರುವಂತೆ ಸೂಚಿಸಿದ್ದಾರೆ. ಹಾಗಾದ್ರೆ 3 ದಿನದ ನಂತ್ರ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲ. ದೆಹಲಿಗೆ ಹೋದ್ರೂ ಆನಂದ್​​ ಸಿಂಗ್​​​​​​​​ಗೆ …

Read More »

ನೀನು ನನ್ನ ಲವ್ವರ್ ನಂತಿಲ್ಲ, ಬೇರೆ ಮದ್ವೆ ಆಗು’ ಎಂದು ಟಾರ್ಚರ್ -ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು: ‘ಪ್ಲೀಸ್​ ನನಗೆ ನೀನಂದ್ರೆ ಇಷ್ಟ ಇಲ್ಲ, ನಿನಗೆ ನಾನೇ ನಿಂತು ಇನ್ನೊಂದು ಮದುವೆ ಮಾಡ್ತೀನಿ, ಬೇರೆ ಮದುವೆಯಾಗಿ ಆರಾಮಾಗಿರು.. ನನ್ನ ಬಿಟ್ಟು ಬಿಡು’ ಈ ಮಾತುಗಳನ್ನ ಕೇಳಿದ್ರೆ ನೀವು ಯಾರೋ ಒಬ್ಬ ಪ್ರೇಮಿ ತನ್ನ ಪ್ರಿಯಕರನಿಗೋ, ಪ್ರಿಯಕರ ಪ್ರಿಯತಮೆಗೋ ಹೇಳ್ತಿರಬಹುದು ಎಂದೆನಿಸಬಹುದು. ಆದರೆ ಈ ಮಾತುಗಳನ್ನು ಸ್ವತಃ ಗಂಡನಾದವ ತನ್ನ ಹೆಂಡತಿಗೆ ಹೇಳ್ತಿದ್ದಾನಂದ್ರೆ ನೀವು ನಂಬಲೇಬೇಕು! ಹೌದು ಮದುವೆಯಾದ ಗಂಡನಿಂದಲೇ ಇನ್ನೊಂದು ಮದುವೆಯಾಗುವಂತೆ ಪತ್ನಿಗೆ ಟಾರ್ಚರ್ ನೀಡ್ತಿರುವ ಘಟನೆ …

Read More »

ದೇಶದಾದ್ಯಂತ ಸಂಭ್ರಮದ ರಕ್ಷಾ ಬಂಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ

ನವದೆಹಲಿ: ದೇಶದಾದ್ಯಂತ ಜನರು ಅಣ್ಣ-ತಂಗಿಯರ ಪವಿತ್ರ ಹಬ್ಬವಾದ ರಕ್ಷಾ ಬಂಧನದ ಸಂಭ್ರಮದಲ್ಲಿದ್ದಾರೆ. ಆಗಸ್ಟ್​ 22ರಂದು ಈ ಬಾರಿ ದೇಶದಲ್ಲಿ ರಾಖಿ ಹಬ್ಬ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಮ ಟ್ವಿಟರ್ ಟ್ವೀಟ್ ಮಾಡಿರುವ ಪ್ರದಾನಿ ಮೋದಿಯವರು, ರಕ್ಷಾ ಬಂಧನದ ಪವಿತ್ರ ಹಬ್ಬದಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀೂಟ್ ಮಾಡಿ, …

Read More »

ಪ್ರಿಯತಮೆಗಾಗಿ 15,000ಕ್ಕೆ ‘ಲವ್ ಸುಪಾರಿ’! ಪೊಲೀಸರ ಗುಂಡೇಟು ತಿಂದ ರೌಡಿ ಕಥೆಯ ರಹಸ್ಯ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕುಖ್ಯಾತ ರೌಡಿಶೀಟರ್​ ಅವಿನಾಶ ಅಲಿಯಾಸ್ ರೆಬೆಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಅವಿನಾಶ್ ಸಂಜಯನಗರ ಠಾಣೆ ರೌಡಿಶೀಟರ್ ಆಗಿದ್ದು, ವ್ಯಕ್ತಿಯೊರ್ವರನ್ನು ಕೊಲ್ಲಲು 15000 ಸಾವಿರ ರೂಪಾಯಿ ಸುಪಾರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ಈ ಹಿಂದೆ ಮುನಿರಾಜು ಎಂಬವರ ಮೇಲೆ ಹಾಡಹಗಲೇ ಅವಿನಾಶ್​​ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ. ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ …

Read More »

ಇನ್ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್​​ಗಳ 16 ನಂಬರ್​​ಗಳನ್ನೂ ನೀವು ನೆನಪಿಡಬೇಕು.. ಯಾಕೆ ಗೊತ್ತಾ..?

ನವದೆಹಲಿ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​​ಗಳ 16 ಡಿಜಿಟ್ ನಂಬರ್​ಗಳನ್ನು ಅಮೆಜಾನ್, ಫ್ಲಿಪ್​ಕಾರ್ಟ್ ಮತ್ತು ನೆಟ್​ಫ್ಲಿಕ್ಸ್​ನಂಥ ಮರ್ಚಂಟ್​ಗಳು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆದ್ರೆ ಇನ್ನುಮುಂದೆ ಹೀಗಾಗದಿರಲೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದೊಂದು ಮಾರ್ಗಸೂಚಿ ಜಾರಿಗೆ ತರಲು ಮುಂದಾಗಿದೆ. ಈ ಮಾರ್ಗಸೂಚಿಯ ಪ್ರಕಾರ ಗ್ರಾಹಕರು ಡೆಬಿಟ್, ಕ್ರೆಡಿಟ್ ಕಾರ್ಡ್​ಗಳ ಮೂಲಕ ಆನ್​ಲೈನ್ ಶಾಪಿಂಗ್ ಮಾಡುವುದಿದ್ರೆ ಅವರು ಕಾರ್ಡ್​ನ 16 ಡಿಜಿಟ್ ನಂಬರ್, ಎಕ್ಸ್​​ಪೈರಿ ಡೇಟ್ ಹಾಗೂ ಸಿವಿವಿ ನಂಬರ್​ಗಳನ್ನೂ ನೆನಪಿನಲ್ಲಿಟ್ಟುಕೊಂಡೇ ವ್ಯವಹರಿಸಬೇಕಾಗುತ್ತದೆ. ಜನವರಿ …

Read More »