Breaking News

ಹುಬ್ಬಳ್ಳಿ- ಧಾರವಾಡ: 25 ಭರವಸೆಗಳ ಬಿಜೆಪಿ ಪ್ರಣಾಳಿಕೆ

ಹುಬ್ಬಳ್ಳಿ: ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಸಂಕಲ್ಪದೊಂದಿಗೆ 25 ಭರವಸೆಯುಳ್ಳ ಚುನಾವಣೆ ಪ್ರಣಾಳಿಕೆಯನ್ನು ಬಿಜೆಪಿ ಮುಖಂಡರು ಭಾನುವಾರ ನಗರದಲ್ಲಿ ಬಿಡುಗಡೆ ಮಾಡಿದರು. ನಿರಂತರ ಕುಡಿಯುವ ನೀರು ಯೋಜನೆ, ನೀರಿನ ಕರದ ಮೇಲಿನ ದಂಡ ಮನ್ನಾ, ಕಸಮುಕ್ತ ನಗರ, ಮೇಲ್ಸೇತುವೆ ನಿರ್ಮಾಣ, ಸ್ಮಾರ್ಟ್ ಸಿಟಿ ಯೋಜನೆ ಸಮರ್ಪಕ ಅನುಷ್ಠಾನ, ಜನಸ್ನೇಹಿ ಆಡಳಿತಕ್ಕೆ ಎಚ್‌ಡಿಎಂಸಿ-ಇ-ಗವರ್ನೆನ್ಸ್ ಆಯಪ್ ವ್ಯವಸ್ಥೆ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಭರವಸೆಗಳು. ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, …

Read More »

ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ನಂ.1: ಡಿ.ಕೆ.ಶಿವಕುಮಾರ್‌

ಹುಬ್ಬಳ್ಳಿ: ಕೋವಿಡ್‌ ಸಂದರ್ಭದ ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ರಾಷ್ಟ್ರದಲ್ಲೇ ಮೊದಲ ಸ್ಥಾನದಲ್ಲಿದೆ. ಚಿಕಿತ್ಸೆ, ಔಷಧ, ಶವಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ಸಂಕಷ್ಟದ ಸಂದರ್ಭದಲ್ಲಿ ಆಸ್ತಿ ತೆರಿಗೆ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಸರಕಾರ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಆಡಳಿತವಿದ್ದರೆ ಎರಡೇ ವರ್ಷಕ್ಕೆ ಮುಖ್ಯಮಂತ್ರಿಯನ್ನು ಬದಲಾಯಿಸಿದ್ದು ಯಾಕೆ? ರಾಜೀನಾಮೆ ನೀಡುವ ಮೊದಲು ಮುಖ್ಯಮಂತ್ರಿಗಳು ಬಹಿರಂಗವಾಗಿ …

Read More »

ಬಿಜೆಪಿಯವರು ಕ್ಷಮಾ ಯಾತ್ರೆ ಮಾಡಲಿ: ಸಲೀಂ ಅಹ್ಮದ್ ಟೀಕೆ

ಕಲಬುರ್ಗಿ: ‘ನಾಲ್ವರು ಕೇಂದ್ರ ಸಚಿವರು ಈಚೆಗೆ ಜನಾಶೀರ್ವಾದ ಯಾತ್ರೆ ನಡೆಸಿದರು. ಕೋವಿಡ್‌ ಸಂದರ್ಭದಲ್ಲಿ ಸಮರ್ಪಕವಾಗಿ ಬೆಡ್‌, ಆಮ್ಲಜನಕ, ರೆಮ್‌ಡೆಸಿವಿರ್ ಚುಚ್ಚುಮದ್ದು ನೀಡದೇ ವಿಫಲರಾಗಿದ್ದಕ್ಕೆ ಜನರ ಕ್ಷಮೆ ಕೇಳಲು ಕ್ಷಮಾ ಯಾತ್ರೆ ಮಾಡಬೇಕಿತ್ತು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕಿಸಿದರು. ‘ರಾಜ್ಯದಲ್ಲಿ ಜನರು ಕೋವಿಡ್‌ನಿಂದ ಸಂಕಷ್ಟದಲ್ಲಿದ್ದು, ಬೆಲೆ ಏರಿಕೆಯಿಂದಲೂ ತತ್ತರಿಸಿದ್ದಾರೆ. ಅಚ್ಛೆ ದಿನ್ ಭರವಸೆ ನೀಡಿ ಅತ್ಯಂತ ಕೆಟ್ಟ ದಿನಗಳಲ್ಲಿ ನರಳುವಂತೆ ಮಾಡಿದ್ದಕ್ಕೆ, ₹ 13 ಸಾವಿರ ಕೋಟಿ ಜಿಎಸ್‌ಟಿ …

Read More »

ಸ್ವಿಫ್ಟ್ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಹಾನಗಲ್ ಮೂಲದ ಮೌಲಾನಾ ತೋಟದ್ ಮತ್ತು ಮಂಜುನಾಥ್ ಓಲೇಕಾರ್ ಬಂಧಿತ ಆರೋಪಿಗಳಾಗಿದ್ದಾರೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ 170 ಕೆ.ಜಿ. ಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾರವಾರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ವಾಹನ ಸಮೇತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ಪೊಲೀಸರಿಂದ ದಾಳಿ ನಡೆಸಲಾಗಿದೆ. ಹಾನಗಲ್​ನಿಂದ ಮುರುಡೇಶ್ವರ …

Read More »

ಲಾರಿಯಲ್ಲಿ ತುಂಬಿದ್ದ ಸಸಿಗಳ ಅಡಿಯಲ್ಲಿತ್ತು 3,400 ಕೆ.ಜಿ. ಗಾಂಜಾ!

ಬೆಂಗಳೂರು: ನರ್ಸರಿಯಿಂದ ತಂದಿದ್ದ ಸಸಿಗಳ ಜೊತೆಯಲ್ಲೇ ಬೃಹತ್‌ ಪ್ರಮಾಣದ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರನ್ನು ಎನ್‌ಸಿಬಿ ಬೆಂಗಳೂರು ವಲಯದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಲಾರಿಯಲ್ಲಿದ್ದ 3,400 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಡಿ.ಶಿಂಧೆ, ಎಂ.ಆರ್‌.ಕಾಂಬ್ಳೆ ಹಾಗೂ ಎನ್‌.ಜೋಗದಾಂದ್‌ ಬಂಧಿತರು. ಇವರೆಲ್ಲಾ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯವರು. ಲಾರಿಯ ಮೂಲಕ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಬೆನ್ನಲ್ಲೇ ಜಂಟಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಹಾಗೂ ಹೈದರಾಬಾದ್‌ ಅಧಿಕಾರಿಗಳ ತಂಡ ಹೈದರಾಬಾದ್‌ …

Read More »

ಬೆಂಗಳೂರು ಅಭಿವೃದ್ಧಿಗೆ ನನ್ನ ಸಮಯ ಮೀಸಲಿಡುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು :ನಮ್ಮ ಮೆಟ್ರೋ ರಾಮನಗರದವರೆಗೂ ಹೋಗಬೇಕು ಅಂತ ಚಿಂತನೆ ಇದೆ. ರಾಮನಗರ, ರಾಜಾನುಕುಂಟೆ, ಮಾಗಡಿವರೆಗೂ ಮೆಟ್ರೋ ಮಾರ್ಗ ವಿಸ್ತರಿಸುವ ಗುರಿಯಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಮೆಟ್ರೋ ಅಗತ್ಯವಾಗಿದೆ. ಹೀಗಾಗಿ ನಾಯಂಡಹಳ್ಳಿ-ಕೆಂಗೇರಿಯವರೆಗೆ ಮೆಟ್ರೋ ಅಗತ್ಯ ಇತ್ತು. ನಮ್ಮ ಮೆಟ್ರೋ ಬೆಂಗಳೂರಿನ ಭವಿಷ್ಯದ ಕೊಂಡಿ. ದೇಶ-ವಿದೇಶಗಳಿಂದ ಬರುವ ಗಣ್ಯರಿಗೆ ಉತ್ತಮ ಸಾರಿಗೆ ಬೇಕು. ಅದನ್ನು ನಮ್ಮ …

Read More »

ಎಫ್‌ಡಿ ಇಟ್ಟಿದ್ದ ಐದೂವರೆ ಲಕ್ಷ ಮಂಗಮಾಯ, ಕೋರ್ಟ್ ತೀರ್ಪಿಗೂ ತಲೆ ಕೆಡಿಸಿಕೊಳ್ಳದೆ ಹಣ ಹಿಂತಿರುಗಿಸಲು ಸತಾಯಿಸುತ್ತಿರುವ ಬ್ಯಾಂಕ್

ಆತ ಕಷ್ಟ ಪಟ್ಟು ದುಡಿದು, ಬ್ಯಾಂಕ್ನಲ್ಲಿ ಹಣ ಕೂಡಿಟ್ಟಿದ್ದ, ಇದೇ ಹಣದಲ್ಲಿ ಸಣ್ಣದೊಂದು ಸೂರು ಕಟ್ಟುವ ಕನಸು ಕಂಡಿದ್ದ, ಆದ್ರೀಗ ಆತನ ಫಿಕ್ಸ್ಡ್ ಡೆಪಾಸಿಟ್ ಅನಾಮತ್ತಾಗಿ ಲಪಟಾಯಿಸಲಾಗಿದೆ. ನ್ಯಾಯಾಲಯ ಪೂರ್ತಿ ಹಣ ವಾಪಾಸು ನೀಡುವಂತೆ, ತೀರ್ಪು ನೀಡಿದರೂ, ಬ್ಯಾಂಕ್ ಬಳಕೆದಾರರ ಹಣ ನೀಡದೆ ಸತಾಯಿಸುತ್ತಿದೆ. ಉಡುಪಿ ಜಿಲ್ಲೆಯ ಉಪ್ಪೂರಿನ ನಿವಾಸಿ ಹರೀಶ್ ಗುಡಿಗಾರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಬೆಂಗಳೂರು ತೊರೆಯುತ್ತಿದ್ದಂತೆ ತಮ್ಮ ಖಾತೆಯನ್ನ …

Read More »

ಪ್ರೇಮಿಗಳೆ ಟಾರ್ಗೆಟ್| ಮೈಸೂರು ವಿದ್ಯಾರ್ಥಿನಿ ಅತ್ಯಾಚಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

ಮೈಸೂರು: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಕಾಮುಕರ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮೈಸೂರಿಗೆ ತರಕಾರಿ ಹೊತ್ತು ಬರುತ್ತಿದ್ದ ರೇಪಿಸ್ಟ್ ಗಳಲ್ಲಿ ಇಬ್ಬರು ಮಾತ್ರ ಗೂಡ್ಸ್ ವಾಹನದಲ್ಲಿ ಬರುತ್ತಿದ್ದರು. ಉಳಿದವರು ಬಸ್ಸಿನಲ್ಲಿ ಬರುತ್ತಿದ್ದರು. ತರಕಾರಿ ಲೋಡ್ ಇಳಿಸಿದ ಮೇಲೆ ಖಾಲಿ ಗಾಡಿಯಲ್ಲಿ ಕುಳಿತು ಎಲ್ಲರೂ ಪಾರ್ಟಿ ಮಾಡಲು ಸವಾರಿ ಹೊರಡುತ್ತಿದ್ದರು. ನಿರ್ಜನ ಸ್ಥಳಗಳಲ್ಲಿ ಕೂರುವ ಪ್ರೇಮಿಗಳೆ ಈ ಕೀಚಕರ ಟಾರ್ಗೆಟ್ ಆಗಿರುತ್ತಿತ್ತು. ಯುವತಿ ಮೇಲೆ ಗ್ಯಾಂಗ್ …

Read More »

ಕಾಲು ಕಳೆದಕೊಂಡ ಯುವಕನ ಚಿಕಿತ್ಸೆಗಾಗಿ ದಾನಿಗಳ ಮೊರೆ

ಮಂಗಳೂರು : ಎಲ್ಲರೂ ಚೆನ್ನಾಗಿರಬೇಕು ಎಲ್ಲರಿಗೂ ಒಳ್ಳೇದು ಮಾಡಬೇಕೆಂದು ಅನಿಸುದು ಸಹಜ ಆದ್ರೆ ಅಂತ ಮನಸ್ಸಿರುದು ತುಂಬಾ ಕಡಿಮೆ ಅಂತದ್ರಲ್ಲಿ “ಚೇತನ್ ಕುಮಾರ್ ” ಒಬ್ಬ ಬಹಳ ಸ್ವಚ್ಛ,ನಿಷ್ಕಲ್ಮಶ, ಪರೋಪಕಾರಿ ಮನುಷ್ಯ ಇಂದು ತನ್ನ ಪರೋಪಕಾರಿ ಮನೋಭಾವದಿಂದ ಸಾವು ಬದುಕಿ ನಡುವೆ ಹೊರಡ್ತಿದ್ದಾನೆ, ನಿಮ್ಮೆಲ್ಲರ ಸಹಾಯ, ಸಹಕಾರ ದೊರೆತರೆ ನನ್ನ ಸ್ನೇಹಿತ ಖಂಡಿತ ಗುಣಮುಖರಾಗಿ ಮರಳುವ ವಿಶ್ವಾಸ ವಿದೆ. ಇವತ್ತು ಬೆಳಿಗ್ಗೆ ತನ್ನ ಬಸ್ ಕ್ಲೀನರ್ ಕೆಲಸಕ್ಕೆ ಜೋಕಟ್ಟೆ ಯ …

Read More »

ನಾಪತ್ತೆಯಾಗ್ತಿದ್ದಾರೆ ಸರ್ಕಾರಿ ಇಲಾಖೆ ಸಿಬ್ಬಂದಿ! ಪೊಲೀಸರಿಂದ ತನಿಖೆಗೆ ವಿಶೇಷ ತಂಡ ರಚನೆ.

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ಏಕಾಏಕಿ ನಾಪತ್ತೆಯಾಗಿದ್ದು ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಕಾರಣ ಹುಡುಕುವ ಮುನ್ನವೇ ಇದೀಗ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯ ಸಿಬ್ಬಂದಿ ಕೂಡ ನಾಪತ್ತೆಯಾಗಿದ್ದಾರೆ! ಈ ಹಿಂದೆ ನಾಪತ್ತೆಯಾಗಿದ್ದ ಪ್ರಕಾಶ್‌ಬಾಬು ಅವರ ಪ್ರಕರಣ ಪಶ್ಚಿಮ ಠಾಣೆಯಲ್ಲಿ ದಾಖಲೆಯಾಗಿದ್ದರೆ, ಈಗ ಶಿವಪ್ಪ ಅವರು ನಾಪತ್ತೆಯಾಗಿದ್ದು, ಅವರ ಪತ್ನಿ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದಾರೆ. ಸರ್ಕಾರಿ ಇಲಾಖೆಯ …

Read More »