ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಲ್ಲಿಸಲಾಗಿದ್ದ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ದೂರನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ. ಮೂಲಗಳ ಪ್ರಕಾರ ಪ್ರಾಸಿಕ್ಯೂಷನ್ಗೆ ಗವರ್ನರ್ ಪೂರ್ವಾನುಮತಿ ನೀಡದ ಹಿನ್ನೆಲೆಯಲ್ಲಿ ಖಾಸಗಿ ದೂರನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಸಿಎಂ ಬಿಎಸ್ ವೈ ಮತ್ತು ಇತರರು ನಡೆಸಿದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು …
Read More »ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ದಮ್ ಇಲ್ಲ : ಸಿದ್ದರಾಮಯ್ಯ
ಬೆಂಗಳೂರು: 15ನೇ ಹಣಕಾಸು ಆಯೋಗ 5,495 ಕೋಟಿ ರೂ ವಿಶೇಷ ಅನುದಾನ ಕೊಡಬೇಕು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದಿದ್ದಾರೆ. ಇದರ ಬಗ್ಗೆ ಕೇಳೋಕೆ ಸಿಎಂ ಯಡಿಯೂರಪ್ಪಗೆ ದಮ್ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಬರಬೇಕಿದ್ದ 5,495 …
Read More »ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ : ಕಾಂಗ್ರೆಸ್ ಸೈಕಲ್ ರ್ಯಾಲಿ
ಬೆಳಗಾವಿ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಸೈಕಲ್ ರ್ಯಾಲಿ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು. ಬಳಿಕ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಮೊದಲು ದಿನ ಬಳಕೆ ವಸ್ತುಗಳ ಬೆಲೆ ಹಾಗೂ ಇಂಧನ ಬೆಲೆ ಏರಿಕೆ ಕೂಡಲೇ ಕಡಿಮೆ ಮಾಡಬೇಕೆಂದು ಆಗ್ರಹಿಸಿ, …
Read More »ಶಾಸಕಿ ರೂಪಾಲಿ ನಾಯ್ಕ ಮೇಲಿನ ಪರ್ಸೆಂಟೇಜ್ ಆರೋಪ ನಿರಾಧಾರ: ಕಾರವಾರ ಬಿಜೆಪಿ
ಕಾರವಾರ: 150 ಕೋಟಿ ರೂ. ವೆಚ್ಚದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ರಾಜಕಾರಣಿಯೋರ್ವರು ಪರ್ಸಂಟೇಜ್ ಕೇಳುತ್ತಿರುವ ಕಾರಣ ಕಾಮಗಾರಿ ನೆನಗುದಿಗೆ ಬಿದ್ದಿದೆ ಎಂದು ಹೇಳಿರುವ ಮಾಜಿ ಸಚಿವರ ಹೇಳಿಕೆಗೆ ಶಾಸಕಿ ರೂಪಾಲಿ ನಾಯ್ಕರೇ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಅವರ ಆರೋಪ ಆಧಾರ ರಹಿತವಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ನಾಯ್ಕ ಹೇಳಿದ್ದು, ಮಾಧವ ನಾಯ್ಕ ಸುಳ್ಳು ಹೇಳುತ್ತಿದ್ದಾರೆಂದು ಟೀಕಿಸಿದರು. ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ …
Read More »ರೇಣುಕಾಚಾರ್ಯಗೆ ಇಷ್ಟೆಲ್ಲಾ ಸಿಕ್ಕಿದೆ ಎಂದರೆ ಅದರ ಹಿಂದೆ ನನ್ನ ಶ್ರಮವಿದೆ: ಯೋಗೇಶ್ವರ್
ರಾಮನಗರ: ರೇಣುಕಾಚಾರ್ಯ ಸಿಎಂ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ. ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿದೆ. ಆತನ ಕ್ಷೇತ್ರಕ್ಕೆ ಸರ್ಕಾರದಿಂದ ಸಾವಿರಾರು ಕೋಟಿ ರೂ. ಸಿಕ್ಕಿದೆ ಎಂದರೆ ಅಲ್ಲಿ ನನ್ನ ಶ್ರಮವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು. ರಾಮನಗರ ತಾಲೂಕಿನ ಬಿಡದಿಯಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರೇಣುಕಾಚಾರ್ಯ ಅರೋಪಕ್ಕೆ ಏಕವಚನದಲ್ಲಿ ಪ್ರತಿಕ್ರಿಯೆ ನೀಡಿದರು. ನನ್ನ ಮಾತಿಗೆ ನಾನು ಬದ್ದವಾಗಿದ್ದೇನೆ. ನನ್ನ ನಿಲುವನ್ನು ಆಗಾಗ ವ್ಯಕ್ತ ಪಡಿಸುತ್ತೇನೆ. ಲೋಪಗಳ ಬಗ್ಗೆ ಗಟ್ಟಿಯಾಗಿ …
Read More »ಪಿಎಚ್ಸಿ ದುರಸ್ತಿಗೆ ಕ್ರಮ: ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಕ್ಷೇತ್ರದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದುರಸ್ತಿಯಲ್ಲಿದ್ದು, ಅವುಗಳಿಗೆ ನವೀಕೃತ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದು. ರೋಗಿಗಳ ಆರೈಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇತ್ತೀಚೆಗೆ ತಾಲೂಕಿನ ಕುಲಗೋಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಹೊಸ ಕಟ್ಟಡಗಳಿಗೆ ಅನುದಾನ ಬಿಡುಗಡೆಯಾಗಲು ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿರುವುದರಿಂದ …
Read More »ಧಾರವಾಡ : ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ
ಧಾರವಾಡ: ಕಟ್ಟಡ ಕಾಮಗಾರಿ ಕೆಲಸಕ್ಕೆ ಬಂದ ಪಾಲಕರೊಂದಿಗೆ ಬಂದಿದ್ದ 6 ವರ್ಷದ ಬಾಲಕ ಬೀದಿನಾಯಿಗಳಿಗೆ ಬಲಿಯಾಗಿದ್ದಾನೆ. ಧಾರವಾಡ ಹೊರವಲಯದ ನವಲೂರ ಗ್ರಾಮದ ರೈಲು ನಿಲ್ದಾಣದ ಬಳಿ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿತ್ತು. ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಗೋಪಾಲ್ ಮತ್ತು ಚನ್ನಮ್ಮ ದಂಪತಿ ಕೆಲಸಕ್ಕೆಂದು ನವಲೂರಿಗೆ ಬಂದಿದ್ದರು. ಜತೆಯಲ್ಲಿ 6 ವರ್ಷದ ಮಗ ಬಾಬೂಲ್ ರಾಠೋಡನನ್ನೂ ಕರೆತಂದಿದ್ದರು. ಎಂದಿನಂತೆ ಗುರುವಾರ ಪೋಷಕರರು ಕೆಲಸ ಮಾಡುತ್ತಿದ್ದರು. ಬೆಳಗ್ಗೆ ತಿಂಡಿ ತಿನ್ನಲೆಂದು ಕೆಲಸದ ಜಾಗದಲ್ಲಿ …
Read More »ದೇಶದಲ್ಲಿಂದು 45,892 ಜನರಿಗೆ ಕೊರೋನಾ. 817 ಜನ ಸಾವು!
ಇನ್ನು ದೇಶದ ವಿಚಾರಕ್ಕೆ ಬಂದ್ರೆ ಕಳೆದ 24 ಗಂಟೆಗಳಲ್ಲಿ 45,892 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು. 817 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿ 07 ಲಕ್ಷದ 09 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 4,05,028 ಆಗಿದೆ. ಕಳೆದ 24 ಗಂಟೆಗಳಲ್ಲಿ 44,291 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2 ಕೋಟಿ 98 ಲಕ್ಷದ 43 ಸಾವಿರ ದಾಟಿದೆ. ದೇಶದಲ್ಲಿ …
Read More »ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಎನ್ ಒ2 ಪ್ರಮಾಣ ಹೆಚ್ಚಳ
ಬೆಂಗಳೂರು: ಕೊರೊನಾ ಕಾರಣದಿಂದಾಗಿ ದೇಶಾದ್ಯಂತ ವಿಧಿಸಿದ್ದ ಲಾಕ್ ಡೌನ್ ತೆರವುಗೊಳಿಸುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ 12 ನಗರಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ವಾಹನಗಳ ಓಡಾಟ ಹೆಚ್ಚುತ್ತಿದ್ದಂತೆ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಮಹಾ ನಗರಗಳಲ್ಲಿ ನೈಟ್ರೋಜನ್ ಡೈ ಆಕ್ಸೈಡ್ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಲಾಕ್ ಡೌನ್ ಅವಧಿಯಲ್ಲಿ ಕಡಿಮೆ ಇದ್ದ ವಾಹನ ಸಂಚಾರ ಏಕಾ ಏಕಿ ಹೆಚ್ಚಿದೆ. ಕಾರ್ಖಾನೆಗಳ ಕೆಲಸ ಆರಂಭವಾಗುತ್ತಿದ್ದಂತೆ ಮಾಲಿನ್ಯದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತು …
Read More »ಯೋಗೀಶ್ ಗೌಡ ಹತ್ಯೆ ಪ್ರಕರಣ: ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧಿಸಿದ ಸಿಬಿಐ
ಧಾರವಾಡ, ಜು.08: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ಗುರುವಾರ ವಿಚಾರಣೆಗೆ ಬರಲಿದೆ. ವಿಚಾರಣೆಗೂ ಮುನ್ನವೇ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಗದಗನಲ್ಲಿ ಬಂಧಿಸಿದೆ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ …
Read More »