Breaking News

ಅನ್ನದಾನ ಮಹಾ ದಾನ ಈ ವಾರ ಮಮದಾಪೂರ ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ನಮ್ಮ ಕಾರ್ಯಕ್ರಮ..

ಗೋಕಾಕ: ಪ್ರತಿ ಶನಿವಾರ ದಂತೆ ಈ ಶನಿವಾರ ಕೂಡ ನಮ್ಮ ಗೋಕಾಕ ಸಾಹುಕಾರ ರಾದ ಶ್ರೀ ಸಂತೋಷ್ ಜಾರಕಿಹೊಳಿ ಅವರ ತಂಡ ಇವತ್ತು ಮತ್ತೊಂದು ಹಳ್ಳಿಗೆ ಹೋಗಿ ಅನ್ನ ಸಂತರ್ಪಣೆ ಕಾರ್ಯ ಕ್ರಮ ನಡೆಸಿದೆ.   ಇಂದು ತಾಲೂಕಿನ ಮಮ ದಾಪೂರ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡಿದಿದ್ದು ಎಲ್ಲರೂ ಮತ್ತೆ ಇದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು..   ಈ ಶನಿವಾರ ಮಾಮದಾಪುರ ಗ್ರಾಮದ ಹನುಮನ ದೇವಸ್ಥಾನ ದಲ್ಲಿ ಈ …

Read More »

ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಮಂತ್ರಾಲಯ ಮಠ

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ದೇಶ – ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ರಸ್ತೆ ಹಾಗೂ ರೈಲು ಮಾರ್ಗ ಇದ್ದರೂ ಸಹ ವಿಮಾನ ನಿಲ್ದಾಣದ ಸೌಲಭ್ಯ ಇರಲಿಲ್ಲ. ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಿತ್ತಾದರೂ ನಿಧಾನಗತಿಯಲ್ಲಿ ಸಾಗಿದೆ. ರಾಜ್ಯ ರಾಜಕೀಯ ಅನಿಶ್ಚಿತತೆ ಸೇರಿದಂತೆ ಹಲವು ಕಾರಣಗಳಿಂದ ಕಳೆದ ಮೂರು ವರ್ಷಗಳಿಂದಲೂ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿತ್ತು. ಇದು ಕಲ್ಯಾಣ ಕರ್ನಾಟಕ ಭಾಗದ ಜನತೆಯ ಆಕ್ರೋಶಕ್ಕೆ …

Read More »

ಸಾಮೂಹಿಕ ಅತ್ಯಾಚಾರ: ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ- ವಿನಯ್​ ಗುರೂಜಿ

ರಾಯಚೂರು: ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಅವಧೂತ ವಿನಯ್​ ಗುರೂಜಿ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿಯ ಕಳ್ಳರು ಪೊಲೀಸರಿಗಿಂತ ಬುದ್ಧಿವಂತರಿದ್ದಾರೆ, ಕಾನೂನನ್ನು ಬಿಗಿಪಡಿಸುವದರ ಮೂಲಕ ಹೆಣ್ಣುಮಕ್ಕಳನ್ನು ಕಾಪಾಡಬೇಕು ಎಂದಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರೀತಿಯ ಪ್ರಕರಣಕ್ಕೆ ಬೇರೆ ದೇಶಗಳಲ್ಲಿ ಬೇಲ್ ಸಿಗಲ್ಲ, ಆದ್ರೆ ನಮ್ಮ ಭಾರತ ಕಾನೂನಲ್ಲಿ ಕೃತ್ಯ ಮಾಡಿದವರು ಬಚಾವ್ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ವಿಪರೀತ ಆಚರಣೆಗಳೇ …

Read More »

ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್

ಚಿಂತಾಮಣಿ : ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಚಳಿ ಬಿಡಿಸಿದ ಘಟನೆ ನಡೆಯಿತು. ಶುಕ್ರವಾರ ನಗರ ಠಾಣಾ ಎಸ್‌ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‌ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದು, ಈ ವೇಳೆ ಶ್ರೀನಿವಾಸಪುರದಿಂದ ಬೆಂಗಳೂರಿನ ಕಡೆ ಬಂದ ರಮೇಶ್ ಕುಮಾರ್ ರವರು ತಮ್ಮ ವಾಹನ ನಿಲ್ಲಿಸಿ …

Read More »

ಭಾರತದಲ್ಲಿ ಒಂದೇ ದಿನ 1 ಕೋಟಿ ಮಂದಿಗೆ ಕೊವಿಡ್-19 ಲಸಿಕೆ: ಟಾಪ್-5 ರಾಜ್ಯಗಳು

ನವದೆಹಲಿ, ಆಗಸ್ಟ್ 27: ಭಾರತದಲ್ಲಿ ಶುಕ್ರವಾರ ಒಂದೇ ದಿನ 1 ಕೋಟಿಗೂ ಅಧಿಕ ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸುವಲ್ಲಿ ಆರೋಗ್ಯ ಸಿಬ್ಬಂದಿ ಯಶಸ್ವಿಯಾಗಿದ್ದು ಹೊಸ ದಾಖಲೆ ನಿರ್ಮಾಣವಾಗಿದೆ. ದೇಶದಲ್ಲಿ ಶುಕ್ರವಾರ ಒಂದೇ ದಿನ 10,063,931 ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ಭಾರತದಲ್ಲಿ ಈವರೆಗೂ 62,09,43,580 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ …

Read More »

ಕೋವಿಡ್ ಸೋಂಕಿತನನ್ನು ನಿರ್ದಯಿಯಾಗಿ ಎಳೆದೊಯ್ದರು : ಆರೋಪ

ಮಂಗಳೂರು, ಆ.27: ದ.ಕ. ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ಎನ್ನಲಾದ 20ಕ್ಕೂ ಅಧಿಕ ಮಂದಿಯ ತಂಡವು ಕೋವಿಡ್ ಸೋಂಕಿತರನ್ನು ನಿರ್ದಯವಾಗಿ ಎಳೆದೊಯ್ದಿದ್ದಾರೆ ಎಂದು ಕೋವಿಡ್ ಸೋಂಕಿತ, ಮುಲ್ಕಿ-ಕಾರ್ನಾಡು ನಿವಾಸಿ ರೊನಾಲ್ಡ್ ವಾಟ್ಸನ್ ಎಂಬವರು ಆರೋಪಿಸಿದ್ದಾರೆ. ಈ ಬಗ್ಗೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಕೊವ್ಯಾಕ್ಸಿನ್‌ನ ಎರಡೂ ಲಸಿಕೆಗಳನ್ನು ಪಡೆದಿದ್ದೇನೆ. ಆದಾಗ್ಯೂ, ಆಗಸ್ಟ್ 22ರಂದು ಸಣ್ಣ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಪರಿಚಿತ ಖ್ಯಾತ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯುತ್ತಿದ್ದೆ. …

Read More »

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಿಂದ ರಿಯಾಯಿತಿ ಆರೋಗ್ಯ ಕಾರ್ಡ್​ನ ಆಮಿಷ!

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿಯೇ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ದೇಶದ ವಿವಿಧ ಚುನಾವಣೆಗಳಲ್ಲಿ ಮತದಾರರ ಮನಗೆಲ್ಲಲು ಅನೇಕರು, ಸೀರೆ, ಕುಕ್ಕರ್, ಹಣದ ಆಮಿಷ ಒಡ್ಡಿದ ಸುದ್ದಿಗಳನ್ನು ಈಗಾಗಲೇ ಓದಿದ್ದೇವೆ. ಆದರೆ ಇದು ಅದಕ್ಕಿಂತ ವಿಭಿನ್ನ ಆಮಿಷ, ವಿಭಿನ್ನ ಸುದ್ದಿ. ಅಭ್ಯರ್ಥಿಯೋರ್ವರು ಮತದಾರರಿಗೆ ತಮ್ಮ ಆಸ್ಪತ್ರೆಯಲ್ಲಿ ಬಾರಿ ಡಿಸ್ಕೌಂಟ್ ಘೋಷಿಸಿ ಸುದ್ದಿಯಲ್ಲಿದ್ದಾರೆ. ಕಲಬುರಗಿ …

Read More »

ಹುದಲಿ ಗ್ರಾಮದ ಮನೆಯೊಂದರಲ್ಲಿ ಮಟ್ಕಾ ದಾಳಿ ಬೆಳಗಾವಿ ಪೊಲೀಸ 30 ಜನ ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ – ಇಲ್ಲಿಯ ಸಿಇಎನ್ ಪೊಲೀಸ್ ಇನಸ್ಪೆಕ್ಟರ್ ಮತ್ತು ಮಾರಿಹಾಳ ಪೊಲೀಸ್ ಇನಸ್ಪೆಕ್ಟರ್ ಜಂಟಿಯಾಗಿ ಹುದಲಿ ಗ್ರಾಮದ ಮನೆಯೊಂದರಲ್ಲಿ ಮಟ್ಕಾ ದಾಳಿ ನಡೆಸಿದ್ದಾರೆ.30 ಜನರನ್ನು ಬಂಧಿಸಲಾಗಿದ್ದು, 1,00,870 ರೂ ಗಳನ್ನು ಮತ್ತು 15 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.  

Read More »

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಕೃತ್ಯ? : ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ತಿರುವು 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ

ಮೈಸೂರು : ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ನಗರದ ಖಾಸಗಿ ಕಾಲೇಜೊಂದರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಘಟನೆಯ ಸಂಬಂಧ ಮೈಸೂರು- ಬೆಂಗಳೂರು ಪೊಲೀಸರ ಜಂಟಿ ತಂಡಕ್ಕೆ ಆರೋಪಿಗಳ ಸುಳಿವು ಲಭಿಸಿದ್ದು, ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ಕೇರಳದ ಮೂವರು ಮತ್ತು ತಮಿಳುನಾಡಿನ ಒಬ್ಬ ವಿದ್ಯಾರ್ಥಿಯ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಅತ್ಯಾಚಾರ ಘಟನೆಯ ಬಳಿಕ …

Read More »

ಘಟಪ್ರಭಾ : ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ; ನಾಲ್ವರ ಬಂಧನ

ಘಟಪ್ರಭಾ : ಮೊನ್ನೆಯಷ್ಟೇ ಕ್ರೂರಿಗಳು ಮೈಸೂರಿನಲ್ಲಿ ಕಾಲೇಜು ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಮಾಸುವ ಮುನ್ನವೇ ಇಂತಹದೆ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಒಂದು ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸುಮಾರು 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 5 ಜನ ಕ್ರೂರಿ ಕಾಮುಕರು ಪುಸಲಾಯಿಸಿ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಗೋಕಾಕ ತಾಲ್ಲೂಕಿನ ಘಟಪ್ರಭಾ ಪೊಲೀಸ್ ಠಾಣೆಯ …

Read More »