ಮೈಸೂರು : ಹೊಸ ಸಿಎಂ ನೇತೃತ್ವದ ಸರ್ಕಾರ ರಚನೆಯಾದರೆ ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬುಧವಾರ ಇಲ್ಲಿ ತಿಳಿಸಿದರು. ‘ಬದಲಾವಣೆಗಾಗಿ 17 ಮಂದಿ ಬೆಂಬಲ ನೀಡಿದ್ದರು. ಆದರೆ, ಅಧಿಕಾರ ಸಿಕ್ಕ ಮೇಲೆ ಅವರು ಬದಲಾದರು. ಇವರಿಗೆಲ್ಲಾ ಮುಖ್ಯಮಂತ್ರಿ ಆಗಿದ್ದವರು ಯಡಿಯೂರಪ್ಪ ಅಲ್ಲ. ಬದಲಾಗಿ ಅವರ ಪುತ್ರ ವಿಜಯೇಂದ್ರ. ಇವರ ಸಾಧನೆ ಶೂನ್ಯ. ಹೀಗಾಗಿ, ಈ 17 ಜನಕ್ಕೆ ಅಧಿಕಾರ ನೀಡದಿದ್ದರೂ ಪರವಾಗಿಲ್ಲ. …
Read More »ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ
ಯಾದಗಿರಿ: ಜಿಲ್ಲೆಯ ಹುಣಸಗಿ ಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಭೂಮಾಪಕ ನ ಲಂಚಾವತಾರ ಬಯಲು ಮಾಡಿದ್ದಾರೆ. ಪಟ್ಟಣದ ಕಕ್ಕೇರಿ ಕ್ರಾಸ್ ಹತ್ತಿರ ರೋಡಿನಲ್ಲಿ ಸರ್ವೇಯರ್ ರವಿಕುಮಾರ್ ಬನಹಟ್ಟಿಯ ಮಹಾದೇವಪ್ಪ ಬಾಗನಗೌಡ ಬಡಿಗೇರ್ ಇವರ ಹೊಲ ಸರ್ವೆ ನಂಬರ್.53 ನೇದ್ದರ 12 ಎಕರೆ ಭೂಮಿಯಲ್ಲಿ 4 ಎಕರೆ 30 ಗುಂಟೆ ಪ್ರತ್ಯೇಕ ಮಾಡಿ ಸರ್ವೆ ಮಾಡುವ ವಿಷಯದಲ್ಲಿ 2,50,000/- ರೂ ಲಂಚದ ಹಣ ಪಡೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ. ಕಲಬುರಗಿ ಎಸಿಬಿ …
Read More »ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ: ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನಿರೀಕ್ಷೆ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುವುದರ ಮಧ್ಯೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟ ಗುರುವಾರ ಸಭೆ ಸೇರಲಿದ್ದು ಹಲವು ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಿದೆ. ತೆರೆಮರೆಯಲ್ಲಿ ಈಗ ಹಲವು ಚಟುವಟಿಕೆಗಳು ವೇಗವಾಗಿ ನಡೆಯುತ್ತಿದ್ದು ಸಚಿವ ಸಂಪುಟ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಮುಖ್ಯಮಂತ್ರಿಗಳು ಹಲವು ಕ್ರಮಗಳನ್ನು ಇಂದಿನ ಸಭೆಯಲ್ಲಿ ಕೈಗೊಂಡು ಅದಕ್ಕೆ ಸಚಿವ ಸಂಪುಟ ಅನುಮೋದನೆಯನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಈ …
Read More »ದಿಲ್ಲಿ ಮೇಲೆ ಎಲ್ಲರ ಭಾರ! ಬಿಎಸ್‌ವೈ ಮನೆಗೆ ಮುಂದುವರಿದ ಶ್ರೀಗಳ ಭೇಟಿ
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳ ನಡುವೆಯೇ ಎಲ್ಲರ ದೃಷ್ಟಿ “ದಿಲ್ಲಿ ನಿರ್ಧಾರ’ ದತ್ತ ನೆಟ್ಟಿದೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಯಡಿಯೂರಪ್ಪ, ಯಾರೂ ತಮ್ಮ ಪರವಾಗಿ ಹೇಳಿಕೆ ನೀಡಬಾರದು, ಪ್ರತಿಭಟನೆ ನಡೆಸಬಾರದು ಎಂದಿದ್ದಾರೆ. ಬುಧವಾರವೂ ಅವರ ನಿವಾಸಕ್ಕೆ ಸಿದ್ಧಗಂಗಾ ಮಠದ ಶ್ರೀಗಳ ಸಹಿತ 30ಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. “ಯಾರೂ ತಮ್ಮ ಪರವಾಗಿ ಹೇಳಿಕೆ ಕೊಡುವುದಾಗಲಿ, ಪ್ರತಿಭಟನೆ ನಡೆಸುವುದಾಗಲಿ ಮಾಡಬಾರದು …
Read More »ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ನಂಬಿಸಿ ಸೆಕ್ಸ್ ದಂಧೆ : ನಿರ್ಮಾಪಕ ಸೇರಿದಂತೆ ಮೂವರು ಅರೆಸ್ಟ್
ಸಿನಿಮಾದಲ್ಲಿ ಛಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಆಡಿಷನ್ ಗೆ ಕರೆಯಿಸಿ ವೇಶ್ಯವಾಟಿಕೆ ದಂಧೆಗೆ ತಳ್ಳುತ್ತಿದ್ದ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಪ್ರದೇಶದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿನಿಮಾ ನಿರ್ಮಾಪಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ವೇಶ್ಯಾವಾಟಿಕೆ ಅಡ್ಡಾಗೆ ತಳಳ್ಳುತ್ತಿದ್ದನು ಎನ್ನಲಾಗಿದೆ. ಗ್ರಾಹಕರ ಸೋಗಿನಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ದಾಳಿ ನಡೆಸಿ ನಿರ್ಮಾಪಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. …
Read More »ರಾಜಕೀಯದ ಬಗ್ಗೆ ಕುತೂಹಲದ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳಿಂದ ಶಾಕಿಂಗ್ ನ್ಯೂಸ್
ಶಿರಸಿ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತಂತೆ ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೇರಳಕಟ್ಟೆ ಗ್ರಾಮದ ಭೂದೇವಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಎದ್ದ ರಾಜಕೀಯ ವಿಪ್ಲವದ ಸುಖಾಂತ್ಯ ಕಾಣಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರನ್ನು ಬೆಂಬಲಿಸಿದ …
Read More »ಇಂದು SSLC ಕನ್ನಡ, ಇಂಗ್ಲಿಷ್ ಸೇರಿ ಭಾಷಾ ಪರೀಕ್ಷೆ
ಬೆಂಗಳೂರು:ಎಸ್‌ಎಸ್‌ಎಲ್ಸಿ ಭಾಷಾ ವಿಷಯದ ಪರೀಕ್ಷೆ ಜುಲೈ 22 ರ ಗುರುವಾರ ಇಂದು ನಡೆಯಲಿದೆ. ರಾಜ್ಯದ 4485 ಪರೀಕ್ಷಾ ಕೇಂದ್ರಗಳಲ್ಲಿ 8,76,508 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಜುಲೈ 19 ರಂದು ಮೊದಲ ಪತ್ರಿಕೆಯ ಪರೀಕ್ಷೆ ನಡೆದಿತ್ತು. ಇಂದು ಎರಡನೇ ಪತ್ರಿಕೆ ಪರೀಕ್ಷೆ ನಡೆಯಲಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳ ಪರೀಕ್ಷೆ ನಡೆಸಲಾಗುವುದು. ಆಗಸ್ಟ್ 10 ರೊಳಗೆ ಫಲಿತಾಂಶ …
Read More »ಆಮ್ಲಜನಕ ಸಿಗದೇ ಒಬ್ಬರೂ ಸತ್ತಿಲ್ಲ ಎಂದು ಹಸೀಸುಳ್ಳು ಹೇಳಿದ ಮೋದಿ ಆಡಳಿತ!
ದೇಶದಲ್ಲಿ ಕರೊನಾ ಎರಡನೇ ಅಲೆಯಲ್ಲಿಆಮ್ಲಜನಕ ಕೊರತೆಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ” – ಇದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ನೀಡಿದ ಆಘಾತಕಾರಿ ಹೇಳಿಕೆ. ದೇಶದಲ್ಲಿ ಕಳೆದ ಏಪ್ರಿಲ್-ಮೇ ಅವಧಿಯಲ್ಲಿ ಕರೋನಾ ಎರಡನೇ ಅಲೆ ಭೀಕರ ಸಾವು-ನೋವುಗಳ ರುದ್ರನರ್ತನ ನಡೆಯುತ್ತಿರುವಾಗ ದೇಶದ ಉದ್ದಗಲಕ್ಕೆ ಆಮ್ಲಜನಕ ಕೊರತೆಯಿಂದ, ಸಕಾಲದಲ್ಲಿ ಜೀವವಾಯು ಲಭ್ಯವಾಗದೆ ಲಕ್ಷಾಂತರ ಮಂದಿ ಸಾವು ಕಂಡಿದ್ದರು. ಜನ ಹಾಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸಾವು ಕಾಣುತ್ತಿರುವುದನ್ನು ರೋಗಿಗಳ …
Read More »ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್ ಶಿವುಗೆ ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್ ಸಿಟಿ ರೌಂಡ್ಸ್ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್ ಶಿವು ಅವರಿಗೆ ಸನ್ಮಾನಿಸಿದ್ದಾರೆ. ನಿನ್ನೆ ರಾತ್ರಿ ಶಿವಾಜಿನಗರ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಗೋವಿಂದಪುರ, …
Read More »ಲಂಚ ಪಡೆಯುತ್ತಿದ್ದ ಕೆಎಸ್ಸಾರ್ಟಿಸಿ ಟ್ರಾಫಿಕ್ ಕಂಟ್ರೋಲರ್ ಎಸಿಬಿ ಬಲೆಗೆ!
ಮಂಗಳವಾರ ತಡರಾತ್ರಿ ಚಿಂತಾಮಣಿಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೆಎಸ್ ಆರ್ ಟಿಸಿ ಟ್ರಾಫಿಕ್ ಕಂಟ್ರೋಲರ್ ವೆಂಕಟಾಚಲಪತಿಯನ್ನು ಬಲೆಗೆ ಕೆಡವಿದ್ದಾರೆ. ವೆಂಕಟಾಚಲಪತಿ ಸಂಬಂಧಿ ಹಾಗೂ ಮೇಲಾಧಿಕಾರಿಯಾಗಿದ್ದ ಡಿಸಿ ಚಂದ್ರಶೇಖರ್ ವರಿಗೆ ಲಂಚದ ಮೊತ್ತ ತಲುಪಿಸುತ್ತಿದ್ದರು. ಕೋಲಾರ ಕೆಎಸ್‌ಆರ್ಟಿಸಿ ಡಿಸಿ ಚಂದ್ರಶೇಖರ್ ತಮ್ಮ ಸಂಬಂಧಿಯಾದ ಜಿಎನ್. ವೆಂಕಟಾಚಲಪತಿ ಮೂಲಕ ಕಂಡಕ್ಟರ್ ಬಳಿ 2 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಿವೃತ್ತಿ ಘೋಷಣೆ ಮಾಡಲು ಇಷ್ಟು ದೊಡ್ಡ ಮೊತ್ತ ಕೇಳಿದ್ದು …
Read More »