Breaking News

ಕಾರವಾರ ಆಸ್ಪತ್ರೆ ಇನ್ನರೆಡು ತಿಂಗಳಲ್ಲಿ ಲೋಕಾರ್ಪಣೆಶರಣಪ್ರಕಾಶ್ ಪಾಟೀಲ್:

ಬೆಂಗಳೂರು: ಕಾರವಾರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಇನ್ನೆರಡು ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು. ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯ ಕಲ್ಪಿಸಲಾಗುತ್ತದೆ. ಕ್ಯಾನ್ಸರ್‌ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ. ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇಬ್ಬರು ವೈದ್ಯರು ಮಾತ್ರ …

Read More »

ಪ್ರಸಕ್ತ ವರ್ಷದ ರಾಜ್ಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಹುಬ್ಬಳ್ಳಿ ಕೆಎಂಸಿಆರ್​ಐ?

ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ಉತ್ತರ ಕರ್ನಾಟಕ ಭಾಗದ ಸಂಜೀವಿನಿ. ಎಂಟತ್ತು ಜಿಲ್ಲೆಗಳ ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಕೆಎಂಸಿಆರ್​ಐಯನ್ನು ಆಶ್ರಯಿಸಿದ್ದಾರೆ. ಆದರೆ, ಸರ್ಕಾರದಿಂದ ಸಿಗಬೇಕಾದ ಅನುದಾನದ ಕೊರತೆ ಸಂಸ್ಥೆಗೆ ಕಾಡುತ್ತಿದೆ. ಹೀಗಾಗಿ ಪ್ರಸಕ್ತ ವರ್ಷದ ರಾಜ್ಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, 515 ಕೋಟಿ ರೂ. ಅಗತ್ಯ ಆರ್ಥಿಕತೆಯ ಬೇಡಿಕೆ ಮಂಡಿಸಿದೆ. ರಾಜ್ಯ ಸರ್ಕಾರಕ್ಕೆ ಅನುದಾನ ಸೇರಿ ಹಲವು ಯೋಜನೆಗಳ ಪ್ರಸ್ತಾವನೆ ರವಾನಿಸಿದ್ದು, …

Read More »

ದಲಿತರ ಕಣ್ಣೀರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಸಿದ್ದರಾಮಯ್ಯ ವಿಪಕ್ಷದಲ್ಲಿದ್ದಾಗ ಇದ್ದ ದಲಿತಪರ ಕಾಳಜಿ ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿ ಆಹ್ವಾನದ ಮೇರೆಗೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಜಯೇಂದ್ರ, ಅಹಿಂದ ಹೆಸರಿನೊಂದಿಗೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಣ್ಣೀರು ಒರೆಸುವುದಾಗಿ ಹೇಳಿ …

Read More »

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಬಗ್ಗೆ ವಿಡಿಯೋ: ಯೂಟ್ಯೂಬರ್ ಸಮೀರ್​ಗೆ ಜಾರಿಯಾಗಿದ್ದ ನೋಟಿಸ್​ಗೆ ತಡೆ

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೆ ಸಂಬಂಧಿಸಿದಂತೆ ಯೂಟ್ಯೂಬ್​​ನಲ್ಲಿ ವಿಡಿಯೋ ಪೋಸ್ಟ್​ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್​ ಸಮೀರ್ ಎಂ.ಡಿ.​ ಎಂಬವರಿಗೆ ಪೊಲೀಸರು ಜಾರಿ ಮಾಡಿದ್ದ ನೋಟಿಸ್​ಗೆ ಹೈಕೋರ್ಟ್ ತಡೆ ನೀಡಿದೆ. ಎಫ್​ಐಆರ್​ ನೀಡದೆಯೂ ವಿಚಾರಣೆ ಹಾಜರಾಗುವಂತೆ ಜಾರಿ ಮಾಡಿದ್ದ ನೋಟಿಸ್​ ಪ್ರಶ್ನಿಸಿ ಸಮೀರ್​ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. …

Read More »

ಸಬ್ ರಿಜಿಸ್ಟ್ರಾರ್​ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ

ದೊಡ್ಡಬಳ್ಳಾಪುರ (ಬೆಂಗಳೂರು) : ಸರ್ಕಾರಿ ಕಚೇರಿಗಳಲ್ಲಿ ಆನ್​​ಲೈನ್ ಸೇವೆಯ ನಂತರ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ, ರಾಜ್ಯದ 25ಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಇಂದು ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಂತರ ದಾಖಲೆಗಳ ಪರಿಶೀಲನೆಗೆ ಮುಂದಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವಿಚಾರದ ಬಗ್ಗೆ …

Read More »

ಮಚ್ಚು ಹಿಡಿದು ಅಡುಗೆ ಭಟ್ಟನನ್ನ ಅಟ್ಟಾಡಿಸಿದ ಹೊಟೇಲ್ ಮ್ಯಾನೇಜರ್

ಬೆಂಗಳೂರು, ಮಾರ್ಚ್​ 06: ಹೋಟೆಲ್​​ನಲ್ಲಿ ಮಚ್ಚು ಹಿಡಿದು ಅಡಿಗೆ ಭಟ್ಟನನ್ನ ಮ್ಯಾನೇಜರ್ (manager)​ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ  (Attack) ಮಾಡಿರುವಂತಹ ಘಟನೆ ಆರ್​​ಟಿ ನಗರದ 80 ಅಡಿ ರಸ್ತೆಯಲ್ಲಿನ ಹೋಟೆಲ್ ಒಂದರಲ್ಲಿ ನಡೆದಿದೆ. ಮಟನ್ ಕಡಿಯುವ ಮಚ್ಚಿನಿಂದ ಸಿಬ್ಬಂದಿ ಅಡುಗೆ ಭಟ್ಟನ ಗುರುಮೂರ್ತಿ ಮೇಲೆ ಮ್ಯಾನೇಜರ್ ಶಜಾದ್ ಅಲಿ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. ಸದ್ಯ ಘಟನೆ ಬಗ್ಗೆ ಪೊಲೀಸರು (police) ಮಾಹಿತಿ ಪಡೆದುಕೊಂಡಿದ್ದಾರೆ. ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರ್​​ಟಿ ನಗರ ಠಾಣೆಯಲ್ಲಿ …

Read More »

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೇಶಾದ್ಯಂತ ಎಸ್ ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದೇಶಾದ್ಯಂತ ಎಸ್ ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಂಟು ಹೊಂದಿರುವ SDPI ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೇಶಾದ್ಯಂತ ಎಸ್ ಡಿಪಿ ಐ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿ, ಮಹಾರಾಷ್ಟ್ರ, ಮುಂಬೈ, ಥಾಣೆ, ಕೇರಳ, …

Read More »

ಯಾವುದೇ ಕಾರಣಕ್ಕೂ ನಗರಸೇವಕ ಶಂಕರ ಪಾಟೀಲಗೆ ಖಾಟಿಕ ಸಮಾಜದ ಜಾಗೆಯನ್ನು ನೀಡಲ್ಲ

ಯಾವುದೇ ಕಾರಣಕ್ಕೂ ನಗರಸೇವಕ ಶಂಕರ ಪಾಟೀಲಗೆ ಖಾಟಿಕ ಸಮಾಜದ ಜಾಗೆಯನ್ನು ನೀಡಲ್ಲ ಸಮುದಾಯ ಭವನ ನಿರ್ಮಿಸದಂತೆ ಗಣಾಚಾರಿ ಗಲ್ಲಿಯ ರಹಿವಾಸಿಗಳಿಂದ ಬೆಳಗಾವಿ ಡಿಸಿಗೆ ಮನವಿ ಬೆಳಗಾವಿ ನಗರದ ಗಣಾಚಾರಿ ಗಲ್ಲಿಯಲ್ಲಿ ಸಮುದಾಯಭವನ ನಿರ್ಮಿಸಲು ಮುಂದಾದ ನಗರಸೇವಕ ಶಂಕರ ಪಾಟೀಲ್ ಅವರ ಧೋರಣೆಯನ್ನು ಖಂಡಿಸಿ ಖಾಟಿಕ ಸಮಾಜದ ಬಕ್ರಿ ಮಂಡಯಿಯ ರಹಿವಾಸಿಗಳು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಗಣಾಚಾರಿ ಗಲ್ಲಿಯ ಬಕ್ರಿ ಮಂಡಯಿ, ಖಾಟಿಕ …

Read More »

ನಿಪ್ಪಾಣಿಯಲ್ಲಿ 100 ಬೆಡ್’ಗಳ ತಾಲೂಕಾಸ್ಪತ್ರೆ ನಿರ್ಮಿಸಿ…

ನಿಪ್ಪಾಣಿಯಲ್ಲಿ 100 ಬೆಡ್’ಗಳ ತಾಲೂಕಾಸ್ಪತ್ರೆ ನಿರ್ಮಿಸಿ… ಬೆಳಗಾವಿ ಜಿಲ್ಲೆಯ ನೂತನ ತಾಲೂಕು ನಿಪ್ಪಾಣಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನ ಮೇಲ್ದರ್ಜೆಗೆರಿಸಿ, 100 ಬೆಡ್’ಗಳ ತಾಲೂಕಾ ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಸದನದಲ್ಲಿ ಇಂದು ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರಾದ ಡಾ. ದಿನೇಶ್ ಗುಂಡುರಾವ್ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದೆಂದು ಭರವಸೆಯನ್ನು ನೀಡಿದರು. ನೂತನ ತಾಲೂಕಾ ರಚನೆಯಾದ ನಿಪ್ಪಾಣಿಯಲ್ಲಿರುವ 30 ಬೆಡ್’ಗಳ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೆರಿಸಿ …

Read More »

ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನಬೆಚ್ಚಿ ಬಿದ್ದ ಗ್ರಾಮಸ್ಥರು ಖಾನಾಪೂರ ತಾಲೂಕಿನಲ್ಲಿ ಸರಣಿ ಮನೆಗಳ್ಳತನದಿಂದಾಗಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಖಾನಾಪೂರ ತಾಲೂಕಿನ ಭಂಡರಗಾಳಿ,ಬರಗಾಂವ, ಸಣ್ಣ ಹೊಸೂರು, ಗರ್ಲಗುಂಜಿ, ಶೇಡೆಗಾಳಿಯಲ್ಲಿ ಕಳ್ಳರು ಮನೆಗಳ ಬೀಗ್ ಮುರಿದು ತನ್ನ ಕೈಚಳಕ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ಕದ್ದೋಯ್ದ ಘಟನೆ ನಡೆದಿದೆ. ಬರಗಾಂವದಲ್ಲಿ ನಾಲ್ಕು ಮನೆಗಳ ಬೀಗಗಳನ್ನು ಮುರಿದ ಕಳ್ಳರು, ಭಂಡರಗಾಳಿಯಲ್ಲಿ ಒಂದು ಮನೆ, ಸಣ್ಣ ಹೊಸೂರಿನಲ್ಲಿ ಎರಡು ಮನೆಗಳನ್ನು ಕಳ್ಳತನ ಮಾಡಿದ್ದಾರೆ. ಆಯಾ ಮನೆಗಳಲ್ಲಿ …

Read More »