Breaking News

ಶಾಸಕರ ಪುತ್ರನ ಸಕ್ಕರೆ ಕಾರ್ಖಾನೆಯಲ್ಲಿ ದುರ್ಘಟನೆ; ಸೆಂಟ್ರಿಂಗ್ ಕುಸಿತಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆ!

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್​. ಗಣೇಶ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ನಿರ್ಮಾಣ ಹಂತದಲ್ಲಿರುವ ಎಥನಾಲ್ ಘಟಕದ ಸೆಂಟ್ರಿಂಗ್ ಕುಸಿತದಿಂದ ಸತ್ತವರ ಸಂಖ್ಯೆ ಇದೀಗ ಮೂರಕ್ಕೆ ಏರಿದೆ. ತಾಲೂಕಿನ ಕುಕ್ಕುವಾಡದ ದಾವಣಗೆರೆ ಸಕ್ಕರೆ ಕಾರ್ಖಾನೆಯ ಎಥೆನಾಲ್ ಘಟಕ ನಿರ್ಮಾಣದ ವೇಳೆ ಇಂದು ಮಧ್ಯಾಹ್ನ ಆರ್​ಸಿಸಿ ಕುಸಿದು ಬಿದ್ದು ಮೂವರು ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.   ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಕುಮಾರಕಡೆ ಗ್ರಾಮ …

Read More »

ಹಾನಗಲ್‌ ಉಪ ಚುನಾವಣೆ ಫಲಿತಾಂಶದ ಫಲವಾಗಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಬೆಂಗಳೂರು: ‘ ಹಾನಗಲ್‌ ಉಪ ಚುನಾವಣೆ ಫಲಿತಾಂಶದ ಫಲವಾಗಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇನ್ನೂ ಬೆಲೆ ಇಳಿಕೆಯಾಗಬೇಕಾದ ಪದಾರ್ಥಗಳು ಬಹಳಷ್ಟಿವೆ. ಗ್ಯಾಸ್, ಅಡುಗೆ ಎಣ್ಣೆ, ದಿನಸಿ ಇತ್ಯಾದಿ. ಜನರು ಬಿಜೆಪಿಗೆ ತಕ್ಕ ಉತ್ತರ ಕೊಡುವ ದಿನಗಳು ಹತ್ತಿರ ಬರ್ತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಹಾನಗಲ್‌ ಉಪ ಚುನಾವಣೆ ಫಲಿತಾಂಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಿವಕುಮಾರ್‌, ಹಾನಗಲ್‌ ಕ್ಷೇತ್ರದ ಗೆಲುವು ನನ್ನ ಗೆಲುವಲ್ಲ, ಇದು …

Read More »

ರಾಜ್ಯದಲ್ಲಿ ಬೆಲೆ ಇಳಿಕೆ: ಪೆಟ್ರೋಲ್‌ ₹100.63, ಡೀಸೆಲ್‌ ₹85.03

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೇಂದ್ರ ಸರ್ಕಾರ ಅಬಕಾರಿ ತೆರಿಗೆ ಮತ್ತು ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹100.63 ಮತ್ತು ಡೀಸೆಲ್‌ ₹85.03ಕ್ಕೆ ತಗ್ಗಲಿದೆ. ರಾಜ್ಯ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಪ್ರತಿ ಲೀಟರ್‌ ಮೇಲೆ ತಲಾ ₹ 7 ಇಳಿಕೆ ಮಾಡಿ ಆದೇಶ ಹೊರಡಿಸಿದೆ.   ರಾಜ್ಯ ಸರ್ಕಾರ ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ 35 ರಿಂದ …

Read More »

ಎಲ್‌ಕೆಜಿ, ಯುಕೆಜಿ ಶುರು: ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು: ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಇದೇ 8ರಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಇದೇ 8 ರಿಂದ ಆರಂಭಿಸಲು ನಿರ್ಧರಿಸಿದ ಬೆನ್ನಲ್ಲೇ, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಕೊರೊನಾ ಸೋಂಕು ದೃಢ ಪ್ರಮಾಣ ಶೇ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಸೋಮವಾರದಿಂದ …

Read More »

ಹಿಮ್ಮುಖವಾಗಿ ಚಲಿಸಿದ ಟ್ರಾಕ್ಟರ್ ಚಕ್ರದಡಿ ಬಿದ್ದು ತಾಯಿ -ಮಗು ಸಾವು

ರಾಯಚೂರು: ಮನ್ಸಲಾಪುರ ರಸ್ತೆಯಲ್ಲಿನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಜಿನ್ನಿಂಗ್ ಫ್ಯಾಕ್ಟರಿ ಬಳಿ ಟ್ರ್ಯಾಕ್ಟರ್ ​ಗೆ ಸಿಲುಕಿ ತಾಯಿ-ಮಗು ಮೃತಪಟ್ಟ ಧಾರುಣ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಕಾರ್ಮಿಕ ಮಹಿಳೆ ವೈಶಾಲಿ (26 ವ), ಸಮರ್ಥ (3 ವ) ಮೃತರು. ಹತ್ತಿ ತುಂಬಿದ್ದ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಿಸುವಾಗ ದುರ್ಘಟನೆ ಸಂಭವಿಸಿದೆ. ಮಗು ಟ್ರ್ಯಾಕ್ಟರ್ ಗಾಲಿಗೆ ಸಿಲುಕುವ ಭಯದಿಂದ ರಕ್ಷಿಸಲು ಮುನ್ನುಗ್ಗಿದ್ದು, ತಾಯಿ ಕೂಡ ಮಗು ಸಮೇತ ಟ್ರ್ಯಾಕ್ಟರ್​ಗೆ ಸಿಲುಕಿದ್ದಾರೆ. ಸ್ಥಳಕ್ಕೆ ಸಂಚಾರಿ‌ …

Read More »

ಅಭಿಮಾನಿಗಳು ದುಡುಕಿನ ನಿರ್ಧಾರ ಮಾಡಬೆಡಿ: ನೊಂದಿರುವ ಪುನೀತ್ ಕುಟುಂಬ

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ದು:ಖ ಬರಿಸಲಾಗದೇ ಅವರ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರಿಂದ ಇನ್ನಷ್ಟು ನೊಂದಿರುವ ಪುನೀತ್ ಕುಟುಂಬ ಅಭಿಮಾನಿಗಳು ದುಡುಕಿನ ನಿರ್ಧಾರ ಮಾಡಬೆಡಿ ಎಂದು ಮನವಿ ಮಾಡಿದೆ. ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾದಿರುವ ಪುನೀತ್ ರಾಜ್ ಕುಮಾರ್ ಸಹೋದರ ನಟ ರಾಘವೇದ್ರ ರಾಜ್ ಕುಮಾರ್, ಈಗಾಗಲೇ ನಾವೆಲ್ಲರೂ ಪುನೀತ್ ಅವರನ್ನು ಕಳೆದುಕೊಂಡು ತುಂಬಾ ನೋವಿನಲ್ಲಿದ್ದೇವೆ. ಅಭಿಮಾನಿಗಳು ಒಬ್ಬರಹಿಂದೊಬ್ಬರಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ನಿಮ್ಮ …

Read More »

ಪೆಟ್ರೋಲ್ ದರ ಇಳಿಕೆ ರಾಜ್ಯ ಸರಕಾರ ಬೊಕ್ಕಸಕ್ಕೆ ಸುಮಾರು 2100 ಕೋಟಿ ರೂ. ಕೊರತೆಯಾಗಲಿದೆ ; ಬೊಮ್ಮಾಯಿ

ಹುಬ್ಬಳ್ಳಿ: ಕೇಂದ್ರ ಸರಕಾರ ಮಾದರಿಯಲ್ಲಿ, ರಾಜ್ಯ ಸರಕಾರದಿಂದಲೂ ಪೆಟ್ರೋಲ್ ಹಾಗೂ ಡೀಸಲ್ ಮೇಲೆ 7 ರೂ. ತೆರಿಗೆ ಇಳಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗುರುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ನಾವು ಸಹ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದೇವೆ. ಈ ಕುರಿತು ಕೇಂದ್ರ ಗೃಹ ಹಾಗೂ ಹಣಕಾಸು ಸಚಿವರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಎಲ್ಲ ರಾಜ್ಯಗಳು …

Read More »

ನಾನೇ ಮಾಡಿದ್ದು ಎಂದು ಬೀಗುವಾಗ ಹತ್ತು ಬಾರಿ ಯೋಚಿಸಿ ಎಂದು ಬಿಜೆಪಿ ಟ್ವೀಟ್

ಬೆಂಗಳೂರು: ಸಿದ್ದರಾಮಯ್ಯನವರೇ, ತಾನೊಬ್ಬ ಅಹಿಂದ ನಾಯಕ ಎಂದು ಅಧಿಕಾರಕ್ಕೆ ಬಂದ ಮೇಲೆ ದಲಿತ ಸಮುದಾಯದ ಪರವಾಗಿ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ಅದರಲ್ಲಿ ಹೆಚ್ಚುಗಾರಿಕೆ ಮೆರೆಯುವ ಅಗತ್ಯವಿಲ್ಲ. ನಾನೇ ಮಾಡಿದ್ದು ಎಂದು ಬೀಗುವಾಗ ಹತ್ತು ಬಾರಿ ಯೋಚಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.   ದಲಿತ ವಿರೋಧಿ ಸಿದ್ದರಾಮಯ್ಯ ಹ್ಯಾಷ್ ಟ್ಯಾಗ್ ನಡಿ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಮಾನ್ಯ ಸಿದ್ದರಾಮಯ್ಯನವರೇ, ಎಷ್ಟು ಬಾರಿ ಹಳೆ ಕತೆ ಹೇಳುತ್ತೀರಿ …

Read More »

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತದ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕ

ಅಬುಧಾಬಿ: ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತದ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಬುಧವಾರ ಬಿಸಿಸಿಐ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದೆ. ಬುಧವಾರ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ ನಾಯಕ ರೋಹಿತ್ ಶರ್ಮಾ, ಆಟಗಾರರೆಲ್ಲಾ ರಾಹುಲ್ ದ್ರಾವಿಡ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.   “ರಾಹುಲ್ ದ್ರಾವಿಡ್ ಒಬ್ಬ ದಿಗ್ಗಜ, ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡಲು ಎದುರು …

Read More »

ರಜನಿಯ ‘ಅಣ್ಣಾಟ್ಟೆ’ ಚಿತ್ರ ರಿಲೀಸ್ : 1 ರೂ.ಗೆ ದೋಸೆ ಮಾರಿದ ಅಭಿಮಾನಿ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣಾಟ್ಟೆ’ ಚಿತ್ರ ಇಂದು ಗುರುವಾರ ದೀಪಾವಳಿಯ ಸುಸಂದರ್ಭದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ. ತಿರುಚ್ಚಿಯಲ್ಲಿ ರಜನಿಕಾಂತ್ ಕಟ್ಟಾ ಅಭಿಮಾನಿಯಾಗಿರುವ ಹೊಟೇಲ್ ಮಾಲೀಕ ಕರ್ಣನ್ ಎನ್ನುವವರು ಪ್ರಾರ್ಥನೆಯ ಸಂಕೇತವಾಗಿ 1 ರೂ.ಗೆ ದೋಸೆ ಮಾರುತ್ತಿದ್ದಾರೆ. “ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿ ಮತ್ತು ಚಲನಚಿತ್ರವು ದೊಡ್ಡ ಹಿಟ್ ಆಗಲಿ ಎಂದು ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ” ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಣ್ಣಾಟ್ಟೆ ತಮಿಳು ಭಾಷೆಯ ಆಕ್ಷನ್ ಡ್ರಾಮಾ …

Read More »