ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ಹೋಗುವ ವಿಚಾರದಲ್ಲಿ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು. ಸಿದ್ದರಾಮಯ್ಯ ದೆಹಲಿ ರಾಜಕಾರಣಕ್ಕೆ ಹೋಗಬೇಕು. ಅಲ್ಲಿ ಕರ್ನಾಟಕದ ಕಹಳೆ ಮೊಳಗಿಸಬೇಕು ಎಂದು ಸಚಿವ ಮಾಧುಸ್ವಾಮಿ ಚರ್ಚೆ ಆರಂಭಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಆರ್ ಅಶೋಕ್ ಇಲ್ಲ, ಇಲ್ಲ ಸಿದ್ದರಾಮಯ್ಯ ನಮಗೆ ಇಲ್ಲಿಯೇ ಇರಬೇಕು. ನಮಗೆ ಮಾರ್ಗದರ್ಶನ ಕೊಡಬೇಕು. ಹೀಗಾಗಿ ನಾವು ಅವರನ್ನು ದೆಹಲಿಗೆ ಕಳುಹಿಸಲು ಇಷ್ಟಪಡುವುದಿಲ್ಲ ಅಂದರು. ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ …
Read More »ಡಿ.ಕೆ. ಶಿವಕುಮಾರ್ ಗೆ ಸುಳ್ಯ ಕೋರ್ಟ್ ನಿಂದ ವಾರಂಟ್ ಜಾರಿ:ಏನಿದು ಪ್ರಕರಣ?
ಸುಳ್ಯ, ಸೆ. 14: ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ಬೆಳ್ಳಾರೆಯ ಸಾಯಿ ಗಿರಿಧರ್ ಮತ್ತು ಇಂಧನ ಖಾತೆಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಡುವಿನ ಫೋನ್ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಕೋರ್ಟ್ಗೆ ಹಾಜರಾಗದಿರುವು ದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್ …
Read More »ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟದಲ್ಲಿ ಪ್ರೇಮಿಗಳ ವಿಹಾರ : ಪೊಲೀಸರಿಂದ ಎಚ್ಚರಿಕೆ
ಶ್ರೀರಂಗಪಟ್ಟಣ : ನಗರದ ಪ್ರವಾಸಿತಾಣ ಕರಿಘಟ್ಟದಲ್ಲಿ ವಿಹರಿಸುತ್ತಿದ್ದ ಪ್ರೇಮಿಗಳಿಗೆ ಶ್ರೀರಂಗಪಟ್ಟಣ ಪೋಲೀಸರು ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿ ವಾಪಸ್ಸು ಕಳಿಸಿದ ಘಟನೆ ನಡೆದಿದೆ ಬುಧವಾರ ನಡೆದಿದೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕರಿಘಟ್ಟ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸಿದ ಶ್ರೀರಂಗಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ರೇಖಾ ಹಾಗೂ ಅಪರಾಧ ದಳದ ಇನ್ಸ್ಪೆಕ್ಟರ್ ಸುನೀಲ್ ನೇತೃತ್ವದ ಪೊಲೀಸರ ತಂಡ ಬೆಟ್ಟದಲ್ಲಿ ವಿಹರಿಸುತ್ತಿದ್ದ ಪ್ರೇಮಿಗಳಿಗೆ ಎಚ್ಚರಿಕೆ ನೀಡಿ …
Read More »ನಿಲ್ಲದ ಮರಗಳ ಮಾರಣ ಹೋಮ : ಅಧಿಕಾರಿಗಳ ಮೌನವೆಕೆ?
ಚಿಂತಾಮಣಿ : ತಾಲ್ಲೂಕು ವ್ಯಾಪ್ತಿಯ ಸಾಮಿಲ್ ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಯಾವುದೇ ಪರವಾನಿಗೆ ಇಲ್ಲದೆ ಮರಗಳನ್ನು ಕಡೆದು ರಾಜರೋಷವಾಗಿ ಸಾಗಿಸುತ್ತಿರುವುದು ನೋಡಿದರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಕಾಡನ್ನು ಉಳಿಸಿ ಕಾಡನ್ನು ಬೆಳೆಸಿಯೆಂಬ ಬೊಬ್ಬೆ ಹೊಡೆಯುತ್ತಾರೆ ಹೊರೆತು ಇದರ ಬಗ್ಗೆ ಯಾರೊಬ್ಬರು ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಪರಿಸರ ಪ್ರೇಮಿ ಅಮಿಟ್ಟಿಗಾನಹಳ್ಳಿ ಶ್ರೀನಿವಾಸರೆಡ್ಡಿ ಆರೋಪ ಮಾಡಿದ್ದಾರೆ. ಪರಿಸರವು ಸಂರಕ್ಷಣೆ ಮಾಡುವುದು ನಮ್ಮ ಹಕ್ಕೆಂದು …
Read More »ಗೋವಾ ಚುನಾವಣೆ : 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧಾರ
ಪಣಜಿ: ಶಿವಸೇನೆಯು ಗೋವಾ ವಿಧಾನಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಶಿವಸೇನೆಯ ಗೋವಾ ರಾಜ್ಯ ಪ್ರಮುಖರಾದ ಜಿತೇಶ್ ಕಾಮತ್, ಮಿಲಿಂದ ಗಾವಸ್ ರವರು ಮುಂಬಯಿಯ ಖಾಸಗಿ ಹೋಟೆಲ್ನಲ್ಲಿ ಶಿವಸೇನೆಯ ರಾಷ್ಟ್ರೀಯ ನಾಯಕ ಸಂಜಯ ರಾವುತ್ ರವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು. ಶಿವಸೇನೆ ಪಕ್ಷ ಪ್ರಮುಖ ಉದ್ಧವ ಠಾಕ್ರೆಯವರೊಂದಿಗೆ ಈ ಕುರಿತಂತೆ ಸಂಜಯ್ ರಾವುತ್ ರವರು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಗೋವಾ …
Read More »ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣದಾಖಲು
ನವದೆಹಲಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅಂತ್ಯಕ್ರಿಯೆ ವೇಳೆ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸುವ ವೇಳೆ ರಾಷ್ಟ್ರಧ್ವಜದ ಮೇಲೆ ಜೆ.ಪಿ. ನಡ್ಡಾ ಬಿಜೆಪಿ ಬಾವುಟ ಇಟ್ಟಿದ್ದರು. ಈ ಮೂಲಕ ನಡ್ಡಾ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ವಿರುದ್ಧ ಚಂದ್ರ ಕಿಶೋರ್ ಪರಾಶರ್ ಮುಜಾಫರ್ …
Read More »ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಕ್ಷೇತ್ರ: ಪುನರ್ ವಿಂಗಡನೆ ಖಚಿತ
ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡನೆ ಸಂಬಂಧ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆಗೆ ಸರಕಾರ ಹೆಜ್ಜೆಯಿರಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2021ನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಈ ಮೂಲಕ ಪ್ರಸ್ತುತ ಇರುವ ತಾಲೂಕು ಮತ್ತು ಜಿ.ಪಂ. ಕ್ಷೇತ್ರ ಪುನರ್ ವಿಂಗಡನೆಯನ್ನು ರದ್ದುಪಡಿಸಿ ಮತ್ತೆ ಪುನರ್ ವಿಂಗಡಣೆ ಮಾಡಲು ನಿರ್ಧರಿಸಲಾಗಿದೆ. ಮಂಗಳವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವ …
Read More »ಹೆಣ್ಣು ಶಿಶು ಮಾರಾಟ ಪ್ರಕರಣದ ಬಗ್ಗೆ ಸದನದಲ್ಲಿ ಚರ್ಚೆ : ಎಂ.ಬಿ.ಪಾಟೀಲ
ವಿಜಯಪುರ: ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಶಾಮೀಲಾಗಿ ಜಿಲ್ಲೆಯಲ್ಲಿ ಹೆಣ್ಣು ಶಿಶು ಮಾರಾಟ ಮಾಡಿದ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದು. ಈ ಕುರಿತು ಸದನದಲ್ಲಿ ಚರ್ಚೆ ನಡೆಸುವುದಾಗಿ ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಈ ಕುರಿತು ಉದಯವಾಣಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅವರು, ಜಿಲ್ಲೆಯಲ್ಲಿ ಹೆಣ್ಣು ಶಿಶು ಮಾರಾಟದ ಪ್ರಕರಣದ ಕುರಿತು ವಿಶೇಷ ವರದಿ ಮೂಲಕ ಉದಯವಾಣಿ ಪತ್ರಿಕೆ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದ್ದಾರೆ. ಈ ಘಟನೆ …
Read More »ದಾವಣಗೆರೆ: ಸೆ.18-19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ
ದಾವಣಗೆರೆ: ಸೆ.18-19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಸಕರ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ಸೆಪ್ಟಂಬರ್ 18ರ ಸಂಜೆ ದಾವಣಗೆರೆಯ ಅಪೂರ್ವ ರೆಸಾರ್ಟ್ನಲ್ಲಿ ಕಾರ್ಯಕಾರಿಣಿ ಸಬೆ ನಡೆಯಲಿದೆ. ಅಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಅಂದು ಬೆಳಿಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದ್ದು, …
Read More »ಬೆಳಗಾವಿಯ 46 ಅನಧಿಕೃತ ಧಾರ್ಮಿಕ ಕಟ್ಟಡಗಳ ಗುರುತು, ಶೀಘ್ರವೇ ತೆರವು ಎಂದ ಬೆಳಗಾವಿ ಡಿಸಿ….!
ಬೆಳಗಾವಿ: ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ 46 ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಶೀಘ್ರವೇ ಈ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದ್ದಾರೆ. ಈ ಎಲ್ಲ 46 ಧಾರ್ಮಿಕ ಕೇಂದ್ರ ಕಟ್ಟಡಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಈಗಾಗಲೇ ಒಟ್ಟು 17 ಅನಧಿಕೃತ ಧಾರ್ಮಿಕ ಕೇಂದ್ರದ ಕಟ್ಟಡಗಳ ತೆರವು ಮಾಡಲಾಗಿದೆ. ಇನ್ನುಳಿದ 29 ಅನಧಿಕೃತ ಧಾರ್ಮಿಕ ಕೇಂದ್ರ …
Read More »