Breaking News

ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ, ಮಾರ್ಚ್​ 19: ಚಿಕ್ಕಬಳ್ಳಾಪುರ (Chikkaballapur) ಪಟ್ಟಣದ ಒಎಂಬಿ ನಗರದಲ್ಲಿನ ಜನರು ಮಾಟಮಂತ್ರದ (Black Magic) ಭೀತಿಯಲ್ಲಿ ವಾಸಿಸುತ್ತಿದ್ದಾರೆ. ನಿತ್ಯ ಬೆಳಗಾದರೆ ಕೆಲ ಅಂಗಡಿ ಮತ್ತು ಮನೆಗಳ ಮುಂದೆ ನಿಂಬೆಹಣ್ಣು, ಅರಿಶಿನ ಮತ್ತು ಕುಂಕಮ ಇರುತ್ತಿದ್ದು ಮಾಟಮಂತ್ರದ ಕುರುಹುಗಳು ಎನ್ನಲಾಗುತ್ತಿದೆ. ಇದೇ ರಸ್ತೆಯಲ್ಲಿರುವ ಶಾಂತಕುಮಾರ್ ಎಂಬುವರ ಟೈಲರಿಂಗ್ ಅಂಗಡಿ ಮುಂದೆ ಪ್ರತಿ ದಿನವೂ ಒಂದಲ್ಲ ಒಂದು ನಿಂಬೆಹಣ್ಣಿನ ತುಂಡುಗಳು, ಹರಿಶಿನ ಕುಂಕುಮದ ಕುರುಹುಗಳು ಪತ್ತೆಯಾಗುತ್ತಿದ್ದವಂತೆ. ಇದರಿಂದ ಆತಂಕಗೊಂಡ ಟೈಲರ್ ಶಾಂತಕುಮಾರ್ ಅವರು …

Read More »

ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ…ಆಗಿದ್ದೇನು?

ಶಿವಮೊಗ್ಗ, (ಮಾರ್ಚ್ 18): ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಲ ಆದೇಶ ನೀಡಿದರೂ ಸಹ ಕೆಎಸ್​ಆರ್​ಟಿಸಿ ಕ್ಯಾರೇ ಎಂದಿಲ್ಲ. ಹೀಗಾಗಿ ಆಕ್ರೋಶಗೊಂಡ ಕೋರ್ಟ್, ಬಸ್​ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ ಆರ್ ಟಿಸಿಯ ಶಿರಸಿ ಡಿಪೋದ ಕೆಎಸ್​ಆರ್​ಟಿಸಿ ಬಸನ್ನು ತಂದು ಕೋರ್ಟ್​ ಆವರಣದಲ್ಲಿ ನಿಲ್ಲಿಸಲಾಗಿದೆ. 2022ರ ಜುಲೈ 7 ರಂದು ಪತ್ರಿಕೆ ಹಂಚಲು ಹೋಗಿದ್ದ ಗಣೇಶ್ ಎನ್ನುವಾತನಿಗೆ ಸಾಗರದ ಪ್ರವಾಸಿ ಮಂದಿರದ ಎದುರು ಶಿರಸಿ …

Read More »

ಗಂದಿಗವಾಡ ಕೆರೆದಂಡೆಯ ರಸ್ತೆ ದುರಸ್ತಿಗೆ ಆಗ್ರಹ ಖಾನಾಪೂರ ತಾಲೂಕು ಗಂದಿಗವಾಡ ಗ್ರಾಮ

ಹಾಳಾಗಿರುವ ಕೆರೆ ದಂಡೆಯ ರಸ್ತೆ ದುರಸ್ತಿಗೆ ಆಗ್ರಹ ದೊಡ್ಡ ಕೆರೆಯ ದಂಡೆ ಕೊರೆದು ಕಿರಿದಾಗಿರುವ ರಸ್ತೆ ಅಪಾಯದ ಅಂಚಿನಲ್ಲಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ದೊಡ್ಡ ಕೆರ ದಂಡೆಯ ಮಣ್ಣು ಕುಸಿದು ಗ್ರಾಮವನ್ನು ಸಂಪರ್ಕಿಸುವ ಮುಖ್ಯರಸ್ತೆ ಹಾಳಾಗಿದ್ದು ದೋಸ್ತಿಗೊಳಿಸಲು ಗ್ರಾಮಸ್ಥರು ಹಾಗೂ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ ನೀರಿನ ರಭಸಕ್ಕೆ ಕೊರೆದು ಮಣ್ಣು ಕುಸಿದು ದಂಡೆಗಳು ಹಾಳಾಗಿದ್ದು ರಸ್ತೆ ಕಿರಿದಾಗಿದೆ ಇದರಿಂದ ಅಪಾಯಕ್ಕೆ …

Read More »

ಚರಂಡಿಯಿಲ್ಲದೇ ಜನವಸತಿಗೆ ನುಗ್ಗಿದ ಚರಂಡಿ ನೀರು…

ಚರಂಡಿಯಿಲ್ಲದೇ ಜನವಸತಿಗೆ ನುಗ್ಗಿದ ಚರಂಡಿ ನೀರು… ಕ್ಯಾರೆ ಎನ್ನದ ಸಂಬಂಧಿಸಿದವರು…ಹಿಡಿಶಾಪ ಹಾಕಿದ ಜನರು ಈ ನಗರದಲ್ಲಿ ಚರಂಡಿಗಳಿಲ್ಲದೇ ಕಳೆದ 7-8 ತಿಂಗಳುಗಳಿಂದ ರಸ್ತೆಯ ಮೇಲೆ ಕಲುಷಿತ ನೀರು ಹರಿಯುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಓಡಾಡುವ ರಸ್ತೆಗೆ ಹೊಂದಿಕೊಂಡೇ ಇರುವ ಈ ಪ್ರದೇಶದ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಡೋಂಟ್‌’ಕೇ‌ರ್ ಎನ್ನುತ್ತಿದ್ದು, ಇಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

Read More »

ಸಂಕೇಶ್ವರ SDVS ಸಂಘದಿಂದ ಮಾನಿನಿ ಕಾರ್ಯಕ್ರಮ ಆಯೋಜನೆ

ಹುಕ್ಕೇರಿ : ಸಂಕೇಶ್ವರ SDVS ಸಂಘದಿಂದ ಮಾನಿನಿ ಕಾರ್ಯಕ್ರಮ ಆಯೋಜನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಅನ್ನಪೂರ್ಣ ಇನ್ಸ್ಟಿಟ್ಯೂಟ್ ಆಪ್ ಮ್ಯಾನೆಜ್‌ಮೆಂಟ್‌ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಾರ್ಚ 18 ರಂದು ಮಾನಿನಿ – 2025 ಕಾರ್ಯಕ್ರಮ ಆಯೋಜಿಸಲಾಗಿದೆ. ಮಾದ್ಯಮಗಳೊಂದಿಗೆ ಮಾತನಾಡಿದ ವ್ಯವಸ್ಥಾಪಕ ನಿರ್ದೆಶಕಿ ಶ್ರೀಮತಿ ವಿದ್ಯಾ ಸ್ವಾಮಿ ಮಹಿಳಾ ದಿನಾಚಾರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗನನಿಯ ಸಾಧನೆ ಮಾಡಿದ ಮಹಿಳೆಯರ ಸಾಕ್ಷ್ಯ ಚಿತ್ರಗಳೊಂದಿಗೆ ಸುಮಾರು ಒಂದನೂರು ಬೇರೆ …

Read More »

ಬೀಡಿ -ಕಿತ್ತೂರು ಮುಖ್ಯ ರಸ್ತೆ ಇದು ಕಚರಾ ಡಿಪೋನೋ ಅಥವಾ ಬೀಡಿ ಗ್ರಾಮದ ರಸ್ತೆಯೋ???

ಇದು ಕಚರಾ ಡಿಪೋನೋ ಅಥವಾ ಬೀಡಿ ಗ್ರಾಮದ ರಸ್ತೆಯೋ??? ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಅಧಿಕಾರಿಗಳು ಡೋಂಟ್ ಕೇರ್… ಖಾನಾಪೂರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಬೀಡಿ -ಕಿತ್ತೂರು ಮುಖ್ಯ ರಸ್ತೆಯ ಬದಿಯಲ್ಲಿ ಎಸೆಯಲಾಗುತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ಓಡಾಡುವ ಜನರು, ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದರೂ ಕೂಡ ಗ್ರಾ.ಪಂ. ಅಧಿಕಾರಿಗಳಾಗಲಿ, ಪಿಡಿಓಗಳಾಗಲಿ ಕ್ಯಾರೆ ಎನ್ನುತ್ತಿಲ್ಲ. ಪ್ರತಿನಿತ್ಯವೂ ಸಾವಿರಾರು ಜನ ಸಂಚರಿಸುವ …

Read More »

ವಿಜಯಪುರದಲ್ಲಿ ಮೆಚ್ಚಿನ ಅಪ್ಪುವಿನ ಜನ್ಮದಿನಾಚರಣೆ

ವಿಜಯಪುರದಲ್ಲಿ ಮೆಚ್ಚಿನ ಅಪ್ಪುವಿನ ಜನ್ಮದಿನಾಚರಣೆ:ಪ್ರಸಾದ ವಿತರಣಾ ಕಾರ್ಯದಲ್ಲಿ ಅಪ್ಪುಗೆ ನಮನ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 50ನೇ ವರ್ಷದ ಜನ್ಮದಿನ ಹಿನ್ನಲೆಯಲ್ಲಿ ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿನ ಗಜಾನನ ಮಹಾಮಂಡಳದ ವತಿಯಿಂದ ಜನ್ಮದಿನವನ್ನು ಆಚರಿಸಲಾಯಿತು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆಯುವ ಮಹಾಮಂಡಳದಿಂದ ಪ್ರತಿ ಸೋಮವಾರ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಬಡವರಿಗೆ ಅನ್ನ ಪ್ರಸಾದ ವಿತರಿಸಲಾಗುತ್ತದೆ. ಈ ಸೋಮವಾರ ನಟ ದಿವಂಗತ ಪುನೀತ …

Read More »

15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಕರ್ನಾಟಕದ ತಂಡ…

15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಕರ್ನಾಟಕದ ತಂಡ… ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಬೆಳಗಾವಿಯ ದೇಹದಾರ್ಢ್ಯಪಟುಗಳು… ಇದೇ ತಿಂಗಳು ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕದ ತಂಡವು ಭಾಗವಹಿಸಲಿದ್ದು, ಈ ತಂಡಕ್ಕೆ ಬೆಳಗಾವಿ ಸೇರಿದಂತೆ ವಿವಿಧೆಡೆ ದೇಹದಾರ್ಢ್ಯಪಟುಗಳು ಆಯ್ಕೆಯಾಗಿದ್ದಾರೆ. ಇದೇ ತಿಂಗಳ 29 ಮತ್ತು 30 ರಂದು ಛತ್ತೀಸಗಢದ ಬಿಲಾಸಪುರದಲ್ಲಿ ನಡೆಯಲಿರುವ 15ನೇ ಜ್ಯೂನಿಯರ್, ಮಾಸ್ಟರ್ಸ್, ದಿವ್ಯಾಂಗ್ ದೇಹದಾರ್ಢ್ಯ ಸ್ಪರ್ಧೆ 2025ರಲ್ಲಿ ಕರ್ನಾಟಕ …

Read More »

ಬೆಳಗಾವಿಯಲ್ಲಿ ಎ.ಟಿ.ಎಂ ಕಳ್ಳತನಕ್ಕೆ ವಿಫಲ ಯತ್ನ !!!

ಬೆಳಗಾವಿಯಲ್ಲಿ ಎ.ಟಿ.ಎಂ ಕಳ್ಳತನಕ್ಕೆ ವಿಫಲ ಯತ್ನ !!! ಬೆಳಗಾವಿ ನಗರದ ನರ್ತಕಿ ಚಿತ್ರಮಂದಿರದ ಹತ್ತಿರವಿರುವ ಎ.ಟಿ.ಎಂ. ವೊಂದರಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಇಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ. ಎಚ್. ಡಿ. ಎಫ್. ಸಿ ಬ್ಯಾಂಕ್ ಎ.ಟಿ.ಎಂ ಶೇಟರ್ ಬೀಗ‌ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಪತ್ರಿಕೆ ಹಾಕುವ ಯುವಕರ ವಾಹನದ ಸದ್ದು ಕೇಳಿ ಕಳ್ಳರು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ‌.

Read More »

ಮೈಸೂರು: ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಮೂವರಿಗೆ 20 ವರ್ಷ ಜೈಲು ಶಿಕ್ಷೆ

ಮೈಸೂರು: ಆಶ್ರಯ ಬೇಡಿ ಬಂದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿ, ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಮಹಿಳೆ ಸೇರಿ ಮೂವರಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆನಂದ ಪಿ.ಹೊಗಾಡೆ ತೀರ್ಪು ನೀಡಿದ್ದಾರೆ. ಕೆ.ಆರ್.ಪೇಟೆ ತಾಲೂಕು ಚಿಕ್ಕನಹಳ್ಳಿಪುರ ಗ್ರಾಮದ ರೇಖಾ, ಶ್ರೀರಂಗಪಟ್ಟಣದ ರಾಘವೇಂದ್ರ, ಪುರ ಗ್ರಾಮದ ಉಮೇಶ್‌ ಶಿಕ್ಷೆಗೆ ಗುರಿಯಾದವರು. ಇತರ ಆರೋಪಿಗಳಾದ ಲೀಲಾವತಿ ಮತ್ತು ಲಲಿತಾ …

Read More »