ಅಯೋಗ್ಯ’ ಸಿನಿಮಾ ಖ್ಯಾತಿಯ ಮಹೇಶ್ ನಿರ್ದೇಶನ ಮಾಡಿರುವ ‘ಮದಗಜ’ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಆಗಿದೆ. ಈ ಸಲುವಾಗಿ ಗುರುವಾರ (ನ.11) ಸುದ್ದಿಗೋಷ್ಠಿ ನಡೆಸಲಾಯಿತು. ಶ್ರೀಮರಳಿ, ಆಶಿಕಾ ರಂಗನಾಥ್ ಸೇರಿದಂತೆ ಇಡೀ ಚಿತ್ರತಂಡದವರು ಪುನೀತ್ ರಾಜ್ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ‘ಮದಗಜ ಚಿತ್ರದ ಮೊದಲ ಪ್ರೆಸ್ ಮೀಟ್ ಇದು. ಅಪ್ಪು ಮಾಮನಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಹಾಡು ರಿಲೀಸ್ ಮಾಡಿದ್ದೇವೆ. ಅವರ ನೆನಪಿನಲ್ಲಿ ಪೂಜೆ ಸಲ್ಲಿಸಿದ್ದೇವೆ. ಅಪ್ಪು ಮಾಮನನ್ನು …
Read More »ಮೃತ ಗರ್ಭಿಣಿಯ ಗರ್ಭದಿಂದ ಜೀವಂತ ಮಗು ಹೊರತೆಗೆದ ವೈದ್ಯರು; ಮೂಕವಿಸ್ಮಿತರಾದ ಗದಗ ಜನತೆ
ಗದಗ: ದಂಡಪ್ಪ ಮಾನ್ವಿ ಮಹಿಳಾ ಆ್ಯಂಡ್ ಮಕ್ಕಳ ಆಸ್ಪತ್ರೆ ವೈದ್ಯರು ಮೃತ ಗರ್ಭಿಣಿ ಹೊಟ್ಟೆಯಿಂದ ಜೀವಂತ ಮಗುವನ್ನು ಹೊರತೆಗೆದಿದ್ದಾರೆ. ಗರ್ಭಿಣಿ ಅನ್ನಪೂರ್ಣ ಎಂಬುವವರು ಲೋ ಬಿಪಿ, ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಊರಿನಿಂದ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದಾರೆ. ಆದರೆ ಹೊಟ್ಟೆಯಲ್ಲಿದ್ದ ಮಗು ಜೀವಂತವಿರುವುದು ವೈದ್ಯರಿಗೆ ತಿಳಿದ ತಕ್ಷಣ ಆಪರೇಷನ್ ಮಾಡಿದ್ದಾರೆ. ಆಪರೇಷನ್ ನಡೆಸಿದ ವೈದ್ಯರ ತಂಡ ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ನವೆಂಬರ್ 4ರಂದು ನಡೆದ ಅಪರೂಪದ ಘಟನೆ ತಡವಾಗಿ ಬೆಳಕಿಗೆ …
Read More »ತಂದೆ ವಿರುದ್ಧವೇ ಸಾಕ್ಷಿ ಹೇಳಿದ 8 ವರ್ಷದ ಬಾಲಕಿ: ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ
ಚಾಮರಾಜನಗರ: ಗಿರವಿ ಇಟ್ಟಿದ್ದಂತ ಚಿನ್ನದ ಸರವನ್ನು ಬಿಡಿಸಿಕೊಡೋ ಸಂಬಂಧ, ಪತಿ-ಪತ್ನಿಯರ ನಡುವೆ ಜಗಳವಾಗಿದೆ. ಇದೇ ವಿಚಾರ ತಾರಕಕ್ಕೇರಿದ್ದರಿಂದ ಪತ್ನಿಯನ್ನೇ ಪತಿರಾಯ ಹತ್ಯೆಗೈದಿದ್ದಾನೆ. ಈ ವಿಷಯವನ್ನು ಕೋರ್ಟ್ ನಲ್ಲಿ ಸಾಕ್ಷ್ಯವಾಗಿ ಅಪ್ಪನ ವಿರುದ್ಧವೇ ಮಗಳು ಸಾಕ್ಷ್ಯ ಹೇಳಿದ್ದರಿಂದಾಗಿ, ಇದೀಗ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
Read More »ವಿದ್ಯಾಕಾಶಿ ಧಾರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಅನಿಲ್ ಮದಾನ, ಉಮೇಶ್ ಶಿವಕುಮಾರ್ ಮಡಿವಾಳ ಬಂಧಿತ ಆರೋಪಿಗಳು. ಬಂಧಿತರಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರದ ಸಪ್ತಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳು ಶಿವಗಿರಿ, ಸಾಯಿ ಹಾಸ್ಟೇಲ್, ಜಯನಗರಗಳಲ್ಲಿ ಗಾಂಜಾ ಮಾರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಓದಲೆಂದು ಬಂದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ …
Read More »ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರ ಧರಣಿ, ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಮುಂದಾದ ಜಮೀನು ಮಾಲೀಕ;
ಬೆಳಗಾವಿ ರೈತರ ಪ್ರತಿಭಟನೆ ತೀವ್ರಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ರೈತರು ಹಾಗೂ ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಮಚ್ಚೆ ಗ್ರಾಮದಲ್ಲಿ ಮಚ್ಚೆ-ಹಲಗಾ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದು, ಪೊಲೀಸರು ಧರಣಿ ನಿರತ ರೈತರನ್ನು ಎಳೆದಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ ನಿರತರನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ರೈತ ಮಹಿಳೆಯನ್ನು ಎಳೆದಾಡಿ, ಅವರ ಸೀರೆ ಹರಿದಿದ್ದಾರೆ …
Read More »ವಿಷ್ಣುವರ್ಧನ್ ಸಮಾಧಿಗೆ ಅಡ್ಡಿ ಮಾಡುತ್ತಿರುವವರು ಯಾರು? ಮನಸ್ಸು ಬಿಚ್ಚಿ ಮಾತನಾಡಿದ ನಟ ಅನಿರುಧ್
ನಟ ವಿಷ್ಣುವರ್ಧನ್ ಕುಟುಂಬ ಇನ್ನು ಕೂಡ ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ಹೋರಾಡುತ್ತಲೇ ಇದೆ. ವಿಷ್ಣು ವರ್ಧನ್ ಅವರನ್ನು ಕಳೆದುಕೊಂಡು 12ವರ್ಷ ಆಗುತ್ತಾ ಬಂದರೂ ಇನ್ನೂಕೂಡ ಒಂದು ಸಮಾಧಿ ಆಗಿಲ್ಲ ಎಂಬ ಕೊರಗು ವಿಷ್ಣುವರ್ಧನ್ ಕುಟುಂಬಕ್ಕೆ ಇದೆ. ಹಾಗಿದ್ದರೆ ವಿಷ್ಣು ಸಮಾಧಿ ತಡವಾಗಲು ಕಾರಣ ಏನು? ನಿಜಕ್ಕೂ ಇಲ್ಲಿ ಆಗುತ್ತಿರುವ ಅಡೆತಡೆಗಳು ಏನು? ಸರ್ಕಾರ ವಿಷ್ಣು ಸಮಾಧಿಗೆ ಸಹಕಾರ ಕೊಟ್ಟಿದ್ಯಾ? ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ನಟ ಅನಿರುಧ್. ಫಿಲ್ಮಿಬೀಟ್ …
Read More »ಕಾಂಗ್ರೆಸ್ ಆಯ್ತು ಈಗ ಬಿಜೆಪಿ ಸರದಿ; ಕೇಸರಿ ನಾಯಕರ ಗುಸು ಗುಸು ವಿಡಿಯೋ ವೈರಲ್
ಬೆಂಗಳೂರು: ಉಪಚುನಾವಣೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರ ಹಾನಗಲ್ ನಲ್ಲಿ ಸೋಲನಭವಿಸಿದ ನೋವಿನಲ್ಲಿರುವಾಗಲೇ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಡಳಿತ ಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸಿರುವ ಗುಸು ಗುಸು ವಿಡಿಯೋ ವೈರಲ್ ಆಗಿದೆ. ಹಾನಗಲ್ ಕ್ಷೇತ್ರ ನಮಗೆ ಕೊಟ್ಟಿದ್ದರೆ ಉಪಚುನಾವಣೆಯಲ್ಲಿ ಗೆಲ್ಲಿಸಬಹುದಿತ್ತು ಎಂದು ವಸತಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಇಬ್ಬರು ಮಾತನಾಡಿಕೊಳ್ಳುತ್ತಿರುವ ಸಂಭಾಷಣೆ ಜಗಜ್ಜಾಹೀರಾಗಿದೆ. ಸಚಿವ ಸೋಮಣ್ಣ, ನಿನಗೆ ಎಷ್ಟು ಶಕ್ತಿ …
Read More »ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಕರ್ನಾಟಕದ ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳ ದಟ್ಟಣೆ
ಉಳ್ಳಾಲ: ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರಕಾರವೂ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದರಿಂದ ತಲಪಾಡಿ, ಜಾಲ್ಸೂರು ಸೇರಿದಂತೆ ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಕರ್ನಾಟಕದ ಪೆಟ್ರೋಲ್ ಬಂಕ್ಗಳಲ್ಲಿ ವಾಹನಗಳ ದಟ್ಟಣೆ ಕಾಣಿಸುತ್ತಿದೆ. ಅತ್ತ ಕೇರಳ ಭಾಗದ ಬಂಕ್ಗಳು ಬಿಕೋ ಎನ್ನುತ್ತಿವೆ. ಕಾರಣ ಡೀಸೆಲ್ಗೆ 8.5 ರೂ. ಮತ್ತು ಪೆಟ್ರೋಲ್ಗೆ 5.5 ರೂ. ವ್ಯತ್ಯಾಸ ಇರುವುದು. ಮೇಲಿನ ತಲಪಾಡಿಯ ಕೇರಳ …
Read More »ಅಪ್ಪು ನೋವಲ್ಲೇ ನೇತ್ರದಾನಕ್ಕೆ ಸಹಿ: ಅಣ್ಣಾವ್ರ ಕುಟುಂಬದೊಂದಿಗೆ ಜಮೀರ್ ನಂಟೇನು?
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ದಿನದಿಂದ ರಾಜ್ಯದಲ್ಲಿ ನೇತ್ರದಾನಕ್ಕೆ ಮನಸ್ಸು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಪ್ಪು ಕಣ್ಣುಗಳಿಂದ ನಾಲ್ಕು ಜಗತ್ತು ನೋಡುವಂತಾಗಿದೆ. ಇದರಿಂದ ಪ್ರೇರಣೆ ಹೊಂದಿದ ಪುನೀತ್ ಅಭಿಮಾನಿಗಳು ಹಾಗೂ ರಾಜ್ಯದ ಜನರು ಸ್ವಯಂ ಪ್ರೇರಿತರಾಗಿ ತಮ್ಮ ಕಣ್ಣುಗಳನ್ನು ದಾನ ಪತ್ರಕ್ಕೆ ಸಹಿ ಮಾಡುತ್ತಿದ್ದಾರೆ. ಇವರ ಸಾಲಿಗೆ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಜಮೀರ್ ಅಹ್ಮದ್ ಖಾನ್ ಇಂದು ( ನವೆಂಬರ್ 10) ತಮ್ಮ ಬೆಂಬಲಿಗರೊಂದಿಗೆ …
Read More »ಇಬ್ಬರ ಹೆಂಡಿರ ಮುದ್ದಿನ ಗಂಡನ ಮೋಸದಾಟ ಬಯಲು
ಬಳ್ಳಾರಿ: ಮೊದಲ ಪತ್ನಿಗೆ ಹೇಳದೇ ಎರಡನೇ ಮದುವೆಯಾದ ಭೂಪ ಈಗ ಎರಡನೇ ಪತ್ನಿ ಜೊತೆಗೂ ಕಳ್ಳಾಟ ಆಡುತ್ತಿದ್ದಾನೆ. ಇದೀಗ ಈ ಚಾಲಾಕಿ ಸಬ್ ರಿಜಿಸ್ಟ್ರಾರ್ ಮದುವೆ ಮಹಾಭಾರತ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಉಮೇಶ್ ಎಂಬಾತನೇ ಎರಡು ಮದುವೆಯಾಗಿ ಮಾಸದಾಟವಾಡುತ್ತಿರುವ ಸಬ್ ರಿಜಿಸ್ಟ್ರಾರ್. ಈತ ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕೆಲಸ ಮಾಡುತ್ತಿದ್ದನೆ. ಮೊದಲ ಮದುವೆಯನ್ನು ಮುಚ್ಚಿಟ್ಟು ನಜ್ಮೀರ್ ಖಾನ್ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದು, ಇದೀಗ ವಿಚಾರ ತಿಳಿದು ದೂರು ನೀಡಿದ್ದಾಳೆ. …
Read More »