ಬೆಂಗಳೂರು,ಜ.7 – ರಾಜ್ಯದಲ್ಲಿ ಕೊರೋನಾ ವೈರಸ್, ಓಮಿಕ್ರಾನ್ ದಿನೇದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದಲ್ಲಿ ವೀಕೆಂಡ್ ಕಫ್ರ್ಯೂ ಹೇರಿಕೆಯಾಗಿದ್ದು ಇಂದು ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಅನ್ವಯವಾಗುತ್ತದೆ. ಇಂದು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಅತ್ಯವಶ್ಯಕ ಮತ್ತು ತುರ್ತು ಕಾರ್ಯಗಳನ್ನು ಹೊರತುಪಡಿಸಿ ಜನರ ಒಡಾಟವನ್ನು ಕಟ್ಟುನಿಟ್ಟಾಗಿ ನಿಷೇಸಲು ಜಿಲ್ಲಾಡಳಿತಗಳು ಕ್ರಮ ಕೈಗೊಂಡಿವೆ. ತುರ್ತು, ಅತ್ಯವಶ್ಯಕ ಸೇವೆಗಳು ಮತ್ತು ಕೋವಿಡ್ ನಿಯಂತ್ರಣ …
Read More »ಕೊರೊನಾ ಸ್ಫೋಟ; ಒಂದೇ ದಿನದಲ್ಲಿ 1 ಲಕ್ಷದ 17 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ; ಕ್ಷಣ ಕ್ಷಣಕ್ಕೂ ಕಾಡುತ್ತಿದೆ ಒಮಿಕ್ರಾನ್ ಆತಂಕ
ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,17,100 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ದಿನದ ಕೋವಿಡ್ ಪಾಸಿಟಿವ್ ರೇಟ್ ಶೇ.7.74ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 302 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 483178 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 371363 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 30836 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ …
Read More »ಪ್ರಧಾನಿ ಮೋದಿ ಭದ್ರತಾ ಲೋಪ; ಸೋಮವಾರ ‘ಸುಪ್ರೀಂ’ ಆದೇಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್ ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಆದೇಶ ನೀಡುವುದಾಗಿ ತಿಳಿಸಿ ತೀರ್ಪನ್ನ ಕಾಯ್ದಿರಿಸಿದೆ. ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಹೈಕೋರ್ಟ್ ರಿಜಿಸ್ಟರ್ ಜನರಲ್ ನೇಮಿಸಿ ಆದೇಶ ಹೊರಡಿಸಿದೆ. ಸದ್ಯಕ್ಕೆ ಯಾವುದೇ ಕ್ರಮ ಬೇಡ ರಿಜಿಸ್ಟರ್ ಜನರಲ್ ಆಫ್ ಪಂಜಾಬ್ & ಹರಿಯಾಣ ಹೈಕೋರ್ಟ್ ನೇಮಕ ಮಾಡಿ ಆದೇಶ ಹೊರಡಿಸಿದೆ. ಇವರಿಗೆ …
Read More »ಪರಿಹಾರ ಮೊತ್ತ ಸ್ವೀಕರಿಸಲು ನಿರಾಕರಣೆ ಮಾಡುತ್ತಿರುವ COVID-19 ಮೃತ ಕುಟುಂಬಸ್ಥರು
ಬೆಂಗಳೂರು: Covid Death: ಈ ಹಿಂದೆ ಸರ್ಕಾರ ಕೋವಿಡ್-19 (Covid-19) ರಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಿದ್ದು, ವಿಳಂಬವಾದರೂ ಪರಿಹಾರ ಮೊತ್ತ ಬ್ಯಾಂಕ್ ಖಾತೆಗೆ ಜಮಾವಣೆ ಆಗಲು ಪ್ರಾರಂಭ ಆಗಿದೆ. ಆಶ್ಚರ್ಯ ಎಂದರೆ ಅನೇಕ ಕುಟುಂಬದವರು ಪರಿಹಾರ ಸ್ವೀಕಾರ ಮಾಡಲು ನಿರಾಕರಿಸುತ್ತಿದ್ದಾರೆ. ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವ ಕುಟುಂಬದ ದುಡಿಯುವ ವ್ಯಕ್ತಿ ಕೋವಿಡ್-19 (Covid-19) ಸೋಂಕಿನಿಂದ ಮೃತಪಟ್ಟರೆ ರಾಜ್ಯ ಸರ್ಕಾರ ₹1 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. …
Read More »ಕೊರೊನಾ 3ನೇ ಅಲೆ ತಡೆಯಲು ಸಾಧ್ಯವಿಲ್ಲ: ಆರೋಗ್ಯ ಸಚಿವ ಕೆ.ಸುಧಾಕರ್
ಕೊರೊನಾ ಮೂರನೇ ಅಲೆ ಬಂದಿದ್ದು, ಇದನ್ನು ತಡೆಯಲು ಸಾಧ್ಯವಿಲ್ಲ. ಅಲೆಯ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ 3ನೇ ಅಲೆ ಒಮ್ಮೆಲೆ ತಡೆಯಲು ಸಾಧ್ಯವಿಲ್ಲ. ದಿನೇದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಒಮ್ಮೆಲೆ ತಡೆಯಲು ಆಗುವುದಿಲ್ಲ ಎಂದರು. ಒಂದು ದೇಶ, ಒಂದು ರಾಜ್ಯದಲ್ಲಿ ಲಸಿಕೆ ಪಡೆದರೆ ಕೊರೊನಾ ತಡೆಯಲು ಸಾಧ್ಯವಿಲ್ಲ. ವಿಶ್ವದ ಎಲ್ಲರೂ ಲಸಿಕೆ ಪಡೆದಾಗ ಮಾತ್ರ ತಡೆಯಲು …
Read More »ಇಂದು ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗಿನವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ:
ಬೆಂಗಳೂರು: ಕೊರೊನಾ ಮೂರನೇ ಅಲೆ ಮತ್ತು ಒಮಿಕ್ರಾನ್ ಹೆಚ್ಚಳದ ಹಿನ್ನೆಲೆ ರಾಜ್ಯಾದ್ಯಂತ ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಅದರಂತೆ ಇಂದು ರಾತ್ರಿ ಎಂಟು ಗಂಟೆಯಿಂದ ಸೋಮವಾರ ಬೆಳಗಿನವರೆಗೆ ಯಾವುದೇ ಮದ್ಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಾರ್ ಮಾಲಿಕರು ಮನವಿ ಮಾಡಿದರು. ಆದರೆ ಅನಿವಾರ್ಯವಾಗಿ ಜನರ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇಂದು …
Read More »ರೇಣುಕಾ ಯಲ್ಲಮ್ಮ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕಾ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ
ಬೆಳಗಾವಿ: ಒಮಿಕ್ರಾನ್ ಸೋಂಕಿತ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೇಣುಕಾ ಯಲ್ಲಮ್ಮ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕಾ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮಹಾರಾಷ್ಟ್ರದಿಂದ ಗಣನೀಯ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಆಗಮಿಸುತ್ತಾರೆ. ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಬಣದ ಹುಣ್ಣಿಮೆ ಜಾತ್ರೆಗೆ ಸುಮಾರು 5ರಿಂದ 8 ಲಕ್ಷದವರೆಗೆ ಭಕ್ತಾದಿಗಳು ಸೇರುವ ನಿರೀಕ್ಷೆ …
Read More »ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇಗುಲದ ಹುಂಡಿಯಲ್ಲಿ ₹1.18 ಕೋಟಿ ಕಾಣಿಕೆ ಸಂಗ್ರಹ
ಬೆಳಗಾವಿ: ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು ಭಕ್ತರು ಹಾಕಿದ ಕಾಣಿಕೆಯಿಂದ 1.18 ಕೋಟಿ ರು. ಹಣ ಸಂಗ್ರಹವಾಗಿದೆ. ಅಲ್ಲದೇ, 17.39 ಲಕ್ಷ ರೂ. ಮೌಲ್ಯದ ಚಿನ್ನವನ್ನು ದೇವಿಗೆ ಸಮರ್ಪಿಸಿದ್ದಾರೆ. 2020ರ ಅ.26ರಿಂದ ಡಿ.10ರ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನ ಆಡಳಿತ ಮಂಡಳಿ, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ 2.20 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಕೂಡ ಸಂಗ್ರಹವಾಗಿದೆ. 500 ಹಾಗೂ …
Read More »ಜೋಡಿ ಹಳಿ ಕಾಮಗಾರಿಯಿಂದ ಸ್ಥಗಿತಗೊಂಡಿದ್ದ ರೈಲುಗಳ ಸಂಚಾರ ಇಂದಿನಿಂದ ಪುನಃ ಆರಂಭವಾಗಲಿದೆ.
ಬೆಂಗಳೂರು: ರಾಜಧಾನಿಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ನಡೆಯುತ್ತಿದ್ದ ಜೋಡಿ ಹಳಿ ಕಾಮಗಾರಿಯಿಂದ ಸ್ಥಗಿತಗೊಂಡಿದ್ದ ರೈಲುಗಳ ಸಂಚಾರ ಇಂದಿನಿಂದ ಪುನಃ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಕೆಎಸ್ಆರ್ ಬೆಂಗಳೂರು- ಧಾರವಾಡ ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು, ಧಾರವಾಡ – ಕೆಎಸ್ಆರ್ ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು ಮತ್ತು ಹೊಸಪೇಟೆ-ಕೆಎಸ್ಆರ್ ಬೆಂಗಳೂರು ವಿಶೇಷ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದೆ. ವಾಸ್ಕೋಡಗಾಮ-ಯಶವಂತಪುರ ಎಕ್ಸ್ಪ್ರೆಸ್, ಮೈಸೂರು …
Read More »ಮಳ್ಳನಂತೆ ಹೋಟೆಲ್ಗೆ ಬಂದು ಹಣ ಪೀಕಿದ ಬಾಲಕ : ಸಿಸಿಟಿವಿಯಲ್ಲಿ ಕೃತ್ಯ ಸೆರೆ
ಬೆಳಗಾವಿ : ಕಳ್ಳತನದಲ್ಲಿ ಈ ಬಾಲಕ ದೊಡ್ಡವರನ್ನೂ ಮೀರಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಹಾಡುಹಗಲೇ ಮಾಲೀಕರ ಕಣ್ಣಿಗೆ ಮಣ್ಣೆರಚಿದ ಬಾಲಕ, ಹಣ ಕದ್ದು ಪರಾರಿಯಾಗಿದ್ದಾನೆ. ಯಾರಿಗೂ ಗೊತ್ತಾಗದಂತೆ ನುಸುಳಾಡಿ ಹಣ ಪೀಕಿರುವ ಬಾಲಕ ನೋಡ ನೋಡುತ್ತಿದ್ದಂತೆಯೇ ಹಣದ ಪೆಟ್ಟಿಗೆಯಲ್ಲಿದ್ದ 9000 ಸಾವಿರ ರೂ. ಕದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಗೋಕಾಕ್ ನಗರದ ದುರ್ಗಾ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಬಾಲಕನ ಕಳ್ಳತನದ ಕೃತ್ಯ ಹೋಟೆಲ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್ …
Read More »