ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಲು ನಮ್ಮ ಬಳಿ ಸರ್ಕಾರವಿಲ್ಲ. ಏನೂ ಇಲ್ಲ ಅಂದ ಮೇಲೆ ಚಾರ್ಜ್ಶೀಟ್ ಏಕೆ ಹಾಕಿದ್ರಿ. ಜಾರಿ ನಿರ್ದೇಶನಾಲಯಕ್ಕೆ ಏಕೆ ತನಿಖೆಗೆ ಬರೆದಿದ್ದೀರಿ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ನಮ್ಮ ಬಳಿ ಸರ್ಕಾರ ಇಲ್ಲ. ನಮ್ಮ ಬಳಿ ಅವರು ಕೊಡ್ತಿರುವ ಮಾಹಿತಿಯμÉ್ಟೀ ಇದೆ. ಇಬ್ಬರು ಮಂತ್ರಿಗಳು ಗಾಸಿಪ್ ಮಾಡ್ತಿದ್ದಾರೆ ಎಂದಿದ್ದಾರೆ. ಗೃಹ …
Read More »ಜೈ ಭೀಮ್’ ನಲ್ಲಿ ಮಾಡಿದ್ದನ್ನು ನಿಜಜೀವನದಲ್ಲಿ ಮಾಡಿದ ನಟ ಸೂರ್ಯ
ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದಲ್ಲಿ ಕೆಳವರ್ಗದ ಬಡ ಕಾರ್ಮಿಕ ರಾಜಕಣ್ಣು ಎಂಬಾತ ಲಾಕಪ್ ಡೆತ್ ಗೆ ನ್ಯಾಯ ಒದಗಿಸುವ ಕತೆಯಿದೆ.ಇದೀಗ ನಟ ಸೂರ್ಯ ಅದೇ ಮಾನವೀಯತೆಯನ್ನು ನಿಜ ಜೀವನದಲ್ಲೂ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೈ ಭೀಮ್ ಸಿನಿಮಾ 1990 ರಲ್ಲಿ ನಡೆದ ರಾಜಾಕಣ್ಣು ಲಾಕಪ್ ಡೆತ್ ಘಟನೆಯಾಧಾರಿತ ಸಿನಿಮಾವಾಗಿದೆ. ನಿಜ ಜೀವನದಲ್ಲಿ ರಾಜಾಕಣ್ಣು ಪತ್ನಿ ಪಾರ್ವತಿ ಈಗಲೂ ದೈನಂದಿನ ಬದುಕಿಗೆ ಕಷ್ಟಪಡುತ್ತಿದ್ದಾಳೆ. ಇದನ್ನು ಅರಿತ ಸೂರ್ಯ …
Read More »ಮಹದೇಶ್ವರ ಬೆಟ್ಟ ಅಭಯಾರಣ್ಯದಲ್ಲಿ 5 ಅಡಿ ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆ: ಹಲವರ ವಿರೋಧ
ಹುಬ್ಬಳ್ಳಿ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ ಐದು ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೊಂಡಿದ್ದು, ಇದಕ್ಕೆ ವನ್ಯಜೀವಿ ಕಾರ್ಯಕರ್ತರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರದೇಶವು ಜಲ್ಲಿಪಾಳ್ಯ ಗ್ರಾಮದ ಸಮೀಪದಲ್ಲಿರುವ ಹೂಗ್ಯ ಎಂಬ ಪ್ರದೇಶದ ಅರಣ್ಯ ಭೂಮಿಯಲ್ಲಿ ಈ ಪ್ರತಿಮೆ ಸ್ಥಾಪನೆಗೊಂಡಿದೆ. ರಾಜ್ಯದಲ್ಲಿ ಎರಡನೇ ಲಾಕ್ಡೌನ್ ಸಮಯದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ಸ್ಥಳೀಯರು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಯಾಗಿರುವ ಜಾಗ …
Read More »ಡಿಸಿಸಿ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಕೈಕಾಲು ಕಟ್ಟಿಹಾಕಿ ಹತ್ಯೆ; ಎಟಿಎಂನಲ್ಲಿದ್ದ ಹಣ ದೋಚಿ ಕಳ್ಳರು ಪರಾರಿ
ತುಮಕೂರು: ಡಿಸಿಸಿ ಬ್ಯಾಂಕ್ (DCC Bank) ಸೆಕ್ಯೂರಿಟಿ ಗಾರ್ಡ್ ಕೈಕಾಲು ಕಟ್ಟಿಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ತುಮಕೂರು ತಾಲೂಕಿನ ನಾಗವಲ್ಲಿ ಗ್ರಾಮದಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ (Security Guard) ರಂಗಾಪುರ ಗ್ರಾಮದ ಸಿದ್ದಪ್ಪ(55)ನ ಹತ್ಯೆ ಬಳಿಕ, ಡಿಸಿಸಿ ಬ್ಯಾಂಕ್ (ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್) ಎಟಿಎಂನಲ್ಲಿದ್ದ ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಈ …
Read More »ಇನ್ಫೋಸಿಸ್ ಫೌಂಡೇಷನ್ನಿಂದ 103 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡು, ರೋಗಿಗಳ ಸೇವೆಗೆ ಸಜ್ಜಾಗಿ ನಿಂತಿದೆ. ಜಯದೇವ ಆಸ್ಪತ್ರೆ ಆವರಣದಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣಗೊಂಡಿದೆ.
ಬೆಂಗಳೂರು: ಜನರ ಹೃದಯ ಮಿಡಿತ ಸುಸ್ಥಿತಿಯಲ್ಲಿಡಲು ಶ್ರಮಿಸುವ ಖ್ಯಾತ ಜಯದೇವ ಆಸ್ಪತ್ರೆಯ ನೂತನ ಘಟಕ ನಿರ್ಮಾಣವಾದ ಸಂಗತಿ ನಿಜಕ್ಕೂ ರೋಚಕವಾಗಿದೆ. ಅದನ್ನು ಕೇಳಿದರೆ ಹೃದಯತುಂಬಿ ಬರುತ್ತದೆ. ಕೊಡುಗೈ ದಾನಿ ಎಂದೇ ಸುಪ್ರಸಿದ್ಧರಾದ ಇನ್ಫೋಸಿಸ್ ಪ್ರತಿಷ್ಠಾಣದ ಅಧ್ಯಕ್ಷೆ ಸುಧಾ ಮೂರ್ತಿ ಅವರ (Infosys Foundation chief Sudha Murthy) ಹೃದಯ ವೈಶಾಲ್ಯಕ್ಕೆ ಸಾಕ್ಷಿಯಾಗಿ ಇಂದು ಜಯದೇವ ಆಸ್ಪತ್ರೆಯ (Sri Jayadeva Institute of Cardiovascular Sciences and Research) ಹೊಸ ಘಟಕ …
Read More »ಭಿಕ್ಷೆ ಬೇಡುತ್ತಿದ್ದ ಟೈಲರ್: ಬದುಕು ಕಟ್ಟಿಕೊಟ್ಟ ಪಿಎಸ್ಐ
ಬೆಂಗಳೂರು: ಪತ್ನಿ ಮೃತಪಟ್ಟಿದ್ದರಿಂದ ಮಾನಸಿಕವಾಗಿ ನೊಂದು ಭಿಕ್ಷೆ ಬೇಡುತ್ತ ತಿರುಗುತ್ತಿದ್ದ ಶಂಕರ್ (42) ಎಂಬುವರಿಗೆ ಮಡಿವಾಳ ಸಂಚಾರ ಠಾಣೆ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಶಿವರಾಜ್ ಅಂಗಡಿ ಹಾಗೂ ಸಿಬ್ಬಂದಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಪಾವಗಡದ ಶಂಕರ್, ತಮ್ಮೂರಿನಲ್ಲಿ ಟೈಲರ್ ಕೆಲಸ ಮಾಡುತ್ತಿದ್ದರು. ಎರಡೂವರೆ ವರ್ಷದ ಹಿಂದೆ ಪತ್ನಿ ತೀರಿಕೊಂಡಿದ್ದರು. ಅದೇ ನೋವಿನಲ್ಲಿ ಊರು ಬಿಟ್ಟಿದ್ದ ಶಂಕರ್, ಬೆಂಗಳೂರಿಗೆ ಬಂದಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಭಿಕ್ಷೆ ಬೇಡುತ್ತ ತಿರುಗಾಡುತ್ತಿದ್ದರು. ಮಡಿವಾಳ …
Read More »ಪೇಜಾವರ ಶ್ರೀ ಮಾಂಸ ತಿನ್ನುತ್ತಿದ್ದರೇ ? :ತೀವ್ರ ಆಕ್ರೋಶ, ಕ್ಷಮೆ ಯಾಚಿಸಿದ ಹಂಸಲೇಖ
ಬೆಂಗಳೂರು : ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗುತ್ತಿದ್ದರು, ಅಲ್ಲಿ ಅವರು ಕೋಳಿ ಮಾಂಸ ಕೊಟ್ಟಿದ್ದರೆ ತಿನ್ನುತ್ತಿದ್ದರೇ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ವ್ಯಾಪಕ ಆಕ್ರೋಶದ ಬಳಿಕ ಸೋಮವಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಆ ರೀತಿ ಹೇಳಿಕೆ ನೀಡಬಾರದಿತ್ತು. ನನ್ನ ಹೇಳಿಕೆಯನ್ನು ನನ್ನ ಹೆಂಡತಿಯೇ ವಿರೋಧಿಸಿದ್ದಾಳೆ. ಈ ಕುರಿತು ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ. ‘ಕ್ಷಮೆ ಇರಲಿ, ಎಲ್ಲಾ ಮಾತುಗಳು …
Read More »ಸುರ್ಜೇವಾಲಾ-ಕೆಜಿಎಫ್ ಬಾಬು ಭೇಟಿ
ಕೋಲಾರ: ಉಮ್ರಾ ಚಾರಿಟಬಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್ ಬಾಬು ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಸ್ಥಳೀಯವಾಗಿ ಕಾಂಗ್ರೆಸ್ ಪಾಳಯದಲ್ಲಿ ಮಹತ್ವ ಪಡೆದುಕೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೋಲಾರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಉತ್ಸುಕರಾಗಿರುವ ಕೆಜಿಎಫ್ ಬಾಬು ಅವರು ಸುರ್ಜೇವಾಲ ಅವರನ್ನು ಭೇಟಿಯಾಗಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ …
Read More »ಮಕ್ಕಳನ್ನ ಕರೆದುಕೊಂಡು ಮಹಿಳೆ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನ ಹಿರಿಯ ನ್ಯಾಯಾಧೀಶ ತರಾಟೆಗೆ ತೆಗೆದುಕೊಂಡ ಘಟನೆ
ರಾಯಬಾಗ: ಚಿಕ್ಕ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆ ಕಂಡು ಭಿಕ್ಷುಕ ಮಹಿಳೆಯನ್ನ ಹಿರಿಯ ನ್ಯಾಯಾಧೀಶ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಮಾಯಕ್ಕಾ ದೇವಸ್ಥಾನದ ಆವರಣದಲ್ಲಿ ಇಬ್ಬರು ಮಕ್ಕಳನ್ನ ಕರೆದುಕೊಂಡು ಮಹಿಳೆ ಭಿಕ್ಷೆ ಬೇಡುತ್ತಿದ್ದಳು ಇದೆ ದೇವಸ್ಥಾನಕ್ಕೆಂದು ಆಗಮಿಸಿದ್ದ ರಾಯಭಾಗದ ಹಿರಿಯ ನ್ಯಾಯಾಧೀಶ ಬಸವರಾಜಪ್ಪ ಕೆ ಎಂ, ಮಹಿಳೆಯನ್ನ ಕರೆಸಿ ಯಾಕೆ ಮಕ್ಕಳನ್ನ ಕರೆದುಕೊಂಡು ಭಿಕ್ಷೆ ಬೇಡುತ್ತಿರಿ. ಎಲ್ಲಾದರೂ ಕೆಲಸ ಮಾಡಿ …
Read More »ಜನಾರ್ಧನ ರೆಡ್ದಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲ.
ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ದಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನಾರ್ಧನ ರೆಡ್ಡಿ ತೀವ್ರ ಜ್ವರದಿಂದ ಬಳಲುತ್ತಿದ್ದು, ನಿನ್ನೆ ತಡ ರಾತ್ರಿಯೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Read More »