ಅಳ್ನಾವರ: ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಬೆಳಗಾವಿ ಕಡೆಗೆ ಹೊರಟ್ಟಿದ್ದ ಸರಕು ಸಾಗಣೆ ರೈಲು ಹಳಿತಪ್ಪಿದ್ದು, 300 ಮೀಟರ್ ವರೆಗಿನ ರೈಲು ಮಾರ್ಗ ಕಿತ್ತು ಹೋಗಿದೆ. ರೈಲು ನಿಲ್ದಾಣದಲ್ಲಿ ಒಟ್ಟು ಆರು ಮಾರ್ಗಗಳಿವೆ. ಕೊನೆಯ ಮಾರ್ಗ ಗೂಡ್ಸ್ ರೈಲುಗಳ ಸಂಚಾರಕ್ಕೆ ಮೀಸಲಾಗಿದೆ. ಇಲ್ಲಿನ ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆ ಭಾರಿ ಸದ್ದು ಉಂಟಾಯಿತು, ಹಳಿಯ ಮಾರ್ಗದಲ್ಲಿ ದೂಳು ಎದ್ದಿತ್ತು. ಸಕಾಲದಲ್ಲಿ ರೈಲು ನಿಲುಗಡೆ ಮಾಡಿದ್ದರಿಂದ ಯಾವುದೇ ಅನಾಹುತ ಆಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು …
Read More »ಪಂಚರಾಜ್ಯ ವಿಧಾನಸಭೆ ಚುನಾವಣೆ: ಸೋಲು-ಗೆಲುವಿನ ಹಿಂದೆ ಆರು ಲೆಕ್ಕಾಚಾರ!
ನವದೆಹಲಿ, ಜನವರಿ 8: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ನಡುವೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದೆ. ಶನಿವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದಾರೆ. ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, …
Read More »ಚಂದ್ರನ ಮೇಲೆ ನಿಗೂಢ ವಸ್ತು: ಅದೇನೆಂದು ಪತ್ತೆ ಹಚ್ಚಿದ ನಾಸಾ!
ಚೀನಾದ ಯುಟು-2 ರೋವರ್ ಚಂದ್ರನ ಮೇಲೆ ನಿಗೂಢವಾದ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿತ್ತು. ಈ ವಸ್ತು ಏನಿರಬಹುದು ಅಂತ ಇಡೀ ವಿಶ್ವದ ತಜ್ಞರೆಲ್ಲಾ ತಲೆ ಕೆರೆದುಕೊಂಡು ಸಂಶೋಧನೆಯಲ್ಲಿ ಮುಳುಗಿದ್ರು. ಕೆಲವರಂತೂ ಅದು ಏಲಿಯನ್ಗಳು ನಿರ್ಮಿಸಿರೋ ಠಿಕಾಣಿ ಅಂತೆಲ್ಲಾ ಹೇಳಿದ್ರು. ಇದೀಗ ಚೀನಾದ ಯುಟು-2 ತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ಇದು ನಿಗೂಢ ವಸ್ತು ಏನಲ್ಲ.. ನಾವು ರೋವರ್ ಮೂಲಕ ಸೂಕ್ಷ್ಮವಾಗಿ ಪರಿಶೀಲಿಸಿದ್ದೀವಿ. ಇದು ಮೊಲದ ಆಕಾರದಲ್ಲಿರೋ ಒಂದು …
Read More »ಈ ದೇವಾಲಯದಲ್ಲಿ ಶೂ-ಚಪ್ಪಲಿ ಅರ್ಪಿಸುವುದರಿಂದ ವ್ರತಗಳು ನೆರವೇರುತ್ತವೆ..!
ನವದೆಹಲಿ: ಸಾಮಾನ್ಯವಾಗಿ ಜನರು ದೇವರನ್ನು ಪೂಜಿಸಲು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರಿಗೆ ನೈವೇದ್ಯ, ಪ್ರಸಾದ, ಹೂವುಗಳನ್ನು ಅರ್ಪಿಸಲು ಹೋಗುತ್ತಾರೆ. ಆದರೆ ಇಲ್ಲಿರುವ ದೇವಿಯ ದೇವಸ್ಥಾನದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಲು ಶೂ ಮತ್ತು ಚಪ್ಪಲಿಗಳ ಮಾಲೆ(Footwear Festival)ಗಳನ್ನು ಅರ್ಪಿಸುತ್ತಾರೆ. ಈ ದೇವಸ್ಥಾನದಲ್ಲಿ ಭಕ್ತರು ಇದನ್ನು ಏಕೆ ಮಾಡುತ್ತಾರೆ ಮತ್ತು ಈ ದೇವಾಲಯಕ್ಕೆ ಸಂಬಂಧಿಸಿದ ಸಂಪ್ರದಾಯಗಳು ಯಾವುವು ಎಂಬುದನ್ನು ತಿಳಿಯಿರಿ. ಪಾದರಕ್ಷೆ ಉತ್ಸವವನ್ನು ಆಯೋಜಿಸಲಾಗುತ್ತದೆ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಲಕ್ಷ್ಮಿದೇವಿ ದೇವಸ್ಥಾನ(Laxmidevi Temple)ವಿದೆ. ಪ್ರತಿ …
Read More »ಯುವಕನಿಗೆ ಮನಬಂದಂತೆ ಥಳಿಸಿ, ಉಗುಳು ನೆಕ್ಕುವಂತೆ ಬಲವಂತ ಮಾಡಿದ ಬಿಜೆಪಿ ಕಾರ್ಯಕರ್ತರು; ಅದಕ್ಕೂ ಮೊದಲು ಅಲ್ಲಿ ಆಗಿದ್ದೇನು?
ವೈರಲ್ ಆದ ವಿಡಿಯೋ ಆಧಾರದ ಮೇಲೆ, ಥಳಿತಕ್ಕೊಳಗಾದ ವ್ಯಕ್ತಿಯ ಸೋದರ ರೇಹನ್ ದೂರು ನೀಡಿದ್ದಾರೆ. ಪೊಲೀಸರು ಈಗಾಗಲೇ ಇಬ್ಬರು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ನಾಲ್ವರನ್ನು ಬಂಧಿಸಿದ್ದಾರೆ.ಬಿಜೆಪಿ ಕಾರ್ಯಕರ್ತರು ಸೇರಿ ಯುವಕನಿಗೆ ಮನಬಂದಂತೆ ಥಳಿಸಿ, ತಮ್ಮ ಉಗುಳನ್ನು ನೆಕ್ಕುವಂತೆ ಪೀಡಿಸಿದ್ದಾರೆ. ಅಷ್ಟೇ ಅಲ್ಲ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಾರ್ಖಂಡ್ದ ಧನ್ಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅದೂ …
Read More »ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಬೇಕೆ? ಅರ್ಹತಾ ಮಾನದಂಡವೇನು?
ಮುದ್ರಾ ಯೋಜನಾಯನ್ನು ಪ್ರತಿಯೊಬ್ಬರು ಕೇಳಿರಬಹುದು. ಅವುಗಳ ಸಂಕ್ಷಿಪ್ತವಾದ ವಿವರಗಳಿಗಾಗಿ ಹುಡುಕಾಟ ನಡೆಸಿದ್ದೀರಾ? ಈ ಯೋಜನೆಯಿಂದ ಏನ್ ಉಪಯೋಗ..? ಹೇಗೆ ಸಾಲ ಪಡೆಯುವುದು..? ಅದಕ್ಕೆ ಬೇಕಾದ ಮಾನದಂಡವೇನು..? ಅನ್ನೋದರ ಬಗ್ಗೆ ಯೋಚಿಸುತ್ತೀರಾ.. ಹಾಗಿದ್ದರೆ ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ. ಪ್ರಧಾನ ಮಂತ್ರಿ ಮುದ್ರಾ ಯೋಜನಾ (PMMY) ಎಂಬುದು ಆಗಸ್ಟ್ 8, 2015ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಯೋಜನೆ. ಕಾರ್ಪೊರೇಟರರ ಹೊರತಾಗಿ, ಕೃಷಿ ವಲಯಕ್ಕೆ ಅಲ್ಲದೆ ಸಣ್ಣ/ಕಿರು ಸಂಸ್ಥೆಗಳಿಗೆ 10 …
Read More »ಮೇಕೆದಾಟು ಪಾದಯಾತ್ರೆಗೆ ಭರದ ಸಿದ್ಧತೆ: ಕನಕಪುರಕ್ಕೆ ಇಂದು ಡಿಕೆಶಿ, ಸಿದ್ದರಾಮಯ್ಯ
ರಾಮನಗರ: ಕಾಂಗ್ರೆಸ್ ನೇತೃತ್ವದಲ್ಲಿ ಕನಕಪುರ ತಾಲ್ಲೂಕಿನ ಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಭಾನುವಾರ ಬೆಳಿಗ್ಗೆ 8.30ಕ್ಕೆ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಅರ್ಕಾವತಿ, ವೃಷಭಾವತಿ ಹಾಗೂ ಕಾವೇರಿ ನದಿಗಳು ಸೇರುವ ಸಂಗಮದಲ್ಲಿ ನದಿ ದಂಡೆಯಲ್ಲೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ‘ನೀರಿಗಾಗಿ ನಡಿಗೆ’ ಎಂಬ ಧ್ಯೇಯದೊಂದಿಗೆ 11 ದಿನ ಪಾದಯಾತ್ರಿಗರು ಬೆಂಗಳೂರಿನತ್ತ ಹೆಜ್ಜೆ ಹಾಕಲಿದ್ದಾರೆ. ಸಂಗಮದಿಂದ ಕನಕಪುರ, ರಾಮನಗರ, ಬಿಡದಿ, ಕೆಂಗೇರಿ …
Read More »ಬಿಟಿವಿ ಹೆಸರಿನಲ್ಲಿ ಹಣ ವಸೂಲಿ ಆರೋಪ: ಬಿಟಿವಿ ಸಂಪಾದಕರ ದೂರಿನ ಮೇರೆಗೆ ಪರ್ತಕರ್ತನ ಬಂಧನ
ಬೆಂಗಳೂರು, ಜ.7: ಬಿಟಿವಿ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿಟಿವಿ ಸಂಪಾದಕರು ನೀಡಿದ ದೂರಿನ ಆಧಾರದ ಮೇರೆಗೆ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬಿಟಿವಿಯ ಕಚೇರಿಯಲ್ಲಿ ಈ ಹಿಂದೆ ವೀಡಿಯೊ ಎಡಿಟರ್ ಆಗಿದ್ದ ತೀರ್ಥಪ್ರಸಾದ್ ಹಲವು ದಿನಗಳಿಂದ ತಂಡವೊಂದನ್ನು ಕಟ್ಟಿಕೊಂಡು ವ್ಯವಸ್ಥಿತವಾಗಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಹಲವರು ಬಿಟಿವಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ. ಬಿಟಿವಿ …
Read More »ಜಮೀನು ಪತ್ರವನ್ನು ರಿಜಿಸ್ಟರ್ ಮಾಡಲು ಲಂಚಕ್ಕಾಗಿ ಬೇಡಿಕೆ : ಸಬ್ರಿಜಿಸ್ಟರ್ಗೆ 4 ವರ್ಷ ಶಿಕ್ಷೆ
ತುಮಕೂರು: ಜಮೀನಿನ ದಾನ ಪತ್ರವನ್ನು ರಿಜಿಸ್ಟರ್ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಮಧುಗಿರಿ ಸಬ್ ರಿಜಿಸ್ಟರ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿಆರೋಪಿಗೆ ಕೋರ್ಟ್ 4 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಸಬ್ ರಿಜಿಸ್ಟರ್ ರಾಮಚಂದ್ರಯ್ಯ ಎಂಬುವರಿಗೆ ತುಮಕೂರಿನ 7ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಸಜೆ ಹಾಗೂ 8ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಮಧುಗಿರಿ ತಾಲೂಕು ಚಿಕ್ಕ ಹೊಸಳ್ಳಿ ಗ್ರಾಮದ …
Read More »1-9 ನೇ ತರಗತಿ ಮಕ್ಕಳಿಗೆ ‘ವಿದ್ಯಾಗಮ’ ಮಾದರಿಯಲ್ಲಿ ಬೋಧನೆ ಮಾಡುವಂತೆ ‘ಸಾರ್ವಜನಿಕ ಶಿಕ್ಷಣ ಇಲಾಖೆ’ಯಿಂದ ಸುತ್ತೋಲೆ
ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ರೆ ವಿದ್ಯಾಗಮ ಯೋಜನೆ ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಶಾಲೆಗಳಲ್ಲಿ ಭೌತಿಕ ತರಗತಿಗಳು ಬಂದ್ ಆಗಿದೆ. ಈ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ( ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ) ಎಲ್ಲಾ ಸರ್ಕಾರಿ ಅನುದಾನಿತ …
Read More »