ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಪಾದಯಾತ್ರೆಯಲ್ಲಿ ತೊಡಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಜ್ವರದಿಂದ ಬಳಲುತ್ತಿದ್ದು, ಪಾದಯಾತ್ರೆ ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ ಆದ ಘಟನೆ ನಡೆದಿದೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದ್ದು, ಇಂದು ಸಂಗಮ ಕ್ಷೇತ್ರದಿಂದ ಪಾದಯಾತ್ರೆಗೆ ಚಾಲನೆ ದೊರೆತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿ ಕೆಲ ದೂರ ಸಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಜ್ವರ ಹೆಚ್ಚಿದ್ದು, ಪಾದಯಾತ್ರೆ ಬಿಟ್ಟು ಕಾರಿನಲ್ಲಿ ಹೆಗ್ಗನೂರು ಗ್ರಾಮಕ್ಕೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ. ಈ ನಡುವೆ …
Read More »ಹುದಲಿಯಲ್ಲಿ ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟನೆ
ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ರಾಹುಲಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಆಗಲಿ. ಬಡವರ ಕಣ್ಣೀರೊರೆಸುವ ಕಾರ್ಯಗಳು ನಮ್ಮಿಂದಾಗಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ಶುಕ್ರವಾರ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಾಹುಲ್ ಅಭಿಮಾನಿಗಳ ಬಳಗ ವರ್ಷದ 365 ದಿನವೂ ಸಕ್ರಿಯವಾಗಿರಬೇಕು. ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ, ಬಡವರ ಪರ ಕೆಲಸಗಳನ್ನು ಮಾಡಬೇಕು. ಕ್ರೀಡೆ ಹಾಗೂ …
Read More »ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವೂ ಬೆಳಗಾವಿಯಲ್ಲಿ ಜನ ಡೋಂಟ್ ಕೇರ್ ಎಂದಿದ್ದಾರೆ.
ವೀಕೆಂಡ್ ಕಫ್ರ್ಯೂಗೆ ಎರಡನೇ ದಿನವೂ ಬೆಳಗಾವಿಯಲ್ಲಿ ಜನ ಡೋಂಟ್ ಕೇರ್ ಎಂದಿದ್ದಾರೆ. ಬೆಳಗಾವಿಯ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಖಾಸಗಿ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂದಿದೆ. ಇತ್ತಿಚೆಗೆ ಉದ್ಘಾಟನೆಗೊಂಡಿರುವ ಬೆಳಗಾವಿ ಹೊರವಲಯದ ಗಾಂಧಿನಗರದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲೇ ಇರುವ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಖಾಸಗಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಮಹಾರಾಷ್ಟ್ರ, ಗೋವಾದಿಂದ ನಿತ್ಯ ನೂರಾರು ವ್ಯಾಪಾರಿಗಳು ಆಗಮಿಸುತ್ತಿದ್ದಾರೆ. …
Read More »ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸೆರ್ಲಾಕ್ ಪ್ಯಾಕ್ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆ ಬಂಧನ
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿರುವ ಬೆಂಗಳೂರು ಎನ್ಸಿಬಿ ಅಧಿಕಾರಿಗಳು ಸುಮಾರು 1.5 ಕೋಟಿ ರೂ. ಮೌಲ್ಯದ 995 ಗ್ರಾಂ ಡ್ರಗ್ಸ್ (Methamphetamine) ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಸಾಗಿಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ. ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶುಕ್ರವಾರ ಈ ಕಾರ್ಯಾಚರಣೆ ನಡೆದಿದೆ. ಉಗಾಂಡ ಮೂಲದ ಮಹಿಳೆಯು ದೆಹಲಿಯಿಂದ ಡ್ರಗ್ಸ್ ತರಿಸಿಕೊಂಡು ರಾಜ್ಯದಲ್ಲಿ ಮಾರಾಟಕ್ಕೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ. ಮಕ್ಕಳಿಗೆ ಆಹಾರವಾಗಿ ನೀಡಲಾಗುವ …
Read More »ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕೊವಿಡ್ ಪಾಸಿಟಿವ್
ದೆಹಲಿ: ಸಂಸತ್ನ ಬಜೆಟ್ ಅಧಿವೇಶನದ (Budget Session of the Parliament) ಮೊದಲು ಅಧಿಕೃತ ಮೂಲಗಳ ಪ್ರಕಾರ, 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕೊವಿಡ್ (Covid-19) ದೃಢಪಟ್ಟಿದೆ. ಜನವರಿ 4 ರಿಂದ 8 ರವರೆಗೆ ಸಂಸತ್ತಿನ 1,409 ಸಿಬ್ಬಂದಿಗಳಲ್ಲಿ 402 ಸಿಬ್ಬಂದಿಗೆ ವೈರಸ್‌ಗೆ ಧನಾತ್ಮಕ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಎಎನ್ಐಗೆ ತಿಳಿಸಿದ್ದಾರೆ. ನಂತರ ಅವರ ಮಾದರಿಗಳಲ್ಲಿ ರೂಪಾಂತರಿ ಇದೆಯೇ ಎಂಬುದನ್ನು ಖಚಿತಪಡಿಸಲು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ. ಸಂಸತ್ತಿನ …
Read More »ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ನಿಧನ
ಧಾರವಾಡ: ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ(63) ಇಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕಲಾವಿದ ಬಸಲಿಂಗಯ್ಯ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಜಾನಪದ ಕಲಾವಿದ ಬಸಲಿಂಗಯ್ಯ ಧಾರವಾಡದ ನಿವಾಸಿಯಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ಇವರ ಪತ್ನಿ ವಿಶ್ವೇಶ್ವರಿ ಹಿರೇಮಠ ಕೂಡ ಜಾನಪದ ಕಲಾವಿದೆಯಾಗಿದ್ದು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಬಸಲಿಂಗಯ್ಯ ಹಿರೇಮಠ ದಂಪತಿ ಕಲಾ ಸೇವೆ ಮಾಡುತ್ತಿದ್ದರು. ಅಲ್ಲದೇ ಅನೇಕ ಜಾನಪದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ …
Read More »ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ನೂರಾರು ಜನ
ಬೆಳಗಾವಿ: ಶಶಿಕಲಾ ಜೊಲ್ಲೆ ದಂಪತಿಯಿಂದ ಸೇಡಿನ ರಾಜಕಾರಣ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರ ಗೆಲುವು ವಿಚಾರಕ್ಕೆ ಸಂಬಂಧಪಟ್ಟಂತೆ ಸೇಡಿನ ರಾಜಕಾರಣ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಪರ ಹಣ ಹಂಚಿರುವುದಾಗಿ ಶಶಿಕಲಾ ಜೊಲ್ಲೆ (shashikala jolle) ಆಪ್ತರು ದೂರು ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧ ಇಲ್ಲದೇ ಇರುವವರನ್ನು ಪೊಲೀಸರು (Karnataka police) ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ …
Read More »ಐಸಿಯುನಲ್ಲಿ ತಂದೆ ಸಾವು; ಕೊವಿಡ್ನಿಂದ ಹತ್ತಿರ ಹೋಗದ ಮಗ; ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ
ಕಳೆದ ಕೆಲವು ದಿನಗಳಿಂದ ವಿಶಾಲ್ ದದ್ಲಾನಿ ಅವರ ತಂದೆ ಮೋತಿ ದದ್ಲಾನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಕೊರೊನಾ ವೈರಸ್ ಕಾರಣದಿಂದ ಜನರು ಎದುರಿಸುತ್ತಿರುವ ಕಷ್ಟ ಒಂದೆರಡಲ್ಲ. ಎಲ್ಲರ ಬದುಕಿನಲ್ಲಿ ಅನಿಶ್ಚಿತತೆ ಆವರಿಸಿದೆ. ಮುಂದೇನು ಎಂಬ ಗೊಂದಲದಲ್ಲೇ ಕಾಲ ಕಳೆಯುವಂತಾಗಿದೆ. ಕೊವಿಡ್ (Covid 19) ಸೋಂಕು ತಗುಲಿದರೆ ಆತ್ಮೀಯರಿಂದಲೂ ದೂರ ಇರಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ. ಪ್ರೀತಿಪಾತ್ರರ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಾಲಿವುಡ್ನ (Bollywood) ಖ್ಯಾತ ಗಾಯಕ …
Read More »ಇಂದು ಕನಕಪುರದಲ್ಲಿ ನಡೆದೀತೇ ಹೈಡ್ರಾಮಾ; ಪಾದಯಾತ್ರೆಗೆ ಕೈ ನಾಯಕರ ಸಂಗಮ
ಬೆಂಗಳೂರು/ರಾಮನಗರ: ಮೇಕೆದಾಟು ಯೋಜನೆಯ ತ್ವರಿತ ಜಾರಿ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕರ ದಂಡು ಕನಕಪುರ ತಲುಪಿದೆ. ರವಿವಾರ ಬೆಳಗ್ಗೆ ಪಾದಯಾತ್ರೆ ಆರಂಭವಾಗಲಿದ್ದು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಉದ್ಘಾಟಿಸುವರು. ಕನ್ನಡ ಚಲನಚಿತ್ರೋದ್ಯಮದ ಬೆಂಬಲವೂ ದೊರೆತಿದ್ದು, ನಟ ಶಿವರಾಜ್‌ಕುಮಾರ್, ದುನಿಯಾ ವಿಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ. ಈ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಯಾದರೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಚಿಂತಿಸಿದ್ದು ಹೆಚ್ಚಿನ ಪೊಲೀಸ್ ನಿಯೋಜನೆಗೂ …
Read More »ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ
ಬೆಂಗಳೂರು: ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದ್ದು, ಘಟಾನುಘಟಿಗಳು ಸ್ಪರ್ಧೆಯಲ್ಲಿದ್ದಾರೆ. ಈ ಹುದ್ದೆಗೆ ಮಾನದಂಡ ಪಕ್ಷ ನಿಷ್ಠೆಯಾ ಅಥವಾ ವಿವಾದಾತ್ಮಕ ವ್ಯಕ್ತಿತ್ವವಾ ಎಂಬ ವಿಷಯ ಹೈಕಮಾಂಡ್ ಅಂಗಳ ತಲುಪಿದೆ. ಈ ಹುದ್ದೆಯಲ್ಲಿ ತಮ್ಮವರನ್ನು ಪ್ರತಿಷ್ಠಾಪಿಸಲು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ “ರಂಗಪ್ರವೇಶ’ ಮಾಡಿದ್ದಾರೆ. ಬಿ.ಕೆ.ಹರಿಪ್ರಸಾದ್, ನಸೀರ್ ಅಹಮದ್, ಸಿ.ಎಂ.ಇಬ್ರಾಹಿಂ, ಅಲ್ಲಂ …
Read More »