ಮೂಡಲಗಿ : ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಈಗಿನಿಂದಲೇ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಾಡಳಿತಕ್ಕೆ ಸೂಚನೆ ನೀಡಿದರು. ಸೋಮವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಛೇರಿಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರೀಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಅವಳಿ ತಾಲೂಕುಗಳಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಪ್ರಸಕ್ತ …
Read More »ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆಗೆ ದಾಖಲು
ಬೆಳಗಾವಿ, ಜ.11: ಆಧ್ಯಾತ್ಮಿಕ ಪ್ರವಚನಕಾರ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸ್ನಾನ ಗೃಹದಲ್ಲಿ ಬಿದ್ದ ಕಾರಣ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಆಧ್ಯಾತ್ಮ ಪ್ರವಚನಕ್ಕಾಗಿ ತೆರಳಿದ್ದ ಅವರು ಅಲ್ಲಿನ ಭಕ್ತರೊಬ್ಬರ ತೋಟದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು. ಸ್ನಾನ ಗೃಹದಲ್ಲಿ ಕಾಲು ಜಾರಿ ಬಿದ್ದ ಕಾರಣ ಗಾಯಗೊಂಡಿದ್ದಾರೆ. ಕೂಡಲೇ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಚಿಕ್ಕೋಡಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಲಾಗಿದೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ …
Read More »ರಾಜಕಾರಣದಲ್ಲಿ ನೇರವಾಗಿ ಮಾತನಾಡಬಾರದು. ಇಲ್ಲಿ ಚಮಚಾಗಿರಿ ಮಾಡಬೇಕು.
ಧಾರವಾಡ : ರಾಜಕೀಯ ಜ್ಯೋತಿಷಿ ನಾನಲ್ಲ. ಆದರೆ ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತದೆ. ಅದರನ್ವಯ ರಾಜ್ಯದಲ್ಲಿ 2023ಕ್ಕೆ ಬಿಜೆಪಿ ಹೊಸ ಶಕ್ತಿಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಶಾಸಕಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಪಂಚ ರಾಜ್ಯ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಆಗಬಹುದು. ಆದರೆ, ಒಟ್ಟಾರೆ ಒಳ್ಳೆಯ ದಿನಗಳು ಬರಲಿವೆ. 2023ರ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಏನೇ …
Read More »ಮಾರ್ಗ ಮಧ್ಯೆಯ ವ್ಯಕ್ತಿಯ ಬರ್ಬರ ಕೊಲೆ!
ಕಲಬುರಗಿ: ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಮುಖದ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ತಾಪುರ – ರಾವೂರ ಮಾರ್ಗ ಮಧ್ಯೆಯ ಯರಗಾ ಕ್ರಾಸ್ ಬಳಿ ನಡೆದಿದೆ. ಕಲಬುರಗಿಯಲ್ಲಿ ಕೊಲೆಕೊಲೆಯಾದ ವ್ಯಕ್ತಿ ಅಂದಾಜು 45 ರಿಂದ 50 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದು, ಯಾರು? ಯಾವ ಊರಿನವರು? ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ.ರಕ್ತ …
Read More »ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ
ಭದ್ರಾವತಿ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಇಂದು ಬೆಳಗ್ಗೆ ಶಾಲೆಗೆ ಹೋಗುವಾಗ ಮಾರುತಿ ಓಮಿನಿ ಕಾರಿನಲ್ಲಿ ಬಂದು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ಕಾರಿನಲ್ಲಿ ತರೀಕೆರೆ ತನಕ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ ಎನ್ನಲಾಗಿದೆ. ನಂತರ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಪ್ರಜ್ಞೆ ಬಂದಾಗ ವಿದ್ಯಾರ್ಥಿನಿಯೇ ಬಸ್‌ನಲ್ಲಿ ತನ್ನ ಮನೆಗೆ ವಾಪಸ್ ಆಗಿದ್ದಾಳೆ. ಪೋಷಕರು ಆಕೆಯ ಸ್ಥಿತಿಕಂಡು ವಿಚಾರಿಸಿ, ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. …
Read More »ಕಾಂಡೊಮ್ ಬಿಟ್ಟು ಗ್ಲೌಸ್ ತಯಾರಿಕೆಯತ್ತ ಹೊರಳಿದ ಕರೆಕ್ಸ್ ಕಂಪನಿ! ಕಾರಣ ಏನು?
ಬೆಂಗಳೂರು: ಕೊರೊನಾವೈರಸ್ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಕಾಂಡೊಮ್‌ಗಳ ಮಾರಾಟದಲ್ಲಿ ಶೇ 40 ರಷ್ಟು ಕುಸಿತ ಕಂಡಿರುವುದು ವರದಿಯಾಗಿದೆ. ಈ ಬಗ್ಗೆ ಪ್ರಪಂಚದ ಅತಿದೊಡ್ಡ ಫಿನಾನ್ಶಿಯಲ್ ನ್ಯೂಸ್‌ಪೇಪರ್ ‘ನಿಕ್ಕಿ ಏಷ್ಯಾ’ ವರದಿ ಮಾಡಿದೆ. ಸಾಂಕ್ರಾಮಿಕದಿಂದ ಜನರು ಮನೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಲೈಂಗಿಕ ಚಟುವಟಿಕೆ ಹೆಚ್ಚಾಗಲಿಲ್ಲ ಎಂಬುದನ್ನು ಕಾಂಡೊಮ್ ಮಾರಾಟಗಳ ಕುಸಿತ ಹೇಳುತ್ತದೆ ಎಂದು ಕಾಂಡೊಮ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಲೇಷಿಯಾ ಮೂಲದ ‘ಕರೆಕ್ಸ್’ ಕಂಪನಿಯ …
Read More »ಕೈ ನಾಯಕರ ವಿರುದ್ಧ FIR ದಾಖಲು; ಆರೋಪ ಸಾಬೀತಾದರೆ ದಂಡದ ಜತೆ 3 ರಿಂದ 6 ತಿಂಗಳ ಸೆರೆವಾಸ
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆ ವಿರುದ್ಧ ಸಮರ ಸಾರಲು ಮುಂದಾಗಿರುವ ಬಿಜೆಪಿ ಸರ್ಕಾರ ಇಂದು 31 ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲು ಮಾಡಿದೆ. ಕರೋನಾವೈರಸ್ ಅಟ್ಟಹಾಸದ ನಡುವೆ ಸರ್ಕಾರ ಜಾರಿಗೊಳಿಸಿದ್ದ ವೀಕೆಂಡ್ ಕರ್ಫ್ಯೂ ಲೆಕ್ಕಿಸದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಈ ಕುರಿತಂತೆ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಕಾನೂನು ಕ್ರಮಕ್ಕೆ ಮುಂದಾಗಿರುವ ಸರ್ಕಾರ ಎಪಿಡೆಮಿಕ್ ಆಕ್ಟ್ (Epidemic …
Read More »ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್ವೆಜ್ ಮೆಸೇಜ್ ಕಳಿಸಿದ ಆರೋಪಿ.
ಬೆಂಗಳೂರು: ತರಕಾರಿ ತೆಗೆದುಕೊಳ್ಳಲು ಎಂದು ಬರುತ್ತಿದ್ದಾತ ಅಂಗಡಿಯಾಕೆಗೇ ನಾನ್ವೆಜ್ ಮೆಸೇಜ್ ಕಳಿಸಿದ್ದರ ಪರಿಣಾಮವಾಗಿ ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ. ಮಾರುತಿ ಎಂಬಾತ ಬಂಧಿತ ಆರೋಪಿ. ಈತ ಮಂಜುನಾಥನಗರದಲ್ಲಿರುವ ಮಹಿಳೆಯೊಬ್ಬರ ದಿನಸಿ ಹಾಗೂ ತರಕಾರಿ ಅಂಗಡಿಗೆ ಆಗಾಗ ಖರೀದಿಗೆ ಬರುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು, ಮೊಬೈಲ್ಫೋನ್ ನಂಬರ್ ಪಡೆದುಕೊಂಡಿದ್ದ. ಮಾತ್ರವಲ್ಲ, ಬಳಿಕ ಸಲುಗೆ ಬೆಳೆಸಿಕೊಂಡಿದ್ದ ಈತ ಆಕೆಗೆ ಅಶ್ಲೀಲ ಚಿತ್ರ ಹಾಗೂ ಆಕ್ಷೇಪಾರ್ಹ ಮೆಸೇಜ್ಗಳನ್ನು ಕಳುಹಿಸಿ ತೊಂದರೆ ಕೊಡುತ್ತಿದ್ದ. ಈ ಸಂಬಂಧವಾಗಿ …
Read More »ಸರಕಾರಿ ನೌಕರರ ಸೌಲಭ್ಯ ಕೊಡಲಾಗದು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬಂದಿಗೆ ಸರಕಾರಿ ನೌಕರರಿಗಿರುವ ಸೌಲಭ್ಯಗಳನ್ನು ಕೊಡಲಾಗದು. ಅವರು ಅದನ್ನು ಹಕ್ಕೆಂದು ಕೇಳಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಮಹಾರಾಷ್ಟ್ರದ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ (ಡಬ್ಲ್ಯುಎಎಲ್‌ಎಂಐ)ಯ ಸಿಬಂದಿಗೆ ಪಿಂಚಣಿ ಸೌಲಭ್ಯ ವಿಸ್ತರಿಸುವುದಕ್ಕೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದ್ದನ್ನು ವಿರೋಧಿಸಿ, ಮಹಾರಾಷ್ಟ್ರ ಸರಕಾರ ಸುಪ್ರೀಂ ಮೆಟ್ಟಿಲೇರಿತ್ತು. ಅದರ ವಿಚಾರಣೆ ಮಾಡಿರುವ ನ್ಯಾಯಾಲಯ ರಾಜ್ಯ ಸರಕಾರದ ಪರವಾಗಿ ಮಾತನಾಡಿದೆ. “ಖಾಸಗಿ ಸಂಸ್ಥೆಗಳು ಸರಕಾರಿ …
Read More »ಮಹಿಳೆಗೆ ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ತೋರಿಸಿದ ಆರೋಪಿಯ ಬಂಧನ..!
ಬೆಂಗಳೂರು: ಮಹಿಳೆಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲ ದೃಶ್ಯ ತೋರಿಸಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ನಗರದ ಮಾರುತಿ ಬಂಧಿತ ಆರೋಪಿ ಆಗಿದ್ದು, ದಿನಸಿ ಅಂಗಡಿ ನಡೆಸುತ್ತಿದ್ದ ಮಹಿಳೆಯಿಂದ ಮೊಬೈಲ್ ನಂಬರ್ ಪಡೆದಿದ್ದ ಆರೋಪಿ, ಆಗಾಗ ಪ್ರಾವಿಜನ್ ಸ್ಟೋರ್ಗೆ ಬರುತ್ತಿದ್ದ. 25 ವರ್ಷದ ಮಹಿಳೆಗೆ ವಿಡಿಯೋ ಕಾಲ್ ಮುಖಾಂತರ ಖಾಸಗಿ ಅಂಗ ತೋರಿಸದ್ದ. ಈ ಬಗ್ಗೆ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ದೂರಿನ ಅನ್ವಯ …
Read More »