Breaking News

ಬಾಗಲಕೋಟೆ ಸಾಧಕನ 15 ವರ್ಷಗಳ ಸಮಾಜಮುಖಿ ಸೇವೆಗೆ ಹಲವು ಪ್ರಶಸ್ತಿ

ಬಾಗಲಕೋಟೆ: ನಗರದ ಡಾ. ಪ್ರಹ್ಲಾದ ಭೋವಿ ಎಂಬುವರು ಕಳೆದ 15 ವರ್ಷಗಳಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಾ, ವರ್ಲ್ಡ್ ಬುಕ್ ಆಫ್​​ ರೆಕಾರ್ಡ್​​ ದಾಖಲೆ ಮಾಡುವ ಜೊತೆಗೆ ರಾಜ್ಯದ ವಿವಿಧ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಡೆಸಿಕೊಂಡು ಬರುವುದರ ಜೊತೆ ಹಲವು ಸಾಧನೆಗೈದಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ, ವಯಸ್ಕರಿಗೆ ಅಕ್ಷರ ಜ್ಞಾನದ ಜಾಗೃತಿ ಮೂಡಿಸಿದ್ದಾರೆ. ಹೆಚ್​ಐವಿ ಸೋಂಕು ತಡೆಯುವಂತೆ ಗ್ರಾಮೀಣ ಪ್ರದೇಶಗಳಲ್ಲಿ …

Read More »

ಅಪೌಷ್ಟಿಕತೆ, ರಕ್ತಹೀನತೆ.. ರಾಜ್ಯದ 14 ಲಕ್ಷ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ

ಬೆಂಗಳೂರು: ಅಪೌಷ್ಟಿಕತೆ, ರಕ್ತಹೀನತೆ ಮತ್ತು ಪ್ರೊಟೀನ್ ಕೊರತೆಯಿಂದ ಬಳಲುತ್ತಿರುವ ಆರರಿಂದ 15 ವರ್ಷದೊಳಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ, ಬಾಳೆಹಣ್ಣು ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದೆ. ಉತ್ತರ ಕರ್ನಾಟಕ ಭಾಗದ 7 ಜಿಲ್ಲೆಗಳ ವಿದ್ಯಾರ್ಥಿಗಳು ಕೊರತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಕಾರ್ಯಕ್ರಮದ ಅಡಿ ಪ್ರಯೋಜನ ಪಡೆಯಲಿದ್ದಾರೆ. ಡಿಸೆಂಬರ್ 1ರಿಂದ ಕಾರ್ಯಕ್ರಮ ಆರಂಭ: ಬೀದರ್, ರಾಯಚೂರು, ಕಲಬುರಗಿ, …

Read More »

ನಟಿ ಕಂಗನಾಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಇತ್ತೀಚೆಗೆ ಪದ್ಮಶ್ರೀ ಗೌರವಕ್ಕೆ ಪುರಸ್ಕೃತರಾದ ಒಂದು ಒಳ್ಳೆಯ ಸುದ್ದಿ ಬಿಟ್ಟರೆ, ಅವರು ಹೆಚ್ಚು ಕಾಲ ವಿವಾದಗಳಿಂದಲೇ ಪ್ರಚಾರದಲ್ಲಿ ಇರುತ್ತಾರೆ. ಕೃಷಿ ಕಾಯಿದೆಗಳನ್ನು ಕೇಂದ್ರ ಸರಕಾರ ವಾಪಸು ಪಡೆದು, ಪಂಜಾಬ್‌ ಮತ್ತು ಹರಿಯಾಣ ರೈತರು ಸಂಭ್ರಮದಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದಾರೆ.   ಇಂದಿರಾ ಗಾಂಧಿ ಮತ್ತು ಸಿಖ್ಖರನ್ನು ಪರೋಕ್ಷವಾಗಿ ಉಲ್ಲೇಖಿಸಿ, 1984 ರಲ್ಲಿ ಐರನ್‌ ಲೇಡಿ ಅವರು ಹೊಸಕಿ ಹಾಕಿದ್ದರು ಎಂಬ …

Read More »

ಎಣ್ಣೆ ಪಾರ್ಟಿಯಲ್ಲಿ ಸಂಭವಿಸಿತು ಘೋರ ದುರಂತ..! ಮದಿರೆ ನಶೆಯಲ್ಲಿ ಸ್ನೇಹಿತನ ಪ್ರಾಣವನ್ನೇ ತೆಗೆದ ಪಾಪಿ

ಫ್ರೆಂಡ್ಸ್​ ಎಲ್ಲಾ ಒಂದೆಡೆ ಸೇರಿದಾಗ ಎಣ್ಣೆ ಪಾರ್ಟಿ ಮಾಡೋದು ಕಾಮನ್​..! ಆದರೆ ಇಲ್ಲೊಬ್ಬ ಸ್ನೇಹಿತನ ಜೊತೆ ಮದ್ಯಪಾನ ಮಾಡಲು ಹೋಗಿ ಬಾರದ ಲೋಕಕ್ಕೆ ತೆರಳಿದ್ದಾನೆ. ಮಹಾರಾಷ್ಟ್ರದ ಕುರ್ಲಾ ಎಂಬಲ್ಲಿ ಈ ಘಟನೆ ನಡೆದಿದ್ದು 27 ವರ್ಷದ ವ್ಯಕ್ತಿ ಮದ್ಯಪಾನ ಮಾಡುತ್ತಿದ್ದ ವೇಳೆ ಸ್ನೇಹಿತನ ಕೆನ್ನೆಗೆ ಬಾರಿಸಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ರಾಹುಲ್​ ಕಾಂಬ್ಳೆ ಹಾಗೂ ಅವಿನಾಶ್​ ಬಾಲೇಕರ್​​ ಒಟ್ಟಾಗಿ ಕುಳಿತು ಮದ್ಯಪಾನ ಮಾಡುತ್ತಿದ್ದ ವೇಳೆಯಲ್ಲಿ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. …

Read More »

ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ.ಆದಾಯಕ್ಕಿಂತ 200 ಪಟ್ಟು ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಬೆಳಗಾವಿ-ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ.ಆದಾಯಕ್ಕಿಂತ 200 ಪಟ್ಟು ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳ ತನಿಖೆಯ ಬಳಿಕ ಸದಾಶಿವ ಮರಲಿಂಗಣ್ಣವರ್ ಆರ್ ಟಿ ಓ ಇನ್ಸ್ಪೆಕ್ಟರ್ ಮನೆ, ಕಚೇರಿ ಮೇಲೆ ದಾಳಿ ನಡೆದ ಬಳಿಕ,ಗೋಕಾಕ್ ಮನೆ, ರಾಮದುರ್ಗ ತಾಲೂಕಿನ ಕಳ್ಳೂರು ಗ್ರಾಮದ ಮನೆ, ಬೆಳಗಾವಿ ರಾಮತೀರ್ಥ ನಗರದ ಮನೆ, ಸಹೋದರನ ಮುಧೋಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ಪರಶೀಲಿಸಿದಾಗ ಕಳ್ಳೂರು ಗ್ರಾಮದಲ್ಲಿ 22 …

Read More »

ಚಳಿಗಾಲದ ಅಧಿವೇಶನ ಪೂರ್ವಸಿದ್ಧತೆ ಕುರಿತು ಮಂಗಳವಾರ (ನ.23) ನಡೆದ ಸಭೆ

ಬೆಳಗಾವಿ : ಡಿಸೆಂಬರ್  13ರಿಂದ ನಡೆಯಲಿರುವ ವಿಧಾನಮಂಡಳದ ಅಧಿವೇಶನವನ್ನು ಕೋವಿಡ್ ಮಾರ್ಗಸೂಚಿ ಪಾಲನೆಯ ಜತೆಗೆ ವಸತಿ, ಸಾರಿಗೆ ಹಾಗೂ ಊಟೋಪಾಹಾರ ಸೇರಿದಂತೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಅಚ್ಚುಕಟ್ಟಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಸೂಚನೆ ನೀಡಿದರು.   ಚಳಿಗಾಲದ ಅಧಿವೇಶನ ಪೂರ್ವಸಿದ್ಧತೆ ಕುರಿತು ಮಂಗಳವಾರ (ನ.23) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Read More »

ಮನೆಯ ಪೈಪ್ ಗಳನ್ನು ಪ್ಲಂಬರ್ ಸಹಾಯದಿಂದ ಕತ್ತರಿಸಿದ್ದು, ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು,

ಕಲಬುರ್ಗಿ: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ಸಮರ ಸಾರಿದ್ದು, ತಂಡೋಪತಂಡವಾಗಿ ರಾಜ್ಯದ 68 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಭ್ರಷ್ಟರ ಮನೆಯಲ್ಲಿ ಪತ್ತೆಯಾಗಿರುವ ಕೆಜಿ ಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟು, ಅಕ್ರಮ ಸಂಪತ್ತು ಕಂಡು ಅಧಿಕಾರಿಗಳೇ ದಂಗಾಗಿಹೋಗಿದ್ದಾರೆ. ಎಸಿಬಿ ದಾಳಿಗೆ ಹೆದರಿ ಕಲಬುರ್ಗಿ ಲೋಕೋಪಯೋಗಿ ಇಲಾಖೆ ಜೆಇ ಶಾಂತಗೌಡ ಮನೆಯ ಪೈಪ್ ಗಳಲ್ಲಿ ನಗದು ಹಣವನ್ನು ಬಚ್ಚಿಟ್ಟಿದ್ದು, ಪೈಪ್ ಕತ್ತರಿಸಿ ಬಕೆಟ್ ಗಳಲ್ಲಿ ಕಂತೆ ಕಂತೆ ಹಣವನ್ನು ಮೊಗೆದು ಹೊರತೆಗೆಯುತ್ತಿರುವ …

Read More »

ಗೋಕಾಕ್ ನಗರದಲ್ಲಿ ಸದಾಶಿವ ಮರಲಿಂಗಣ್ಣವರ್ ಮನೆ ಮೇಲೆ A.C.B. ದಾಳಿ

ಗೋಕಾಕ : ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಗೋಕಾಕಿನ ಹಿರಿಯ ಮೋಟರ ವಾಹನ ನಿರೀಕ್ಷಕ (R.T.O) ರ ಮನೆ ಮೇಲೆ ಎಸಿಬಿಯವರು ಬೆಳಂ ಬೆಳಗ್ಗೆ ದಾಳಿ ಮಾಡಿದ್ದಾರೆ. ಆರ್ ಟಿ ಓ ಆದಿಕಾರಿ ಸದಾಶಿವ ಮರಲಿಂಗನ್ನವರ ಇವರ ಗೋಕಾಕದ ವಿವೇಕಾನಂದ ನಗರದಲ್ಲಿರುವ 7ಕ್ರಾಸಿನಲ್ಲಿರುವ ಮನೆಯ ಮೇಲೆ ಎಸಿಬಿ ಯ ಡಿ,ಎಸ್,ಪಿ, ಕರುನಾಕರ ಶೆಟ್ವಿ ಅವರು ತಮ್ಮ ಸಿಬ್ಬಂದಿಗಳೊಡನೆ ದಾಳಿ ಮಾಡಿ ಅವರ ಆಸ್ತಿ ಮತ್ತು ಆದಾಯದ ಜೊತೆ ಇತರೆ ದಾಖಲಾತಿಗಳನ್ನು …

Read More »

ಸೋರುತಿಹುದು ಅರಮನೆ ಮಾಳಿಗೆ!

ಮೈಸೂರು: ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ವಿಶ್ವವಿಖ್ಯಾತ ಮೈಸೂರಿನ ಅಂಬಾವಿಲಾಸ ಅರಮನೆ ಮೇಲ್ಛಾವಣಿ ಸೋರುತ್ತಿದ್ದು, ಗೋಡೆಗಳು ತೇವಗೊಂಡಿವೆ. ರಾಜವಂಶಸ್ಥರು ವಾಸಿಸುತ್ತಿರುವ ಅರಮನೆಯ ಭಾಗದ ಮೇಲ್ಛಾವಣಿ ಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಸೋರುತ್ತಿದ್ದು, ಛಾವಣಿಯ ಪ್ಲಾಸ್ಟರಿಂಗ್‌ ಉದುರಿ ಬಿದ್ದಿದೆ. ಆಗ ಯಾರೂ ಇಲ್ಲದಿದ್ದ ಕಾರಣ ಅಪಾಯ ಸಂಭವಿಸಿಲ್ಲ. ನೆಲಕ್ಕೆ ಹಾಸಲಾಗಿರುವ ಟೈಲ್ಸ್‌ಗಳೂ ಕಿತ್ತು ಬಂದಿವೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಹೇಳಿದ್ದಾರೆ. ಅರಮನೆಯ ಕೆಲವು ಭಾಗಗಳು ಈ ಹಿಂದೆಯೇ ದುರಸ್ತಿಯಾಗಿವೆ. …

Read More »

ದೇವರಿಗೇ ಧನಸಹಾಯ ಮಾಡಿದ ಅಜ್ಜಿ; ಆಂಜನೇಯನ ಮುಖವಾಡಕ್ಕಾಗಿ ಭಿಕ್ಷೆ ಬೇಡಿ ಹಣ ಕೊಟ್ಟರು..

ಚಿಕ್ಕಮಗಳೂರು: ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ವೃದ್ಧೆಯೊಬ್ಬರು ಭಿಕ್ಷೆ ಬೇಡಿ ಉಳಿಸಿದ್ದ ಒಂದು ಲಕ್ಷ ರೂಪಾಯಿಯನ್ನು ದೇವಸ್ಥಾನದ ಅನ್ನದಾನಕ್ಕಾಗಿ ಕೊಟ್ಟು ರಾಜ್ಯದ ಗಮನ ಸೆಳೆದಿದ್ದರು ಅದೇ ರೀತಿ ಮತ್ತೊಬ್ಬ ವೃದ್ಧೆ ದೇವರಿಗೇ ಧನಸಹಾಯ ಮಾಡಿದ್ದಾರೆ.   ಅಂದರೆ ಆಂಜನೇಯ ಸ್ವಾಮಿಯ ಬೆಳ್ಳಿ ಮುಖವಾಡಕ್ಕಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ದೇವಸ್ಥಾನಕ್ಕೆ ಈ ಅಜ್ಜಿ ಹಣ ನೀಡಿದ್ದಾರೆ. ಕೆಂಪಜ್ಜಿ ಎಂಬ …

Read More »