ಧಾರವಾಡ, ಫೆಬ್ರವರಿ 28; ಸಾವಿನ ರಸ್ತೆ ಎಂದು ಖ್ಯಾತಿ ಪಡೆದಿರುವ ಹುಬ್ಬಳ್ಳಿ -ಧಾರವಾಡ ಬೈಪಾಸ್ ರಸ್ತೆ ಅಗಲೀಕರಣಕ್ಕೆ ಸೋಮವಾರ ಚಾಲನೆ ಸಿಗಲಿದೆ. 1014.79 ಕೋಟಿ ರೂ. ವೆಚ್ಚದಲ್ಲಿ 6 ಪಥದ ರಸ್ತೆ ನಿರ್ಮಾಣವಾಗಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಿದ್ದಾರೆ. ಸುಮಾರು 30.6 ಕಿ. ಮೀ. ರಸ್ತೆಯ ಅಗಲೀಕರಣ ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಸಾವಿನ ರಸ್ತೆ ಕುಖ್ಯಾತಿಯ ಹುಬ್ಬಳ್ಳಿ-ಧಾರವಾಡ …
Read More »ಬಿಎಸ್ವೈ ಬಜೆಟ್ ಅನುಷ್ಠಾನಕ್ಕೆ ಗ್ರಹಣ!
ಬೆಂಗಳೂರು: ಕೋವಿಡ್ ಅಬ್ಬರ, ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಹೀಗೆ ನಾನಾ ಅಡ್ಡಿ-ಆತಂಕಗಳಲ್ಲೇ 2021ನೇ ವರ್ಷ ಮುಗಿದುಹೋಗಿದ್ದರಿಂದ 2021-22ನೇ ಸಾಲಿನ ಆಯವ್ಯಯವೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳಲಿಲ್ಲ. 2021-22ನೇ ಸಾಲಿನ ಆಯವ್ಯಯವನ್ನು ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 2021ರ ಮಾರ್ಚ್ 8ರಂದು ಮಂಡಿಸಿದ್ದರು. ಸಾಂಕ್ರಾಮಿಕದ ನಡುವೆಯೂ ವಿತ್ತೀಯ ಶಿಸ್ತು ಪಾಲನೆ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವುದು ಕತ್ತಿಯ ಅಲಗಿನ ಮೇಲಿನ ನಡಿಗೆಯ ಅನುಭವ ನೀಡಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದ ಬಿಎಸ್ವೈ, ‘ಅಳ್ಳೆದೆ ಅವನತಿಯ …
Read More »ನಾನು ಅಂಬರೀಶ್ ಮಾಡಬಾರದನ್ನೂ ಮಾಡಿದ್ದೇವೆ’: ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ 28: ಕನ್ನಡ ಚಿತ್ರೋದ್ಯಮದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಶ್ ಅವರ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಕಾರ್ಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫ್ಲ್ಯಾಷ್ ಬ್ಯಾಕಿಗೆ ಹೋಗಿದ್ದಾರೆ. ತಮ್ಮ ಮತ್ತು ಅಂಬರೀಶ್ ಅವರ ನಲವತ್ತು ವರ್ಷದ ಒಡನಾಟದ ಬಗ್ಗೆ ರಸವತ್ತಾಗಿ ಸಭೆಯಲ್ಲಿ ವಿವರಣೆಯನ್ನು ನೀಡಿದ ಬೊಮ್ಮಾಯಿ ಅವರ ಹೇಳಿಕೆಗೆ ನೆರೆದಿದ್ದ ಜನಸ್ತೋಮ ಚಪ್ಪಾಳೆಯ ಮೇಲೆ ಚಪ್ಪಾಳೆಯನ್ನು ಹೊಡೆದಿದೆ. “ನನ್ನ ಆತ್ಮೀಯ ಸ್ನೇಹಿತ ಅಂಬರೀಶ್, ನಮ್ಮ …
Read More »ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನೂರಾರು ಭಕ್ತರು ಮಹಾಶಿವರಾತ್ರಿ ನಿಮಿತ್ತ ಧರ್ಮಸ್ಥಳಕ್ಕೆ ಪಾದಯಾತ್ರೆ
ಹೊಳೆನರಸೀಪುರ: ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಮುಂಭಾಗದಿಂದ ಭಾನುವಾರ ಬೆಳಿಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನೂರಾರು ಭಕ್ತರು ಮಹಾಶಿವರಾತ್ರಿ ನಿಮಿತ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದರು. ‘ಪಾದಯಾತ್ರೆಯಿಂದ ನಮ್ಮ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬಹುದು. ಜೊತೆಗೆ ದೇವರ ಮೇಲಿನ ನಂಬಿಕೆ ಹೆಚ್ಚುತ್ತದೆ. ನಂಬಿಕೆಯಿಂದ ಮಾಡುವ ಕೆಲಸ ಸದಾ ಯಶಸ್ಸನ್ನು ತಂದು ಕೊಡುತ್ತದೆ. ನಾನು ನಂಬಿಕೆಯಿಂದ ಎಲ್ಲ ಜನರಿಗೆ ಉತ್ತಮ ಜೀವನ ಸಿಗಲಿಎನ್ನುವ ಉದ್ದೇಶದಿಂದ ಧರ್ಮಸ್ಥಳ ಪಾದಯಾತ್ರೆ ಹೊರಟಿದ್ದೇನೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. …
Read More »ಅವಧಿಗೆ ಮೊದಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ?
ದ ರಾಜಕೀಯ ಪಕ್ಷಗಳು 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿವೆ. ಅವಧಿಗೆ ಮೊದಲೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ. ಸ್ವತಃ ಬಿಜೆಪಿಯೇ ಅವಧಿ ಪೂರ್ವ ಚುನಾವಣೆ ನಡೆಸುವ ಉತ್ಸಾಹದಲ್ಲಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಂಖಡ, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆ ಸದ್ಯ ನಡೆಯುತ್ತಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. …
Read More »ಚನ್ನಮ್ಮಾಜಿಯಂತೆ ಕೆಳದಿ ರಾಣಿ ಚೆನ್ನಮ್ಮನವರ ಹೋರಾಟ, ಕ್ಷಮಾಗುಣ ಆದರ್ಶನೀಯ: ಬೊಮ್ಮಾಯಿ
ಕಿತ್ತೂರು ರಾಣಿ ಚೆನ್ನಮ್ಮನಂತೆ ಕೆಳದಿ ರಾಣಿ ಚೆನ್ನಮ್ಮನವರ ಹೋರಾಟ, ಕ್ಷಮಾಗುಣಗಳು ಆದರ್ಶನೀಯವಾಗಿದ್ದು, ಈ ಕುರಿತು ಪಠ್ಯದಲ್ಲಿ ಅಳವಡಿಸುವ ಚಿಂತನೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಬೆಂಗಳೂರಿನ ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೆನ್ನಮ್ಮನವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ಮೂರು ಬಾರಿ ಮೊಘಲರು ಆಕ್ರಮಣ …
Read More »ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು
ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು ಗಜಾನನ ನಾಯಿಕ್ ಕೊಲೆಯಾದ ದುರ್ದೈವಿ. ಸುಮಾರು ಅನೇಕ ವರ್ಷಗಳಿಂದ ಗಜಾನನ ನಾಯಕ್ ಹಾಗೂ ಅವರ ಪತ್ನಿ ಬೇರೆಯಾಗಿಯೇ ವಾಸಮಾಡುತ್ತಿದ್ದರು. ಗಜಾನನ ತಮ್ಮ ಮಗನೊಂದಿಗೆ ವಾಸ ಮಾಡುತ್ತಿದ್ದರು. ನಿನ್ನೆ ಮಗ ಉಜಗಾಂವ್ಗೆ ಹೋದ ಸಂದರ್ಭದಲ್ಲಿ ಇಂದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ತಂದೆ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಡಿಸಿಪಿ ರವಿಂದ್ರ ಗಡಾದಿ, ಎಸಿಪಿ …
Read More »ಪ್ರಭಾಸ್ ಜತೆ ‘ರಾಧೆ ಶ್ಯಾಮ್’ ಚಿತ್ರತಂಡ ಸೇರಿದ ಶಿವಣ್ಣ;
ಇನ್ನೇನು ಕೆಲವೇ ದಿನಗಳಲ್ಲಿ ‘ರಾಧೆ ಶ್ಯಾಮ್’ (Radhe Shyam Movie) ಸಿನಿಮಾ ಬಿಡುಗಡೆ ಆಗಲಿದೆ. ಬಹುಭಾಷಾ ನಟಿ ಪೂಜಾ ಹೆಗ್ಡೆ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಹೊಸ ಸುದ್ದಿ ಈಗ ಹೊರಬಿದ್ದಿದೆ. ಮೂಲ ತೆಲುಗಿನ ಈ ಚಿತ್ರತಂಡಕ್ಕೆ ಈಗ ಶಿವರಾಜ್ಕುಮಾರ್ (Shivarajkumar) ಕೂಡ ಜೊತೆಯಾಗಿದ್ದಾರೆ. ಇದು ಗಾಸಿಪ್ ಅಲ್ಲವೇ ಅಲ್ಲ. ‘ರಾಧೆ ಶ್ಯಾಮ್’ ಸಿನಿಮಾದ ನಿರ್ಮಾಪಕರು ಸ್ವತಃ …
Read More »ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆ ಬಿಗಿದು ಪತ್ನಿ ಹತ್ಯೆ, ಸೂಸೈಡ್ ನಾಟಕವಾಡಿ ಜೈಲು ಸೇರಿದ ಪತಿ
ಚಿಕ್ಕೋಡಿ: ಕಂಠ ಪೂರ್ತಿ ಕುಡಿದು ಬಂದ ಗಂಡನಿಂದಲೇ ಪತ್ನಿಯ ಕೊಲೆ(Murder) ಆಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ. ಆತ ಎಂದಿನಂತೆ ಕಂಠ ಪೂರ್ತಿ ಎಣ್ಣೆ ಕುಡಿದು ಮನೆಗೆ ಬಂದಿದ್ದ ಕುಡಿದು ಬಂದು ತಾನಾಯ್ತು ತನ್ನ ನಶೆ ಗುಂಗಾಯ್ತು ಅಂತ ಸುಮ್ಮನೆ ಮಲಗಿದ್ರೆ ಆ ಸಂಸಾರದಲ್ಲಿ ಬೆಳಗ್ಗೆ ಎಲ್ಲವೂ ಸರಿಯಾಗಿಯೇ ಇರ್ತಿತ್ತು. ಆದ್ರೆ ನಶೆಮಾಡಿದ ತಪ್ಪಿಗೆ ಒಂದು ಜೀವವೇ ಬಲಿಯಾಗಿದೆ. ಪ್ರತಾಪ್ ಅಲಿಯಾಸ್ ಪ್ರದೀಪ್ ಕಾಂಬಳೆ ಹೆಂಡತಿಯನ್ನು ಕೊಂದ ಆರೋಪಿ. …
Read More »ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ
ಇಂದು ಬೆಳಗ್ಗೆ 7ರಿಂದ 4ಗಂಟೆಯವರೆಗೆ ಮಣಿಪುರದ 38 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. 28 ವಿಧಾನ ಕ್ಷೇತ್ರಗಳಲ್ಲಿ ಕಣಿವೆ ಜಿಲ್ಲೆಗಳಾದ 29 ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಬಿಷ್ಣುಪುರವಾಗಿದ್ದರೆ, ಉಳಿದ 9 ಕ್ಷೇತ್ರಗಳು ಚರ್ಚಂಡ್ಪುರ, ಕಾಂಗ್ಪೋಕ್ಪಿ ಮತ್ತು ಫರ್ಜಾಲ್ ಪ್ರದೇಶದಲ್ಲಿದೆ. ಮಣಿಪುರದ ವಿಧಾನಸಭೆ ಚುನಾವಣೆಯೂ 2ಹಂತದಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ನಡೆಯುವ ಮತದಾನ ಸಂಜೆ 4ಗಂಟೆಗೆ ಕೊನೆಗೊಳ್ಳಲಿದೆ. ಮೊದಲ ಹಂತದಲ್ಲಿ 15 ಮಹಿಳೆಯರು ಸೇರಿದಂತೆ …
Read More »
Laxmi News 24×7