ಬೆಳಗಾವಿ: ಮೇಕೆದಾಟು ಪಾದಯಾತ್ರೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಮತ್ತೊಂದು ಪಾದಯಾತ್ರೆಗೆ ಮುಂದಾಗಿದ್ದು, ಮಹದಾಯಿ ನದಿ ನೀರಿಗಾಗಿ ಹೋರಾಟ ಆರಂಭಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಮಹದಾಯಿ ಪಾದಯಾತ್ರೆ ಮಾಡುವುದು ನಿಶ್ಚಿತ. ಈಗಾಗಲೇ ಕಾಂಗ್ರೆಸ್ ನಲ್ಲಿ ಚರ್ಚೆ ನಡೆದಿದೆ. ಆದರೆ ಎಲ್ಲಿಂದ ಪಾದಯಾತ್ರೆ ಆರಂಭ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು. ಮೇಕೆದಾಟು ಪಾದಯಾತ್ರೆ ಅರ್ಧಕ್ಕೆ ನಿಂತರೂ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಕಾಂಗ್ರೆಸ್ ಸಫಲವಾಗಿದೆ. …
Read More »2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ: ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 16ರಿಂದ ಮೇ 4ರವರೆಗೂ ಪರೀಕ್ಷೆ ನಿಗದಿಪಡಿಸಲಾಗಿದೆ. ಫೆಬ್ರುವರಿ 1ರವರೆಗೆ jdexam.dpue@gmail.com ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 28 ರಿಂದ ಏಪ್ರಿಲ್ 13ರವರೆಗೆ ನಿಗದಿಯಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹೊಣೆಯನ್ನು ಆಯಾ ಜಿಲ್ಲೆಗಳ ಉಪನಿರ್ದೇಶಕರಿಗೆ ವಹಿಸಲಾಗಿದೆ. ಹೋದ ವರ್ಷದಂತೆ ಈ ಬಾರಿಯೂ ಪ್ರಥಮ, ದ್ವಿತೀಯ …
Read More »ಡ್ರಗ್ಸ್ ಸಾಗಣೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಭದ್ರತಾ ಸಿಬ್ಬಂದಿ ಬಂಧನ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್.ಟಿ.ನಗರದ ಖಾಸಗಿ ನಿವಾಸದ ಭದ್ರತಾ ಸಿಬ್ಬಂದಿಯಾಗಿದ್ದ ಇಬ್ಬರು ಪೊಲೀಸರು ಸೇರಿ, ನಾಲ್ವರನ್ನು ಡ್ರಗ್ಸ್ ಸಾಗಣೆ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಸಂತೋಷ್, ಕಾನ್‌ಸ್ಟೆಬಲ್ ಶಿವಕುಮಾರ್, ಆಟೊ ಚಾಲಕ ಅಮ್ಜದ್ ಬಂಧಿತರು. ಇನ್ನೊಬ್ಬನ ಹೆಸರು ಗೊತ್ತಾಗಿಲ್ಲ.
Read More »ನಕಲಿ ಚಿನ್ನ ಕೊಟ್ಟು ಪರಾರಿಯಾಗಲು ಯತ್ನಿಸಿದ್ದ ವಂಚಕರು ಪೊಲೀಸರ ಖೆಡ್ಡಾಗೆ ಬಿದ್ದಿದ್ದೇಗೆ?
ಚಿತ್ರದುರ್ಗ: ಕಡಿಮೆ ಬೆಲೆಗೆ ಅಸಲಿ ಚಿನ್ನ (Gold) ನೀಡೋದಾಗಿ ನಂಬಿಸಿ ಜನರಿಗೆ ವಂಚಿಸುತ್ತಿದ್ದ ವಂಚಕರನ್ನ ಚಿತ್ರದುರ್ಗ ಪೊಲೀಸರು (Chitradurga Police) ಸಿನಿಮೀಯ ಸ್ಟೈಲ್ ನಲ್ಲಿ ಪ್ಲಾನ್ ಮಾಡಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನೇನು ನಕಲಿ ಬಂಗಾರ (Fake Gold) ಕೊಟ್ಟು ಹಣ (Money) ದೋಚಿ ಪರಾರಿ ಆಗೋಕೆ ಪ್ಲಾನ್ ಮಾಡಿದ್ದ ವಂಚಕರು ಪೊಲೀಸರು ತೋಡಿದ್ದ ಖೆಡ್ಡಾಕ್ಕೆ ಬಿದ್ದು ಜೈಲು ಸೇರಿದ್ದಾರೆ. ಮನುಷ್ಯನಿಗೆ ಕಡಿಮೆ ಬೆಲೆಗೆ ಏನಾದ್ರು ಬೆಲೆ ಬಾಳುವ ವಸ್ತುಗಳು …
Read More »ಲಂಡನ್ನಲ್ಲಿರುವ ಮನೆಯನ್ನೂ ಕಳೆದುಕೊಂಡ ವಿಜಯಮಲ್ಯ! ಯಾಕೆ ಗೊತ್ತಾ?
ಲಂಡನ್(ಇಂಗ್ಲೆಂಡ್): ಸ್ವಿಸ್ ಬ್ಯಾಂಕ್ನೊಂದಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ತೀವ್ರ ಹಿನ್ನಡೆಯಾಗಿದ್ದು, ಲಂಡನ್ನಲ್ಲಿರುವ ಐಷಾರಾಮಿ ನಿವಾಸವನ್ನು ತೊರೆಯುವಂತೆ ವಿಜಯ್ ಮಲ್ಯಗೆ ಆದೇಶ ನೀಡಲಾಗಿದೆ.ಸ್ವಿಸ್ ಬ್ಯಾಂಕ್ನೊಂದಿಗೆ ವಿಜಯ್ ಮಲ್ಯ ಸಾಲವನ್ನು ಪಡೆದಿದ್ದು, ತಮ್ಮ ಮನೆ ಸೇರಿದಂತೆ ಇತರ ಆಸ್ತಿಯನ್ನು ಅಡಮಾನವಾಗಿ ಇರಿಸಿದ್ದರು. ಹಲವಾರು ಬಾರಿ ಸಾಲ ಮರುಪಾವತಿಗೆ ಸೂಚನೆ ನೀಡಲಾಗಿತ್ತು. ದಿನಾಂಕವನ್ನೂ ವಿಸ್ತರಣೆ ಮಾಡಲಾಗಿತ್ತು. ಸಾಲ ಮರುಪಾವತಿ ಮಾಡಲಾಗದ ಹಿನ್ನೆಲೆಯಲ್ಲಿ ಮಲ್ಯ ಕುಟುಂಬದವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ …
Read More »ಫೆಬ್ರವರಿಯಲ್ಲಿ ಸೋಂಕು ಇಳಿಮುಖವಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಜನವರಿ ಅಂತ್ಯಕ್ಕೆ ಕೋವಿಡ್ ಗರಿಷ್ಠ ಮಟ್ಟ ತಲುಪುವ ಸಂಭವವಿದೆ. ಫೆಬ್ರವರಿಯಲ್ಲಿ ಸೋಂಕು ಇಳಿಮುಖವಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೋವಿಡ್ 3 ನೇ ಅಲೆ ಎದುರಿಸಲು ಸಮರ್ಪಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಕೋವಿಡ್ 3ನೇ ಅಲೆ ನಿಯಂತ್ರಣ ಹಾಗೂ ಸಿದ್ಧತೆ ಸಭೆ ಬಳಿಕ ಮಾತನಾಡಿದ ಅವರು, ಜನರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೋವಿಡ್ …
Read More »ಕೊರೋನಾ ಸೋಂಕಿ’ನಿಂದ ‘ಹೋಂ ಐಸೋಲೇಷನ್’ ಆಗಿರೋರಿಗೆ ‘ಮೆಡಿಸಿನ್ ಕಿಟ್’ ವಿತರಣೆ
ಸಿಎಂ ಬಸವರಾಜ ಬೊಮ್ಮಾಯಿಯವರ ( CM Basavaraj Bommai ) ನೇತೃತ್ವದಲ್ಲಿ ನಡೆದಂತ ಕೊರೋನಾ ಕಂಟ್ರೋಲ್ ( Corona Control ) ಸಮಿತಿಯ ಸಭೆಯಲ್ಲಿ, ಕೋವಿಡ್ ಸೋಂಕಿತರಾಗಿ ( Coronavirus ) ಹೋಂ ಐಸೋಲೇಷನ್ ನಲ್ಲಿ ( Home Isolation ) ಇರೋರಿಗೆ, ಮನೆಗೆ ಮೆಡಿಸಿನ್ ಕಿಟ್ ( Medicine Kit ) ವಿತರಿಸುವಂತೆ ಸೂಚಿಸಲಾಗಿತ್ತು. ಅದರ ಭಾಗವಾಗಿ ಶೀಘ್ರವೇ ಮನೆ ಬಾಗಿಲಿಗೆ ಕೋವಿಡ್ ಸೋಂಕಿತರಿಗೆ ಮೆಡಿಸಿನ್ ಕಿಟ್ ವಿತರಣೆ …
Read More »ರಾಜ್ಯದ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ; ಸಿಎಂ ಬೊಮ್ಮಾಯಿ
ಬೆಂಗಳೂರು, ಜನವರಿ 18: ಅಪ್ರತಿಮ ದೇಶ ಭಕ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಸಾಧನೆ ಸ್ಮರಣೀಯ ಹಾಗೂ ಯುವ ಜನರಿಗೆ ಪ್ರೇರಣೆಯಾಗಿದೆ. ಹೀಗಾಗಿ ಸುಭಾಷ ಚಂದ್ರ ಬೋಸ್‌ರವರ 125ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಂಗಳವಾರ ಬೆಂಗಳೂರಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ (ಜನವರಿ 23) ಕಾರ್ಯಕ್ರಮದ ಪೂರ್ವಭಾವಿ …
Read More »ಮಾಸ್ಕ್ ಹಾಕೋದು ಬಿಡೋದು ಅವರಿಗೆ ಬಿಟ್ಟಿದ್ದು, ನಂಗ್ ಹಾಕೊಬೇಕ್ ಅನ್ಸಿಲ್ಲ ನಾನಾ ಮಾಸ್ಕ್ ಹಾಕಿಲ್ಲ…
ಮಾಸ್ಕ ವಿಚಾರದಲ್ಲಿ ಸಚಿವ ಉಮೇಶ್ ಕತ್ತಿ ಯಡವಟ್ಟು ಹೇಳಿಕೆ ಮಾಸ್ಕ ವಿಚಾರದಲ್ಲಿ ಜನ ಸಾಮಾನ್ಯರಿಗೊಂದು ನ್ಯಾಯ ಜನ ಪ್ರತಿನಿಧಿಗಳಿಗೆ ಒಂದು ನ್ಯಾಯ ಅರಣ್ಯ ಸಚಿವ ಉಮೇಶ್ ಕತ್ತಿ ಕಾರ್ಯಕ್ರಮದಲ್ಲಿ ಮಾಸ್ಕ ಸಾಮಾಜಿಕ ಅಂತರ ಮರೆತ ಜನ ಪ್ರತಿನಿಧಿಗಳು ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದ್ದ ಕಾರ್ಯಕ್ರಮ ಮಾಸ್ಕ ಹಾಕಿಲ್ಲಾ ಎಂದು ಮಾಧ್ಯಮಗಳ ಪ್ರಶ್ನೆಗೆ ಸಚಿವರ ಉಡಾಫೆ ಉತ್ತರ ಪ್ರಧಾನ ಮಂತ್ರಿಗಳೆ ಹೇಳಿದ್ದಾರೆ ಯಾವುದೆ ನಿರ್ಬಂಧ ವಿಧಿಸಲ್ಲಾ ಸ್ವಂತ …
Read More »ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್ಗೆ ಸಂಬಳ ಕೊಡುತ್ತೀನಿ.: ಹೆಚ್.ಡಿ.ರೇವಣ್ಣ
ಬೆಂಗಳೂರು: ಖಾಸಗಿ ಕಾಲೇಜಿಗೆ ಅನುಮತಿ ಕೊಡಲು ಸಚಿವರಿಗೆ ಆಗುತ್ತದೆ. ಆದರೆ ಸರ್ಕಾರಿ ಕಾಲೇಜಿಗೆ ಅಲ್ಲ. ಕೆಲವರಿಗೆ 300-400 ಕೋಟಿ ರೂ. ನಿಯಮ ಮೀರಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ. ಹೊಳೆನರಸೀಪುರ ಕಾಲೇಜಿಗೆ 2 ಸ್ನಾತಕೋತ್ತರ ಕೋರ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದನ್ನು ಅಶ್ವತ್ಥ್ ನಾರಾಯಣ …
Read More »