ಹರಪ್ಪನಹಳ್ಳಿ: ಬೈಕ್ ನಿಯಂತ್ರಣ ತಪ್ಪಿ ಕೆಎಸ್‌ಆರ್ಟಿಸಿ ಬಸ್ ಚಕ್ರ ಕ್ಕೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಅಸೀಫ್ (20) ಅಪಘಾತದಲ್ಲಿ ಮೃತಪಟ್ಟ ಯುವಕನಾಗಿದ್ದು, ಬಸ್ ಓವರ್ ಟೇಕ್ ಮಾಡುವಾಗ ಸ್ಕೂಟಿಯಿಂದ ಕೆಳಗೆ ಬಿದ್ದ ಯುವಕ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ಥಳದಲ್ಲೆ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ತಾಯಿ,ಮಗುವಿನ ಜೀವ ಉಳಿಸಿದ ವೈದ್ಯರು
ಬೀದರ್: ಬ್ರೀಮ್ಸ್ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲೇ ಕ್ಲಿಷ್ಟಕರ್ ಶಸ್ತ್ರಚಿಕಿತ್ಸೆ ಮಾಡಿ ತಾಯಿ ಹಾಗೂ ಮಗುವಿನ ಪ್ರಾಣ ಉಳಿಸಿದ್ದಾರೆ. ಹೈದರಾಬಾದ್ ಕೇರ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞವೈದ್ಯ ಡಾ.ವಿಪಿನ್ ಗೋಯಲ್ ನೇತೃತ್ವದಲ್ಲಿ ಡಾ ಉಮಾ ದೇಶಮುಖ. ಡಾ.ಸಂಗಮೇಶ ಹಾಗೂ ಡಾ.ಪ್ರವೀಣ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬೆನ್ನುಮೂಳೆಗೆ ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ಆರಂಭಿಸಿ ಗರ್ಭಾಶಯದ ಭಾಗವನ್ನು ಕತ್ತರಿಸಿ ಮಗುವನ್ನು ಹೊರಗೆ ತೆಗೆಯಲಾಗಿದೆ. ಈ ಮೂಲಕ ತಾಯಿ ಹಾಗೂ ಮಗುವಿನ ಜೀವ ಉಳಿಸಲಾಗಿದೆ. …
Read More »ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ರೆಸಿಡೆಂಟ್ ಡಾಕ್ಟರ್ಸ್ ಇಂದು ‘OPD’ ಬಂದ್ಗೆ ಕರೆ
ಬೆಂಗಳೂರು: ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ರೆಸಿಡೆಂಟ್ ಡಾಕ್ಟರ್ಸ್ ಇಂದು ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ನಡೆಸಲಿದ್ದಾವೆ. ವೈದ್ಯರಿಗೆ ಏಪ್ರಿಲ್ ತಿಂಗಳಿನಿಂದ ತಿಂಗಳಿಗೆ 10,000 ಕೋವಿಡ್ ಭತ್ಯೆ ಘೋಷಿಸಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ರಾಜ್ಯ ಸರ್ಕಾರ ತೀರ್ಮಾನವನ್ನು ಕೈಗೊಂಡಿಲ್ಲ, ಇದಲ್ಲದೇ ಕೋವಿಡ್ ಅಪಾಯ ಭತ್ಯೆಗೆ ತಕ್ಷಣವೇ ಹಣವನ್ನು ಮಂಜೂರು ಮಾಡಬೇಕು ಹಾಗೂ ಸ್ನಾತಕೋತ್ತರ ಪದವೀಧರರು ಮತ್ತು ಇಂಟರ್ನ್‌ಗಳಿಗೆ ಸಕಾಲದಲ್ಲಿ ಸ್ಟೈ ಫಂಡ್ ಪಾವತಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. …
Read More »ಪೆಟ್ರೋಲ್ ಬಂಕ್ ಮಾದರಿಯಲ್ಲಿ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ಬೌನ್ಸ್
ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ನೀಡುವ ಸ್ಟಾರ್ಟ್‌ಅಪ್ ಬೌನ್ಸ್ ತನ್ನದೇ ನಿರ್ಮಾಣದ ಮೊದಲ ಇ-ಸ್ಕೂಟರ್ ಆದ ಇನ್ಫಿನಿಟಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಪಾರ್ಕಿಂಗ್ ಪರಿಹಾರಗಳನ್ನು ನೀಡುವ ಪ್ಲಾಟ್‌ಫಾರಂ ಪಾರ್ಕ್+ ಜೊತೆಗೆ ಸಹಯೋಗ ಮಾಡಿಕೊಂಡಿರುವ ಬೌನ್ಸ್, 10ಕ್ಕಿಂತ ಹೆಚ್ಚು ನಗರಗಳ 3,500 ರಷ್ಟು ಸ್ಥಳಗಳಲ್ಲಿ ಬ್ಯಾಟರಿ ಬದಲಾವಣೆಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಸ್ಮಾರ್ಟ್ ಸವಲತ್ತು ವಸತಿ ಸಮುದಾಯಗಳು, ಪಾರ್ಕಿಂಗ್ ನಿಲ್ದಾಣಗಳು, ಮಾಲ್‌ಗಳು, ಕಾರ್ಪೋರೇಟ್ ಕಚೇರಿಗಳು ಸೇರಿದಂತೆ ಜನಸಮೂಹ ಸೇರುವ …
Read More »ಮೀಟೂ ಕೇಸ್; ನಟ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್
ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನಟ ಅರ್ಜುನ್ ಸರ್ಜಾ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ ಶೃತಿ ಹರಿಹರನ್ ಆರೋಪಿಸಿದ್ದರು. ಅರ್ಜುನ್ ಸರ್ಜಾ ವಿರುದ್ಧ 2018ರಲ್ಲಿ ಕಬ್ಬನ್ ಪಾರ್ಕ್ …
Read More »ಕೋವಿಡ್ ರೂಪಾಂತರಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ,ಕೊಗನೊಳ್ಳಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ
ಬೆಳಗಾವಿ: ಕೋವಿಡ್ ರೂಪಾಂತರಿ ವೈರಸ್ ವ್ಯಾಪಕವಾಗಿ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ರಾಜ್ಯದ ಗಡಿಭಾಗದಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಗೆ ಭಾನುವಾರ (ನ.28) ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಸರಕಾರದ ಮಾರ್ಗಸೂಚಿ ಪ್ರಕಾರ ನೆರೆಯ ಮಹಾರಾಷ್ಟ್ರ ರಾಜ್ಯದ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಪೂರ್ವ ಅವಧಿಯ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಆದ್ದರಿಂದ ನೆಗೆಟಿವ್ ವರದಿ ಹೊಂದಿದವರನ್ನು ಮಾತ್ರ ರಾಜ್ಯದೊಳಗೆ …
Read More »ಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ರಾದ ಡೊನಾಲ್ಡ್ ಟ್ರಂಪ್ ಭೇಟಿಯಾದ ಡಾ. ಪ್ರಭಾಕರ್ ಕೋರೆ
ವಾಷಿಂಗ್ಟನ್ : ಇತ್ತೀಚಿಗೆ ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರು ಅಮೆರಿಕ ದೇಶಕ್ಕೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ರಾದ ಡೊನಾಲ್ಡ್ ಟ್ರಂಪ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು. ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಗಳ ಮಗಳಾದ ಡಾ. ಮನಾಲಿ ಮತ್ತು ಅಂಕಿತ್ ಅವರ ಮದುವೆಯ ಸಮಾರಂಭದಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ಕುಶಲೋಪಹರಿಯಾಗಿ ಟ್ರಂಪ್ ಅವರೊಂದಿಗೆ ಮಾತನಾಡಿದ ಡಾ. ಕೋರೆ ಅವರು, ಪ್ರಸ್ತುತ ಜಾಗತಿಕ ಶೈಕ್ಷಣಿಕ ಹಾಗೂ …
Read More »C.M. ಆಗ್ತಾರಾ ಮುರಾಗೇಶ್ ನಿರಾಣಿ ಏನಿದು ಈಶ್ವರಪ್ಪ ಹೊಸ ಬಾಂಬ್
ಬಾಗಲಕೋಟೆ: ನಮ್ಮ ನಾಯಕ ಮುರುಗೇಶ್ ನಿರಾಣಿ ಬೇಗನೇ ಸಿಎಂ ಆಗ್ತಾರೆ. ಯಾವ ಸಂದರ್ಭದಲ್ಲಿ ಎಂದು ಗೊತ್ತಿಲ್ಲ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುತೂಹಲ ಮೂಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ, ನಮ್ಮ ನಾಯಕ ನಿರಾಣಿಯವರು ಶೀಘ್ರದಲ್ಲಿಯೇ ಸಿಎಂ ಆಗ್ತಾರೆ. ಆದರೆ ಯಾವ ಸಂದರ್ಭದಲ್ಲಿ ಎಂಬುದು ನನಗೆ ಗೊತ್ತಿಲ್ಲ. ನಾಳೇನೆ ಆಗ್ತಾರಾ?, ಬೊಮ್ಮಾಯಿಯನ್ನು ಕೆಳಗಿಳಿಸ್ತಾರಾ? ಹೀಗೆಂದು ಮಾಧ್ಯಮದವರು ಬರಬೇಡಿ… ನಿರಾಣಿಗೆ ಸಿಎಂ ಆಗುವ ಶಕ್ತಿ ಇದೆ, ಇವತ್ತಲ್ಲ ನಾಳೆ …
Read More »ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಆಗಿರುವುದರಿಂದ ಕಾಂಗ್ರೆಸ್ ಗೆ ತೊಂದರೆ ಆಗುತ್ತಾ? ಡಿಕೆಶಿ ಹೇಳಿದ್ದೇನು
ಹುಬ್ಬಳ್ಳಿ – ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ನರೇಗಾ ಯೋಜನೆಯಿಂದ ಪಂಚಾಯ್ತಿಗಳಿಗೆ ಕೋಟ್ಯಂತರ ರುಪಾಯಿ ಅನುದಾನ ಬಂದಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನರೇಗಾ ಇಲ್ಲದಿದ್ದರೆ ಪಂಚಾಯ್ತಿಗಳಿಗೆ ಜೀವವೇ ಇಲ್ಲ. ಅವುಗಳಿಗೆ ಶಕ್ತಿ ಬಂದಿದೆ ಎಂದರೆ ಕಾಂಗ್ರೆಸ್ ಸರಕಾರದ ನರೇಗಾ ಯೋಜನೆಯಿಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದೆ ಎಸ್.ಎಂ. ಕೃಷ್ಣ ಅವರ ಸರಕಾರವಿದ್ದಾಗ ಇದೇ ಧಾರವಾಡದಲ್ಲಿ ಬೇಲೂರು …
Read More »ರಮೇಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಕಾಂಗ್ರೆಸ್ ಕೆಡವಲು ಫುಲ್ ಜೋರಾಗಿ ತಯಾರಿ ನಡೆಸಿದ ಸಾಹುಕಾರ
ನವದೆಹಲಿ – ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಸಹೋದರ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರ ಅನುಮತಿ ಪಡೆಯಲು ಮಾಜಿ ಸಚಿವ ರಮೇಶ ಜಾರಕಿಹೊಳಿ ದೆಹಲಿಗೆ ತೆರಳಿದ್ದಾರೆ. ಭಾನುವಾರ ಸಂಜೆ ವಿಧಾನಪರಿಷತ್ ಹಾಲಿ ಸದಸ್ಯ ವಿವೇಕರಾವ್ ಪಾಟೀಲ ಅವರೊಂದಿಗೆ ದೆಹಲಿ ತಲುಪಿರುವ ರಮೇಶ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಳೀನ್ ಕುಮಾರ ಕಟೀಲ್ ಅವರಿಗೆ ವಿವೇಕರಾವ್ ಪಾಟೀಲ …
Read More »