Breaking News

ಬೆಳಗಾವಿಯಲ್ಲಿ ಜ್ಯೇಷ್ಠ ಶುದ್ಧ ತ್ರಯೋದಶಿ ಶಕೆ1944ಹಿಂದೂ ತಿಥಿಯನುಸಾರ ಶಿವರಾಜ್ಯಾಭಿಷೇಕ

ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಬೆಳಗಾವಿಯ ವತಿಯಿಮದ ಪ್ರತಿವರ್ಷದಂತೆ ಈ ಬಾರಿಯೂ ಜ್ಯೇಷ್ಠ ಶುದ್ಧ ತ್ರಯೋದಶಿ ಶಕೆ ೧೯೪೪ ಹಿಂದೂ ತಿಥಿಯನುಸಾರ ಶಿವರಾಜ್ಯಾಭಿಷೇಕ ಮಾಡಲಾಯಿತು. ಪ್ರೇರಣಾ ಮಂತ್ರದೊಂದಿಗೆ ಶಿವಾಜಿ ಮಹಾರಾಜರ ಮೂರ್ತಿಗೆ ವಿಧಿವತ್ತ ಕ್ಷೀರಾಭಿಷೇಕ, ಜಲಾಭಿಷೇಕ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಶಿರೀಷ್ ಗೋಗಟೆ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ಜಿಲ್ಲಾ ಪ್ರಮುಖ ಕಿರಣ ಗಾವಡೆ ಅವರು ಶಿವಾಜೀ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಹಾಆರತಿ ನಡೆಯಿತು. ನಂತರ …

Read More »

ನಾಯಿ ಮರಿಗೆ ‘ಚಾರ್ಲಿ’ ಎಂದು ನಾಮಕರಣ ಮಾಡಿದ ಪೊಲೀಸ್ ಇಲಾಖೆ

ಮಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಚಲನಚಿತ್ರ ಶುಕ್ರವಾರ ಬಿಡುಗಡೆಗೊಂಡಿದ್ದು ಮನುಷ್ಯ ಮತ್ತು ಶ್ವಾನ ನಡುವಿನ ಭಾವನಾತ್ಮಕ ಸಂಬಂಧವನ್ನು ಕಥೆಯಲ್ಲಿ ಚಿತ್ರಿಸಲಾಗಿದೆ. ಇದರಿಂದ ಸ್ಫೂರ್ತಿಗೊಂಡು ಮಂಗಳೂರು ಪೊಲೀಸ್ ಶ್ವಾನದಳದ ನಾಯಿ ಮರಿಗೂ ಚಾರ್ಲಿ ಎಂಬ ಹೆಸರಿಡಲಾಗಿದೆ.   ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಈ ಶ್ವಾನಕ್ಕೆ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ಮಾರ್ಚ್ ನಲ್ಲಿ ಹುಟ್ಟಿದ ಲ್ಯಾಬ್ರಡಾರ್ ರಿಟ್ರಿವರ್ ಶ್ವಾನವನ್ನು ಮಂಗಳೂರು ಪೊಲೀಸ್ ಇಲಾಖೆ ಖರೀದಿಸಿತ್ತು ,ಮುಂದಿನ ಸುಮಾರು …

Read More »

ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ನಮ್ಮ ಅಭ್ಯರ್ಥಿಗಳು ಗೆಲ್ಲಲು ಏನು ಬೇಕೋ ಅದನ್ನು ಮಾಡಿದ್ದಾರೆ: ಬೊಮ್ಮಾಯಿ

ಬೆಳಗಾವಿ: ‘ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಅಮೆರಿಕಕ್ಕೆ ಹೋಗುವುದಾಗಿ ನನಗೆ ಮುಂಚೆಯೇ ಹೇಳಿದ್ದರು. ಆರು ತಿಂಗಳ ಹಿಂದೆಯೇ ಅವರ ಕಾರ್ಯಕ್ರಮ ನಿಗದಿಯಾಗಿದ್ದರಿಂದ, ವಿಧಾನ ಪರಿಷತ್‌ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲು ಅವರಿಗೆ ಆಗಿಲ್ಲ. ಆದರೆ, ನಮ್ಮ ಅಭ್ಯರ್ಥಿಗಳು ಗೆಲ್ಲಲು ಏನು ಬೇಕೋ ಅದನ್ನು ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ‘ಕೋರೆ ಅವರು ನಮ್ಮ ಹಿರಿಯರು, ಮಾರ್ಗದರ್ಶಕ. ಅವರ ಕೊಡುಗೆಯನ್ನು ಪಕ್ಷವೂ ಗುರುತಿಸುತ್ತದೆ, ನಾವೂ ಗುರುತಿಸುತ್ತೇವೆ. ಸುದೀರ್ಘ …

Read More »

₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕುಂದಾನಗರಿಯಲ್ಲಿ ಹೈಟೆಕ್‌ ಸರ್ಕಾರಿ ಶಾಲೆ

ಬೆಳಗಾವಿ: ಇಲ್ಲಿ ಎರಡು ಕಂಪ್ಯೂಟರ್‌ ಲ್ಯಾಬ್‌ಗಳಿವೆ. ಮಕ್ಕಳಲ್ಲಿ ಬೆರಗು ಮೂಡಿಸುವಂತಹ ಇ-ಲೈಬ್ರರಿಯಿದೆ. ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಭವ್ಯ ಆಡಿಟೋರಿಯಂ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಸಾಲು-ಸಾಲಾಗಿ ಹೈಟೆಕ್‌ ಕಲಿಕಾ ಸೌಲಭ್ಯಗಳೂ ಇಲ್ಲಿವೆ…   ಅಷ್ಟಕ್ಕೂ ಇದು ಯಾವುದೋ ಪ್ರತಿಷ್ಠಿತ ಖಾಸಗಿ ಶಾಲೆ ಅಂದುಕೊಂಡರೆ ಈ ಊಹೆ ತಪ್ಪು. ಇದು ಶತಮಾನ ಕಂಡಿರುವ ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಚಿತ್ರಣ. ಗಡಿಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ, …

Read More »

ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ಕೆಲಸದಿಂದ ಅಮಾನತು: ನಿತೇಶ್ ಪಾಟೀಲ್

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ವಿಧಾನ ಪರಿಷತ್ ಚುನಾವಣೆ ಮುಗಿಯುವವರೆಗೆ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದು, ಅಲ್ಲಿಯವರೆಗೆ ಕರ್ತವ್ಯ ನಿರ್ವಹಣೆಗೆ ಬೇರೆ ತಹಶೀಲ್ದಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಅಥಣಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರಲು ಬಂದಿದ್ದ ಕೆಲ ಅರ್ಜಿಗಳ ಡಾಟಾ ಎಂಟ್ರಿ ಆಗಿರಲಿಲ್ಲ ಎನ್ನುವುದು ವಿಚಾರಣೆ ನಡೆಸಿದಾಗ ತಿಳಿದುಬಂದಿದ್ದು, ಹೀಗಾಗಿ ಅಥಣಿ …

Read More »

ಪ್ರತಿನಿತ್ಯ 3 ಕೆಜಿ ಅನ್ನ, 4 ಕೆಜಿ ರೊಟ್ಟಿ, 3.5 ಕೆಜಿ ಮಾಂಸ ತಿನ್ನುವ ಇಬ್ಬರು ಹೆಂಡಿರ ಗಂಡನ ಕಣ್ಣೀರ ಕತೆಯಿದು!

ಪಟನಾ: ನೀವು ಮೇಲೆ ನೋಡುತ್ತಿರುವ ವ್ಯಕ್ತಿಯ ಹೆಸರು ಮೊಹಮ್ಮದ್​ ರಫಿಕ್​ ಅದ್ನಾನ್. ವಯಸ್ಸು 30 ವರ್ಷ. ಈತ ಬಿಹಾರ ಮೂಲದವನು. 200 ಕೆಜಿ ತೂಕವಿದ್ದಾನೆ. ಸಾಮಾನ್ಯ ಬೈಕ್​ ಆತನ ಭಾರವನ್ನು ತಡೆಯುವುದೇ ಇಲ್ಲ. ಹೀಗಾಗಿ ಸದಾ ಬುಲೆಟ್ ಗಾಡಿಯಲ್ಲೇ ಈತ ಓಡಾಡುತ್ತಾನೆ. ಪ್ರತಿದಿನ ಮಾಂಸಾಹಾರ ಸೇರಿದಂತೆ ದಿನವೊಂದಕ್ಕೆ 14 ರಿಂದ 15 ಕೆಜಿ ಆಹಾರ ತಿನ್ನುತ್ತಾನೆ ಅಂದರೆ, ಈತನಿಗಿಂತ ಸುಖ ಪುರುಷ ಮತ್ಯಾರು ಇಲ್ಲ ಅಂತಾ ನೀವು ಅಂದುಕೊಳ್ಳಬಹುದು. ಆದರೆ, ಈತನ …

Read More »

ಪ್ರವಾದಿ ಕುರಿತ ಹೇಳಿಕೆ ವಿರುದ್ಧ ಪ್ರತಿಭಟನೆ: ಯೋಗಿ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ

ಲಕ್ನೋ, ಜೂನ್ 11: ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳ ಹಿಂಸಾಚಾರದ ನಂತರ, ಉತ್ತರ ಪ್ರದೇಶದ ಸಹರಾನ್‌ಪುರದ ಪೊಲೀಸರು ಭಾರಿ ಬಂದೋಬಸ್ತ್‌ನೊಂದಿಗೆ ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರಿ ಪೊಲೀಸ್ ಉಪಸ್ಥಿತಿಯಲ್ಲಿ ಮುನ್ಸಿಪಲ್ ತಂಡಗಳೊಂದಿಗೆ ಬುಲ್ಡೋಜರ್‌ಗಳಿಂದ ಎರಡು ಮನೆಗಳನ್ನು ಧ್ವಂಸಗೊಳಿಸಿದ ವಿಡಿಯೊಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಸಹರಾನ್‌ಪುರದಲ್ಲಿ ಒಟ್ಟು 64 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಪೊಲೀಸರು ಹಂಚಿಕೊಂಡ ದೃಶ್ಯಗಳಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದ …

Read More »

ಇಳಿದ ಟೊಮೆಟೊ ಬೆಲೆ, ಗ್ರಾಹಕರಿಗೆ ಸಮಾಧಾನ

 ಹಲವು ವಾರಗಳಿಂದ ನಿರಂತರವಾಗಿ ಏರಿಕೆಯಾಗಿದ್ದ ಟೊಮೆಟೊ ಬೆಲೆ ಈ ವಾರ ಇಳಿಕೆ ಕಂಡಿದ್ದು, ಗ್ರಾಹಕರು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ನಗರಕ್ಕೆ ಕೊಪ್ಪಳ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಟೊಮೆಟೊ ಬರುತ್ತದೆ. ಎರಡ್ಮೂರು ವಾರ ಅಲ್ಪ ಮಳೆಯಾಗಿದ್ದರಿಂದ ಬೆಳೆದಿದ್ದ ಟೊಮೆಟೊದಲ್ಲಿ ಕೆಲವೊಂದಿಷ್ಟು ಕೆಟ್ಟು ಹೋಗಿದ್ದವು. ಕಳೆದ ವಾರದಿಂದ ಮಳೆ ಇಲ್ಲ. ಹೀಗಾಗಿ ಈಗ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಚಿಲ್ಲರೆ ಮಾರುಕಟ್ಟೆಯಲ್ಲಿ ನಗರದಲ್ಲಿ ಹೋದ ವಾರ ಒಂದು ಕೆ.ಜಿ. ಟೊಮೆಟೊಗೆ ₹80 …

Read More »

ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ‘ಶಾಲಾ-ಕಾಲೇಜು’ಗಳಿಗೆ ರಜೆ

ಬೆಂಗಳೂರು: ಕರ್ನಾಟಕದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಲವಾರು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಸೋಮವಾರ, ಅಂದರೆ ಜೂನ್ 13 ರಂದು ರಜೆ ಘೋಷಿಸಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ.   ಇದಲ್ಲದೆ, ಸರ್ಕಾರಿ-ಅನುದಾನಿತ, ಅನುದಾನರಹಿತ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ( …

Read More »

ಬೆಳಗಾವಿಯಲ್ಲಿ ಸ್ಟ್ರಾಂಗ್ ರೂಮ್ ಇರುವುದರಿಂದ ವಿಶೇಷ ಕಾಳಜಿ:ಬೊರಲಿಂಗಯ್ಯ

ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲಾ ಹಂತದಲ್ಲಿಯೂ ವ್ಯಾಪಕ ಬಂದೋಬಸ್ತ್ ಮಾಡಲಾಗುತ್ತದೆ ಎಂದು ನಗರಪೊಲೀಸ್ ಆಯುಕ್ತರಾದ ಡಾ. ಬೊರಲಿಂಗಯ್ಯ ತಿಳಿಸಿದ್ದಾರೆ. ಬೆಳಗಾವಿ ನಗರದಲ್ಲಿ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಂದೋಬಸ್ತ್ ಕುರಿತಂತೆ ಮಾತನಾಡಿದ ಡಾ. ಬೊರಲಿಂಗಯ್ಯನವರು, ಪರಿಷತ್ ಚುನಾವಣೆ ಹಿನ್ನೆಲೆ ಪೋಲಿಂಗ್ ಡೇದಿಂದಲೇ ಬಂದೋಬಸ್ತ್ ಕಾರ್ಯವನ್ನು ಮಾಡಲಾಗುತ್ತದೆ. ಬೆಳಗಾವಿ ನಗರದಲ್ಲಿಯೂ ವಿಶೇಷ ಭದ್ರತೆ ಒದಗಿಸಲಾಗುತ್ತದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧೀನದಲ್ಲಿ ಬರುವ ಎಲ್ಲಾ ಕಡೆ ಬಂದೋಬಸ್ತ್ …

Read More »