ಬೆಂಗಳೂರು : ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲು ನಾನು, ಶಾಸಕ ಬಸನಗೌಡ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಚಿವರು ಶಾಸಕರ ಫೋನ್ ಸಹ ರಿಸೀವ್ ಮಾಡಲ್ಲ. ಶಾಸಕರು ಪತ್ರವನ್ನು ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದ್ರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇದು ನಮಗೆ ಬೇಜಾರ ಆಗುತ್ತೆ ಅವಮಾನ ಆಗುತ್ತೇ. ಇಂಥ ಸಚಿವರು ಬೇಕಾ? …
Read More »ಅರೆಬೆತ್ತಲೆ ಸ್ಥಿತಿಯಲ್ಲಿಯೇ ಪೊಲೀಸ್ ಠಾಣೆ ಕರೆತಂದ ಆರೋಪಿ
ಚಿತ್ರದುರ್ಗ : ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಸ್ನಾನಕ್ಕೆ ಹೋಗಿದ್ದ ವೇಣುಗೋಪಾಲ್, ಅದೇ ಅರೆಬೆತ್ತಲೆ ಸ್ಥಿತಿಯಲ್ಲಿ ಹೊರ ಬಂದಿದ್ದಾರೆ. ಠಾಣೆಗೆ ಬರುವಂತೆ ಹೆಡ್ ಕಾನ್ಸ್ಟೇಬಲ್ ಚಂದ್ರಾನಾಯ್ಕ್ ಸೂಚಿಸಿದ್ದಾರೆ. ಈ ವೇಳೆ ಅದೇ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಆಗಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಎಸ್ಎಸ್ ಕಾರ್ಯಕರ್ತ ವೇಣುಗೋಪಾಲ್ ಮೇಲೆ ಪೊಲೀಸರು ಅನಾಗರಿಕ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೆಲವರು …
Read More »ಕೋವಿಡ್ ವ್ಯಾಕ್ಸಿನೇಷನ್ ಸ್ಥಿತಿ ಗಮನಿಸಿದರೆ ಶೀಘ್ರವೆ ಸೋಂಕು
ದೆಹಲಿ : ಜನಸಾಂದ್ರತೆಯಿಂದಾಗಿ ದೇಶದಲ್ಲಿ ಮತ್ತು ಮುಖ್ಯವಾಗಿ ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಒಮಿಕ್ರಾನ್ ಹರಡುವಿಕೆ ನಡೆಯುತ್ತಿದೆ ಎಂದು ಡಾ ರಾಯ್ ಹೇಳಿದರು. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಭಾರತದ ಪೂರ್ವ ಭಾಗದಲ್ಲಿ ವೈರಸ್ನ ಪ್ರಗತಿ ನಿಧಾನವಾಗಿದೆ. ಏತನ್ಮಧ್ಯೆ, ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ ಮತ್ತು ಹೊಸ ಪ್ರಕರಣಗಳು ಹಲವು ಮೆಟ್ರೊ ನಗರಗಳಲ್ಲಿ ತೀವ್ರವಾಗಿ ಪ್ರಬಲವಾಗಿದೆ ಎಂದು INSACOG ಜನವರಿ 23 ರಂದು ಬಿಡುಗಡೆ ಮಾಡಿದ …
Read More »ನಾಥೂರಾಮ್ ಗೋಡ್ಸೆ ಕುರಿತ ಸಿನಿಮಾ ವಿರೋಧಿಸಿ ಮೋದಿಗೆ ಪತ್ರ
1948ರ ಜ.30ರಂದು ಗಾಂಧೀಜಿ ಹತ್ಯೆ ಆಯಿತು. ನಾಥೂರಾಮ್ ಗೋಡ್ಸೆಯ ಗುಂಡೇಟಿಗೆ ಗಾಂಧಿ ಬಲಿಯಾದರು. ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗೋಡ್ಸೆ ನೀಡಿದ ಹೇಳಿಕೆಗಳನ್ನೇ ಆಧರಿಸಿ ಈ ಸಿನಿಮಾ ತಯಾರಾಗಿದೆ. ‘ಗಾಂಧಿಯನ್ನು ಕೊಂದಿದ್ದು ನಾಥೂರಾಮ್ ಗೋಡ್ಸೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹತ್ಯೆ ಮಾಡಿದ್ದಕ್ಕೆ ಕಾರಣ ಏನೆಂಬದು ಅನೇಕರಿಗೆ ತಿಳಿದಿಲ್ಲ. ಆ ಕುರಿತು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ‘Why I killed Gandhi’ ಚಿತ್ರತಂಡ ಹೇಳಿಕೊಂಡಿದೆ.
Read More »ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್ಐಆರ್
ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಗೆ ವಂಚನೆ ಸಂಬಂಧ ದೂರು ದಾಖಲಿಸಲಾಗಿದೆ. ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ ಗಳ ಪೈಕಿ ಒಂದಾಗಿರುವ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆ ತನ್ನ ಸಿಬ್ಬಂದಿಗೆ ಪಾವತಿಸುತ್ತಿದ್ದ PF, ESI ದಾಖಲೆ ನಕಲು ಮಾಡಿದೆ. ಆ ಸಂಸ್ಥೆಯು ಪಾಲಿಕೆಗೆ ನಿಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಎಂಬ ಹೆಸರಿನಲ್ಲಿ …
Read More »ಸಭೆ ಕರೆದಿದ್ದು ನಾನಲ್ಲ, ಅವರು ಎಂದ ಉಮೇಶ ಕತ್ತಿ; ಕರೆದವರೂ ದೊಡ್ಡವರಲ್ಲ, ಬಂದವರೂ ದೊಡ್ಡವರಲ್ಲ !
ಬೆಳಗಾವಿ – ಶನಿವಾರ ಸಂಜೆ ತಮ್ಮ ಮನೆಯಲ್ಲಿ ನಡೆದ ಸಭೆ ಆಯೋಜಿಸಿದ್ದು ನಾನಲ್ಲ, ಸಭೆಗೆ ಆಹ್ವಾನಿಸಿದವರು ಮಹಾಂತೇಶ ಕವಟಗಿಮಠ ಎಂದು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ. ಹುಕ್ಕೇರಿಯಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಯಾವುದೇ ಗುಪ್ತ ಸಭೆ ನಡೆದಿಲ್ಲ, ನಾನು ಯಾರನ್ನೂ ಕರೆದಿರಲೂ ಇಲ್ಲ, ಮಹಾಂತೇಶ ಕವಟಗಿಮಠ ಎಲ್ಲರನ್ನೂ ಸೇರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಸಭೆಯಲ್ಲಿ ಯಾವುದೇ ಗುಪ್ತ ಸಮಾಲೋಚನೆ ಆಗಿಲ್ಲ. ಕಳೆದ …
Read More »ಸಂಪುಟ ವಿಸ್ತರಣೆ, ಬೆಳಗಾವಿ ರಹಸ್ಯ ಸಭೆ; ಸಿಎಂ ನೀಡಿದ ಪ್ರತಿಕ್ರಿಯೆಯೇನು?
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರ ರಾಜ್ಯ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಲು ಕಾರಣವಾಗಿದ್ದು, ಮಾರ್ಚ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಚಿವಾಕಾಂಕ್ಷಿಗಳು ಮಾರ್ಚ್ ನಲ್ಲಿ ಬೇಡ ಸಂಪುಟ ವಿಸ್ತರಣೆ ಈಗಲೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸದ್ಯಕ್ಕೆ ನಾಲ್ಕು ಸ್ಥಾನಗಳು ಖಾಲಿ ಇದೆ. ಅದನ್ನು ಯಾವಾಗ ಭರ್ತಿ …
Read More »ಗೆಲುವಿಗಾಗಿ ನೂರೆಂಟು ಸರ್ಕಸ್.. ಪಂಚರಾಜ್ಯಗಳಲ್ಲಿ ‘ರಾಜಕೀಯ ತಂತ್ರ’ ಹೇಗಿದೆ..?
ಪಂಚರಾಜ್ಯಗಳ ಚುನಾವಣೆ ಬಿಸಿ ಏರ್ತಿದೆ. ಉತ್ತರ ಪ್ರದೇಶದಲ್ಲಿ ಕುರ್ಚಿಯಾಟ ಮುಂದುವರೆದಿದೆ. ಪಂಜಾಬ್ನಲ್ಲಿ ಕ್ಯಾಪ್ಟನ್ ತನ್ನ ಪಕ್ಷದ ಹುರಿಯಾಳುಗಳನ್ನ ಪ್ರಕಟಿಸಿದ್ದಾರೆ. ಇತ್ತ ಗೋವಾದಲ್ಲಿ ಕಳೆದ ಬಾರಿ ಕೈ ಸುಟ್ಕೊಂಡಿದ್ದ ಕಾಂಗ್ರೆಸ್, ಈ ಸಲ ಚುನಾವಣೆ ಮುನ್ನವೇ ಆಣೆ ಪ್ರಮಾಣದ ಮೊರೆ ಹೋಗಿದೆ. ಸಮೀಕ್ಷೆಗಳಿಗೆ ಬೀಳುತ್ತಾ ಬ್ರೇಕ್..? ವಿವಿಧ ಸುದ್ದಿ ವಾಹಿನಗಳಲ್ಲಿ ಪ್ರಸಾರ ಆಗ್ತಿರುವ ಚುನಾವಣೆ ಸಮೀಕ್ಷೆಗಳಿಗೆ ಬ್ರೇಕ್ ಹಾಕುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಅಂತ …
Read More »ಲಂಚ ಸ್ವೀಕರಿಸಿ ಸಿಕ್ಕಿಬಿದ್ದ ಭಾಲ್ಕಿ ನಗರ ಪೊಲೀಸ್ ಠಾಣೆ ಸಿಪಿಐ; ಲಂಚ ಪಡೆಯುವ ವಿಡಿಯೋ ವೈರಲ್
ಬೀದರ್: ಜಿಲ್ಲೆಯ ಭಾಲ್ಕಿ ನಗರ ಪೊಲೀಸ್ ಠಾಣೆ ಸಿಪಿಐ ಲಂಚ ಪಡೆಯುವ ವಿಡಿಯೋ ವೈರಲ್ ಆಗಿದೆ. ಸಿಪಿಐ P.R.ರಾಘವೇಂದ್ರ ವಿರುದ್ಧ ಲಂಚ ಸ್ವೀಕಾರ ಆರೋಪ ಕೇಳಿ ಬಂದಿದ್ದು ಲಂಚ ಪಡೆಯುವ ವಿಡಿಯೋ ವೈರಲ್ ಆಗಿದೆ. ಭಾಲ್ಕಿ ನಗರ ಪೊಲೀಸ್ ಠಾಣೆ ಸಿಪಿಐ P.R.ರಾಘವೇಂದ್ರ ಪೊಲೀಸ್ ಸಮವಸ್ತ್ರದಲ್ಲಿ ವ್ಯಕ್ತಿಯಿಂದ ಲಂಚ ಪಡೆದಿದ್ದಾರೆ. ಈ ಲಂಚದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಪಿಐ ರಾಘವೇಂದ್ರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲದಿನಗಳ …
Read More »3ನೇ ಅಲೆ ಎಫೆಕ್ಟ್.. ಒಂದು ವೇಳೆ ನೀವು ಪತ್ರಿಕೆ ಕೊಳ್ಳದಿದ್ರೆ 3.5 ಲಕ್ಷ ಕುಟುಂಬಗಳು ಬೀದಿಗೆ
ಬಂದ್ ಇರಲಿ, ಲಾಕ್ ಡೌನ್ ಇರಲಿ. ದಿನ ಪತ್ರಿಕೆ ಹಾಕೋರು ಮಳೆ ಚಳಿ ಗಾಳಿ ಲೆಕ್ಕಿಸದೇ ಅದೇನೇ ಕಷ್ಟಗಳಿದ್ರೂ ನಾವು ಬೆಡ್ನಿಂದ ಎದ್ದೇಳುವಷ್ಟರಲ್ಲಿ ಹಳ್ಳಿಯಿಂದ ದಿಲ್ಲಿವರೆಗಿನ ಸುದ್ದಿಗಳನ್ನ ನಮ್ಮ ಮನೆ ಬಾಗಿಲುಗಳಿಗೆ ತಲುಪಿಸುವ ಕೆಲಸ ಮಾಡ್ತಾರೆ. ಆದರೆ ಅವರ ಸಮಸ್ಯೆಗಳು ಮಾತ್ರ ಬೆಟ್ಟದಷ್ಟು. ಹೀಗೆ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದವರೂ ಸದ್ಯ ಕಂಗಾಲಾಗಿದ್ದಾರೆ. ದಿನ ಬೆಳಗಾದ್ರೆ ಸಾಕು ಬಿಸಿ ಬಿಸಿ ಕಾಫಿ ಜೊತೆಗೆ ದಿನ ಪತ್ರಿಕೆ ಓದುವುದರೊಂದಿಗೆ ಬಹುತೇಕರ ದಿನಚರಿ ಶುರುವಾಗುತ್ತೆ. …
Read More »