Breaking News

2022ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ ಮಾಡಿದ ‘ರಾಜ್ಯ ಸರ್ಕಾರ’: ಹೀಗಿದೆ ರಜೆಗಳ ಪಟ್ಟಿ

ಬೆಂಗಳೂರು: ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಳ ಪಟ್ಟಿಯನ್ನು ( Karnataka Government Holiday List 2022 ) ಬಿಡುಗಡೆ ಮಾಡಿದೆ. ಈ ಪಟ್ಟಿಯಂತೆ 2022ನೇ ಸಾಲಿನಲ್ಲಿ 16 ದಿನಗಳ ಸಾರ್ವತ್ರಿಕ ರಜೆಗಳನ್ನು ನೀಡಲಾಗಿದೆ. ಇನ್ನುಳಿದಂತೆ ಪರಿಮಿತ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿಗೆ ಮಂಜೂರು ಮಾಡಿರುವಂತ ಸಾರ್ವತ್ರಿಕ …

Read More »

ಒಮಿಕ್ರಾನ್​ಗೆ ಇಂದು ತಜ್ಞರ ಜೊತೆಗೂಡಿ CM ಮಂತ್ರ; ರಾಜ್ಯದಲ್ಲಿ ಜಾರಿಯಾಗುತ್ತಾ ಟಫ್ ರೂಲ್ಸ್​..?

ನವದೆಹಲಿ: ಆ ವೈರಿ ವೈರಸ್ ಭಾರತಕ್ಕೆ ಬರುತ್ತಾ? ಬರಬಹುದಾ? ಒಂದು ವೇಳೆ ಬಂದ್ರೆ ಮುಂದೇನು? ಅಂತಾ ಕಾಡಿದ್ದ ಪ್ರಶ್ನೆಗಳ ಗೊಂದಲಿಗೆ ಒಂದು ಉತ್ತರವಂತೂ ಸಿಕ್ಕಿದೆ. ಇಡೀ ಭಾರತದಲ್ಲೇ ಮೊದಲ ಬಾರಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಬೆಂಗಳೂರಿನ ಏರ್​ಪೋರ್ಟ್​ ಗೇಟ್​ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಟ್ಟ, ಒಮಿಕ್ರಾನ್ ಓಡಿಸಲು ಸಿಎಂ ಬೊಮ್ಮಾಯಿ ಇಂದು ಮಹತ್ವದ ಮೀಟಿಂಗ್ ಫಿಕ್ಸ್ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳಲ್ಲಿ ರಹಸ್ಯವಾಗಿ ಅಡಗಿ ಕೂತು ಸೌತ್ ಆಫ್ರಿಕಾದಿಂದ ಸದ್ದಿಲ್ಲದೇ ವಿಮಾನದ ಮೂಲಕ …

Read More »

ಮನೆ ಕಟ್ಟೋರಿಗೆ ಬಿಗ್ ಶಾಕ್

ನವದೆಹಲಿ : ಮನೆ ಕಟ್ಟೋರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಸಿಮೆಂಟ್ ಬೆಲೆ 15 ರಿಂದ 20 ರೂ. ಹೆಚ್ಚಳವಾಗುವ(Cement price hike) ಸಾಧ್ಯತೆ ಇದೆ ರೇಟಿಂಗ್ ಏಜೆನ್ಸಿ ತಿಳಿಸಿದೆ. ಸಿಮೆಂಟ್ ತಯಾರಿಕೆಗೆ ಅಗತ್ಯದ ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಿಂದಾಗಿ ಸಿಮೆಂಟ್ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ 50 ಕೆಜಿ ಇರುವ ಪ್ರತಿ ಚೀಲದ ಸಿಮೆಂಟ್ ಬೆಲೆ400 ರೂ. ಮುಟ್ಟಲಿದೆ ಎನ್ನಲಾಗಿದೆ. ಕೊರೊನಾ ಕಾರಣಕ್ಕೆ 2020 ರಲ್ಲಿ ಸಿಮೆಂಟ್ ಬೇಡಿಕೆಯಲ್ಲಿ …

Read More »

ಚನ್ನರಾಜ್ ಹಟ್ಟಿಹೊಳಿ ಗೆಲುವು ನಿಶ್ಚಿತ: ಸತೀಶ್ ಜಾರಕಿಹೊಳಿ

ಬೈಲಹೊಂಗಲ: ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರ ಗೆಲುವು ಜಿಲ್ಲೆ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರುವಾರದಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲುವು ನಿಶ್ಚಿತ. ಆದರೆ ಬಹು ಮತಗಳ ಅಂತರದಿಂದ ಗೆಲ್ಲಬೇಕು. ಆದ್ದರಿಂದ ತಮ್ಮ ಮತವನ್ನು ಕಾಂಗ್ರೆಸ್ ಗೆ ನೀಡಿ ಎಂದು ಮನವಿ …

Read More »

ಸಮಸ್ಯೆಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿ; ಹೊಣಕೊಟ್ಟು ಮರಳು ಮಾಡುವವರನ್ನಲ್ಲ : ಸತೀಶ್ ಜಾರಕಿಹೊಳಿ

ಖಾನಾಪುರ: ಕಳೆದ ಬಾರಿ ಗೆಲ್ಲಲ್ಲಿಕ್ಕೆ ಬೇಕಾದ ಮತಗಳಿದ್ರು ಕೂಡಾ ಸೋತಿದ್ದೇವೆ. ಹೀಗಾಗಿ ಆಗಾದ ಅನುಭವ ಈ ಚುನಾವಣೆಯಲ್ಲಿ ಆಗದಿರಿಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದರು. ಖಾನಾಪುರ ಮತಕ್ಷೇತ್ರದ ಬೀಡಿ ಗ್ರಾಮದಲ್ಲಿ ಗುರುವಾರ ನಡೆದ ವಿವಿಧ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಸೋಲು ಅನುಭವಿಸಿದ್ದೇವೆ. ಆ ಅನುಭವ ಈ ಚುನಾವಣೆಯಲ್ಲಿ ಆಗದಿರಲಿ ಎಂಬ ಉದ್ದೇಶದಿಂದ ಎಲ್ಲ ಕಡೆಗಳಲ್ಲಿ ತೆರಳಿ ಎಚ್ಚರಿಸುವ …

Read More »

ತಾಯಿ, ಮಗಳ ಮೇಲೆ ಕಬ್ಬಿಣದ ರಾಡು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 38 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಯ ಮೇಲೆ ಗುಂಪೊಂದು ಕಬ್ಬಿಣದ ರಾಡು ಹಾಗೂ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಸಿಸಿಟಿವಿಯಲ್ಲಿ ಈ ಭಯಾನಕ ಹಲ್ಲೆಯ ದೃಶ್ಯ ಸೆರೆಯಾಗಿದೆ. ಕಾರಿನಿಂದ ಇಳಿದು ಬರುವ ಮಗಳು ಹಾಗೂ ತಾಯಿಯನ್ನು ಅಡ್ಡಗಟ್ಟಿದ್ದ ಗುಂಪೊಂದು ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸುವ ದೃಶ್ಯ ವಿಡಿಯೋದಲ್ಲಿದೆ.   ದೆಹಲಿಯ ಶಾಲಿಮರ್ ಬಾಗ್ ರೆಸಿಡೆನ್ಶಿಯಲ್ ಕಾಲೋನಿಯಲ್ಲಿ ಕಳೆದ ತಿಂಗಳು 19 ರಂದು ಈ ಘಟನೆ ನಡೆದಿದ್ದು, ಇದಕ್ಕೆ …

Read More »

ರಾಜ್ಯದಲ್ಲಿ ಐದು ಜನಕ್ಕೆ ಹರಡಿದೆ ಓಮಿಕ್ರಾನ್: ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರು ಡಿಸೆಂಬರ್ 2: ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಎರಡಲ್ಲ ಐದು ಜನಕ್ಕೆ ಹರಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿಗೆ ಓಮಿಕ್ರಾನ್ ಬಿಗ್ ಶಾಕ್ ಕೊಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ ಓಮಿಕ್ರಾನ್ ವೈರಸ್ ಸೋಂಕಿತ ಐದು ಪ್ರಕರಣಗಳು ದಾಖಲಾಗಿವೆ ಎಂದು ಗೌರವ್ ಗುಪ್ತ ಸ್ಪೋಟಕ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಮೂಲಕವೇ ಭಾರತದಲ್ಲಿ ಮೊದಲ ಬಾರಿಗೆ ಐದು ಓಮಿಕ್ರಾನ್ …

Read More »

ಸರ್ಕಾರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : 10 ಸಾವಿರ ರೂ. ಶುಲ್ಕ ಹೆಚ್ಚಳ

ಬೆಂಗಳೂರು : ಸರ್ಕಾರಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ (Engineering) ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ (students) ರಾಜ್ಯ ಸರ್ಕಾರ (State Government) ಬಿಗ್ ಶಾಕ್ ನೀಡಿದ್ದು, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದ ಜೊತೆಗೆ 10 ಸಾವಿರ ರೂ. ಇತರೆ ಶುಲ್ಕವನ್ನು ಹೆಚ್ಚುವರಿಯಾಗಿ ವಸೂಲಿಗೆ ಅವಕಾಶ ನೀಡಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕೋರ್ಸ್ ಪ್ರವೇಶಕ್ಕೆ ನಿಗದಿಪಡಿಸಿರುವ ಶುಲ್ಕದ …

Read More »

ಕೋಮಾಗೆ ಜಾರಿದ ಕನ್ನಡ ಹಿರಿಯ ನಟ ಶಿವರಾಂ

ಬೆಂಗಳೂರು: ಮೂರು ದಿನಗಳ ಹಿಂದೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಂತ ಸ್ಯಾಂಡಲ್ ವುಡ್ ನಟ ಶಿವರಾಂ ( Sandalwood Actor Shivaram) ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಮೆದುಳಿಗೆ ಡ್ಯಾಮೇಜ್‌ ಆಗಿದ್ದು, ಕೋಮಾಗೆ ಜಾರಿದ್ದಾರೆ. ‌ ಹಿರಿಯ ನಟನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಮೋಹನ್ ಅವ್ರು ಶಿವರಾಂ ಅವ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ‘ ಹಿರಿಯ ನಟನ ಬ್ರೇನ್ ಡ್ಯಾಮೇಜ್‌ ಆಗಿದ್ದು, ಮೆದುಳಿನಲ್ಲಿ ರಕ್ತಸ್ರಾವ‌ ಆಗಿದೆ. ಸಧ್ಯ ಅವ್ರು …

Read More »

ಶಾಲೆಗಳಲ್ಲಿ ʼಮೊಟ್ಟೆ ವಿತರಣೆʼ ಆದೇಶ ವಾಪಸ್‌ ತೆಗೆದುಕೊಳ್ಳಿ, ಇಲ್ಲವಾದ್ರೆ ಹೋರಾಟ ಎದುರಿಸಿ : ಸರ್ಕಾರಕ್ಕೆ ಚನ್ನಬಸವಾನಂದ ಶ್ರೀ ಎಚ್ಚರಿಕೆ

ಬೆಂಗಳೂರು : ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ಮಹಾಸಭಾ ಬಸವ ಮಂಟಪದ ಚನ್ನಬಸವಾನಂದ ಶ್ರೀ ವಿರೋಧ ವ್ಯಕ್ತ ಪಡಿಸಿದ್ದು, ರಾಜ್ಯ ಸರ್ಕಾರ ಕೂಡಲೇ ಮೊಟ್ಟೆ ವಿತರಣೆ ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚನ್ನಬಸವಾನಂದ ಶ್ರೀಗಳು, ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನ ರಾಜ್ಯ ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಮೊಟ್ಟೆ ಪೂರ್ಣವಾಗಿ ಮಾಂಸಹಾರವಾಗಿದ್ದು, ಶಾಲಾ ಮಟ್ಟದಿಂದ್ಲೆ ಮಕ್ಕಳಿಗೆ …

Read More »