ಬೆಂಗಳೂರು: 10 ಲಕ್ಷ ರೈತರಿಗೆ 681 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಮಳೆ ಮತ್ತು ಪ್ರವಾಹ ನಷ್ಟಕ್ಕೆ 1281 ಕೋಟಿ ರೂಪಾಯಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 10.02 ಲಕ್ಷ ರೈತರಿಗೆ 681.90 ಕೋಟಿ ರೂಪಾಯಿ ಇನ್ ಪುಟ್ ಸಬ್ಸಿಡಿಯನ್ನು ನೇರವಾಗಿ ಖಾತೆಗೆ ಪಾವತಿಸಲಾಗಿದೆ ಎಂದು ಹೇಳಿದ್ದಾರೆ. ಇಷ್ಟು ಕಡಿಮೆ …
Read More »ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು, ಡಿಸೆಂಬರ್ 10; ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯಹವಾಮಾನಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ ಉಷ್ಣಾಂಶ ಸಹ ಕುಸಿತವಾಗಲಿದೆ ಎಂದು ಇಲಾಖೆ ಹೇಳಿದೆ. ಈ ಬಾರಿ ನೈಋತ್ಯ ಮುಂಗಾರು ಅವಧಿಯಿಂದಲೂ ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯಾಗುತ್ತಲೇ ಇದೆ. ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿಯೂ ಅಕಾಲಿಕ ಮಳೆಯಾಗಿದೆ. ‘ಜವಾದ್’ ಚಂಡಮಾರುತದ ಪ್ರಭಾವ ದೇಶದಲ್ಲಿ ಕಡಿಮೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಆಂಧ್ರ ಪ್ರದೇಶ, ರಾಯಲಸೀಮಾ, …
Read More »ಎಲ್ಲಿ, ಎಷ್ಟು ಮತದಾನ? – ಸಮಗ್ರ ವಿವರ
ಬೆಂಗಳೂರು –ನಡೆಯುತ್ತಿದ್ದು, ಬೆಳಗ್ಗೆ 10 ಗಂಟೆವರೆಗೆ ವಿಜಯಪುರದಲ್ಲಿ ಮಾತ್ರ ಶೂನ್ಯ ಮತದಾನವಾಗಿದೆ. ದಕ್ಷಿಣ ಕನ್ನಡದಲ್ಲಿ ಶೇ.45ರಷ್ಟು ಮತದಾನವಾಗಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಮತ
Read More »ಕುತೂಹಲ ಮೂಡಿಸಿದ ಚುನಾವಣೆ ರಾಜ್ಯ ವಿಧಾನಪರಿಷತ್ ನ 25 ಸ್ಥಾನಕ್ಕೆ ಮತದಾನ ಆರಂಭವಾಗಿದೆ. 6,072 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ತೀವ್ರ ಕುತೂಹಲ ಮೂಡಿಸಿರುವ ರಾಜ್ಯ ವಿಧಾನಪರಿಷತ್ ನ 25 ಸ್ಥಾನಕ್ಕೆ ಮತದಾನ ಆರಂಭವಾಗಿದೆ. 6,072 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಬೆಳಗಾವಿ, ಬಳ್ಳಾರಿ, ದಕ್ಷಿಣ ಕನ್ನಡ, ಧಾರವಾಡ, ವಿಜಯಪುರ, ಮೈಸೂರಿನ ತಲಾ 2 ಕ್ಷೇತ್ರ, ಚಿಕ್ಕಮಗಳೂರು, ಕಲಬುರಗಿ, ಉತ್ತರ ಕನ್ನಡ, ಬೀದರ್, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಕೋಲಾರ, ತುಮಕೂರು ಸೇರಿದಂತೆ ಒಟ್ಟು 20 …
Read More »ಅಶ್ಲೀಲ ಸಿಡಿ ವೈರಲ್ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಸ್ಪಷ್ಟನೆ
ವಿಜಯಪುರ ಬಾಗಲಕೋಟ ವಿಧಾನಪರಿಷತ್ ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷೇತರ ಅಭ್ಯರ್ಥಿ ಅಶ್ಲೀಲ ಸಿಡಿ ವೈರಲ್ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಸೋಲಿನ ಭಯದಿಂದ ಚಾರಿತ್ರ್ಯ ವಧೆ ಮಾಡಲು ನಕಲಿ ಸಿಡಿ ತಯಾರಿಸಿ ಹರಡುತ್ತಿದ್ದಾರೆ ಎಂಬ ಮಾಹಿತಿ ಇದೆ, ಜಿಲ್ಲೆಯಲ್ಲಿ ಎರಡು ಪಕ್ಷಗಳ ನಕಲಿ ಸಿಡಿ ಫ್ಯಾಕ್ಟರಿ ಇದೆ ಎಂದು ಈ ಹಿಂದೆ ಜಿಲ್ಲೆಯ ಶಾಸಕರೊಬ್ಬರು ಹೇಳಿದ್ದರು ಅದು ಈಗ ನಿಜ ಎನಸ್ತಿದೆ ಎಂದಿದ್ದಾರೆ. ಅಲ್ಲದೇ …
Read More »ಬೆಂಗಳೂರಿನ ನಾರಾಯಣ ಹೃದಯಾಲಯದ ನಿರ್ದೇಶಕರು ಹಾಗೂ ವಿಶ್ವದ ಅಗ್ರಮಾನ್ಯ ಹೃದಯತಜ್ಞರಲ್ಲಿ ಒಬ್ಬರಾದ ಡಾ ದೇವಿಶೆಟ್ಟಿ ಯವರ ಸಂದೇಶ..*
ನನ್ನೆಲ್ಲಾ ಮಿತ್ರರೇ… ಇತ್ತೀಚಿನ ಕೆಲ ವರ್ಷಗಳಿಂದ ನಾನು, ನನಗೆ ವೈಯಕ್ತಿಕವಾಗಿ ತೀರಾ ಪರಿಚಿತರಿದ್ದ 8-10 ಜನರನ್ನು ಕಳೆದು ಕೊಂಡಿದ್ದೇನೆ.. ಅದರಲ್ಲೂ 40 ರ ಆಸುಪಾಸಿನಲ್ಲಿದ್ದ ಕೆಲ ಸೆಲೆಬ್ರಿಟಿಗಳು ‘ಫಿಟ್ ‘ ಆಗಿರಲು ಅತೀ ಹೆಚ್ಚು ಶ್ರಮಿಸಿ ಮರಣಿಸಿದ್ದಾರೆ.. ಆದರೆ ಅವರೆಲ್ಲಾ ಕೇವಲ ಫಿಟ್ ಆಗಿರುವಂತೆ, ಸಿಕ್ಸ್ ಪ್ಯಾಕ್ ಹೊಂದಿರುವಂತೆ ಕಾಣುತ್ತಿದ್ದರಷ್ಟೆ…. ಇಂದು ಆ ಪಟ್ಟಿಗೆ ಪುನೀತ್ ರಾಜ್ ಕುಮಾರ್ ಸೇರ್ಪಡೆಯಾಗಿದ್ದಾರೆ. ಜೀವನದಲ್ಲಿ ಎಲ್ಲದಕ್ಕೂ ‘ಮಿತ’ ವೇ ಮಂತ್ರ.. ಸೊನ್ನೆ ಅಥವಾ …
Read More »ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿಯೋರ್ವ ಟೊಮೆಟೊ ಕಳ್ಳತನ ಮಾಡುತ್ತಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ಮಾರ್ಕೆಟ್ನಲ್ಲಿ ಬೆಳಿಗ್ಗೆ ಹರಾಜು ಮಾಡಲು ರೈತರೊಬ್ಬರು ಕ್ರೇಟ್ಗಳನ್ನು ದಾಸ್ತಾನು ಮಾಡಿದ್ದರು. ಕ್ರೇಟ್ಗಳಿಗೆ ಹೊದಿಕೆಯಿಂದ ಮುಚ್ಚಿದ್ದರು. ಆದರೆ ರಾತ್ರಿ ವೇಳೆ ಖಾಕಿ ಸಮವಸ್ತ್ರ ಧರಿಸಿರುವ ವ್ಯಕ್ತಿ ಹಾಗೂ ಇನ್ನೋರ್ವ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ. ಮಾರುಕಟ್ಟೆ ಸಿಬ್ಬಂದಿ ನಿದ್ರೆಗೆ ಜಾರಿದ …
Read More »ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಕೊಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗದ ಮುಖಾಂತರ ಪತ್ರ ಬರೆಯಲಾಗುತ್ತದೆ. ಕಾಂಗ್ರೆಸ್ನಿಂದ ನಾಮನಿರ್ದೇಶಿತರಾದ ಸದಸ್ಯರಿಗೆ ಮತದಾನ ಮಾಡದಂತೆ ಸೂಚನೆ ನೀಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಬೆಂಗಳೂರು ಅಭ್ಯರ್ಥಿಯಿಂದ ಈ ವಿಚಾರವಾಗಿ ಅರ್ಜಿ ಸಲ್ಲಿಸಿ, ನಾಮನಿರ್ದೇಶಿತರ ಹಕ್ಕು ಪ್ರಶ್ನಿಸಿ ಕೋರ್ಟ್ಗೆ …
Read More »ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ.. ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ
: ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದ ಅಪರಾಧಿಗೆ ಸಾಗರದ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ. 2017ರಲ್ಲಿ ಸಾಗರದ ನಿವಾಸಿ ಅನಿಲ್ ಡಿಸೋಜಾ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಸಾಗರ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಅನಿಲ್ ಹೋಟೆಲ್ ಮಾಲೀಕ ರಾತ್ರಿ ಕೆಲಸಕ್ಕೆ ಕರೆದಿದ್ದಾರೆ ಎಂದು ಆಟೋದಲ್ಲಿ ಕರೆದುಕೊಂಡು ಹೋಗಿ ಆಕೆಯ ಮೇಲೆ ದುಷ್ಕೃತ್ಯ ಮೆರೆದಿದ್ದ. …
Read More »ಸಿಎಂ ಬೊಮ್ಮಾಯಿ ಬೆಳಗಾವಿಗೆ, ಬಸವರಾಜ ಬೊಮ್ಮಾಯಿ ಪ್ರವಾಸ ಪಟ್ಟಿ ನೋಡಿದರೆ ಮತದ ಮೌಲ್ಯ ನಿಮಗೆ ಅರ್ಥವಾದೀತು.
ಬೆಂಗಳೂರು – ಶುಕ್ರವಾರ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಒಂದು ಮತದ ಮೌಲ್ಯ ಎಷ್ಟು? ಇದನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಬಹುದು? ಮತದಾರರಿಗೆ ಅಭ್ಯರ್ಥಿಗಳು ಹಂಚುವ ಹಣದ ಮೇಲೆ ಲೆಕ್ಕ ಹಾಕಬಹುದೆ? ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ ಪಟ್ಟಿ ನೋಡಿದರೆ ಮತದ ಮೌಲ್ಯ ನಿಮಗೆ ಅರ್ಥವಾದೀತು. ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ 7.30ಕ್ಕೆ ಹುಬ್ಬಳ್ಳಿಗೆ …
Read More »