Breaking News

ಮನೆ ಕಟ್ಟುವವರಿಗೆ ಸಿಹಿ ಸುದ್ದಿ: 5 ಲಕ್ಷ ಮನೆಗಳ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಭರವಸೆ

ಬೆಳಗಾವಿ: ರಾಜ್ಯ ವ್ಯಾಪಿ ಬರೋಬ್ಬರಿ ಐದು ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಶೀಘ್ರದಲ್ಲೇ ಪಂಚಾಯಿತಿವಾರು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.   ನಗರದಲ್ಲಿಂದು ಪರಿಷತ್ತಿನ ಪ್ರಶ್ನೋತ್ತರ ವೇಳೆ ಕೆ.ಹರೀಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸಿ-ಎಸ್ಟಿ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮನೆ ಹಂಚಿಕೆಗೆ ಸರ್ಕಾರ ನಿರ್ಧಾರ ಕೈಗೊಂಡಿದ್ದು,ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೊಂದಿಗೆ ಚರ್ಚೆ ನಡೆಸಿ ಐದು ಲಕ್ಷ ಮನೆಗಳ …

Read More »

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಶಾಸಕಾಂಗ ನಿರ್ಧಾರ

ಬೆಳಗಾವಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಜಾರಿ ಮಾಡಲು ಮುಂದಾಗಿರುವ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿ ಹೋರಾಟ ನಡೆಸಲು ಇಂದಿಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ನಿರ್ಧರಿಸಿದೆ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಇದನ್ನು ಪಕ್ಷದ ಎಲ್ಲಾ ಶಾಸಕರು ಒಗ್ಗೂಡಿ ಎದುರಿಸಲು ಮುಂದಾಗೋಣ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಶಾಸಕರಿಗೆ ಸಲಹೆ ನೀಡಿದ್ದಾರೆ.   ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಸಭೆಯ …

Read More »

ಸಾರಿಗೆ ಸಂಸ್ಥೆ ಸುಧಾರಿಸಿ ಆದಾಯ ಹೆಚ್ಚಳಕ್ಕೆ ತೀರ್ಮಾನ: ಬಿ. ಶ್ರೀರಾಮುಲು

ಬೆಳಗಾವಿ: ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಸುಧಾರಿಸಿ ಆದಾಯ ಹೆಚ್ಚಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಧಾನಸಭೆಯಲ್ಲಿ ಬುಧವಾರ ಹೇಳಿದರು.   ಪ್ರಶ್ನೋತ್ತರ ಅವಧಿಯಲ್ಲಿ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ೪ ವರ್ಷಗಳಿಂದ ಸಾರಿಗೆ ಪ್ರಯಾಣ ದರ ಏರಿಕೆ ಮಾಡಿಲ್ಲ. ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಇದನ್ನು ಸುಧಾರಿಸಲು ನಿವೃತ್ತ ಐ.ಎ.ಎಸ್. ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯನ್ನು ಮುಖ್ಯಮಂತ್ರಿಗಳು ರಚಿಸಿದ್ದಾರೆ ಎಂದರು.   ಈ …

Read More »

ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಹೂರ್ತ ಫಿಕ್ಸ್‌: ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ, ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಳಗಾವಿ: ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ, ಈ ಬಗ್ಗೆ ಇಂದು ಸಿಎಂ ಗೃಹ ಸಚಿವ ಸಭೆ ನಡೆಸಿದ್ದು, ಸೋಮವಾರ ಸೋಮವಾರ ಸದನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ. ಈ ನಡುವೆ ಕರಡಿನ ಅಂತಿಮ ಅಂಶಗಳ ಬಗ್ಗೆ, ಕಾನೂನು ತಜ್ಞರ ಸೇರಿದಂತೆ ಸಂಬಂಧಪಟ್ಟವರ ಜೊತೆಗೆ ಚರ್ಚೆ ನಡೆಸಲಾಗಿದೆಯಂತೆ. ಮೂಸೂದೆಯನ್ನು ಕಾನೂನಿನ ಅಡಿಯಲ್ಲಿ ತರುವುದಾಗಿ, ರಾಜ್ಯ ಸರ್ಕಾರ ಹೇಳಿದ್ದು, ಬಲವಂತದ ಮತಾಂತರ ವಿರುದ್ದ ರಾಜ್ಯ ಸರ್ಕಾರ ಮಹತ್ವದ …

Read More »

ಸಭಾಪತಿಗಳ ಆದೇಶ ಉಲ್ಲಂಘನೆ : ವಿಪಕ್ಷ ನಾಯಕ ಎಸ್‌.ಆರ್‌ ಪಾಟೀಲ್‌ ಸೇರಿ ವಿಧಾನಪರಿಷತ್‌ ʼ14 ಸದಸ್ಯರುʼ ಅಮಾನತು

ಬೆಳಗಾವಿ : ಸಭಾಪತಿಗಳ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಎಸ್‌.ಆರ್‌ ಪಾಟೀಲ್‌ ಸೇರಿ ವಿಧಾನಪರಿಷತ್‌ನ 14 ಸದಸ್ಯರನ್ನ ಅಮಾನತುಗೊಳಿಸಲಾಗಿದೆ. ಸದನ ಬಾವಿಗೆ ಇಳಿದು ಪ್ರತಿಭಟನೆ ಮಾಡದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವ್ರು ವಿಪಕ್ಷ ನಾಯಕರಿಗೆ ಮನವಿ ಮಾಡಿದ್ರು. ಆದ್ರೆ, ಸಭಾಪತಿಗಳ ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮುಂದುವರೆಸಿದ್ರು. ನಂತ್ರ ಸಭಾಪತಿ ಬಸವರಾಜ ಹೊರಟ್ಟಿ, ಸದನದ ಬಾವಿಗಿಳಿದು ಪ್ರತಿಭಟಿಸಿದ 14 ಸದಸ್ಯರನ್ನ ಒಂದು ದಿನದ ಮಟ್ಟಿಗೆ ಕಲಾಪದಿಂದ …

Read More »

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 3 ಓಮಿಕ್ರಾನ್ ಕೇಸು ಪತ್ತೆ, ಒಬ್ಬ ನಾಪತ್ತೆ

ಹೈದರಾಬಾದ್: ಹೈದರಾಬಾದ್ ನ ರಾಜೀವ್ ಗಾಂದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಓಮಿಕ್ರಾನ್ ಪ್ರಕರಣಗಳು ಬುಧವಾರ ಪತ್ತೆಯಾಗಿವೆ.ಓಮಿಕ್ರಾನ್ ರೂಪಾಂತರವು ಎರಡೂವರೆ ದಿನಗಳಲ್ಲಿ ರೂಪಾಂತರಗೊಳ್ಳುವ, ಕೆಲವು ಯುರೋಪಿಯನ್ ದೇಶಗಳಲ್ಲಿ ಒಂದೂವರೆ ದಿನದಲ್ಲಿ ದ್ವಿಗುಣಗೊಳ್ಳುವ ಸಮಯವನ್ನು ಹೊಂದಿದೆ, ಕೋವಿಡ್ ಮಾರ್ಗಸೂಚಿಯನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ನಿರ್ದೇಶಕ ಡಾ ಜಿಎಸ್ ರಾವ್ ಹೇಳುತ್ತಾರೆ.   ವಿದೇಶಕ್ಕೆ ಹೋಗಿ ಬಂದವರಲ್ಲಿ ಕಂಡುಬಂದಿದ್ದು, ಅವರಲ್ಲಿ ಇಬ್ಬರು ಓಮಿಕ್ರಾನ್ ಸಂಖ್ಯೆ ಹೆಚ್ಚಿರುವ ಅಥವಾ ಅಪಾಯವಿರುವ ದೇಶಗಳಿಂದ ಬಂದವರು …

Read More »

ಜೆಡಿಎಸ್ ಗೆ ಬಿಗ್ ಶಾಕ್ : ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆ

ಬೆಳಗಾವಿ : ವಿಧಾನಪರಿಷತ್ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಜೆಡಿಎಸ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಧಾರವಾಡ ಜಿಲ್ಲೆಯ ಜಾತ್ಯತಿತ ಜನತಾ ದಳದ(JDS​) ಪ್ರಮುಖ ನಾಯಕರಾಗಿದ್ದ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್​.ಎಚ್​. ಕೋನರೆಡ್ಡಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಬೆಳಗಾವಿಯ ಕಾಂಗ್ರೆಸ್​ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕೋನರೆಡ್ಡಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.   ಕಾಂಗ್ರೆಸ್ ಸೇರ್ಪಡೆ ಬಳಿಕ …

Read More »

ನಮ್ಮ ಧರ್ಮ ಉಳಿಸುವುದಕ್ಕಾಗಿ ಕಾಯ್ದೆ ಜಾರಿ ಅನಿವಾರ್ಯ ಎಂದ ಕೆಎಸ್ ಈಶ್ವರಪ್ಪ

ಬೆಳಗಾವಿ: ಧಮ್ ತೋರಿಸುವುದು ಚುನಾವಣೆಗಳಲ್ಲಿ ಅಲ್ಲ. ಜನರ ಮನಸು ಗೆಲ್ಲುವ ವಿಚಾರದಲ್ಲಿ ತೋರಿಸಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ, ಇಂತಹ ಪದಗಳನ್ನು ಸಿದ್ದರಾಮಯ್ಯ ಬಳಸಬಾರದು ಎಂದರು. ಮತಾಂತರ ಕಾಯ್ದೆ ಪ್ರಶ್ನೆ ಮಾಡಲು ಕಾಂಗ್ರೆಸ್ನವರು ಯಾರು. ಕಾಯ್ದೆ ತಂದೆ ತರುತ್ತೇವೆ, ನಮ್ಮದೇ ಸರ್ಕಾರ ಇದೆ. ವಿರೋಧ ಪಕ್ಷದಲ್ಲಿ ಇರೋದಕ್ಕೆ ಮಾತ್ರ ವಿರೋಧಿಸುತ್ತಾರೆ. ನಮ್ಮ ಧರ್ಮ ಉಳಿಸುವುದಕ್ಕಾಗಿ ಕಾಯ್ದೆ ಜಾರಿ ಅನಿವಾರ್ಯವಾಗಿದೆ. ಪಾಕಿಸ್ತಾನದಲ್ಲಿ ಆದಂತೆ ಅಗಲು ಬಿಡುವುದಿಲ್ಲ …

Read More »

ಡಿಕೆಶಿ ಬಗ್ಗೆ ಮುಂದಿನ ದಿನಗಳಲ್ಲಿ ನಾನು ದೊಡ್ಡ ಬಾಂಬ್ ಸಿಡಿಸಬಹುದು,

ಬೆಳಗಾವಿ : ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ (BJP) ಸೋಲುವುದಕ್ಕೆ ಕಾರಣ ಮುಂದಿನ ದಿನದಲ್ಲಿ ಹೇಳುವೆ. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ಹೇಳಿಕೆ ನೀಡುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ (MLA ramesh jarkiholi) ಹೇಳಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಬಿಜೆಪಿ ನಾಯಕರಿಂದ, ಸಂಘದಿಂದ ನನಗೆ ಫೋನ್ ಬಂತು. ಹೀಗಾಗಿ ನಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ನಾನು ದೊಡ್ಡ …

Read More »

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯಗೆ ಭಯ ಶುರುವಾಗಿದೆ,

ಬೆಳಗಾವಿ : ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ (BJP) ಸೋಲುವುದಕ್ಕೆ ಕಾರಣ ಮುಂದಿನ ದಿನದಲ್ಲಿ ಹೇಳುವೆ. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ಹೇಳಿಕೆ ನೀಡುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ (MLA ramesh jarkiholi) ಹೇಳಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಬಿಜೆಪಿ ನಾಯಕರಿಂದ, ಸಂಘದಿಂದ ನನಗೆ ಫೋನ್ ಬಂತು. ಹೀಗಾಗಿ ನಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ನಾನು ದೊಡ್ಡ …

Read More »