Breaking News

ಶಿವಸೇನೆ, ಎಂಇಎಸ್ ಪುಂಡಾಟ ಮತ್ತೆ ನಡೆದಿದೆ. ಗೋಕಾಕ್ ಚೆಕ್ ಪೋಸ್ಟ್​ನಲ್ಲಿ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ‌.

ಬೆಂಗಳೂರು : ಶಿವಸೇನೆ, ಎಂಇಎಸ್ ಪುಂಡಾಟ ಮತ್ತೆ ನಡೆದಿದೆ. ಗೋಕಾಕ್ ಚೆಕ್ ಪೋಸ್ಟ್​ನಲ್ಲಿ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ‌. ಮಹಾರಾಷ್ಟ್ರ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಜೆಡಿಎಸ್‍ ಶಾಸಕ ಡಾ.ಕೆ. ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ರಾಪ ಮಾಡಿದ ಅವರು, ಡಿ.31ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ರೀತಿ ಕುಮ್ಮಕ್ಕು ಕೊಡ್ತಿದೆ. …

Read More »

ಬಿಜೆಪಿಯವರು ಮಂಚ ನೋಡಿ‌ ಕೆಲಸ ಮಾಡ್ತಾರೆ. ಜನ ಇದ್ದರೆ ಅವರು ಯಾವುದನ್ನೂ ಮಂಡಿಸಲ್ಲ. ಮಂಚ ಖಾಲಿ ಇದ್ದರೆ ಮಾತ್ರ ಮಂಡಿಸ್ತಾರೆ ಎಂದ ಸಿಎಂ ಇಬ್ರಾಹಿಂ

ಬೆಳಗಾವಿ : ಬಿಜೆಪಿಯವರು ಮಂಚ ನೋಡಿ ಕೆಲಸ ಮಾಡುವವರು. ಮೇಲ್ಮನೆಯಲ್ಲಿ ಜನರಿದ್ದರೆ ಮಾತ್ರ ಅವರು ಮಸೂದೆ ಮಂಡಿಸುತ್ತಾರೆ ಎಂದು ಸಿ ಎಂ ಇಬ್ರಾಹಿಂ ಕಿಡಿ ಕಾರಿದರು. ಮೇಲ್ಮನೆಯಲ್ಲಿ ಸಂಖ್ಯೆ ಕಡಿಮೆ ಇರುವುದರಿಂದ ಬಿಲ್ ಮಂಡಿಸದೇ ಇರುವ ಸಾಧ್ಯತೆ ವಿಚಾರವಾಗಿ ಸುವರ್ಣಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಂಚ ನೋಡಿ‌ ಕೆಲಸ ಮಾಡ್ತಾರೆ. ಜನ ಇದ್ದರೆ ಅವರು ಯಾವುದನ್ನೂ ಮಂಡಿಸಲ್ಲ. ಮಂಚ ಖಾಲಿ ಇದ್ದರೆ ಮಾತ್ರ ಮಂಡಿಸ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು. ಟೆಂಡರ್‌ನಲ್ಲಿ ಶೇ.40ರಷ್ಟು …

Read More »

ಉ.ಕ. ಭಾಗಕ್ಕೆ ಅಭಿವೃದ್ಧಿಯಲ್ಲೂ ತಾರತಮ್ಯ, ಸಚಿವ ಸ್ಥಾನಕ್ಕೂ ತಾರತಮ್ಯನಾ?: ಬಿಜೆಪಿ ಶಾಸಕ ನಡಹಳ್ಳಿ ಅಸಮಾಧಾನ!

ಬೆಳಗಾವಿ : ಅಭಿವೃದ್ಧಿಯಲ್ಲಿ ತಾರತಮ್ಯವಾಗಿರುವ ರೀತಿಯಲ್ಲೇ ಉತ್ತರ ಕರ್ನಾಟಕದವರು ಎಂಬ ಕಾರಣಕ್ಕಾಗಿ ನಾವು ಸಚಿವರಾಗಿಲ್ಲ ಎಂದು ಬಿಜೆಪಿ‌ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು. ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಮೊದಲಿನಿಂದಲೂ ತಾರತಮ್ಯ ಇದೆ. ಅದೇ ರೀತಿ ಉತ್ತರ ಕರ್ನಾಟಕದವರು ಎಂಬ …

Read More »

ಬಾಲಕರನ್ನ ಬಳಸಿ ಬೈಕ್​ ಕಳ್ಳತನ ಮಾಡಿಸ್ತಿದ್ದ ಪೇದೆ ಅರೆಸ್ಟ್​​

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಜನರಿಗೆ ರಕ್ಷಣೆ ಒದಗಿಸಬೇಕಾದ ಹಾಗೂ ಸಾರ್ವಜನಿಕರ ಸ್ವತ್ತಿನ ಮೇಲೆ ಕಳ್ಳಕಾಕರ ಕಣ್ಣು ಬೀಳದಂತೆ ಕಾವಲು ಕಾಯಬೇಕಾದ ಪೊಲೀಸಪ್ಪನೇ ಕಳ್ಳತನಕ್ಕೆ ಸಾಥ್​ ನೀಡಿ ಪೊಲೀಸ್​ ಇಲಾಖೆ ತಲೆತಗ್ಗಿಸುವಂತೆ ಮಾಡಿದ್ದಾನೆ.   ಹೌದು, ಅಪ್ರಾಪ್ತರನ್ನು ಬಳಸಿಕೊಂಡು ಬೈಕ್​​ಗಳನ್ನು ಕಳ್ಳತನ ಮಾಡಿಸ್ತಿದ್ದ ಕಾನ್​ಸ್ಟೇಬಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ್ನು ಹೊನ್ನಪ್ಪ ಅಲಿಯಾಸ್​ ರವಿ ಎಂದು ಗುರುತಿಸಲಾಗಿದೆ. 2016ರ ಬ್ಯಾಚ್​ನ …

Read More »

ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

ಮೈಸೂರು: ಜೆಡಿಎಸ್​ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಲೇಡಿ ಸಬ್‌ ಇನ್ಸ್‌ಪೆಕ್ಟರ್​ ಹೆಸರು ತಳುಕು ಹಾಕಿಕೊಂಡಿದೆ. ನಿನ್ನೆ(ಡಿ.23) ರಾತ್ರಿ ಮರಟಿಕ್ಯಾತನಹಳ್ಳಿಯ ಅಪಾರ್ಟ್‌ಮೆಂಟ್​ನಲ್ಲಿ ಪ್ರದೀಪ್​ ನೇಣಿಗೆ ಶರಣಾಗಿದ್ದು, ಈ ಸಾವಿಗೆ ಲೇಡಿ ಸಬ್​ ಇನ್ಸ್‌ಪೆಕ್ಟರ್ ಜತೆಗಿನ ಪ್ರೇಮಪುರಾಣವೇ ಕಾರಣ ಎಂದು ಆಪ್ತ ವಲಯದಲ್ಲಿ ಗುಸುಗುಸು ಶುರುವಾಗಿದೆ.   ಪ್ರದೀಪ್​ ತಂದೆ ಬೆಳವಾಡಿ ಶಿವಮೂರ್ತಿ ಅವರು ಮೈಸೂರು ಜಿಲ್ಲಾ ಜೆಡಿಎಸ್​ನ ಖಜಾಂಚಿ. ಪ್ರದೀಪ್​ ತಾಯಿ …

Read More »

ರಾಜ್ಯದ ರೈತರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ಶುರುವಾಗಲಿದೆ ‘ಕಿಸಾನ್ ಕ್ರೆಡಿಟ್ ಕಾರ್ಡ್’ ವಿತರಣಾ ಅಭಿಯಾನ

ಹಾವೇರಿ: ರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರಿಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ನವಂಬರ್ 15 ರಿಂದ ಫೆಬ್ರುವರಿ 15ರವರೆಗೆ ಹೊಸ ಕಿಸಾನ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.   ಆಸಕ್ತ ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ನಮೂನೆ ಪಡೆದು ಆಧಾರ್, ಪಹಣಿ ಪತ್ರ, ಬ್ಯಾಂಕ್ ಖಾತೆ …

Read More »

ಐಟಿ ದಾಳಿ: ಉದ್ಯಮಿ ಮನೆಯಲ್ಲಿ 150 ಕೋಟಿ ರೂ. ಕ್ಯಾಷ್ ಪತ್ತೆ

ಕಾನ್ ಪುರದ ಉದ್ಯಮಿಯೊಬ್ಬರ ಮನೆಯಲ್ಲಿ 150 ಕೋಟಿ ರೂ. ಕ್ಯಾಷ್ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದ ನಗದು ಪತ್ತೆಯಾಗಿದೆ. ಎರಡು ವಾರ್ಡ್ ರೂಬ್ ತುಂಬ ಕಂತೆ ಕಂತೆ ನೋಟುಗಳನ್ನು ಜೋಡಿಸಿನ ಇಡಲಾಗಿತ್ತು. ಇದರ ಜೊತೆಗೆ ತಲೆದಿಂಬಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ನೋಟುಗಳನ್ನು ಸುತ್ತಿಡಲಾಗಿತ್ತು. ತೆರಿಗೆ ವಂಚನೆ ಆರೋಪದ ಮೇಲೆ ಜಿಎಸ್ ಟಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು. ಅಪಾರ ಪ್ರಮಾಣದ ನಗದು ಪತ್ತೆಯಾದ …

Read More »

ಕೃಷಿ ವಿಶ್ವವಿದ್ಯಾಲಯಗಳ ಖಾಲಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ

ಬೆಳಗಾವಿ, ಡಿ.24- ರಾಜ್ಯದಲ್ಲಿರು ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಯವರು ಅನುಮತಿ ನೀಡಿದ್ದು, ಶೀಘ್ರವೇ ನೇಮಕಾತಿ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‍ ಹೇಳಿದರು.   ವಿಧಾನ ಪರಿಷತ್‍ ನಲ್ಲಿ ಸದಸ್ಯ ಎಸ್‍.ವಿ.ಸಂಕನೂರು, ಅವರು ಪ್ರಶ್ನೆ ಕೇಳಿ ರಾಯಚೂರು ಹೊರತು ಪಡಿಸಿ, ಶಿವಮೊಗ್ಗ, ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.60ಕ್ಕಿಂತ ಹೆಚ್ಚಿನ ಬೋಧಕ ಹುದ್ದೆಗಳು ಖಾಲಿ ಇವೆ. ಬೋಧಕ ಹುದ್ದೆಗಳು ಖಾಲಿ ಇರುವುದರಿಂದ ಸಂಶೋಧನೆ ಹಾಗೂ …

Read More »

ಪರಿಷತ್ ನಲ್ಲಿ ಬಹುಮತವಿಲ್ಲ,ಮುಂದೆ ನೋಡೋಣ: ಸಿಎಂ ಬೊಮ್ಮಾಯಿ

ಬೆಳಗಾವಿ : ಇಂದು ಮತಾಂತರ ವಿರೋಧಿ ಕಾಯ್ದೆ ವಿಧಾನ ಸಭೆಯಲ್ಲಿ ಪಾಸಾಗಿದ್ದು, ನಮಗೆ ಗೊತ್ತಿದೆ ಇವತ್ತಿನ ಪರಿಸ್ಥಿತಿಯಲ್ಲಿ ಪರಿಷತ್ ನಲ್ಲಿ ಬಹುಮತವಿಲ್ಲ, ಮುಂದೆ ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗುರುವಾರ ಹೇಳಿಕೆ ನೀಡಿದ್ದಾರೆ.   ಇಡೀ‌ ದಿನ ಚರ್ಚೆಗೆ ಅವಕಾಶ ನೀಡಲಾಗಿತ್ತು. ಆದರೆ ವಿಪಕ್ಷದವರು ರಾಜಕೀಯ ಭಾಷಣ ಮಾಡಿದರು . ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ, ಕಾನೂನು ಸಂವಿಧಾನ ಬದ್ದವಾಗಿದೆ. ಸಿದ್ದರಾಮಯ್ಯ ಅವರೇ ಸಚಿವ ಸಂಪುಟಕ್ಕೆ ತರಲು ಒಪ್ಪಿದ್ದರು. ಆದರೆ …

Read More »

ಕೇಂದ್ರ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

  ಅಥಣಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು. ಅಥಣಿ ಪಟ್ಟಣದಲ್ಲಿ ಪುರಸಭೆ ಚುನಾವಣಾ ನಿಮಿತ್ತ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಡಿ. 27ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ, ಕಾಂಗ್ರೆಸ್ ಪಕ್ಷದ ಶಕ್ತಿ ಬಲಪಡಿಸಬೇಕು ಎಂದರು. ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಹೆಚ್ಚಿನ ಅಭ್ಯರ್ಥಿಗಳು …

Read More »