ಹಿಜಾಬ್ ಕುರಿತು ವಿಚಾರಣೆ ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠದ ಮುಂದೆ ವಿಚಾರಣೆ ನಡೆಸಿದ್ದು, ಮತ್ತೆ ನಾಳೆ ಮಧ್ಯಾಹ್ನ 2.30ಕ್ಕೆ ಅರ್ಜಿಯ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಈಗಾಗಲೇ ಅರ್ಜಿದಾರರ ಪರ ವಾದ ಮಂಡನೆಯ ಬಳಿಕ ಇಂದು ಮತ್ತೆ ಪುನಾರಂರಭಗೊಂಡ ಅರ್ಜಿಯ ವಿಚಾರಣೆ ವೇಳೆ, ನ್ಯಾಯಪೀಠದ ಮುಂದೆ ಸರ್ಕಾರದ ಪರ ಅಡ್ವಕೇಜ್ ಜನರಲ್ ವಾದ ಮಂಡನೆ ಮಾಡಿದರು. ಸರ್ಕಾರದ ವಾದ ಆಲಿಸಿದಂತ ನ್ಯಾಯಪೀಠವು, ನಾಳೆಗೆ ವಿಚಾರಣೆ ಮುಂದೂಡಿದೆ.
Read More »ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ
ಧಾರವಾಡ: ನಿನ್ನೆ ತಡರಾತ್ರಿ ಧಾರವಾಡ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದೆ. ಬೆಳಗ್ಗೆ ಸ್ಥಳ ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ ಆರ.ಎಸ್.ಉಪ್ಪಾರ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿನ್ನೆ ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನವಾಗಿದೆ. ಬೆಳಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿದ ಸ್ಥಳವನ್ನು ಪರಿಶೀಲಿಸಿದ್ದಾರೆ.
Read More »ಗೋಕಾಕ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಬಾಡಿಗೆ ನೀಡಿದ್ದ ಮಲಿಕಾನಿಂದ ಯುವತಿಗೆ ಆತ್ಯಚಾರ ವೆಸಗಿ ಮೋಸ..
ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಎಂದು ಯುವಕನ ವಿರುದ್ಧ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿಸಿದ್ದಾಳೆ. ಬೆಳಗಾವಿ ಜಿಲ್ಲೆ ಗೋಕಾಕ್‍ನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ವಸತಿ ನಿಲಯ ಬಾಡಿಗೆ ನೀಡಿದ್ದ ಕಟ್ಟಡ ಮಾಲೀಕನ ಪುತ್ರ ಆದರ್ಶ ಮಾಲದಿನ್ನಿ 2016ರ ಡಿಸೆಂಬರ್ 5ರಂದು ಅತ್ಯಾಚಾರವೆಸಗಿ, ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. …
Read More »ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ,
ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಪೊಳೀಸರ ಭದ್ರಕೋಟೆಯಾಗಿದೆ. ಹರ್ಷನ ಹತ್ಯೆ ಬೆನ್ನಲ್ಲೇ ಖಾಕಿ ಫುಲ್ ಅಲರ್ಟ್ ಆಗಿದೆ. ಶಿವಮೊಗ್ಗ ನಗರದಾದ್ಯಂತ ನಾಳೆ ಬೆಳಗ್ಗೆ 6 ಗಂಟೆವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆಗಾಗಿ ಶಾಲೆ-ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಂದ ನಾಳೆ ಮುಂಜಾನೆ 6 ಗಂಟೆಯವರೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ …
Read More »ಜಗದೀಶ್ ವಿರುದ್ಧ ಕೇಸ್: ಹೋರಾಟಕ್ಕೆ ಮುಂದಾದ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ
ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ವಿರುದ್ಧ ಫೇಸ್ ಬುಕ್ನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ್ದ, ವಕೀಲ ಜಗದೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿರುವುದನ್ನು ಖಂಡಿಸಿ ವಕೀಲರು ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ಕುರಿತಂತೆ ಪೂರ್ವಭಾವಿ ಸಭೆ ನಡೆಸಲು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಮುಂದಾಗಿದ್ದಾರೆ. ನಾಳೆ ಸಂಜೆ ಸಭೆ ನಡೆಸಲು ತೀರ್ಮಾನಿಸಿದ್ದು, ಸಮಾನ ಮನಸ್ಕ ವಕೀಲರು ಹಾಗೂ ವಕೀಲರ ಸಂಘಟನೆಗಳು ಸಭೆ …
Read More »ಮಾಲೀಕನ ಮಗಳನ್ನೇ ವರಿಸಿದ 2 ಮಕ್ಕಳ ತಂದೆ
ವಿಜಯಪುರ: ಎರಡು ಮಕ್ಕಳ ತಂದೆಯೋರ್ವ ಕೆಲಸ ಕೊಟ್ಟ ಮಾಲೀಕನ ಮಗಳನ್ನೇ ಎರಡನೇ ಮದುವೆಯಾಗಿ ಪೊಲೀಸರ ರಕ್ಷಣೆ ಕೋರಿದ ಪ್ರಕರಣವೊಂದು ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಜಾಲಗೇರಿ ಗ್ರಾಮದ ಸೋಮಲಿಂಗ ಎಂಬಾತ ಮಾಲೀಕನ ಮಗಳು ಅಕ್ಷತಾಳನ್ನು ಮದುವೆಯಾಗಿದ್ದಾನೆ. ವೃತ್ತಿಯಲ್ಲಿ ಚಾಲಕನಾಗಿರುವ ಸೋಮಲಿಂಗ, ಅಕ್ಷತಾಳ ಮನೆಯ ಕಾರು ಚಾಲಕನಾಗಿದ್ದ. ಮನೆಯವರು ಪ್ರತಿದಿನ ಅಕ್ಷತಾಳನ್ನು ಕಾಲೇಜಿಗೆ ಬಿಟ್ಟು ಬರುವಂತೆ ಸೋಮಲಿಂಗನಿಗೆ ಬೈಕ್ ಕೊಟ್ಟು ಕಲಿಸುತ್ತಿದ್ದರು. ಕಾಲೇಜಿಗೆ ಡ್ರಾಪ್ ಮಾಡುವ ಗ್ಯಾಪ್ ಅಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. …
Read More »85 ಹುಡುಗಿಯರನ್ನು ಒಂದೇ ಬಾರಿ ಫ್ಲರ್ಟ್
ಪ್ರೀತಿಯಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಇಬ್ಬರು ಹುಡುಗಿಯರನ್ನು ಪ್ರೀತಿಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಸ್ವಾಮಿ 85 ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದಾನೆ. ಈ ಸತ್ಯವನ್ನು ಆತನ ಗರ್ಲ್ ಫ್ರೆಂಡ್ ಹೊರಗಿಟ್ಟಿದ್ದಾಳೆ. ಆಕೆ ಹೆಸರು ಟೋರಿ. ಅಮೆರಿಕಾದ ಮಹಿಳೆ. ಟಿಕ್ ಟಾಕ್ ನಲ್ಲಿ ತನ್ನ ಬಾಯ್ ಫ್ರೆಂಡ್ ಹೇಗೆ ಮೋಸ ಮಾಡಲು ಮುಂದಾಗಿದ್ದ ಎಂಬುದನ್ನು ಹೇಳಿದ್ದಾಳೆ. ಮೊದಲು ಬಾಯ್ ಫ್ರೆಂಡ್ ಮೊಬೈಲ್ ನಲ್ಲಿ …
Read More »ನಿಲ್ಲದ ರಾಜಕೀಯ ಮೇಲಾಟ, ಕಲಾಪಕ್ಕೆ ಇಂದೇ ತೆರೆ; ಚರ್ಚೆ ಇಲ್ಲದೆ 4 ವಿಧೇಯಕಗಳಿಗೆ ಅನುಮೋದನೆ
ಬೆಂಗಳೂರು: ವಿಧಾನಮಂಡಲ ಅಧಿವೇಶನ ರಾಜಕೀಯ ಮೇಲಾಟದಲ್ಲಿ ಮಂಗಳವಾರವೇ ಕೊನೆಗೊಳ್ಳುವುದು ಖಚಿತವಾಗಿದೆ. ಪ್ರತಿಪಕ್ಷದ ಹಠ, ಆಡಳಿತ ಪಕ್ಷದ ಧಾವಂತ ಈ ಬೆಳವಣಿಗೆಗೆ ಪುಷ್ಟಿ ನೀಡಿದೆ. ಕಲಾಪ ಸುಸೂತ್ರವಾಗಿ ನಡೆಯದ ವಾತಾವರಣ ಸೋಮವಾರವೂ ಮರುಕಳಿಸಿತು. ಈ ನಡುವೆ, ಕಿಂಚಿತ್ತೂ ಚರ್ಚೆ ಇಲ್ಲದೆ ನಾಲ್ಕು ಮಹತ್ವದ ವಿಧೇಯಕಗಳ ಅನುಮೋದನೆ ಪ್ರಕ್ರಿಯೆಗೂ ವಿಧಾನಸಭೆ ಸಾಕ್ಷಿಯಾಯಿತು. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೇಲಾಟ ಮಂಗಳವಾರ ರಾಜಭವನ ತಲುಪಲಿದೆ. 5 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ …
Read More »ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್ : ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ,
ಶಿವಮೊಗ್ಗ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಫೆಬ್ರವರಿ 23 ರ ಮುಂಜಾನೆಯವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಶಿವಮೊಗ್ಗ ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರದ ಸೀಗೆಹಟ್ಟಿ ನಿವಾಸಿ ಹರ್ಷ (24) ನ ಮೇಲೆ ಮಾರಕಾಸ್ತ್ರಗಳಿಂದ ಹತ್ಯೆಗೈದು ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದರು. . ಹಲ್ಲೆ ನಡೆಯುತ್ತಿದ್ದಂತೆ ಎರಡು ಗುಂಪುಗಳ ನಡುವೆ ನಗರದಲ್ಲಿ ಕಲ್ಲು ತೂರಾಟ ನಡೆದಿದೆ. ಈ ವೇಳೆ …
Read More »ಬೆಳಗಾವಿಗೆ ಬರಲಿದೆ ಹಾರಾಡೋ ಕಾರ್..
ಬೆಳಗಾವಿ-ಶಾಸಕ ಅಭಯ ಪಾಟೀಲ ಪರಿಶ್ರಮದ ಫಲದಿಂದ ಬಜೆಟ್ ನಲ್ಲಿ ಬೆಳಗಾವಿಗೆ ಬಂಪರ್ ಸಿಗುವ ನಿರೀಕ್ಷೆ ಬೆಳಗಾವಿ: ಅಭಿವೃದ್ಧಿ ಕೆಲಸಗಳ ಮೂಲಕ ಮಿಸ್ಟರ್ ಡೆವಲೆಫ್ ಮೆಂಟ್ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ರಾಜ್ಯ ಬಜೆಟ್ ನಲ್ಲಿ ಕುಂದಾನಗರಿ ಜನತೆಗೆ ಬಂಪರ್ ಕೊಡುಗೆ ಕೊಡಿಸಲು ವೇದಿಕೆ ಸಿದ್ಧಗೊಳಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬೆಳಗಾವಿಗರಿಗೆ ವಿಶೇಷ ಕೊಡುಗೆ ಸಿಗುವ ನಿರೀಕ್ಷೆ …
Read More »