Breaking News

ಥಿಯೇಟರ್ ಗಳಿಗೆ ನೈಟ್ ಕರ್ಫ್ಯೂ ಬಿಸಿ; ಚಿತ್ರಮಂದಿರಗಳಲ್ಲಿ 4 ಶೋ ಮಾತ್ರ ಪ್ರದರ್ಶನ

ಬೆಂಗಳೂರು: ಹೆಚ್ಚುತ್ತಿರುವ ಒಮಿಕ್ರಾನ್ ಕಟ್ಟಿಹಾಕುವ ನಿಟ್ಟಿನಲ್ಲಿ ಇಂದಿನಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ನೈಟ್ ಕರ್ಫ್ಯೂ ಇಫೆಕ್ಟ್ ಥಿಯೇಟರ್ ಗಳಿಗೂ ತಟ್ಟಿದ್ದು, ಇಂದಿನಿಂದ ಚಿತ್ರಮಂದಿರಗಳಲ್ಲಿ 4 ಶೋ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆಯ ಶೋ ಲಾಸ್ಟ್ ಆಗಲಿದೆ. ನೈಟ್ ಕರ್ಫ್ಯೂ ಜಾರಿ ಇಂದಾಗಿ ನೈಟ್ ಶೋ ಸ್ಥಗಿತಗೊಂಡಿರುವುದರಿಂದ ಶೇ.30ರಷ್ಟು …

Read More »

ಎಚ್ಚರಿಕೆ ‌ನೀಡಿದ ಅರುಣ್ ಸಿಂಗ್; ಓಡಿದ ರೇಣುಕಾಚಾರ್ಯ

ಹುಬ್ಬಳ್ಳಿ: ಶಾಸಕ ರೇಣುಕಾಚಾರ್ಯ ಇಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಕ್ಷ್ಮವಾಗಿ ಎಚ್ಚರಿಕೆ ‌ನೀಡಿದರು. ಕ್ಯಾ ಚಲ್ ರಹಾ ಹೈ.. ರೇಣುಕಾಚಾರಿ ಎಂದು ಅರುಣ್ ಸಿಂಗ್ ಎನ್ನುತ್ತಿದ್ದಂತೆ ರೇಣುಕಾಚಾರ್ಯ ಮಾತನಾಡುವುದನ್ನು ಬಿಟ್ಟು ಅವರ ಹಿಂದೆ ಓಡಿ‌ಹೋದರು. ಅವರು ಹೋದ ಬಳಿಕ‌ ಮತ್ತೆ ‌ಮಾಧ್ಯಮದವರ ಜೊತೆ ಮಾತನಾಡಿದರು.

Read More »

ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂದ್ರೆ ಈ ತಪ್ಪುಗಳನ್ನು ಮಾಡಬೇಡಿ

ನಾವು ಏನನ್ನಾದರೂ ಮಾಡಲು ಸಾಧ್ಯವಿಲ್ಲ ಅಥವಾ ಅದನ್ನು ಮಾಡದಿರಲು ನಾವು ಸಾಮಾನ್ಯವಾಗಿ ಕಾರಣಗಳನ್ನು ನೀಡುವುದು ಸರಿಯಲ್ಲ.     ಬರೀ ನೆಪಗಳನ್ನು ನೀಡಿ ಕೆಲಸದಿಂದ ತಪ್ಪಿಸಿಕೊಳ್ಳಬೇಡಿ. ಅದೇ ರೀತಿ ಅನೇಕರು ಯಾವುದೋ ಒಂದು ವಿಷಯದಿಂದ ತಪ್ಪಿಸಿಕೊಳ್ಳಬೇಕಾದರೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದು ನಿಮ್ಮನ್ನ ಹಿಂದಕ್ಕೆಳೆಯಲು ಕಾರಣವಾಗುತ್ತದೆ.   ಬಹುತೇಕ ಎಲ್ಲರೂ ಕೆಲವು ವಿಚಾರಗಳ ಕಾರಣ ಬ್ಯೂಸಿಯಾಗಿದ್ದಾರೆ. ಒತ್ತಡ ಸಾಮಾನ್ಯ. ಇದನ್ನ ಹೆಚ್ಚು ಯೋಚಿಸುತ್ತಾ ಕುಳಿತಿರಬಾರದು. ಜೀವನದಲ್ಲಿ ಮುನ್ನಡೆಯುವಲ್ಲಿ …

Read More »

ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಲ್ಲಿ ಗೆಲುವು? ಇಲ್ಲಿದೆ ಮಾಹಿತಿ

ಬೆಂಗಳೂರು : ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆ ಹಾಗೂ 57 ಗ್ರಾಮಪಂಚಾಯಿತಿಗಳ ಚುನಾವಣೆಯ ಫಲಿತಾಂಶ (Karnataka ULB Election Results) ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಶುರುವಾಗಿದೆ. ಕೊಲ್ಹಾರ ಪಟ್ಟಣ ಪಂಚಾಯತಿ ವಾರ್ಡ್ ನಂಬರ್ 10 ರಲ್ಲಿ ಹಾಗೂ ವಾರ್ಡ್ ನಂಬರ್ 1 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.   ಯಾದಗಿರಿ ಕಕ್ಕೇರಾ ಪುರಸಭೆ ನಾಲ್ಕು ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೊಪ್ಪಳ …

Read More »

ಆರೋಗ್ಯ ವಿಮೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಲಿಸಿದಾರರಿಗೆ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಭರಿಸಲು ವಿಮೆ ಕಂಪನಿಗಳು ಮೆಡಿಕ್ಲೇಮ್ ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಅನಿರೀಕ್ಷಿತವಾಗಿ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಪರಿಹಾರದ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವ ಅಂಶ ಸರಿಯಲ್ಲ. ಆರೋಗ್ಯ ವಿಮೆ ನಿರಾಕರಣೆ ಸಲ್ಲದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರೋಗ್ಯ ಅನಿರೀಕ್ಷಿತವಾಗಿ ಬರಬಹುದು. ಅನಿರೀಕ್ಷಿತ ಆರೋಗ್ಯಕ್ಕೆ ವಿಮೆ ಕ್ಲೇಮ್ ನಿರಾಕರಣೆ ಕುರಿತಂತೆ ಒಪ್ಪಂದದಲ್ಲಿ ಸ್ಪಷ್ಟನೆ ಇಲ್ಲದಿದ್ದರೆ, ಅದನ್ನು ತಿರಸ್ಕರಿಸುವಂತಿಲ್ಲ …

Read More »

ತೀವ್ರ ಕುತೂಹಲ ಮೂಡಿಸಿದ ಮತ ಎಣಿಕೆ; 58 ನಗರ ಸ್ಥಳೀಯ ಸಂಸ್ಥೆ, 57 ಗ್ರಾಪಂ ಫಲಿತಾಂಶ ಪ್ರಕಟ

 ರಾಜ್ಯದ 5 ನಗರಸಭೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಮತ್ತು 57 ಗ್ರಾಮಪಂಚಾಯಿತಿಗಳ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಆಯಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ತುಮಕೂರು, ಚಿಕ್ಕಮಗಳೂರು, ಶಿರಾ, ಗದಗ-ಬೆಟಗೇರಿ, ಹೆಬ್ಬಗೋಡಿ, ಹೊಸಪೇಟೆ ನಗರಸಭೆ ಹಾಗೂ 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳಿಗೆ ನಡೆದ ಮತದಾನದ ಮತ ಎಣಿಕೆ ಕಾರ್ಯ ನಡೆಯಲಿದೆ. ಇದರೊಂದಿಗೆ 1185 …

Read More »

ಠಾಣೆಗೆ ನುಗ್ಗಿ ಡಿವೈಎಸ್‌ಪಿ ಮೇಲೆ ಹಲ್ಲೆ

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಕೇಂದ್ರದಲ್ಲಿನ ಠಾಣೆಗೆ ಭೇಟಿ ನೀಡಿದ ವೇಳೆ ಡಿವೈಎಸ್‌ಪಿ ಮುರಳೀಧರ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದ್ದುಇದರ ವಿಡಿಯೋ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಮಟ್ಟನವಿಲೆ ಗ್ರಾಮದಕೃಷ್ಣೇಗೌಡರ ಪುತ್ರ, ಎಐಟಿಯುಸಿ ಮುಖಂಡ ಕುಮಾರ್‌ ಹಾಗೂ ಇತರರಿಂದ ಡಿವೈಎಸ್‌ಪಿ ಮೇಲೆ ಹಲ್ಲೆ ಮಾಡಲಾಗಿದ್ದು ಕುಮಾರ್‌, ಸೇರಿದಂತೆಮೂವರು ಪುರುಷರು, ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.   ಘಟನೆ ವಿವರ: ಹಿರೀಸಾವೆ ಠಾಣೆ ಮುಂದೆ ಕುಮಾರ್‌, ಇತರರು ಧರಣಿ …

Read More »

ಮತಾಂತರ ಆರೋಪ: ಶಾಲೆ ಮಾನ್ಯತೆ ರದ್ದತಿಗೆ ಒತ್ತಾಯ

ಇಳಕಲ್ (ಬಾಗಲಕೋಟೆ ಜಿಲ್ಲೆ): ‘ಪಟ್ಟಣದ ಸೇಂಟ್ ಪಾಲ್‌ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದ್ದು, ಕೂಡಲೇ ಶಾಲೆಯ ಮಾನ್ಯತೆ ರದ್ದುಪಡಿಸಿ, ಮತಾಂತರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಲ್ಲಿಯ ಬಿಜೆಪಿ ಹಾಗೂ ಆರ್‌ಎಸ್‍ಎಸ್‌ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು.   ‘ಡಿ.25ರಂದು ಇಲ್ಲಿನ ಸೇಂಟ್ ಪಾಲ್‍ ಕಾನ್ವೆಂಟ್ ಶಾಲೆಯಲ್ಲಿ ಕ್ರಿಸ್‍ಮಸ್‍ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೇರಿಸಿ, …

Read More »

ಸಂತ್ರಸ್ತ ಕೊರಗ ಕುಟುಂಬದ ಮದುವೆಯಲ್ಲಿ ಸಚಿವ ಕೋಟ ಭಾಗಿ

ಉಡುಪಿ, ಡಿ.29: ಜಿಲ್ಲೆಯ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕೊರಗರ ಕೇರಿಯ ಕುಟುಂಬವೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿವಾದಗಳು ನಡೆದು, ದೌರ್ಜನ್ಯವೆಸಗಿದ ಪೊಲೀಸ್ ಠಾಣೆಯ ಪಿಎಸ್‌ಐ ಅಮಾನತು ಸೇರಿದಂತೆ 5ಕ್ಕೂ ಹೆಚ್ಚು ಪೊಲೀಸರ ವರ್ಗಾವಣೆ ಮಾಡಿದ್ದು, ಮೇಲಾಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ …

Read More »

ಕನ್ನಡಪರ ಸಂಘಗಳ ಒಕ್ಕೂಟದಲ್ಲೇ ಅಪಸ್ವರ; ಬಂದ್​ನಿಂದ ಹಿಂದೆ ಸರಿದ ಹಲವು ಬಣ

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಕನ್ನಡಪರ ಸಂಘಟನೆಗಳಿಂದಲೇ ಅಪಸ್ವರ ವ್ಯಕ್ತವಾಗಿದ್ದು, ಬಂದ್ ರ್ಯಾಲಿಗೆ ಸೀಮಿತವಾಗುವ ಲಕ್ಷಣಗಳು ಗೋಚರಿಸಿವೆ. ಕರ್ನಾಟಕ ರಕ್ಷಣ ವೇದಿಕೆಯ ಟಿ.ಎ.ನಾರಾಯಣಗೌಡ, ಜಯ ಕರ್ನಾಟಕ ಅಧ್ಯಕ್ಷ ಜಗದೀಶ್, ಹೋಟೆಲ್ ಉದ್ಯಮ, ಕ್ಯಾಬ್ ಚಾಲಕರು ಸೇರಿ ಹಲವು ಸಂಘ-ಸಂಸ್ಥೆಗಳು ಕರ್ನಾಟಕ ಬಂದ್​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ …

Read More »