Breaking News

ಬೆಳಗಾವಿ ಆರೆಸ್ಸೆಸ್ ಕಚೇರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ

ಬೆಳಗಾವಿ: ಪ್ರಮೋದ್ ಸಾವಂತ್ ಅವರು ಗೋವಾ ಮುಖ್ಯಮಂತ್ರಿ ಆಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾರ ಬೆಳಗಾವಿಗೆ ಭೇಟಿ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಬಂದು ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು. ಇಲ್ಲಿಯ ಶಾಸ್ತ್ರಿ ನಗರದ ಆರೆಸ್ಸೆಸ್ ಕಚೇರಿಗೆ ಬಂದು ಕೆಲ ಹೊತ್ತು ಉಳಿದುಕೊಂಡು ಆರೆಸ್ಸೆಸ್ ನ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಮೋದ ಸಾವಂತ್ ಬೆಳಗಾವಿಗೆ ಆಗಮಿಸಿದ್ದರು.‌ ಮಾಧ್ಯಮದವರೊಂದಿಗೆ ಮಾತನಾಡಿದ ಗೋವಾ …

Read More »

ಗೋವಾ: ಪೋರ್ಚುಗೀಸರಿಂದ ಭಗ್ನಗೊಂಡಿದ್ದ ದೇವಾಲಯಗಳ ಪುನರ್ ನಿರ್ಮಾಣ

ಪಣಜಿ: ಗೋವಾದಲ್ಲಿ ಪೋರ್ಚುಗೀಸರ ಕಾಲದಲ್ಲಿ ಭಗ್ನಗೊಂಡಿರುವ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವನ್ನು ಪುರಾತತ್ವ ಇಲಾಖೆಯ ಮೂಲಕ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ. ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೇವಸ್ಥಾನಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ 20 ಕೋಟಿ ರೂ ಮೀಸಲಿರಿಸಿದೆ. ಗೋವಾದಲ್ಲಿ ಹಲವೆಡೆ ದೇವಾಲಯಗಳು ಶಿಥಿಲಗೊಂಡ ಮತ್ತು ನಿರ್ಲಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿವೆ. ಪೋರ್ಚುಗೀಸರ ಆಳ್ವಿಕೆಯಲ್ಲಿ ಈ ಧಾರ್ಮಿಕ ಕೇಂದ್ರಗಳನ್ನು ನಾಶಪಡಿಸುವ ಪ್ರಯತ್ನ ನಡೆದಿದ್ದವು ಎಂದರು.

Read More »

75 ವರ್ಷದ ಬಳಿಕ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದ ಹಳ್ಳಿ!

ಹೊಸದಿಲ್ಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಕಳೆದರೂ ಜಮ್ಮು ಕಾಶ್ಮೀರದ ಹಳ್ಳಿಯೊಂದರಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಇದೀಗ ಈ ಹಳ್ಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಜಮ್ಮು ಕಾಶ್ಮೀರದ ಉಧಂಪುರದ ಸಡ್ಡಲ್ ಎಂಬ ಹಳ್ಳಿಗೆ ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ‘ಯುನೈಟೆಡ್ ಗ್ರಾಂಟ್ಸ್ ಸ್ಕೀಮ್’ ಅಡಿಯಲ್ಲಿ ಸಡ್ಡಲ್ ಹಳ್ಳಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಂಡಿದೆ. ಮೇಣದ ಬತ್ತಿ ಮತ್ತು ಎಣ್ಣೆ ಬುಡ್ಡಿಗಳೇ ಇದುವರೆಗೆ …

Read More »

ಅಲ್ ಖೈದಾ ವಿಡಿಯೋ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಯಾಗುತ್ತಾರೆ? : ಸಿಎಂ

ಮೈಸೂರು: ”ಸಂಪುಟದ ಕುರಿತಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸ್ಥೂಲವಾಗಿ ಚರ್ಚೆ ಆಗಿದ್ದು, ಅವರು ಇನ್ನಷ್ಟು ವಿವರ ಪಡೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಅವರು ತೀರ್ಮಾನ ಮಾಡಿದ ನಂತರ ವಿಸ್ತರಣೆ ಇಲ್ಲ ಪುನಾರಚನೆ ಎನ್ನುವ ಕುರಿತು ತೀರ್ಮಾನ ಆಗುತ್ತದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.   ಮೈಸೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ,’ಹಲವಾರು ಇಲಾಖೆಗಳ ವಿಚಾರಗಳ ಕುರಿತು ಚರ್ಚೆ ಮಾಡಲು ದೆಹಲಿಗೆ ತೆರಳಿದ್ದೆ, ಇಂಧನ, ರಕ್ಷಣೆ, …

Read More »

ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಲಾಯಿತು.

ಬೆಳಗಾವಿ ಕುವೆಂಪು ನಗರದ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಲಾಯಿತು. ಇದೇ ವೇಳೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಸಬಾಗದಿಂದ ಕುಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಲ್ಲಿನ ಸಾರ್ವಜನಿಕರ ಮನವಿ ಮೇರೆಗೆ 1 ಲಕ್ಷ …

Read More »

ಭಾರತ ನಮ್ಮ ‘ದೊಡ್ಡಣ್ಣ’ -ಪ್ರಧಾನಿ ಮೋದಿ ಸಹಾಯ ನೆನೆದ ಜಯಸೂರ್ಯ

ಭಾರತ ನಮ್ಮ ‘ದೊಡ್ಡಣ್ಣ’ -ಪ್ರಧಾನಿ ಮೋದಿ ಸಹಾಯ ನೆನೆದ ಜಯಸೂರ್ಯ ಶ್ರೀಲಂಕಾಗೆ ಭಾರತ ‘ಬಿಗ್ ಬ್ರದರ್’ ಎಂದು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಬಣ್ಣಿಸಿದ್ದಾರೆ. ಸ್ವಾತಂತ್ರ್ಯ ಬಳಿಕ ಭೀಕರವಾಗಿ ಆರ್ಥಿಕ ದಿವಾಳಿತನವನ್ನ ಎದುರಿಸುತ್ತಿರುವ ಲಂಕಾಗೆ, ಭಾರತ ಮಾಡಿರುವ ಸಹಾಯವನ್ನ ನೆನೆದು ಜಯಸೂರ್ಯ ಭಾರತ ನಮ್ಮ ದೊಡ್ಡಣ್ಣ ಎಂದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಮಾಡಿರುವ ಸಹಾಯವನ್ನ ಈ ಸಂದರ್ಭದಲ್ಲಿ ಸ್ಮರಿಸಿರುವ ಅವರು, ಭಾರತ ನಮ್ಮ ನೆರೆಯ ರಾಷ್ಟ್ರ.. ನಮ್ಮ ದೊಡ್ಡಣ್ಣ.. …

Read More »

ಹಣಕ್ಕಾಗಿ ವೀರ್ಯಾಣು ದಾನ ಮಾಡುತ್ತಿದ್ದ ಪತಿ, ವಿಷಯ ತಿಳಿದ ಪತ್ನಿಯ ರಿಯಾಕ್ಷನ್‌ ಹೇಗಿತ್ತು ಗೊತ್ತಾ…?

ಹೆಂಡತಿಗೆ ಹೇಳದೆ ರಹಸ್ಯವಾಗಿ ವೀರ್ಯಾಣು ದಾನ ಮಾಡುವ ವಿಕ್ಕಿ ಡೋನರ್ ಸಿನೆಮಾ ನೆನಪಿದೆಯಾ ? ಇಂಥದ್ದೇ ನೈಜ ಘಟನೆಯೊಂದು ನಡೆದಿದೆ. ಪತ್ನಿಗೆ ತಿಳಿಸದೇ ವೀರ್ಯಾಣು ದಾನ ಮಾಡಿದ ವ್ಯಕ್ತಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾನೆ. ಈ ಬಗ್ಗೆ ಖುದ್ದು ಆ ವ್ಯಕ್ತಿಯೇ ರೆಡಿಟ್‌ ನಲ್ಲಿ ಬರೆದುಕೊಂಡಿದ್ದಾನೆ. ಹೆಚ್ಚುವರಿ ಹಣ ಗಳಿಸಲು ಆತ ಈ ಮಾರ್ಗವನ್ನು ಆಯ್ದುಕೊಂಡಿದ್ದ. ಪತಿ ವೀರ್ಯ ದಾನ ಮಾಡ್ತಿರೋ ವಿಷಯ ತಿಳಿದ ಪತ್ನಿ ಆಘಾತಗೊಂಡಿದ್ದಳು. ಆತ ತನಗೆ ಮೋಸ …

Read More »

ಸಣ್ಣ, ಅತಿ ಸಣ್ಣ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: ಭೂಕಂದಾಯ ಕಾಯ್ದೆಯಲ್ಲಿನ ಲೋಪದಿಂದಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಮುಂದಾಗಿದೆ. ಭೂಗಳ್ಳರು ಮತ್ತು ಸಣ್ಣ ಕೃಷಿಕರಿಗೆ ಸಮಾನ ಶಿಕ್ಷೆಯನ್ನು ನಿವಾರಣೆ ಮಾಡಿ ಭೂ ಒತ್ತುವರಿ ಮತ್ತು ಭೂಕಬಳಿಕೆ ಪ್ರತ್ಯೇಕಗೊಳಿಸಿ ರೈತರ ರಕ್ಷಣೆಗಾಗಿ ಕಾನೂನಿಗೆ ತಿದ್ದುಪಡಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.   ಸಾಗುವಳಿದಾರರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಒತ್ತುವರಿ ಮತ್ತು ಭೂಕಬಳಿಕೆ ಪ್ರತ್ಯೇಕ ಮಾಡಲಾಗುವುದು. ಜೀವನ ನಡೆಸಲು ಒತ್ತುವರಿ ಮಾಡಿಕೊಂಡಿರುವ …

Read More »

ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬಾಗಲಕೋಟೆ: ಬಾದಾಮಿ ಮತ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಗರು ಕೆಲಸ ಮಾಡದಿದ್ರೆ ನಾನೇ ಬಂದು ಕೆಲಸ ಮಾಡಿ ಕೊಡುತ್ತೇನೆ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದ್ದು, ನಾನೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇನೆಂದು ಪರೋಕ್ಷವಾಗಿ ಹೇಳಿದರು. ಆಲೂರ ಎಸ್.ಕೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ …

Read More »

ವಿಕ್ರಾಂತ್ ಹಡಗು ಹಗರಣ: ಬಿಜೆಪಿ ನಾಯಕ ಮತ್ತು ಅವರ ಮಗನ ವಿರುದ್ಧ ಮಾಜಿ ಸೈನಿಕರಿಂದ ದೂರು

ಮುಂಬೈ(ಮಹಾರಾಷ್ಟ್ರ): ಐಎನ್‌ಎಸ್ ವಿಕ್ರಾಂತ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಮತ್ತು ಅವರ ಮಗ ನೀಲ್ ಸೇರಿದಂತೆ ಇತರರ ವಿರುದ್ಧ ಮಾಜಿ ಯೋಧರೊಬ್ಬರು ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಂಚನೆ ದೂರಿನ ಮೇರೆಗೆ ಸೋಮಯ್ಯ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ವಿಕ್ರಾಂತ್ ಹಡಗಿನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಆರೋಪಿಸಿದ್ದರು. ಮಾಜಿ ಸೈನಿಕ ಬಾಬನ್ …

Read More »