Breaking News

ಅವಧಿಗೆ ಮೊದಲೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ?

ದ ರಾಜಕೀಯ ಪಕ್ಷಗಳು 2023ರ ವಿಧಾನಸಭೆ ಚುನಾವಣೆ ಸಿದ್ಧತೆ ಆರಂಭಿಸಿವೆ. ಅವಧಿಗೆ ಮೊದಲೇ ರಾಜ್ಯದಲ್ಲಿ ಚುನಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆ ಈಗ ಎದ್ದಿದೆ. ಸ್ವತಃ ಬಿಜೆಪಿಯೇ ಅವಧಿ ಪೂರ್ವ ಚುನಾವಣೆ ನಡೆಸುವ ಉತ್ಸಾಹದಲ್ಲಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಂಖಡ, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆ ಸದ್ಯ ನಡೆಯುತ್ತಿದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. …

Read More »

ಚನ್ನಮ್ಮಾಜಿಯಂತೆ ಕೆಳದಿ ರಾಣಿ ಚೆನ್ನಮ್ಮನವರ ಹೋರಾಟ, ಕ್ಷಮಾಗುಣ ಆದರ್ಶನೀಯ: ಬೊಮ್ಮಾಯಿ

ಕಿತ್ತೂರು ರಾಣಿ ಚೆನ್ನಮ್ಮನಂತೆ ಕೆಳದಿ ರಾಣಿ ಚೆನ್ನಮ್ಮನವರ ಹೋರಾಟ, ಕ್ಷಮಾಗುಣಗಳು ಆದರ್ಶನೀಯವಾಗಿದ್ದು, ಈ ಕುರಿತು ಪಠ್ಯದಲ್ಲಿ ಅಳವಡಿಸುವ ಚಿಂತನೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಬೆಂಗಳೂರಿನ ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೆನ್ನಮ್ಮನವರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ಮೂರು ಬಾರಿ ಮೊಘಲರು ಆಕ್ರಮಣ …

Read More »

ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು

ಬೆಳಗಾವಿ ತಾಲೂಕಿನ ಬೆಳಗುಂದಿಗ್ರಾಮದಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಕುತ್ತಿಗೆಯನ್ನು ಕತ್ತರಿಸಿ ಪರಾರಿಯಾದ ಕೊಲೆಪಾತಕಿಗಳು ಗಜಾನನ ನಾಯಿಕ್ ಕೊಲೆಯಾದ ದುರ್ದೈವಿ. ಸುಮಾರು ಅನೇಕ ವರ್ಷಗಳಿಂದ ಗಜಾನನ ನಾಯಕ್ ಹಾಗೂ ಅವರ ಪತ್ನಿ ಬೇರೆಯಾಗಿಯೇ ವಾಸಮಾಡುತ್ತಿದ್ದರು. ಗಜಾನನ ತಮ್ಮ ಮಗನೊಂದಿಗೆ ವಾಸ ಮಾಡುತ್ತಿದ್ದರು. ನಿನ್ನೆ ಮಗ ಉಜಗಾಂವ್‍ಗೆ ಹೋದ ಸಂದರ್ಭದಲ್ಲಿ ಇಂದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ತಂದೆ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಡಿಸಿಪಿ ರವಿಂದ್ರ ಗಡಾದಿ, ಎಸಿಪಿ …

Read More »

ಪ್ರಭಾಸ್​ ಜತೆ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿದ ಶಿವಣ್ಣ;

ಇನ್ನೇನು ಕೆಲವೇ ದಿನಗಳಲ್ಲಿ ‘ರಾಧೆ ಶ್ಯಾಮ್​’ (Radhe Shyam Movie) ಸಿನಿಮಾ ಬಿಡುಗಡೆ ಆಗಲಿದೆ. ಬಹುಭಾಷಾ ನಟಿ ಪೂಜಾ ಹೆಗ್ಡೆ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಹೊಸ ಸುದ್ದಿ ಈಗ ಹೊರಬಿದ್ದಿದೆ. ಮೂಲ ತೆಲುಗಿನ ಈ ಚಿತ್ರತಂಡಕ್ಕೆ ಈಗ ಶಿವರಾಜ್​ಕುಮಾರ್​ (Shivarajkumar) ಕೂಡ ಜೊತೆಯಾಗಿದ್ದಾರೆ. ಇದು ಗಾಸಿಪ್​ ಅಲ್ಲವೇ ಅಲ್ಲ. ‘ರಾಧೆ ಶ್ಯಾಮ್​’ ಸಿನಿಮಾದ ನಿರ್ಮಾಪಕರು ಸ್ವತಃ …

Read More »

ಕುಡಿದ ಮತ್ತಿನಲ್ಲಿ ಸೀರೆಯಿಂದ ಕುತ್ತಿಗೆ ಬಿಗಿದು ಪತ್ನಿ ಹತ್ಯೆ, ಸೂಸೈಡ್ ನಾಟಕವಾಡಿ ಜೈಲು ಸೇರಿದ ಪತಿ

ಚಿಕ್ಕೋಡಿ: ಕಂಠ ಪೂರ್ತಿ ಕುಡಿದು ಬಂದ ಗಂಡನಿಂದಲೇ ಪತ್ನಿಯ ಕೊಲೆ(Murder) ಆಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿಯಲ್ಲಿ ನಡೆದಿದೆ. ಆತ ಎಂದಿನಂತೆ ಕಂಠ ಪೂರ್ತಿ ಎಣ್ಣೆ ಕುಡಿದು ಮನೆಗೆ ಬಂದಿದ್ದ ಕುಡಿದು ಬಂದು ತಾನಾಯ್ತು ತನ್ನ ನಶೆ ಗುಂಗಾಯ್ತು ಅಂತ ಸುಮ್ಮನೆ ಮಲಗಿದ್ರೆ ಆ ಸಂಸಾರದಲ್ಲಿ ಬೆಳಗ್ಗೆ ಎಲ್ಲವೂ ಸರಿಯಾಗಿಯೇ ಇರ್ತಿತ್ತು. ಆದ್ರೆ ನಶೆಮಾಡಿದ ತಪ್ಪಿಗೆ ಒಂದು ಜೀವವೇ ಬಲಿಯಾಗಿದೆ. ಪ್ರತಾಪ್ ಅಲಿಯಾಸ್ ಪ್ರದೀಪ್ ಕಾಂಬಳೆ ಹೆಂಡತಿಯನ್ನು ಕೊಂದ ಆರೋಪಿ. …

Read More »

ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ

ಇಂದು ಬೆಳಗ್ಗೆ 7ರಿಂದ 4ಗಂಟೆಯವರೆಗೆ ಮಣಿಪುರದ 38 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. 28 ವಿಧಾನ ಕ್ಷೇತ್ರಗಳಲ್ಲಿ ಕಣಿವೆ ಜಿಲ್ಲೆಗಳಾದ 29 ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಬಿಷ್ಣುಪುರವಾಗಿದ್ದರೆ, ಉಳಿದ 9 ಕ್ಷೇತ್ರಗಳು ಚರ್ಚಂಡ್‍ಪುರ, ಕಾಂಗ್‍ಪೋಕ್ಪಿ ಮತ್ತು ಫರ್ಜಾಲ್ ಪ್ರದೇಶದಲ್ಲಿದೆ. ಮಣಿಪುರದ ವಿಧಾನಸಭೆ ಚುನಾವಣೆಯೂ 2ಹಂತದಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ನಡೆಯುವ ಮತದಾನ ಸಂಜೆ 4ಗಂಟೆಗೆ ಕೊನೆಗೊಳ್ಳಲಿದೆ. ಮೊದಲ ಹಂತದಲ್ಲಿ 15 ಮಹಿಳೆಯರು ಸೇರಿದಂತೆ …

Read More »

ಗಲಭೆಯಿಂದ ಶಾಂತಗೊಂಡ ಬಳಿಕ ಶಿವಮೊಗ್ಗದಲ್ಲಿ ಇಂದಿನಿಂದ ಶಾಲಾ-ಕಾಲೇಜುಗಳು ಪುನಾರಂಭ

ಶಿವಮೊಗ್ಗ: ಗಲಭೆಯಿಂದ ಶಾಂತಗೊಂಡ ಬಳಿಕ ಶಿವಮೊಗ್ಗದಲ್ಲಿ ಇಂದಿನಿಂದ ಶಾಲಾ-ಕಾಲೇಜುಗಳು ಪುನಾರಂಭಗೊಳ್ಳಲಿದೆ. ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ನಿಷೇಧಾಜ್ಞೆ ಹೇರಿ ನಗರ ವ್ಯಾಪ್ತಿಯ ಸ್ಕೂಲ್-ಕಾಲೇಜು ಬಂದ್ ಮಾಡಲಾಗಿತ್ತು. ಆದರೆ ಇದೀಗ ಮಾರ್ಚ್ 4ರವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ. ಅದರಂತೆ ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಹಾಗೂ ಸಂಜೆ 7 ರಿಂದ ಬೆಳಗ್ಗೆ 6ರವರೆಗೆ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿ ಶಿವಮೊಗ್ಗ ಜಿಲ್ಲಾಧಿಕಾರಿ …

Read More »

ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ರಿಲೀಸ್‌

ಯುವರತ್ನ ಪುನೀತ್ ರಾಜ್‍ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್. ಈ ಸಿನಿಮಾ ನೋಡುವುದಕ್ಕೆ ಕನ್ನಡಿಗರಿಗೆ ಮಾತ್ರವಲ್ಲ, ದೇಶ-ವಿದೇಶಗಳಲ್ಲಿರುವ ಜನರಿಗೂ ಬಹಳ ಕುತೂಹಲವಿದೆ.‘ಜೇಮ್ಸ್’ ಅಬ್ಬರ ದೇಶ ವಿದೇಶದಲ್ಲಿ ಶುರುವಾಗಿದ್ದು, ಅಪ್ಪು ಕೊನೆಯ ಸಿನಿಮಾವನ್ನು ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಅಪ್ಪು ಹುಟ್ಟಿದ ದಿನ ಮಾರ್ಚ್ 17 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅಲ್ಲದೆ ಕನ್ನಡಿಗರಿಗೆ ಚಿತ್ರತಂಡ ಮತ್ತೊಂದು ಖುಷಿ ವಿಚಾರವನ್ನು ಕೊಟ್ಟಿದೆ. ಈ ಸಿನಿಮಾ ಜರ್ಮನಿ, ನೆದಲ್ರ್ಯಾಂಡ್ಸ್, ಆಸ್ಟ್ರೇಲಿಯಾ, …

Read More »

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ- ಇಂದು ಬಿಡದಿಯಿಂದ ಮತ್ತೆ ಆರಂಭ

ಬೆಂಗಳೂರು: ಮೇಕೆದಾಟು ಆಣೆಕಟ್ಟು ಯೋಜನೆ ಕಾಮಗಾರಿಗೆ ಒತ್ತಾಯಿಸಿ ನೀರಿಗಾಗಿ ನಡಿಗೆ ಹೆಸರಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಇಂದು 2ನೇ ದಿನ. ಇಂದು ಬೆಳಗ್ಗೆ ಬಿಡದಿಯಿಂದ ಪಾದಯಾತ್ರೆ ಶುರುವಾಗಲಿದೆ. ನಿನ್ನೆಯಷ್ಟೇ ಕನಕಪುರ ಸರ್ಕಲ್‍ನಲ್ಲಿ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಉಸ್ತುವಾರಿ ಸುರ್ಜೆವಾಲಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರ ಮುಖಂಡರು ಚಾಲನೆ ನೀಡಿದ್ರು. ನಟ ನೆನಪಿರಲಿ ಪ್ರೇಮ್, ಸಾಧುಕೋಕಿಲಾ ಕೂಡ ಪಾಲ್ಗೊಂಡಿದ್ರು.ರಾಮನಗರದಿಂದ ಹೊರಟ ಪಾದಯಾತ್ರೆ ಸದ್ಯ ಬಿಡದಿ ತಲುಪಿದೆ. ಮತ್ತೊಂದೆಡೆ ಬೆಂಗಳೂರಲ್ಲಿ …

Read More »

ಗೋಕಾಕ ಮುಪ್ಪಯ್ಯನ ಮಠದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ : ರಾಚೋಟಿ ಶ್ರೀಗಳಿಂದ ಚಾಲನೆ

ಗೋಕಾಕ : ನಗರದ ಸೋಮವಾರ ಪೇಟೆಯ ಅಂಗನವಾಡಿ ಕೇಂದ್ರ ಸಂಖ್ಯೆ 176 ಮತ್ತು 177 ರ ಮಕ್ಕಳಿಗೆ ರವಿವಾರದಂದು ಶ್ರೀ ಮುಪ್ಪಯ್ಯನವರ ಹಿರೇಮಠದಲ್ಲಿ ಪೂಜ್ಯ ಶ್ರೀ ರಾಚೋಟಿದೇವರು ಪೋಲಿಯೋ ಹನಿ ನೀಡುವ ಮೂಲಕ ಫಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಿರ್ಮಲಾ ಸುಭಂಜಿ, ಲಕ್ಷ್ಮೀ ದೇಶನೂರ, ಮುಖಂಡರಾದ ಮಲ್ಲಿಕಾರ್ಜುನ ಹೊಸಪೇಠ, ಧರೀಶ ಕಲಘಾಣ, ಬಸವರಾಜ ಶೇಗುಣಸಿ, ಸೋಮಶೇಖರ ಮಗದುಮ್ಮ, ಬಸವರಾಜ ದೇಶನೂರ, ಗಣೇಶ ಕರೋಶಿ, …

Read More »