ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಇಂದು (ಮಾರ್ಚ್ 1) ವಿಶೇಷ ದಿನ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ನ (James Movie) ಲಿರಿಕಲ್ ಸಾಂಗ್, ‘ಟ್ರೇಡ್ಮಾರ್ಕ್..’ (Trademark Song) ಬೆಳಗ್ಗೆ 11:11ಕ್ಕೆ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು. ಹೀಗಾಗಿ, ಅಭಿಮಾನಿಗಳು ಈ ಸಾಂಗ್ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇಟೀಸರ್ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ …
Read More »ಪುನೀತ್ ಹೆಸರಿನ ‘ವಿದ್ಯಾರ್ಥಿ ಉಪಗ್ರಹ ಉಡಾವಣೆ’ ಯೋಜನೆಗೆ ಅಶ್ವತ್ಥನಾರಾಯಣ ಚಾಲನೆ
ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಸುಮಾರು ₹ 1.90 ಕೋಟಿ ವೆಚ್ಚದ ‘ವಿದ್ಯಾರ್ಥಿ ಉಪಗ್ರಹ ಉಡಾವಣೆ’ ಯೋಜನೆಗೆ ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವಿದ್ಯಾರ್ಥಿ ಉಪಗ್ರಹಕ್ಕೆ ನಟ ಪುನೀತ್ ರಾಜಕುಮಾರ್ ಹೆಸರಿಡಲಾಗಿದೆ. ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಸಂದರ್ಭದಲ್ಲಿ ಸಚಿವರು ಈ ವಿನೂತನ ಪರಿಕಲ್ಪನೆಯ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ …
Read More »ಉಕ್ರೇನ್‍ನಲ್ಲಿಯೇ ಉಳಿದುಕೊಂಡಿರುವ ವಿದ್ಯಾರ್ಥಿಗಳ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ: ಕೋಟಾ ಶ್ರೀನಿವಾಸ್
ಮಡಿಕೇರಿ: ಉಕ್ರೇನ್‍ನಲ್ಲಿ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿದೆ. ಅಲ್ಲದೆ ನಮ್ಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಲೂ ಒಬ್ಬರು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.ಮಡಿಕೇರಿಯಲ್ಲಿ ಅಂತ್ಯೋದಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಕ್ರೇನ್‍ನಲ್ಲಿ ಸಿಲುಕಿರುವ ನಾಗರಿಕರ ಜೊತೆಗೆ ನಿನ್ನೆಯೇ ರಾಜ್ಯದ 12 ವಿದ್ಯಾರ್ಥಿಗಳನ್ನು ಕರೆತರಲಾಗಿದೆ. ಸಂಪರ್ಕದ ಕೊರತೆ ಮತ್ತು ಏನು ಆಗುವುದಿಲ್ಲ ಎಂಬ …
Read More »ಏಳು ಗಂಟೆಯಲ್ಲಿ 28 ಟನ್ ಕಬ್ಬು ಲೋಡ್ ಮಾಡಿದ ಯುವಕ!
ಚಿಕ್ಕೋಡಿ: ಯುವಕನೊಬ್ಬ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿದ್ದಾನೆ. ಈತನ ಸಾಧನೆ ಕಂಡು ಚಿಕ್ಕೋಡಿ ಜನರು ಹುಬ್ಬೇರಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬರಮಖೋಡಿ ಗ್ರಾಮದ ಅನಿಲ್ ಕಾಬು ಜಾಧವ್ ಸಾಧನೆ ಮಾಡಿದ ಯುವಕ. ಆತನೊಬ್ಬನೇ ಕೇವಲ 7 ಗಂಟೆಯಲ್ಲಿ 02 ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 28 ಟನ್ ಕಬ್ಬು ಹೇರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಹಿಂದೆ ಇದೇ ಬರಮಖೋಡಿ ಗ್ರಾಮದ …
Read More »ಅಮೆರಿಕ ಮಾದರಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ: ನಿತಿನ್ ಗಡ್ಕರಿ ಭರವಸೆ
ಬೆಳಗಾವಿ: ಭಾರತದ ರಸ್ತೆ ಜಾಲವನ್ನು 2024ರ ವೇಳೆಗೆ ಅಮೆರಿಕಕ್ಕೆ ಸರಿಸಮನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇನೆ. ಪ್ರತಿಯೊಂದು ಅಭಿವೃದ್ಧಿಯು ರಸ್ತೆ ಸಂಪರ್ಕವನ್ನು ಅವಲಂಬಿಸಿದೆ. ಆದ್ದರಿಂದ ರಸ್ತೆ ಸಂಪರ್ಕ ಜಾಲವನ್ನು ಸದೃಢಗೊಳಿಸಲು ಸರಕಾರ ಬದ್ಧವಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭಾರತ ಮಾಲಾ-2 ಯೋಜನೆಯಲ್ಲಿ ಈ ಭಾಗದ ಇನ್ನಷ್ಟು ಯೋಜನೆಗಳನ್ನು …
Read More »ತಂದೆ ಕೊಲೆಗೈದವನನ್ನು ಕಲ್ಲು ಎತ್ತಾಕಿ ಕೊಂದ ಮಗ!
ಚಿಕ್ಕೋಡಿ(ಬೆಳಗಾವಿ): ತಂದೆಯ ಕೊಲೆ ಮಾಡಿರುವ ವೈಷಮ್ಯದಿಂದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಮಗ ಸೇಡು ತೀರಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ. ವಿಠ್ಠಲ ಕಮತೆ(35) ಹಾಗೂ ಸುರೇಶ ಡಂಗೇರ್(30) ಕೊಲೆ ಮಾಡಿ ಪೊಲೀಸರ ಬಲೆಗೆ ಬಿದ್ದ ಆರೋಪಿಗಳು. ಶೌಕತ್ ನದಾಫ್(45) ಭೀಮಪ್ಪನ ಮಗ ವಿಠ್ಠಲನಿಂದ ಕೊಲೆಯಾದವನು. 10 ವರ್ಷದ ಹಿಂದೆ ಜೈಲಿನಲ್ಲಿದ್ದ ಬೆಂಡವಾಡ ಗ್ರಾಮದ ಭೀಮಪ್ಪ ಕಮತೆಯನ್ನು ಕೊಲೆ ಮಾಡಿರುವ …
Read More »ಡಿಕೆಶಿ, ಸಿದ್ದರಾಮಯ್ಯ ಸಿಎಂ ಆಗೋ ಕನಸಿನ ಲೋಕದಲ್ಲಿದ್ದಾರೆ: ಕೆ.ಎಸ್ ಈಶ್ವರಪ್ಪ
ರಾಯಚೂರು: ಹಿಜಬ್ ವಿವಾದದಿಂದ ಕಾಂಗ್ರೆಸ್‍ನವರು ಮುಸ್ಲಿಂ ಓಟು ಪಡೆಯುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಹಿಜಬ್ ಪರ ಮಾತನಾಡುತ್ತಾರೆ. ಅವರಲ್ಲೇ ಎರಡು ಗುಂಪು ಗಳಾಗಿವೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಆಗುವ ಕನಸಿನ ಲೋಕದಲ್ಲಿದ್ದಾರೆ ಅಂತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ರಾಯಚೂರಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯು.ಟಿ.ಖಾದರ್ ಮತ್ತು ಕೆಲವು ಶಾಸಕರು ಹಿಜಬ್ ವಿವಾದದ …
Read More »ಅಧಿವೇಶನವನ್ನು ಹಳ್ಳ ಹಿಡಿಸಿದ್ದಕ್ಕೂ ಈ ಎಲ್ಲಾ ಪ್ರತಿಗಾಮಿ ಘಟನೆಗಳಿಗೆ ಸಂಬಂಧ ಇದೆ
ಬೆಂಗಳೂರು : ಶಿವಮೊಗ್ಗ ಘಟನೆ ಮತ್ತು ಹಿಜಬ್ ಪ್ರಕರಣದ ವಿಚಾರಕ್ಕೆ ಕೂಡಲೇ ರಾಜ್ಯಪಾಲ ಮಧ್ಯೆ ಪ್ರವೇಶ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡುವಂತೆ ಒತ್ತಾಯ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು …
Read More »ಹಿಜಬ್ ದ್ವೇಷದಿಂದ ನಮಗೆ ಪರೀಕ್ಷೆ ಬರೆಯಲು ಆಗಿಲ್ಲ: ವಿದ್ಯಾರ್ಥಿನಿ
ಉಡುಪಿ: ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ಆದರೆ ಹಿಜಬ್ ಕುರಿತಾದ ದ್ವೇಷದಿಂದ ನಮಗೆ ಪರೀಕ್ಷೆ ಬರೆಯಲು ಆಗಲಿಲ್ಲ ಎಂದು ಉಡುಪಿಯ ಹಿಜಬ್ ಹೋರಾಟಗಾರ್ತಿ ಅಲ್ಮಾಸ್ ಆಕ್ರೋಶ ವ್ಯಕ್ತಪಡಿಸಿದಳು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು. ನಾವು ವಿಜ್ಞಾನದ ರೆಕಾರ್ಡ್ ಬುಕ್ ಪೂರ್ಣಗೊಳಿಸಿದ್ದೇನೆ. ಅಪಾರ ನಿರೀಕ್ಷೆಯೊಂದಿಗೆ ನಾವು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದೆವು. ನಮ್ಮ ಪ್ರಾಂಶುಪಾಲರು ನಮಗೆ ಪರೀಕ್ಷೆ ಬರೆಯುವ ಅವಕಾಶ …
Read More »ಪ್ರಮೋದ್ ಮುತಾಲಿಕ್, ಚೈತ್ರಾಗೆ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿ ಡಿಸಿ ಆದೇಶ
ಕಲಬುರಗಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ.27 ರಿಂದ ಮಾ.3ರ ವರೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ತಂದೆ ಹಣಮಂತರಾವ ಮುತಾಲಿಕ, ಕುಂದಾಪುರದ ಚೈತ್ರಾ ತಂ. ಬಾಲಕೃಷ್ಣ ನಾಯಕ್ ಅವರನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಸಿ.ಆರ್.ಪಿ.ಸಿ ಕಾಯ್ದೆ-1973ರ ಕಲಂ-132, 143, 144 ಹಾಗೂ 144ಎ ರನ್ವಯ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ …
Read More »