Breaking News

ಬೆಳಗಾವಿಯಲ್ಲಿ ನಂದಿನಿ ಫುಡ್‍ಪಾರ್ಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ : ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು, ಜ.15- ನಂದಿನಿ ಉತ್ಪನ್ನಗಳ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲು ಬೆಳಗಾವಿಯಲ್ಲಿ ನಂದಿನಿ ಮೆಗಾ ಫುಡ್ ಪಾರ್ಕ್ ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪನ್ನೀರ್ ಹಾಗೂ ಚೀಸ್ ಆಧಾರಿದ ಉತ್ಪನ್ನಗಳು ಮತ್ತು ಇತರೆ ನಂದಿನಿ ಸಿಹಿ ಉತ್ಪನ್ನಗಳನ್ನು ಈ ಘಟಕದ ಮೂಲಕ ಉತ್ಪಾದಿಸಿ ಮಾರುಕಟ್ಟೆ ಜಾಲವನ್ನು ವಿಸ್ತರಿಸಲಾಗುವುದು ಎಂದರು.ಕೆಎಂಎಫ್ 2020-21ನೆ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೆಗಾ …

Read More »

ಸಂಕ್ರಾಂತಿ ಹಿನ್ನೆಲೆ ನದಿಗೆ ಸ್ನಾನಕ್ಕೆಂದು ಹೋದ ಇಬ್ಬರು ನೀರುಪಾಲು

ರಾಯಚೂರು: ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ ಇಬ್ಬರು ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಶಕ್ತಿನಗರದ ಬಳಿಯ ಕೃಷ್ಣಾ ಸೇತುವೆ ಬಳಿ ಶನಿವಾರ ಈ ದುರ್ಘಟನೆ ಸಂಭವಿಸಿದೆ. ರಾಯಚೂರು ನಗರದ ಕೆಇಬಿ ಕಾಲೋನಿಯ ಗಣೇಶ್(40), ಉದಯಕುಮಾರ್ (38) ಮೃತ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಗಣೇಶ್​​ ಮೃತದೇಹ ಪತ್ತೆಯಾಗಿದ್ದು, ಉದಯಕುಮಾರ್ ಶವಕ್ಕಾಗಿ ನದಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದೆ.ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಶುಕ್ರವಾರದಂದು ನದಿಗೆ ಇಬ್ಬರು …

Read More »

ಸೇನಾ ದಿನಕ್ಕೆ ಅಭಿನಂದನೆ ಕೋರಿದ ಶ್ರೀ ಸಂತೋಷ್ ಜಾರಕಿಹೊಳಿ ಅವರು

ಸೇನಾ ದಿನಕ್ಕೆ ಅಭಿನಂದನೆ ಕೋರಿದ ಶ್ರೀ ಸಂತೋಷ್ ಜಾರಕಿಹೊಳಿ ಅವರು ಒಂದು ಕಡೆ ರೈತ ಹೇಗೆ ದೇಶದ ಬೆನ್ನೆಲುಬು ಇದಾರೋ ಹಾಗೆ ಸೈನಿಕ ನಮ್ಮ ಭಾರತದ ಹಿರಿಮೆ ಹೆಚ್ಚಿಸುವ ವ್ಯಕ್ತಿಗಳು ನಮ್ಮ ದೇಶದ ಗಡಿ ಭಾಗದಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದ ಅವರು ನಮ್ಮ ಜೀವನದ ರಿಯಲ್ ಹೀರೋಗಳು ಮಳೆ ,ಬಿಸಿಲು , ಚಳಿ ಏನೇ ಇದ್ರೂ ನಮ್ಮ ಗಡಿಯಲ್ಲಿ ನಿಂತು ನಮ್ಮ ದೇಶದ ಸೇವೆಯನ್ನು ಮಾಡುತ್ತಿರುವ ಅವರಿಗೆ …

Read More »

, ಅಪರಾಧಿಗಳಿಗೆ ಟಿಕೆಟ್‌ ಕೊಡುವುದಾದ್ರೆ ನನ್ನಂಥ ಶುದ್ಧ ವ್ಯಕ್ತಿಗೇಕಿಲ್ಲ?: ಮನೋಹರ್‌ ಪರಿಕ್ಕರ್‌ ಪುತ್ರ

ಪಣಜಿ(ಗೋವಾ): ದೇಶದ ಅತಿ ಸಣ್ಣ ರಾಜ್ಯ ಗೋವಾ ವಿಧಾನಸಭೆಗೂ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, 40 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಆಡಳಿತಾರೂಢ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುತ್ತಿದೆ. ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್​ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.   ವಿಧಾನಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡದ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಪಕ್ಷವು ಪ್ರಶ್ನಾರ್ಹ, ಕಳಂಕಿತ ಅಭ್ಯರ್ಥಿಗಳಿಗೆ …

Read More »

ಬಿಜೆಪಿ ವಿಕೆಟ್‌‍‌ಗಳು ಪತನ, ಬಾಬಾ ಸಿಎಂಗೆ ಕ್ರಿಕೆಟ್ ಆಡಲು ಬರುವುದಿಲ್ಲ: ಅಖಿಲೇಶ್

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಂತೆಯೇ ಆಡಳಿತರೂಢ ಬಿಜೆಪಿ ಶಾಸಕರು, ಒಬ್ಬರ ನಂತರ ಒಬ್ಬರಂತೆ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷ (ಎಸ್‌ಪಿ) ಸೇರುತ್ತಿದ್ದಾರೆ. ಇದನ್ನೇ ಉಲ್ಲೇಖ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಜೆಪಿ ವಿಕೆಟ್‌ಗಳು ಪತನಗೊಳ್ಳುತ್ತಿವೆ, ಬಾಬಾ ಸಿಎಂಗೆ ಕ್ರಿಕೆಟ್ ಆಡಲು ಬರುವುದಿಲ್ಲ. ಒಂದು ವೇಳೆ ಗೊತ್ತಿದ್ದರೂ ಕ್ಯಾಚ್ ಕೈಚೆಲ್ಲುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ ’80 ವರ್ಸಸ್ …

Read More »

ಮೇಕೆದಾಟು ಪಾದಯಾತ್ರೆ ಭದ್ರತೆಗೆ ತೆರಳಿದ್ದ 25 ಪೊಲೀಸರಿಗೆ ಕೊರೋನಾ

ಕೋಲಾರ: ಮೇಕದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಕೈಗೊಂಡಿದ್ದ ಪಾದಯಾತ್ರೆಗೆ ತೆರಳಿದ್ದ ಕೋಲಾರ ಜಿಲ್ಲೆಯ 25 ಪೊಲೀಸರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ಭದ್ರತಾ ಕರ್ತವ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸರು ತೆರಲಿದ್ದು, ಕೋಲಾರ ಜಿಲ್ಲೆಯ ಪೊಲೀಸರು ಕೂಡ ತೆರಳಿದ್ದರು. ಹೀಗೆ ಪಾದಯಾತ್ರೆಯ ಭದ್ರತೆಗೆ ತೆರಳಿದ್ದ ಕೋಲಾರ ಜಿಲ್ಲೆಯ 25 ಪೊಲೀಸರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಲಾಗಿದೆ.

Read More »

ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’

ಜಗಳೂರು: ‘ಏ ಹೊರಗೆ ಬಾರೊ ಸಂಜು, ನಿನಗೆ ಊರಲ್ಲಿ ಹೆಣ್ಣು ನೋಡಿದ್ದೀನಿ. ಮದುವೆ ಮಾಡೋಣ. ಹೀಗೆ ಮಲಗಿದರೆ ಹೆಂಗಪ್ಪ…’ ತಾಲ್ಲೂಕಿನ ಕಾನನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಶುಕ್ರವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಜೀವ್ ಅವರ ತಾಯಿ ಪಟ್ಟಣದ ಆಸ್ಪತ್ರೆಯಲ್ಲಿ ರೋದಿಸಿದ್ದು ಹೀಗೆ. ಪಟ್ಟಣದ ಶವಾಗಾರದಲ್ಲಿ ಹೆತ್ತ ಮಕ್ಕಳು ಶವವಾಗಿ ಸಾಲಾಗಿ ಮಲಗಿರುವ ಘೋರ ದೃಶ್ಯ ಕಂಡು ಹೆತ್ತವರು ಆಘಾತಕ್ಕೆ ಒಳಗಾದರು. ಸಂಜೀವ್‌ ಅವರ ತಾಯಿ ಗೋಗರೆಯುತ್ತಿದ್ದ ದೃಶ್ಯ …

Read More »

ಆಟೋ ಚಾಲಕನ ಬರ್ಬರ ಹತ್ಯೆ: 24 ಗಂಟೆಯಲ್ಲಿಯೇ ಆರೋಪಿಗಳ ಬಂಧನ:

ಇದೀಗ ಸಿಂದಗಿ ಪೊಲೀಸರು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ ನೂರ್‌ಅಹ್ಮದ್ ಬುಡ್ಡೆಸಾಬ್ ನಾಯಿಕ್, ಸಮೀರ ರಫೀಕ್ ನಾಯಿಕ್ ಬಂಧಿತ ಆರೋಪಿಗಳು.   ಈ ಇಬ್ಬರು ಆರೋಪಿಗಳು ಗುರುವಾರ ತಡರಾತ್ರಿ ಆಟೋ ಚಾಲಕನಾಗಿದ್ದ ಆಸೀಫ್ ಮೆಹಬೂಬ್ ಜಿನಾವರ್ ಎಂಬಾತನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು.   ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳು ಕೊಲೆ ನಡೆಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸಿಂದಗಿ ಪಿಎಸ್‌ಐ ನಿಂಗಪ್ಪ ಪೂಜಾರಿ ಹಾಗೂ ತಂಡ 24 ಘಂಟೆಗಳ …

Read More »

ಗಂಡನ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿ

ಬೆಂಗಳೂರು : ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ ಪತ್ನಿ ಶೀತಲ್ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣಗೊಳಪಡಿಸಿದ್ದಾರೆ. ಕಳೆದ‌ ತಿಂಗಳು 24ರಂದು ರಾತ್ರಿ ದುಷ್ಕರ್ಮಿಗಳು ಬಂದು ಡಾಬಾ‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು‌. ಇದನ್ನ ಪ್ರಶ್ನಿಸಲು ಹೋದ ಡಾಬಾದ ಸಿಬ್ಬಂದಿ ಮನೋಜ್ ಎಂಬಾತನ ಮೇಲೂ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಚಿಕಿತ್ಸೆ …

Read More »

ರಾಜ್ಯಾದ್ಯಂತ ಇಂದಿನಿಂದ 2ನೇ ವಾರದ `ವೀಕೆಂಡ್ ಕರ್ಪ್ಯೂ’ ಜಾರಿ: ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೇರಿರುವ ವೀಕೆಂಡ್ ಕರ್ಪ್ಯೂ (Weekend Curfew ) ನಿನ್ನೆಯ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಆರಂಭಗೊಂಡಿದೆ. ಇಂದಿನಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಪ್ಯೂ ಜಾರಿಯಲ್ಲಿರಲಿದ್ದು, ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದರೆ ನಿಮ್ಮ ವಾಹನ ಸೀಜ್ ಆಗಲಿದೆ. ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುವವರ ವಿರುದ್ಧ ಪೊಲೀಸರು ಕೇಸ್ ಹಾಕಲಿದ್ದಾರೆ.   ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ …

Read More »