ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಹಾವಳಿಯು ರೈತರ ಸಾಲ ವಿತರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು 30 ಲಕ್ಷ ರೈತರಿಗೆ ಸಾಲ ವಿತರಣೆಗಾಗಿ ಡಿಸಿಸಿ ಬ್ಯಾಂಕ್ಗಳಿಗೆ ಗುರಿ ನೀಡಲಾಗಿದೆ. ಜತೆಗೆ, ರೈತರು ಸಾಲಕ್ಕಾಗಿ ಹೆಸರು ನೋಂದಣಿ ಮಾಡಿ ಕೊಳ್ಳಲು ಹೊಸ ಸಾಫ್ಟ್ವೇರ್ನಲ್ಲಿ ತೊಂದರೆಯಾಗುತ್ತಿದ್ದ ಕಾರಣ ಮಾರ್ಚ್ 31ರ ವರೆಗೆ ಹಳೆ ಪದ್ಧತಿ ಯಲ್ಲೇ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ 19.04 ಲಕ್ಷ ರೈತರಿಗೆ 13,347 ಸಾವಿರ ಕೋ. ರೂ. ಸಾಲ ವಿತರಣೆಯಾಗಿದ್ದು, ಜನವರಿ ಅಂತ್ಯಕ್ಕೆ 20 …
Read More »ಮಕ್ಕಳ ಬಗ್ಗೆ ಯಾರೇ ನಿರ್ಲಕ್ಷ ವಹಿಸಿದ್ದರು ಅವರ್ ವಿರುದ್ಧ ಕ್ರಮ ಅಂತಾರೆ D.H.O. ಆದ್ರೆ ಹೋದ ಮಕ್ಕಳ ಪ್ರಾಣ ಯಾರ ಕೊಡ್ತಾರೆ ಸರ್….
ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದಲ್ಲಿ 21 ಮಕ್ಕಳಿಗೆ ರೂಬೆಲ್ಲಾ ಲಸಿಕೆ ನೀಡಿದ್ದಾರೆ. ಈ ವೇಳೆ ಪ್ರತ್ಯೇಕ ಲಸಿಕಾ ಕೇಂದ್ರ ಮಾಡಲಾಗಿತ್ತು. ಇದಕ್ಕೂ ಮತ್ತು ಕೋವಿಡ್ಗೂ ಯಾವುದೇ ರೀತಿ ಸಂಬಂಧ ಇಲ್ಲ. ಲಸಿಕೆ ವಿತರಣೆಯಲ್ಲಿ ಯಾರೇ ನಿರ್ಲಕ್ಷ್ಯ ವಹಿಸಿದ್ದರೂ ಖಂಡಿತವಾಗಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಎಚ್ಓ ಡಾ.ಶಶಿಧರ ಮುನ್ಯಾಳ ಎಚ್ಚರಿಸಿದ್ದಾರೆ. ರಾಮದುರ್ಗ ತಾಲೂಕಿನ ಮೂವರು ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಎಚ್ಓ ಡಾ.ಶಶಿಧರ ಮುನ್ಯಾಳ …
Read More »ಉಸಿರುಗಟ್ಟಿ ಸಾವಿಗೀಡಾದರು ಏಳು ವರ್ಷದ ಮಗಳು ಮತ್ತು ತಾಯಿ
ಬೆಂಗಳೂರು: ಸ್ನಾನಕ್ಕೆಂದು ಹೋಗಿದ್ದ ತಾಯಿ-ಮಗಳು ಉಸಿರುಗಟ್ಟಿ ಸಾವಿಗೀಡಾದ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ತಾಯಿ ಮಂಗಳ (35), ಪುತ್ರಿ ಗೌತಮಿ (07) ಸಾವಿಗೀಡಾದವರು. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಈ ದುರಂತ ನಡೆದುಹೋಗಿದೆ. ರಾಮನಗರ ಮೂಲದ ಈ ಕುಟುಂಬ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ಇಂದು ಬೆಳಗ್ಗೆ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ ಮಗುವನ್ನು …
Read More »ಜಗತ್ತಿನ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ ಭಾರತೀಯ ಸೈನ್ಯ
ನವದೆಹಲಿ: 74 ನೇ ಸೇನಾ ದಿನಾಚರಣೆಯ ಅಂಗವಾಗಿ, ಖಾದಿಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಧ್ವಜವಾದ `ಸ್ಮಾರಕ ರಾಷ್ಟ್ರೀಯ ಧ್ವಜ~ವನ್ನು ಶನಿವಾರ ರಾಜಸ್ಥಾನದ ಲಾಂಗೆವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಪ್ರದರ್ಶಿಸಲಾಯಿತು.1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಕೇಂದ್ರ ಹಂತವು ಲೋಂಗೆವಾಲಾ ಆಗಿತ್ತು. ದಕ್ಷಿಣ ಕಮಾಂಡ್ ಜೈಸಲ್ಮೇರ್ ಮಿಲಿಟರಿ ನಿಲ್ದಾಣದಲ್ಲಿ 225 ಅಡಿ 150 ಅಡಿ ಗಾತ್ರದ ಧ್ವಜವನ್ನು ಅನಾವರಣಗೊಳಿಸಿತು. ಒಟ್ಟು 33,750 ಚದರ ಅಡಿ ವಿಸ್ತೀರ್ಣದ ಧ್ವಜವನ್ನು ತಯಾರಿಸಲು …
Read More »ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆ ಬದಲಾವಣೆ
ಹುಬ್ಬಳ್ಳಿ: ಯಶವಂತಪುರ ಯಾರ್ಡ್ನಲ್ಲಿ ಜ. 21ರಂದು ಎಂಜಿನಿಯರಿಂಗ್ ಕೆಲಸಕ್ಕೆ ಸಂಬಂಧಿತ (ಥಿಕ್ ವೆಬ್ ಸ್ವಿಚ್ಗಳ) ಕಾಮಗಾರಿ ಸಲುವಾಗಿ ಲೈನ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಲಿದೆ. ಜ. 20ರಂದು ಹುಬ್ಬಳ್ಳಿ-ಬೆಂಗಳೂರು ನಿತ್ಯ ಸೇವೆಯ ಎಕ್ಸ್ಪ್ರೆಸ್ (17392) ರೈಲನ್ನು ಚಿಕ್ಕಬಾಣಾವರ ನಿಲ್ದಾಣದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು. ಜ. 21ರಂದು ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಡುವ ಬೆಂಗಳೂರು-ಹೊಸಪೇಟೆ ಪ್ರತಿನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ (06243) ರೈಲಿನ ಸಮಯವನ್ನು …
Read More »ಇನ್ಮುಂದೆ ‘ಕೊರೊನಾ ಟೆಸ್ಟ್’ ಗೆ ಕೊಟ್ಟವರು ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ – ರಾಜ್ಯ ಸರ್ಕಾರ ಖಡಕ್ ಆದೇಶ
ಬೆಂಗಳೂರು : ಕೊರೊನಾ ಪರೀಕ್ಷೆಗೆ ( Corona Test ) ಒಳಪಟ್ಟವರು ಕಡ್ಡಾಯವಾಗಿ ಹೊರಗೆ ಅಡ್ಡಾಡುವಂತಿಲ್ಲ, ಕೆಲಸಕ್ಕೂ ಹಾಜರಾಗುವಂತಿಲ್ಲ, ವರದಿ ಬರುವವರೆಗೂ ಹೋಮ್ ಐಸೋಲೇಷನ್ ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ( Karnataka Government ) ಮಹತ್ವದ ಸುತ್ತೋಲೆ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಐಸೋಲೇಷನ್ ( Isolation ) ಕ್ವಾರಂಟೈನ್ ನಲ್ಲಿರುವವರು ( Quarantine ) ಕೊರೊನಾ ಪರೀಕ್ಷೆಗೆ ಒಳಗಾಗಿದ್ದರೆ ಅವರು ವರದಿ ಬರುವವರೆಗೂ …
Read More »ಎಂಇಎಸ್ ಪುಂಡರು ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣ
ಬೆಳಗಾವಿಯಲ್ಲಿ ಗಡಿ ವಿವಾದದ ಹೆಸರಿನಲ್ಲಿ ಬೆಂಕಿ ಹಚ್ಚುವ ನಾಡದ್ರೋಹಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಿದರೂ ಕೂಡ ಇನ್ನು ಅವರಿಗೆ ಅರಿವು ಬಂದಿಲ್ಲ. ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವ ಎಂಇಎಸ್ ಪುಂಡರು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ಕನ್ನಡ ನಾಮಫಲಕಕ್ಕೆ ಮಸಿ ಬಳೆಯುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಕೆಲಸ ಮಾಡಿದ್ದಾರೆ. ಹೌದು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಫಲಕಕ್ಕೆ ಎಂಎಇಸ್ ಪುಂಡರು ಮಸಿ …
Read More »ಬೆಳಗಾವಿಯಲ್ಲಿ ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ನಿಗೂಢ ಸಾವನ್ನಪ್ಪಿದ್ದಾ
ಬೆಳಗಾವಿ: ಬೆಳಗಾವಿಯಲ್ಲಿ ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ನಿಗೂಢ ಸಾವನ್ನಪ್ಪಿದ್ದಾರೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ್ (13 ತಿಂಗಳು), ಮಧು ಉಮೇಶ್ ಕುರಗುಂದಿ (14 ತಿಂಗಳು) ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ(1.5) ಮೃತ ದುರ್ದೈವಿಗಳು. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಆಗಮಿಸಿದ ಸಿಬ್ಬಂದಿ ಮಕ್ಕಳಿಗೆ ಚುಚ್ಚುಮದ್ದು ನೀಡಿದ್ದರು. ಈ ವೇಳೆ ಅಸ್ವಸ್ಥಗೊಂಡಿದ್ದ ಮಗುವಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜನವರಿ 13ರಂದು ಒಂದು …
Read More »ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ಜ್ವರ
ರಾಜ್ಯದಲ್ಲಿ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ ಕೈ ನೋವು, ಜ್ವರದಿಂದ ಬಳಲುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಈ ಸಮಸ್ಯೆಗೂ ಕೋವಿಡ್ ಲಕ್ಷಣಗಳಿಗೂ ಸಾಮ್ಯತೆ ಇರುವುದರಿಂದ ಕೆಲವರು ಆತಂಕಪಡುವುದು ಕಂಡುಬರುತ್ತಿದೆ. ಆದರೆ, ಎಲ್ಲ ಜ್ವರ, ಗಂಟಲು ನೋವುಗಳು ಕೋವಿಡ್ ಅಲ್ಲ. ಹೆಚ್ಚಿನವು ಸಾಮಾನ್ಯ ಶೀತ, ಜ್ವರವೇ ಆಗಿರುತ್ತದೆ. ಹಾಗಾಗಿ ಯಾರೂ ಆತಂಕಪಡಬೇಕಾಗಿಲ್ಲಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ. ”ಶೀತ, ಕೆಮ್ಮು, ಮೈಕೈ ನೋವು ಕಾಣಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 10ರಲ್ಲಿ ಏಳು …
Read More »ಹಿಂದೂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಈಗ ರಾಮ ಸಿಂಹನ್
ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಮತ್ತು ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೆಲವು ತಿಂಗಳ ಹಿಂದೆಯೇ ಅಲಿ ಅಕ್ಬರ್ ಹಿಂದೂ ಧರ್ಮಕ್ಕೆ ಮತಾಂತರವಾಗಲು ಪೂರ್ವಸಿದ್ಧತೆ ಕೈಗೊಂಡಿದ್ದರು. ಇಸ್ಲಾಂನಲ್ಲಿರುವ ಕಟ್ಟುಪಾಡುಗಳಿಂದ ಕಿರಿಕಿರಿಗೆ ಒಳಪಟ್ಟಿರುವ ನಾನು ಮುಕ್ತತೆಯ ಧರ್ಮವನ್ನು ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ತಮ್ಮ ಹೆಸರನ್ನು ರಾಮ ಸಿಂಹನ್ ಎಂದು ಬದಲಿಸಿಕೊಂಡಿದ್ದಾರೆ. ಸನಾತನ ಹಿಂದೂ ಧರ್ಮಕ್ಕೆ ಪುರೋಹಿತರ ಸಮ್ಮುಖದಲ್ಲಿ ಪತ್ನಿ ಲೂಸಿ ಜೊತೆಗೆ ಮತಾಂತರಗೊಂಡಿದ್ದಾರೆ.
Read More »