Breaking News

ಕಾಂಗ್ರೆಸ್‌ ಸದಸ್ಯತ್ವಕ್ಕೆ ಸಿ.ಎಂ. ಇಬ್ರಾಹಿಂ ರಾಜೀನಾಮೆ!

ಕಾಂಗ್ರೆಸ್‌ ಮುಸ್ಲೀಮರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ, ನಮಗೆ ಯಾವುದೇ ಅಧಿಕಾರ ಕೊಡುತ್ತಿಲ್ಲ ಎಂದು ಆರೋಪಿಸಿ ತಮ್ಮ ಎಂಎಲ್‌ʼಸಿ ಸ್ಥಾನ ಹಾಗೂ ಕಾಂಗ್ರೆಸ್‌ ಸದಸ್ಯತ್ವಕ್ಕೆ ಸಿ.ಎಂ. ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ವಾಭಿಮಾನದಿಂದ ಕಾಂಗ್ರೆಸ್‌ ತೊರೆಯುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯನವರಿಗೆ ಕಳಿಸುತ್ತೇನೆ. ಇದನ್ನು ಅಂಗೀಕರಿಸಬಹುದು. ನಾನು ನನ್ನ ಜವಾಬ್ದಾರಿಯಿಂದ ಮುಕ್ತನಾಗಿದ್ದೇನೆ ಎಂದು ತಿಳಿಸಿದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು. …

Read More »

ಬಿಜೆಪಿ ಗೆಲುವಿಗೆ ಇವಿಎಂ ಹ್ಯಾಕ್ ಕಾರಣ : ಡಾ.ಜಿ.ಪರಮೇಶ್ವರ್

ತುಮಕೂರು,ಮಾ.12- ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಹಿನ್ನಡೆಗೆ ಕಾರಣವನ್ನು ನಿರಾಸೆಯಲ್ಲಿ ಹುಡುಕಿಕೊಳ್ಳಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗುತ್ತಿದೆ ಎಂಬ ವಾತಾವರಣ ಇದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿದೆ. ಇಂತಹ ಆಡಳಿತ ವಿರೋಧಿ ಸಂದರ್ಭದಲ್ಲೂ ಜನರು ಬಿಜೆಪಿಗೆ ಮತ ಹಾಕುತ್ತಾರೆ ಅಂದ್ರೆ ಏನೋ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಚುನಾವಣೆ …

Read More »

ಧಾರವಾಡ | ಕಾರ್‌- ಬೈಕ್ ಮುಖಾಮುಖಿ ಅಪಘಾತ: ತಂದೆ, 2 ವರ್ಷದ ಮಗಳ ಸಾವು

ಅಣ್ಣಿಗೇರಿ: ಪಟ್ಟಣದ ಗದಗ ಚತುಷ್ಪಥ ರಸ್ತೆಯಲ್ಲಿ ಶುಕ್ರವಾರ ಕಾರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗದಗ ತಾಲ್ಲೂಕು ಮಲ್ಲಸಮುದ್ರದ ಇಬ್ರಾಹಿಂಸಾಬ ಬುವಾಜಿ (30) ಮತ್ತು ಪುತ್ರಿ ಇಸ್ಮತಬಾನು ಬುವಾಜಿ (4) ಮೃತಪ್ಟಟಿದ್ದಾರೆ. ಗಾಯಗೊಂಡಿರುವ ಇಬ್ರಾಹಿಂಸಾಬ ಅವರ ಹೆಂಡತಿ ನಸ್ರೀನಬಾನು (27) ಮತ್ತು ಪುತ್ರ ನೌಮಾನ (2) ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಲಸಮುದ್ರ ಗ್ರಾಮದಿಂದ ನವಲಗುಂದ ಹತ್ತಿರದ ಯಮನೂರಿನ ಚಾಂಗದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಈ ಅಪಘಾತ …

Read More »

ಪ್ರಿಯಕರನ ಎದುರಲ್ಲೇ ಪ್ರೆಯಸಿಯನ್ನು ಮರಕ್ಕೆ ಕಟ್ಟಿ ಹಾಕಿ ಅತ್ಯಾಚಾರವೆಸಗಿದ ದುಷ್ಕರ್ಮಿಗಳು..!

ಯುವತಿಯನ್ನು ಮರಕ್ಕೆ ಕಟ್ಟಿ ಹಾಕಿ ಆಕೆಯ ಪ್ರಿಯಕರನ ಮುಂದೆ ದುಷ್ಕರ್ಮಿಗಳು ಅತ್ಯಾಚಾರವೆಸಗಿರುವ ಘಟನೆ ಕ್ರಿಶನ್ ಜಿಲ್ಲೆಯ ಮಚಲಿಪಟ್ಟಣಂ ಬೀಚ್‍ನಲ್ಲಿ ನಡೆದಿದೆ. ಗುಂಟೂರಿನ ಆಂಧ್ರಪ್ರದೇಶದ ಪೊಲೀಸ್ ಕೇಂದ್ರ ಕಚೇರಿಯಿಂದ 75 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಚಲಿಪಟ್ಟಣಂನ ಬಂದರ್ ಮಂಡಲ್‍ನ ಪಲ್ಲಿಪಾಲೆಮ್ ಬೀಚ್‍ಗೆ ಜೋಡಿ ತೆರಳಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ಯುವತಿ ಮೇಲೆ ಅತ್ಯಾಚಾರ …

Read More »

ಲಾಂಗ್​ ಹಿಡಿದು ಕಾಲೇಜು ವಿದ್ಯಾರ್ಥಿಗಳನ್ನು ಅಟ್ಟಾಡಿಸಿದ ಪುಡಿ ರೌಡಿಗಳು:

ಬೆಂಗಳೂರು: ಪುಡಿ ರೌಡಿಗಳ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದಿರುವ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು ಆತಂಕದಲ್ಲೇ ದಿನ ದೂಡುತ್ತಿರವ ಪ್ರಕರಣ ಬೆಳಕಿಗೆ ಬಂದಿದೆ. ಮಟಮಟ ಮಧ್ಯಾಹ್ನವೇ ಪುಡಿ ರೌಡಿಗಳು ಲಾಂಗ್ ಹಿಡಿದು ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಈ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ವಾಣಿ ವಿದ್ಯಾಸಂಸ್ಥೆ ಬಳಿ ನಡೆದಿದೆ. ಪುಡಿ ರೌಡಿಗಳ ಹಾವಳಿಗೆ ಸ್ಥಳೀಯರ ಸಹ ಬೆಚ್ಚಿಬಿದ್ದಿದ್ದು, ನಗರದ ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆ ಮಾಡುವಂತಿದೆ. ಲಾಂಗ್ ಹಿಡಿದು ವಿದ್ಯಾರ್ಥಿಗಳ …

Read More »

ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದ ಶೋಭಾ, ಪ್ರಲ್ಹಾದ್ ಜೋಶಿ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಗೆದ್ದಿದೆ. ಗೋವಾದಲ್ಲಿ ಇತರರ ಬೆಂಬಲದೊಂದಿಗೆ ಬಿಜೆಪಿ ಸರಕಾರ ರಚಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕ ಗೆಲುವು, ರಾಷ್ಟ್ರ ರಾಜಕಾರಣದ ಮುಂದಿನ ರಾಜಕಾರಣಕ್ಕೆ ಬಿಜೆಪಿಗೆ ಬಲವನ್ನು ನೀಡಿದೆ. ಈ ಗೆಲುವಿನಲ್ಲಿ ಕರ್ನಾಟಕದ ಇಬ್ಬರು ಸಂಸದರ ಪಾಲು ಬಹಳ ಮಹತ್ವವಾದದ್ದು. ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಉತ್ತರ ಪ್ರದೇಶದ ಮತ್ತು ಹುಬ್ಬಳ್ಳಿ-ಧಾರವಾಡ ಸಂಸದ ಪ್ರಲ್ಹಾದ್ ಜೋಶಿಯವರಿಗೆ ಉತ್ತರಾಖಂಡ್ ಜವಾಬ್ದಾರಿಯನ್ನು ನೀಡಲಾಗಿತ್ತು. ಶೋಭಾಗೆ ಉತ್ತರ …

Read More »

ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಕಂಪನಿಗಳು ಇನ್ನು ಮುಂದೆ ಸ್ಥಗಿತಗೊಳಿಸಬೇಕು’: ನಾರಾಯಣಮೂರ್ತಿ

ಬೆಂಗಳೂರು : ‘ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಈಗ ಬಹುತೇಕ ಕಡಿಮೆಯಾಗಿದೆ. ಹೀಗಾಗಿ, ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಕಂಪನಿಗಳು ಇನ್ನು ಮುಂದೆ ಸ್ಥಗಿತಗೊಳಿಸಬೇಕು’ ಎಂದು ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಪ್ರತಿಪಾದಿಸಿದರು. ಡೆಕ್ಕನ್‌ ಹೆರಾಲ್ಡ್‌ ಶುಕ್ರವಾರ ಆಯೋಜಿಸಿದ್ದ ‘ಡಿಎಚ್‌ ಬೆಂಗಳೂರು 2040 ಶೃಂಗ’ದಲ್ಲಿ ಮಾತನಾಡಿದ ಅವರು, ಮನೆಯಿಂದ ಕೆಲಸ ಮಾಡುವ ಸ್ವರೂಪವನ್ನು ಸಮಗ್ರವಾಗಿ ಬದಲಾಯಿಸಬೇಕು ಎಂದು ಪ್ರತಿಪಾದಿಸಿದರು. ‘ಮನೆಯಿಂದ ಕೆಲಸ ಮಾಡುವುದು ನನಗಂತೂ ಇಷ್ಟ ಇಲ್ಲ. ಮನೆಯಿಂದ ಉದ್ಯೋಗಿಗಳು ಕೆಲಸ ಮಾಡಿದರೆ …

Read More »

ಭಂಡಾರದಲ್ಲಿ ಮಿಂದ ದ್ಯೇದ್ದ ಅರಣ್ಯ ಸಿದ್ದೇಶ್ವರನ ಭಕ್ತರು

ರಾಯಬಾಗ ತಾಲೂಕೀನ ಅತಿದೊಡ್ಡ ಹಾಗೂ 5 ದಿನ ನಡೆಯುವ ಯಲ್ಪಾರಟ್ಟಿ ಅರಣ್ಯ ಸಿದ್ದೇಶ್ವರ ಜಾತ್ರೆ ಗುರುವಾರ ಸಂಪನ್ನಗೊಂಡಿತು. ರಾಯಬಾಗ ತಾಲೂಕಿನ ಅತಿದೊಡ್ಡ ಹಾಗೂ 5 ದಿನ ನಡೆಯುವ ಈ ಜಾತ್ರೆ ಇದೆ ರವಿವಾರ ಕರಿಕಟ್ಟುವ ಮೂಲಕ ಭಕ್ತರು ದಿಡನಮಸ್ಕಾರ ಹಾಕುವುದರೊಂದಿಗೆ ಜಾತ್ರೆ ಪ್ರಾರಂಭವಾಗಿ ಬುಧುವಾರ ನೈವೇದ್ಯ ಜರುಗಿತು ಜಾತ್ರೆಯಲ್ಲಿ ಮಹತ್ವದ ಘಟ್ಟ ಗುರುವಾರ ನಿವಾಳಿಕೆ ಜರುಗಿತು. ನಿವಾಳಿಕೆ ಎಂದರೆ ರವಿವಾರದಿಂದ ಐದು ದಿನಗಳ ಕಾಲ ಅರ್ಚಕರು ನೀರು ಕುಡಿಯದೆ ಉಪವಾಸ …

Read More »

6 ವರ್ಷಗಳ ಬಳಿಕ ತಾಯಿ, ಮಗನನ್ನು ಒಂದಾಗಿಸಿದ ಆಧಾರ್ ಕಾರ್ಡ್

ಬೆಂಗಳೂರು:  ಆರು ವರ್ಷಗಳ ಬಳಿಕ ತಾಯಿ ಮತ್ತು ಮೂಕ ಮಗನನ್ನು ಆಧಾರ್ ಕಾರ್ಡ್ ಒಂದು ಮಾಡಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.   2016ರ ಮಾರ್ಚ್‍ನಲ್ಲಿ ಪಾರ್ವತಮ್ಮ ಅವರ ಜೊತೆ ತರಕಾರಿ ಮಾರಾಟಕ್ಕೆ ಭರತ್ ಬಂದಿದ್ದರು. ಆಗ ಭರತ್ ಕೇವಲ 13 ವರ್ಷದವರಾಗಿದ್ದರು. ಈ ವೇಳೆ ನಿಗೂಢವಾಗಿ ಭರತ್ ಕಣ್ಮೆರೆಯಾಗಿದ್ದಾರೆ. ಮೂಗ ಮಗನನ್ನು ಕಾಣದೇ ಕಂಗಲಾಗಿ, ಯಲಹಂಕದ ರೈತ ಸಂತೆಯಲ್ಲಿ ಪಾರ್ವತಮ್ಮ ಅವರು ಹುಡುಕಾಟ ನಡೆಸಿ, ಕೊನೆಗೆ ಈ ಬಗ್ಗೆ ಯಲಹಂಕ ಪೊಲೀಸ್ …

Read More »

ಹಣದ ವ್ಯವಹಾರದಲ್ಲಿ ಅಸಮಾಧಾನ – ರೌಡಿ ಶೀಟರ್ ಹತ್ಯೆ

ಹುಬ್ಬಳ್ಳಿ: ಇಷ್ಟು ದಿನ ತಣ್ಣಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಮಾರಾಕಾಸ್ತ್ರಗಳು ಸದ್ದು ಮಾಡುತ್ತಿವೆ. ದುಡ್ಡಿನ ವ್ಯವಹಾರದ ಹಿನ್ನಲೆಯಲ್ಲಿ ರೌಡಿ ಶೀಟರ್‌ನನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರವಿಂದ ನಗರದ ಪಿಎನ್‌ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಕೊಲೆಯಾದ ವ್ಯಕ್ತಿ. ಈತ ಮೂಲತಃ ರೌಡಿ ಶೀಟರ್ ಆಗಿದ್ದ. ಸದಾನಂದ ಕುರ್ಲಿ ಎಂಬುವವನ ಜೊತೆಗೆ …

Read More »