ಬುಧವಾರ ದಂದು ಬೆಳಗಾವಿ ನಗರದ ರವಿವಾರ ಪೇಟೆಯಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕರಿಗೆ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘ ಅಧ್ಯಕ್ಷೆ ಪ್ರೀತಿ ಕುಕಡೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿದರು. ಬೆಳಗಾವಿ ಉತ್ತರ ಕ್ಷೇತ್ರದ ಜನಪ್ರಿಯ ಶಾಸಕ ಅನಿಲ ಬೆನಕೆ ಅವರ ಸಹಕಾರದೊಂದಿಗೆ ಪುಷ್ಪಂ ಆನ್ಲೈನ್ ಸರ್ವಿಸ್ ಸೆಂಟರ್ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಮಂಡಳ ವತಿಯಿಂದ ಕಳೆದ ವಾರ ನಗರದ ರವಿವಾರ ಪೇಟೆಯಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಇ-ಶ್ರಮ್ …
Read More »ಜನಸಾಮಾನ್ಯರ ಭಾವನೆಗಳಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಚಿವ ಡಾ.ಕೆ.ಸುಧಾಕರ್
ನಾಳೆ ನಡೆಯಲಿರುವ ಸಭೆಯಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಮುಖ್ಯಮಂತ್ರಿಗಳು ಎಲ್ಲರ ಸಲಹೆ ಪಡೆದುಕೊಳ್ಳುತ್ತಾರೆ. ಜನಸಾಮಾನ್ಯರನ್ನು ಯಾವುದೇ ರೀತಿ ಸಂಕಷ್ಟದಲ್ಲಿ ಸಿಲುಕಿಸಲು ಮತ್ತು ಅವರ ಭಾವನೆಗಳಿಗೆ ವಿರೋಧ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿರುವ ಹೈವೋಲ್ಟೇಜ್ ಕೋವಿಡ್ ಸಭೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಜನರ ಹಿತ ದೃಷ್ಟಿಯಲ್ಲಿ, ಆರೋಗ್ಯದ ಹಿತ ದೃಷ್ಟಿಯಲ್ಲಿ ಏನು …
Read More »ಕೊರೊನಾ ಪೀಕ್ಗೆ ಹೋಗುವ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚಿಸುತ್ತೇವೆ: ಸಚಿವ ಬಿ.ಸಿ.ನಾಗೇಶ್
ಈಗಾಗಲೇ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದ್ದೇವೆ. ಕೊರೊನಾ ಪೀಕ್ಗೆ ಹೋಗುತ್ತೆ ಎಂದು ಬಹಳ ಜನ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬಿ.ಸಿ.ನಾಗೇಶ್ ತಾಂತ್ರಿಕ ಸಲಹಾ ಸಮಿತಿ ಒಂದು ವೇಳೆ ಅನುಮತಿ ಕೊಟ್ಟರೆ ಮಹಾನಗರಗಳಲ್ಲಿಯೂ ಶಾಲೆಗಳನ್ನು ಆರಂಭಿಸಲು ಪ್ರಯತ್ನಿಸುತ್ತೇವೆ. ನಾಳೆ ತಾಂತ್ರಿಕ ಸಲಹಾ ಸಮಿತಿ …
Read More »ಶಾಸಕ ಅನಿಲ್ ಬೆನಕೆ ವಿರುದ್ಧ ಕೇಸ್ ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ
ಬೆಳಗಾವಿ: ಕಾಂಗ್ರೆಸ್ ಪ್ರತಿಭಟನೆಗೂ ಮೊದಲೇ ಸರ್ಕಾರ ಬೆದರಿತಾ ಎಂಬ ಪ್ರಶ್ನೆಯೊಂದು ಎದ್ದಿದೆ. ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಕರೋನಾ ರೂಲ್ಸ್ ಬ್ರೇಕ್ ಮಾಡಿದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ವಿರುದ್ಧ ಕೇಸ್ ದಾಖಲಿಸಿದೆ. ವೀಕೆಂಡ್ ಕರ್ಫ್ಯೂ ಮಧ್ಯೆಯೂ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಅನಿಲ್ ಬೆನಕೆ ಭಾಗಿಯಾಗಿದ್ದರು. ಜನವರಿ 16ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಮಾಸ್ಕ್ ಹಾಕದೇ …
Read More »ಕಳ್ಳ ಸಹೋದರರ ಸೆರೆ: ಐದು ಬೈಕ್ ಜಪ್ತಿ
ಕಲಬುರಗಿ: ನಗರದಲ್ಲಿ ಹಾಡು ಹಗಲೇ ಬೈಕ್ಗಳ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಸಹೋದರರನ್ನು ಉತ್ತರ ಉಪವಿಭಾಗದ ಚೌಕ್ ಠಾಣೆ ಪೊಲೀಸರು ಬಂಧಿಸಿ, 3.5 ಲಕ್ಷ ರೂ. ಮೌಲ್ಯದ ಐದು ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ. ಕಾಳಗಿ ತಾಲೂಕಿನ ಕೊರವಾರ ಗ್ರಾಮದ ವಿಕಾಸ ಹೊಸಮನಿ, ರಾಮಚಂದ್ರ ಹೊಸಮನಿ ಬಂಧಿತ ಸಹೋದರರು. ಬುಧವಾರ ಬೆಳಗ್ಗೆ ತಾಜ್ ಸುಲ್ತಾಪುರ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಈ ಕಳ್ಳರು …
Read More »ಬೆಳಗಾವಿ: ಕಣಕುಂಬಿಯಲ್ಲಿ ಮರಕ್ಕೆ ಅಪ್ಪಿಳಿಸದ ಕಾರು: ಸ್ಥಳದಲ್ಲೇ ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ: ಚಾಲಕನ ನಿಯಂತ್ರಣ ಕೈ ತಪ್ಪಿ ಕಾರೊಂದು ಮರಕ್ಕೆ ಅಪ್ಪಳಿಸಿದ ಪರಿಣಾಮ ಮಹಿಳೋರ್ವಳು ಸ್ಥಳದಲ್ಲೇ ಅಸುನೀಗಿರುವ ಘಟನೆ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಗುಲಾಬಿ ಪಾಂಡುರಂಗ ಗವಸ್( 38) ಮೃತ ಮಹಿಳೆ. ಸಂಬಂಧಿಕರ ಮನೆಯಲ್ಲಿಕಾರ್ಯಕ್ರಮ ಮುಗಿಸಿಕೊಂಡು ಬೆಳಗಾವಿ ಆಗಮಿಸುವ ವೇಳೆಯಲ್ಲಿ ಕಣಕುಂಬಿ ಪ್ರವಾಸಿ ಮಂದಿರದ ಬಳಿಯ ಈ ಅವಘಡ ಸಂಭವಿಸಿದೆ. ಕಾರನ ಮುಂಭಾಗ ಜಖಂಗೊಂಡಿದೆ ಎನ್ನಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಬೃಹತ್ ತಿರುವಿನಲ್ಲಿ ಚಾಲಕನ …
Read More »ಉಮೇಶ್ ಕತ್ತಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ
ರಾಜ್ಯ ಸರ್ಕಾರದ ವೀಕೆಂಡ್ ಕಫ್ರ್ಯೂಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಲಸಿಕೆ ನೀಡಲಿ, ನಿಯಮಾವಳಿಗಳನ್ನ ಕಟ್ಟುನಿಟ್ಟಾಗಿ ಮಾಡಲಿ. ನನ್ನ ಪ್ರಕಾರ ವೀಕೆಂಡ್ ಕಫ್ರ್ಯೂ ಬೇಕಿಲ್ಲ ಎಂದರು. ಮಾಸ್ಕ್ ಹಾಕಲ್ಲ ಎಂದ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಉಮೇಶ ಕತ್ತಿ ಸಚಿವರಾಗಿರಲು ಲಾಯಕ್ಕಾ, ಸರ್ಕಾರ ನಡೆಸಲು ಲಾಯಕ್ಕ..? ಮಂತ್ರಿ ಮಾಸ್ಕ್ ಹಾಕಲ್ಲ ಅಂದ್ರೆ …
Read More »ಹೆದರಿಸಿ ಲಂಚ ಪಡೆಯುತ್ತಿದ್ದಇಬ್ಬರು ಕಾನ್ಸ್ಟೆಬಲ್ಗಳು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ
ಬೆಳಗಾವಿ: ಮಟ್ಕಾ ಜೂಜಾಟ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಲಂಚ ಪಡೆಯುತ್ತಿದ್ದ ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೆಬಲ್ಗಳು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬುಧವಾರ ಬಿದ್ದಿದ್ದಾರೆ. ಸಿದ್ಧು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ ಬಲೆಗೆ ಬಿದ್ದವರು. ಖಾಸಗಿ ಕೆಲಸಕ್ಕೆಂದು ಖಾನಾಪುರಕ್ಕೆ ಹೋಗಿದ್ದ ಬೆಳಗಾವಿಯ ಪರಶುರಾಮ ಗಾಡಿವಡ್ಡರ ಎನ್ನುವವರ ಮೇಲೆ ಮಟ್ಕಾ ಪ್ರಕರಣ ದಾಖಲಿಸುವುದಾಗಿ ಆ ಕಾನ್ಸ್ಟೆಬಲ್ಗಳು ಹೆದರಿಸಿದ್ದರು. ಪ್ರಕರಣ ದಾಖಲಿಸದಿರಲು ₹ 50ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ₹ …
Read More »ಆಂಬ್ಯುಲೆನ್ಸ್ ಚಕ್ರಕ್ಕೆ ಹುರುಳಿ ಸೊಪ್ಪು ಸಿಲುಕಿ ಅವಾಂತರ : ಗರ್ಭಿಣಿ ಪರದಾಟ, ಚಾಲಕ ಸುಸ್ತು
ನಂಜನಗೂಡು : ರಸ್ತೆ ತುಂಬೆಲ್ಲಾ ಹರಡಿದ್ದ ಹುರಳಿ ಸೊಪ್ಪುನಿಂದಾಗಿ ಗರ್ಭಿಣಿಯನ್ನು ಹೊತ್ತ ಅಂಬ್ಯುಲೆನ್ಸ್ ವಾಹನವೊಂದು ಸಿಲುಕಿಕೊಂಡು ಹುರುಳಿ ಸೊಪ್ಪಿನಿಂದ ಬಿಡಿಸಿಕೊಂಡು ಮುಂದೆ ಸಾಗಲು ಚಾಲಕ ಹರಸಾಹಸ ಪಡಬೇಕಾಯಿತು. ಸಾರ್ವಜನಿಕ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುವುದಕ್ಕೆ ಸರಕಾರ ಈ ಹಿಂದೆ ನಿರ್ಬಂಧ ಹೇರಿದ್ದರೂ ಅದು ಕೇವಲ ಪುಸ್ತಕದ ಬದನೆಕಾಯಿಯಂತಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುವುದಕ್ಕೆ ಸರಕಾರ ಈ ಹಿಂದೆ ನಿರ್ಬಂಧ ಹೇರಿದ್ದರೂ ಅದು ಕೇವಲ ಪುಸ್ತಕದ ಬದನೆಕಾಯಿಯಂತಾಗಿದೆ. ಬುಧವಾರ ಗರ್ಭಿಣಿಯೊಬ್ಬಳನ್ನ …
Read More »ಜ. 26 ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್, ಕೆಂಪುಕೋಟೆ ಮೇಲೆ ಭಯೋತ್ಪಾದಕ ದಾಳಿ ಸಾಧ್ಯತೆ:
ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವದಂದು (ಜನವರಿ 26), ಭಯೋತ್ಪಾದಕರು ದೆಹಲಿಯಲ್ಲಿ ದಾಳಿ ಮಾಡಬಹುದು. ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಬ್ಯೂರೋ(ಐಬಿ) ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಪ್ರಕಾರ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಯೋತ್ಪಾದಕರು ದೇಶದ ನಾಯಕರು ಸೇರಿದಂತೆ ಕೆಲವು ವಿಐಪಿಗಳನ್ನು ಟಾರ್ಗೆಟ್ ಮಾಡುವ ಸೂಚನೆಗಳಿವೆ. IB ಯ ಇನ್ಪುಟ್ ಪ್ರಕಾರ, ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ್ ಗಣರಾಜ್ಯೋತ್ಸವದಂದು ಭಯೋತ್ಪಾದಕ ದಾಳಿಯನ್ನು ನಡೆಸುವ ಪ್ರಕ್ರಿಯೆಯಲ್ಲಿದೆ. …
Read More »