ಬೀದರ್: ಭಾಲ್ಕಿ ತಾಲೂಕಿನ ಗಡಿ ಅಟರ್ಗಾ ಗ್ರಾಮದಲ್ಲಿ ಸಹೋದರಿಯರಿಬ್ಬರ ಶವಗಳು ಬಾವಿಯಲ್ಲಿ ಅನುಮಾನಸ್ಪದವಾಗಿ ಪತ್ತೆಯಾಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಗೋವಿಂದರಾವ್ ಮೊರೆ ಅವರ ಮಕ್ಕಳಾದ ಅಂಕಿತಾ(15) ಮತ್ತು ಶ್ರದ್ಧಾ(10) ಮೃತ ಸಹೋದರಿಯರು. ಇಂದು(ಬುಧವಾರ) ಬೆಳ್ಳಂಬೆಳಗ್ಗೆ ಸಹೋದರಿಯರಿಬ್ಬರೂ ದುರಂತ ಅಂತ್ಯ ಕಂಡಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ, ಆಕಸ್ಮಿಕ ಸಾವೋ ಎಂಬುದು ಗೊತ್ತಾಗಿಲ್ಲ. ಮಕ್ಕಳಿಬ್ಬರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮೆಹಕರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ. ಸಹೋದರಿಯರಿಬ್ಬರ ಸಾವಿಂದ ಕಂಗೆಟ್ಟ …
Read More »ಅಮ್ಮಾ ಮಾರಿಕಾಂಬೆ. ತಿಂಗಳ ಸಂಬಳ ಬೇಗ ಆಗ್ಲಿ. ನಮ್ ಇಲಾಖೆಗೆ ಜಾಸ್ತಿ ಶಕ್ತಿ ಕೊಡಿಸು.
ಬೆಳಗಾವಿ: ರಾಜ್ಯದ ಹಲವೆಡೆಗಳಲ್ಲಿ ಮಾರಿಕಾಂಬೆ ಜಾತ್ರೆಯ ಸಡಗರ ಶುರುವಾಗಿದೆ. ಭಕ್ತಾದಿಗಳು ತಾಯಿ ಮಾರಿಕಾಂಬೆಯಲ್ಲಿ ಹರಕೆ ತೀರಿಸಲು ತಂಡೋಪತಂಡವಾಗಿ ಬರುತ್ತಿದ್ದರೆ, ಎಷ್ಟೋ ಭಕ್ತರು ತಮ್ಮ ಕೋರಿಕೆಯನ್ನು ಈಡೇರಿಸುವಂತೆ ಮಾರಿಕಾಂಬೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಗಮನ ಸೆಳೆದದ್ದು ಬೆಳಗಾವಿಯ ಮಾರಿಕಾಂಬೆ ಜಾತ್ರೆ. ಇಲ್ಲಿ ಬಾಳೆಹಣ್ಣಿನ ಹರಕೆ ವಿಶಿಷ್ಠವಾಗಿ ಕಂಡುಬಂದಿದೆ. ಪೊಲೀಸರು ಸೇರಿದಂತೆ ಹಲವರು ಈ ಬಾರಿ ತಮ್ಮ ಕೋರಿಕೆಯನ್ನು ಈಡೇರಿಸುವಂತೆ ಮಾರಿಕಾಂಬೆಯಲ್ಲಿ ವಿಭಿನ್ನವಾಗಿ ಹರಕೆ ಹೊತ್ತುಕೊಂಡಿದ್ದಾರೆ. ತಮ್ಮ ತಮ್ಮ ಬೇಡಿಕೆಗಳನ್ನು ಬಾಳೆಹಣ್ಣಿನ ಮೇಲೆ …
Read More »ಮಾತನಾಡಬೇಕೆಂದು ಪತ್ನಿಯನ್ನು ಹೋಟೆಲ್ಗೆ ಕರೆದು ಆಕೆಯಬರ್ಬರ ಹತ್ಯೆ
ವಿಜಯವಾಡ: ಮಾತನಾಡಬೇಕೆಂದು ಪತ್ನಿಯನ್ನು ಹೋಟೆಲ್ಗೆ ಕರೆದು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಗಾಂಧಿನಗರದಲ್ಲಿ ನಡೆದಿದೆ. ಗವರ್ನರ್ ಪೇಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಂಚಿಕಚರ್ಲಾ ಮೂಲದ ಶರೊನ್ ಪರಿಮಳ ಎಂಬಾಕೆ 2015ರಲ್ಲಿ ವೇಮುಲಪಲ್ಲಿ ವಲಯದ ಉಪ್ಪಾಳ ಪ್ರಸಾದ್ ರಾವ್ ಎಂಬುವರನ್ನು ಮದುವೆ ಆಗಿದ್ದರು. ಆರಂಭದಲ್ಲಿ ದಂಪತಿ ಸುಖಕರ ಜೀವನ ನಡೆಸುತ್ತಿದ್ದರು. ನಂತರದ ದಿನಗಳಲ್ಲಿ …
Read More »ಮೂವರ ಹೆಂಡ್ತೀರ ಮುದ್ದಿನ ಗಂಡನ ಭೀಕರ ಹತ್ಯೆ..16 ಬಾರಿ ಇರಿದು ಕೊಲೆ ಮಾಡಿ ಪರಾರಿಯಾದ ಆ ನಾಲ್ವರ್ಯಾರು?
ಬೆಳಗಾವಿ: ವಾಕಿಂಗ್ ಹೋದ ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಹದಿನಾರು ಬಾರಿ ಇರಿದು, ಬರ್ಬರವಾಗಿ ಹತ್ಯೆ ಮಾಡಿ ಕಾಲ್ಕಿತ್ತಿದ್ದಾರೆ. ಕೊಲೆಯಾದ ವ್ಯಕ್ತಿಯ ಹೆಸರು ರಾಜು ಮಲ್ಲಪ್ಪ ದೊಡ್ಡಬಣ್ಣವರ್ ಎಂದು ತಿಳಿದು ಬಂದಿದೆ. 46 ವರ್ಷದ ರಾಜು ಮೂರು ಜನರನ್ನ ಮದುವೆಯಾಗಿದ್ದ. ಹಾಗಂತ ಯಾರಿಗೂ ವಿಚ್ಛೇದನ ಕೂಡ ನೀಡಿಲ್ಲ. ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿತ್ತು. ರಾಜು ಮಂಗಳವಾರ ಭವಾನಿ ನಗರದ ಮನೆಯಿಂದ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ವಾಕಿಂಗ್ಗೆ ತೆರಳಿದ್ದಾರೆ. …
Read More »ಅಧಿಕಾರಿಗಳ ಮೇಲೆ ಎಸಿಬಿ ದಾಳಿ: ಅಪಾರ ಚಿನ್ನ-ಬೆಳ್ಳಿ, ಶ್ರೀಗಂಧ ಪತ್ತೆ- ಸಂಪೂರ್ಣ ವಿವರ ಇಲ್ಲಿದೆ..
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಂದು ಬೆಳಗ್ಗೆ ರಾಜ್ಯದ ವಿವಿಧೆಡೆ 18 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 77 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಅಧಿಕಾರಿಗಳ ಮನೆಗಳಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗು ಶ್ರೀಗಂಧದ ತುಂಡುಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳು ದೊರೆತಿವೆ. 1. ಗೋಪಿನಾಥ್ …
Read More »ಕುದುರೆ ವ್ಯಾಪಾರದಿಂದ ಬಿಜೆಪಿಗೆ ಅಧಿಕಾರ : ತಿಮ್ಮಾಪೂರ್ ಟೀಕೆ
ಬೆಂಗಳೂರು : ಬಿಜೆಪಿ ಸರ್ಕಾರಕ್ಕೆ ಜನತೆ ಒಮ್ಮೆಯೂ ಬಹುಮತದಿಂದ ಅಧಿಕಾರ ನೀಡಲಿಲ್ಲ. ಕುದುರೆ, ವ್ಯಾಪಾರದಿಂದ ಆಡಳಿತಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಆಗಬೇಕು, ಮಂತ್ರಿ ಆಗಬೇಕು ಎನ್ನುವ ಕಾರಣದಿಂದ ಅಧಿಕಾರಕ್ಕೆ ಬಂದವರಿಂದ ಶೇ.40 ಪರ್ಸಂಟೇಜ್ ಹೊರತುಪಡಿಸಿ, ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಸದಸ್ಯ ಆರ್ ಬಿ ತಿಮ್ಮಾಪೂರ್ ಬಿಜೆಪಿ ಸರ್ಕಾರವನ್ನು ಟೀಕಿಸಿದರು. ಜನತೆ ಬಿಜೆಪಿಗೆ ಸ್ವತಂತ್ರ್ಯವಾಗಿ ಅಧಿಕಾರ ನೀಡಿಲ್ಲ: ವಿಧಾನಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಒಮ್ಮೆಯೂ ಬಿಜೆಪಿಗೆ ಸ್ವತಂತ್ರ್ಯವಾಗಿ …
Read More »ಪೊಲೀಸರ ಗುಂಡಿಗೆ ಇಬ್ಬರು ಅತ್ಯಾಚಾರ ಆರೋಪಿಗಳು ಬಲಿ
ಗುವಾಹಟಿ(ಅಸ್ಸೋಂ): ಕೇವಲ 24 ಗಂಟೆಯೊಳಗೆ ಎರಡು ಎನ್ಕೌಂಟರ್ ನಡೆಸಿರುವ ಅಸ್ಸೋಂ ಪೊಲೀಸರು ಇಬ್ಬರು ಅತ್ಯಾಚಾರ ಪ್ರಕರಣದ ಆರೋಪಿಗಳನ್ನ ಎನ್ಕೌಂಟರ್ ಮಾಡಿದ್ದಾರೆ. ಮೊದಲನೇ ಎನ್ಕೌಂಟರ್ ಗುವಾಹಟಿ ಹಾಗೂ ಎರಡನೇಯದು ಉದಲಗುರಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ 10ರಂದು ರಾಜೇಶ್ ಎಂಬ ವ್ಯಕ್ತಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದನು. ಮರುದಿನ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಆತನನ್ನ …
Read More »ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ: H.D.D.
ನವದೆಹಲಿ: ಪ್ರಾರಂಭದಲ್ಲಿ ಒಂದು ಸಣ್ಣ ಕಿಡಿ ಕರಾವಳಿಯಲ್ಲಿ ಶುರುವಾಯಿತು. ಈ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಉಗ್ರವಾಗಿ ಹೋರಾಟ ಮಾಡಿವೆ. ಹಿಜಬ್ ಪ್ರಕರಣ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಬಹುದಿತ್ತು. ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿಕೆ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಒಪ್ಪ ಬೇಕೆಂಬುದು ನಮ್ಮ ಪಕ್ಷದ ನಿಲುವು ಇದೇ ಆಗಿತ್ತು. ಈ ವಿಷಯದಲ್ಲಿ ರಾಜಕೀಯ ಲಾಭ-ನಷ್ಟದ ಬಗ್ಗೆ ಇಲ್ಲ. ವಿದ್ಯಾರ್ಥಿಗಳ …
Read More »ಶಿವರಾಜ್ ಕುಮಾರ್ ಎದುರು ಅಖಾಡಕ್ಕೆ ಇಳಿದ ಡಾಲಿ ಧನಂಜಯ್
ಟಗರು ಸಿನಿಮಾದ ನಂತರ ಮತ್ತೆ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಎದುರಾಗಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬೈರಾಗಿ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಮತ್ತು ಡಾಲಿ ಸೆಣಸಲಿದ್ದಾರೆ. ಇಂದು ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವುದನ್ನು ಟ್ರೇಲರ್ ಖಚಿತ ಪಡಿಸುತ್ತದೆ. ಶಿವರಾಜ್ ಕುಮಾರ್ ಇಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಹುಲಿಬಣ್ಣದ ಮುಖಹೊತ್ತು ರೌಡಿಗಳನ್ನು ಸೆರೆ ಬಡಿಯುವಂತಹ ದೃಶ್ಯಗಳು ಟ್ರೇಲರ್ ನಲ್ಲಿ ಹೇರಳವಾಗಿವೆ. ಡಾಲಿ …
Read More »ಅತಂತ್ರ ಸ್ಥಿತಿಯಲ್ಲಿರೋ ಉಕ್ರೇನ್ ರಿಟರ್ನ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ..?
ಬೆಂಗಳೂರು: ಸದ್ಯ ಯುದ್ಧಪೀಡಿತ ಉಕ್ರೇನ್ನಿಂದ ವಾಪಸ್ಸಾಗಿರುವ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಏನೇ ನಿರ್ಧಾರ ಕೈಗೊಳ್ಳಬೇಕಾದ್ರು, ರಾಜ್ಯಕ್ಕೆ ಕೇಂದ್ರ ಅನುಮತಿ ಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಂದಿರುವ ಆಯ್ಕೆಗಳು: ಉಕ್ರೇನ್ ನಿಂದ ಬಂದಿರೋ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ರಾಜ್ಯ ಸರ್ಕಾರಕ್ಕೂ ಸದ್ಯ ಯಾವುದೇ ಮಾರ್ಗಗಳು ಇಲ್ಲ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಕೋರ್ಸ್ ಮುಂದುವರಿಸಲು ಅವಕಾಶ ಕೊಡಲು ಅಧಿಕಾರ ಇಲ್ಲ. ರಾಜ್ಯ ಸರ್ಕಾರ …
Read More »