Breaking News

ಅತ್ತೆ ತಲೆಗೆ ಸೊಸೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಅಮಾನುಷವಾಗಿ ಕೊಂದ ಘಟನೆ

ಚಳ್ಳಕೆರೆ: ಮನೆಯಲ್ಲಿ ಮಲಗಿದ್ದ ಅತ್ತೆ ತಲೆಗೆ ಸೊಸೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಅಮಾನುಷವಾಗಿ ಕೊಂದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಸಂಭವಿಸಿದೆ. ರುದ್ರಮ್ಮ(60) ಮೃತ ದುರ್ದೈವಿ. ಇವರ ಸೊಸೆ ಮುದ್ದಕ್ಕ ಕೊಲೆ ಆರೋಪಿ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜ.22ರ ರಾತ್ರಿಯೂ ಗಲಾಟೆ ಆಗಿತ್ತು. ಅಂದು ರಾತ್ರಿ ಮನೆಯಲ್ಲಿ ಮಲಗಿದ್ದ ಅತ್ತೆ ರುದ್ರಮ್ಮಳ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಸೊಸೆ ಮುದ್ದಕ್ಕ …

Read More »

ದೇಶದ ಗಡಿಯಲ್ಲಿ ಒಳ ನುಗ್ಗಲು ಉಗ್ರರ ಸಂಚು

ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೆಲವೊಂದು ಭಯೋತ್ಪಾದಕ ಸಂಘಟನೆಗಳಿಂದ ಜೀವ ಬೆದರಿಕೆಯ ಕರೆಗಳು ಬಂದಿದ್ದು, ಈ ಹಿನ್ನೆಲೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಬಿಎಸ್​ಎಫ್​ ಹದ್ದಿನ ಕಣ್ಣಿಟ್ಟಿದೆ.ಈ ಕುರಿತು ಮಾಹಿತಿ ನೀಡಿದ ಭದ್ರತಾ ಪಡೆ ಇನ್ಸ್​ಪೆಕ್ಟರ್​​ ಡಿ.ಕೆ ಬೂರಾ, ಕಾಶ್ಮೀರಗಡಿಯಲ್ಲಿ ಈಗಾಗಲೇ ನಿಗಾ ವಹಿಸಲಾಗಿದ್ದು,ಎರಡು ವಾರಗಳ ಕಾಲ ಗಡಿಯಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಅಹಿತಕರ …

Read More »

ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ

ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ. ಲೋ ಬಿಪಿಯಿಂದಾಗಿ 45 ವರ್ಷದ ಕುಶಾಲ್ ಮೃತಪಟ್ಟಿದ್ದ. ಮಗನ ಸಾವಿನ ಸುದ್ದಿ ಕೇಳಿ ತಾಯಿ ಲಕ್ಷ್ಮಮ್ಮ(69) ಸಹ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ಮನೆಯಲ್ಲಿ ಟಿವಿ ನೋಡುವ ವೇಳೆ ಕುಶಾಲ್‌ಗೆ ಲೋ‌ ಬಿಪಿ ಆಗಿದೆ. ರಕ್ತದೊತ್ತಡ ಕುಸಿದು ಒದ್ದಾಡುತ್ತಿದ್ದ ಕುಶಾಲ್‌ನನ್ನು ಸ್ಥಳೀಯರು ಮನೆಯ ಹೊರಗೆ ತಂದಿದ್ದಾರೆ. …

Read More »

ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ

ಬೆಂಗಳೂರು : ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ 24-01-2022ರ ಟಿಪ್ಪಣಿಯಂತೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶಿಸಿರೋದಾಗಿ ತಿಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ ಗೋವಿಂದ ಎಂ ಕಾರಜೋಳ – ಬೆಳಗಾವಿ ಕೆ ಎಸ್ ಈಶ್ವರಪ್ಪ …

Read More »

ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅವರೇ ಸಚಿವರಾಗಬೇಕಾ : ರೇಣುಕಾಚಾರ್ಯ

ಬೆಂಗಳೂರು : ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲು ನಾನು, ಶಾಸಕ ಬಸನಗೌಡ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಚಿವರು ಶಾಸಕರ ಫೋನ್ ಸಹ ರಿಸೀವ್ ಮಾಡಲ್ಲ. ಶಾಸಕರು ಪತ್ರವನ್ನು ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದ್ರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇದು ನಮಗೆ ಬೇಜಾರ ಆಗುತ್ತೆ ಅವಮಾನ ಆಗುತ್ತೇ. ಇಂಥ ಸಚಿವರು ಬೇಕಾ? …

Read More »

ಅರೆಬೆತ್ತಲೆ ಸ್ಥಿತಿಯಲ್ಲಿಯೇ ಪೊಲೀಸ್ ಠಾಣೆ ಕರೆತಂದ ಆರೋಪಿ

ಚಿತ್ರದುರ್ಗ : ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಸ್ನಾನಕ್ಕೆ ಹೋಗಿದ್ದ ವೇಣುಗೋಪಾಲ್, ಅದೇ ಅರೆಬೆತ್ತಲೆ ಸ್ಥಿತಿಯಲ್ಲಿ ಹೊರ ಬಂದಿದ್ದಾರೆ. ಠಾಣೆಗೆ ಬರುವಂತೆ ಹೆಡ್ ಕಾನ್ಸ್​ಟೇಬಲ್ ಚಂದ್ರಾನಾಯ್ಕ್ ಸೂಚಿಸಿದ್ದಾರೆ. ಈ ವೇಳೆ ಅದೇ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಆಗಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್​ಎಸ್​ಎಸ್​ ಕಾರ್ಯಕರ್ತ ವೇಣುಗೋಪಾಲ್ ಮೇಲೆ ಪೊಲೀಸರು ಅನಾಗರಿಕ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೆಲವರು …

Read More »

ಕೋವಿಡ್ ವ್ಯಾಕ್ಸಿನೇಷನ್ ಸ್ಥಿತಿ ಗಮನಿಸಿದರೆ ಶೀಘ್ರವೆ ಸೋಂಕು

ದೆಹಲಿ : ಜನಸಾಂದ್ರತೆಯಿಂದಾಗಿ ದೇಶದಲ್ಲಿ ಮತ್ತು ಮುಖ್ಯವಾಗಿ ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಒಮಿಕ್ರಾನ್ ಹರಡುವಿಕೆ ನಡೆಯುತ್ತಿದೆ ಎಂದು ಡಾ ರಾಯ್ ಹೇಳಿದರು. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಭಾರತದ ಪೂರ್ವ ಭಾಗದಲ್ಲಿ ವೈರಸ್‌ನ ಪ್ರಗತಿ ನಿಧಾನವಾಗಿದೆ. ಏತನ್ಮಧ್ಯೆ, ಒಮಿಕ್ರಾನ್  ರೂಪಾಂತರವು ಭಾರತದಲ್ಲಿ ಸಮುದಾಯ ಪ್ರಸರಣ ಹಂತದಲ್ಲಿದೆ ಮತ್ತು ಹೊಸ ಪ್ರಕರಣಗಳು ಹಲವು ಮೆಟ್ರೊ ನಗರಗಳಲ್ಲಿ ತೀವ್ರವಾಗಿ ಪ್ರಬಲವಾಗಿದೆ ಎಂದು INSACOG ಜನವರಿ 23 ರಂದು ಬಿಡುಗಡೆ ಮಾಡಿದ …

Read More »

ನಾಥೂರಾಮ್​ ಗೋಡ್ಸೆ ಕುರಿತ ಸಿನಿಮಾ ವಿರೋಧಿಸಿ ಮೋದಿಗೆ ಪತ್ರ

1948ರ ಜ.30ರಂದು ಗಾಂಧೀಜಿ ಹತ್ಯೆ ಆಯಿತು. ನಾಥೂರಾಮ್​ ಗೋಡ್ಸೆಯ ಗುಂಡೇಟಿಗೆ ಗಾಂಧಿ ಬಲಿಯಾದರು. ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗೋಡ್ಸೆ ನೀಡಿದ ಹೇಳಿಕೆಗಳನ್ನೇ ಆಧರಿಸಿ ಈ ಸಿನಿಮಾ ತಯಾರಾಗಿದೆ. ‘ಗಾಂಧಿಯನ್ನು ಕೊಂದಿದ್ದು ನಾಥೂರಾಮ್​ ಗೋಡ್ಸೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹತ್ಯೆ ಮಾಡಿದ್ದಕ್ಕೆ ಕಾರಣ ಏನೆಂಬದು ಅನೇಕರಿಗೆ ತಿಳಿದಿಲ್ಲ. ಆ ಕುರಿತು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ‘Why I killed Gandhi’ ಚಿತ್ರತಂಡ ಹೇಳಿಕೊಂಡಿದೆ.

Read More »

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಪಾಲಿಕೆಗೆ ವಂಚನೆ ಸಂಬಂಧ ದೂರು ದಾಖಲಿಸಲಾಗಿದೆ. ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ ಗಳ ಪೈಕಿ ಒಂದಾಗಿರುವ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆ ತನ್ನ ಸಿಬ್ಬಂದಿಗೆ ಪಾವತಿಸುತ್ತಿದ್ದ PF, ESI ದಾಖಲೆ ನಕಲು ಮಾಡಿದೆ. ಆ ಸಂಸ್ಥೆಯು ಪಾಲಿಕೆಗೆ ನಿಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ನಕಲು ಮಾಡಿಕೊಂಡು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಎಂಬ ಹೆಸರಿನಲ್ಲಿ …

Read More »

ಸಭೆ ಕರೆದಿದ್ದು ನಾನಲ್ಲ, ಅವರು ಎಂದ ಉಮೇಶ ಕತ್ತಿ; ಕರೆದವರೂ ದೊಡ್ಡವರಲ್ಲ, ಬಂದವರೂ ದೊಡ್ಡವರಲ್ಲ !

ಬೆಳಗಾವಿ –  ಶನಿವಾರ ಸಂಜೆ ತಮ್ಮ ಮನೆಯಲ್ಲಿ ನಡೆದ ಸಭೆ ಆಯೋಜಿಸಿದ್ದು ನಾನಲ್ಲ, ಸಭೆಗೆ ಆಹ್ವಾನಿಸಿದವರು ಮಹಾಂತೇಶ ಕವಟಗಿಮಠ ಎಂದು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ. ಹುಕ್ಕೇರಿಯಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಯಾವುದೇ ಗುಪ್ತ ಸಭೆ ನಡೆದಿಲ್ಲ, ನಾನು ಯಾರನ್ನೂ ಕರೆದಿರಲೂ ಇಲ್ಲ, ಮಹಾಂತೇಶ ಕವಟಗಿಮಠ ಎಲ್ಲರನ್ನೂ ಸೇರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಸಭೆಯಲ್ಲಿ ಯಾವುದೇ ಗುಪ್ತ ಸಮಾಲೋಚನೆ ಆಗಿಲ್ಲ. ಕಳೆದ …

Read More »