ಹಾವೇರಿ: ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಬಳಿ ನಡೆದಿದೆ. ಆನಂದ (35), ಮಂಜು (37) ಹಾಗೂ ಆನಂದ (33) ಮೃತರು. ಮೆಕ್ಕೆಜೋಳ ತುಂಬಿದ್ದ ಲಾರಿ ಇಚ್ಚಂಗಿ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ಈ ದುರಂತ ಸಂಭವಿಸಿದೆ. ಮೃತರು ಲಾರಿಯಲ್ಲಿದ್ದ ಮೂವರು ಹಮಾಲರಾಗಿದ್ದು, ಲಾರಿ ಪಲ್ಟಿಯಾದ ವೇಳೆ ಲಾರಿ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು …
Read More »ಬೆಳಗಾವಿ ಜಿಲ್ಲೆಯ ಸೋಮವಾರದ ಕೊರೋನಾ ಮಾಹಿತಿ; ಸವದತ್ತಿಯ ವ್ಯಕ್ತಿ ಬಲಿ
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ 625 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 325, ಸವದತ್ತಿಯಲ್ಲಿ 59, ರಾಮದುರ್ಗದಲ್ಲಿ 47, ಚಿಕ್ಕೋಡಿಯಲ್ಲಿ 43, ರಾಯಬಾಗದಲ್ಲಿ 35, ಬೈಲಹೊಂಗಲದಲ್ಲಿ 32, ಅಥಣಿಯಲ್ಲಿ 27, ಗೋಕಾಕಲ್ಲಿ 24, ಖಾನಾಪುರದಲ್ಲಿ 20 ಜನರಿಗೆ ಸೋಂಕು ಪತ್ತೆಯಾಗಿದೆ. ಸವದತ್ತಿಯ 49 ವರ್ಷದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಇನ್ನೂ 1144 ಜನರು ಕೊರೋನಾ …
Read More »ಬೆಳಗಾವಿ: ಶಾರ್ಟ್ ಸರ್ಕ್ಯೂಟ್, ಸಿಲೀಂಡರ್ ಸ್ಪೋಟ, ಅಗ್ನಿ ಅನಾಹುತ
ಬೆಳಗಾವಿ – ನಗರದ ಚವ್ಹಾಟ್ ಗಲ್ಲಿಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಒಂದೂವರೆ ಲಕ್ಷ ರೂ. ಗೂ ಹೆಚ್ಚಿನ ಮೊತ್ತದ ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಚವ್ಹಾಟ್ ಗಲ್ಲಿಯ ಶಹಾಪುರಕರ್ ಎಂಬುವವರ ಮನೆಯಲ್ಲಿ ಮೊದಲು ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿ ಗ್ಯಾಸ್ ಸಿಲೀಂಡರ್ ಗೆ ತಗುಲಿ ಸಿಲಿಂಡರ್ ಸಹ ಸ್ಪೋಟಗೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು ಬೆಂಕಿ …
Read More »ಫೋಟೋಶೂಟ್ ಹುಚ್ಚಿನಿಂದಾಗಿ ರೈಲ್ವೆ ಹಳಿ ಮೇಲೆ ನಿಂತು ಪ್ರಾಣ ಕಳೆದುಕೊಂಡ ಯುವಕ
ದಾವಣಗೆರೆ: ಫೋಟೋಶೂಟ್ ಹುಚ್ಚಿನಿಂದಾಗಿ ರೈಲ್ವೆ ಹಳಿ ಮೇಲೆ ನಿಂತು ಫೋಟೋ ತೆಗೆದುಕೊಳ್ಳಲು ಮುಂದಾದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ನ ಬಳಿ ಈ ದುರಂತ ಸಂಭವಿಸಿದೆ.ಸಚಿನ್ (16) ಎಂಬಾತ ಸಾವಿಗೀ ಡಾದ ಯುವಕ ಫೋಟೋಶೂಟ್ಗೆಂದು ಈ ಯುವಕ ಗೆಳೆಯರೊಂದಿಗೆ ಇಲ್ಲಿಗೆ ಬಂದಿದ್ದಾನೆ.ಒಳ್ಳೆಯ ಬ್ಯಾಕ್ಗ್ರೌಂಡ್ ಸಿಗುತ್ತದೆ ಎಂದು ಹಳಿ ಮೇಲೆ ನಿಂತವ ಈಗ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ. ರೈಲು ಬರುವಾಗ ಹಳಿ ಮೇಲೆ ನಿಂತು ಫೋಟೋ ತೆಗೆದುಕೊಂಡರೆ ಚೆನ್ನಾಗಿ ಕಾಣಿಸುತ್ತದೆ ಎಂದು …
Read More »ಅತ್ತೆ ತಲೆಗೆ ಸೊಸೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಅಮಾನುಷವಾಗಿ ಕೊಂದ ಘಟನೆ
ಚಳ್ಳಕೆರೆ: ಮನೆಯಲ್ಲಿ ಮಲಗಿದ್ದ ಅತ್ತೆ ತಲೆಗೆ ಸೊಸೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಅಮಾನುಷವಾಗಿ ಕೊಂದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಸಂಭವಿಸಿದೆ. ರುದ್ರಮ್ಮ(60) ಮೃತ ದುರ್ದೈವಿ. ಇವರ ಸೊಸೆ ಮುದ್ದಕ್ಕ ಕೊಲೆ ಆರೋಪಿ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇವರಿಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜ.22ರ ರಾತ್ರಿಯೂ ಗಲಾಟೆ ಆಗಿತ್ತು. ಅಂದು ರಾತ್ರಿ ಮನೆಯಲ್ಲಿ ಮಲಗಿದ್ದ ಅತ್ತೆ ರುದ್ರಮ್ಮಳ ತಲೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಸೊಸೆ ಮುದ್ದಕ್ಕ …
Read More »ದೇಶದ ಗಡಿಯಲ್ಲಿ ಒಳ ನುಗ್ಗಲು ಉಗ್ರರ ಸಂಚು
ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೆಲವೊಂದು ಭಯೋತ್ಪಾದಕ ಸಂಘಟನೆಗಳಿಂದ ಜೀವ ಬೆದರಿಕೆಯ ಕರೆಗಳು ಬಂದಿದ್ದು, ಈ ಹಿನ್ನೆಲೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಬಿಎಸ್ಎಫ್ ಹದ್ದಿನ ಕಣ್ಣಿಟ್ಟಿದೆ.ಈ ಕುರಿತು ಮಾಹಿತಿ ನೀಡಿದ ಭದ್ರತಾ ಪಡೆ ಇನ್ಸ್ಪೆಕ್ಟರ್ ಡಿ.ಕೆ ಬೂರಾ, ಕಾಶ್ಮೀರಗಡಿಯಲ್ಲಿ ಈಗಾಗಲೇ ನಿಗಾ ವಹಿಸಲಾಗಿದ್ದು,ಎರಡು ವಾರಗಳ ಕಾಲ ಗಡಿಯಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಅಹಿತಕರ …
Read More »ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ
ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ. ಲೋ ಬಿಪಿಯಿಂದಾಗಿ 45 ವರ್ಷದ ಕುಶಾಲ್ ಮೃತಪಟ್ಟಿದ್ದ. ಮಗನ ಸಾವಿನ ಸುದ್ದಿ ಕೇಳಿ ತಾಯಿ ಲಕ್ಷ್ಮಮ್ಮ(69) ಸಹ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ಮನೆಯಲ್ಲಿ ಟಿವಿ ನೋಡುವ ವೇಳೆ ಕುಶಾಲ್‌ಗೆ ಲೋ ಬಿಪಿ ಆಗಿದೆ. ರಕ್ತದೊತ್ತಡ ಕುಸಿದು ಒದ್ದಾಡುತ್ತಿದ್ದ ಕುಶಾಲ್‌ನನ್ನು ಸ್ಥಳೀಯರು ಮನೆಯ ಹೊರಗೆ ತಂದಿದ್ದಾರೆ. …
Read More »ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ
ಬೆಂಗಳೂರು : ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ 24-01-2022ರ ಟಿಪ್ಪಣಿಯಂತೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶಿಸಿರೋದಾಗಿ ತಿಳಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ ಗೋವಿಂದ ಎಂ ಕಾರಜೋಳ – ಬೆಳಗಾವಿ ಕೆ ಎಸ್ ಈಶ್ವರಪ್ಪ …
Read More »ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅವರೇ ಸಚಿವರಾಗಬೇಕಾ : ರೇಣುಕಾಚಾರ್ಯ
ಬೆಂಗಳೂರು : ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗಲು ನಾನು, ಶಾಸಕ ಬಸನಗೌಡ ಯತ್ನಾಳ್ ಎಷ್ಟು ಪ್ರಯತ್ನಿಸಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಸಚಿವರು ಶಾಸಕರ ಫೋನ್ ಸಹ ರಿಸೀವ್ ಮಾಡಲ್ಲ. ಶಾಸಕರು ಪತ್ರವನ್ನು ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದ್ರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇದು ನಮಗೆ ಬೇಜಾರ ಆಗುತ್ತೆ ಅವಮಾನ ಆಗುತ್ತೇ. ಇಂಥ ಸಚಿವರು ಬೇಕಾ? …
Read More »ಅರೆಬೆತ್ತಲೆ ಸ್ಥಿತಿಯಲ್ಲಿಯೇ ಪೊಲೀಸ್ ಠಾಣೆ ಕರೆತಂದ ಆರೋಪಿ
ಚಿತ್ರದುರ್ಗ : ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದ ವೇಳೆ ಸ್ನಾನಕ್ಕೆ ಹೋಗಿದ್ದ ವೇಣುಗೋಪಾಲ್, ಅದೇ ಅರೆಬೆತ್ತಲೆ ಸ್ಥಿತಿಯಲ್ಲಿ ಹೊರ ಬಂದಿದ್ದಾರೆ. ಠಾಣೆಗೆ ಬರುವಂತೆ ಹೆಡ್ ಕಾನ್ಸ್ಟೇಬಲ್ ಚಂದ್ರಾನಾಯ್ಕ್ ಸೂಚಿಸಿದ್ದಾರೆ. ಈ ವೇಳೆ ಅದೇ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಆಗಮಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಎಸ್ಎಸ್ ಕಾರ್ಯಕರ್ತ ವೇಣುಗೋಪಾಲ್ ಮೇಲೆ ಪೊಲೀಸರು ಅನಾಗರಿಕ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೆಲವರು …
Read More »