Breaking News

ಕಾನ್‌ಸ್ಟೆಬಲ್ ನೌಕರಿ ನಿರಾಕರಿಸಿದ್ದ ಯುವತಿ ಪಿಎಸ್‌ಐಗೆ ಆಯ್ಕೆ

ಮುಗಳಖೋಡ: ಪಟ್ಟಣದ ಬಡ ಕುಟುಂಬದ ಯುವತಿ ಪ್ರೀತಿ ಮಲ್ಲ‍ಪ್ಪ ಬಾಳೋಜಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 25ನೇ ‍ರ‍್ಯಾಂಕ್ ಗಳಿಸಿ ಪಿಎಸ್‌ಐ ನೌಕರಿಗೆ ಆಯ್ಕೆಯಾಗಿದ್ದಾರೆ. ಗುಡಿಸಲಲ್ಲಿ ವಾಸಿಸುತ್ತಾ, ಮನೆ-ಕೃಷಿ ಕೆಲಸ ಮಾಡುತ್ತಾ ಓದಿ ಸಾಧನೆ ತೋರಿ ಗಮನಸೆಳೆದಿದ್ದಾರೆ. 25 ವರ್ಷದ ಈ ಯುವತಿ 2 ಬಾರಿ ಸಿಕ್ಕಿದ್ದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ ಕೆಲಸವನ್ನು ನಿರಾಕರಿಸಿದ್ದರು. ಪಿಎಸ್‌ಐ ಹುದ್ದೆ ಗಿಟ್ಟಿಸಿಕೊಳ್ಳಲೇಬೇಕು ಎಂದು ಹಟದಿಂದ ಧಾರವಾಡದಲ್ಲಿದ್ದುಕೊಂಡು ಓದಿ ಪರಿಶ್ರಮದಿಂದ ಯಶಸ್ಸು ಗಳಿಸಿದ್ದಾರೆ. ಸ್ವಂತ ಊರು ಮುಗಳಖೊಡವಾದರೂ ಅಜ್ಜಿ …

Read More »

ಶೀಘ್ರವೇ ನಿರ್ಧಾರ: ಪೆಟ್ರೋಲ್ ಹಾಕಿಸಿಕೊಳ್ಳುವ ಮೊದಲು ಈ ಪ್ರಮಾಣಪತ್ರ ತೋರಿಸಬೇಕಾಗುತ್ತದೆ!

ನವದೆಹಲಿ: ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್(Petrol and Diesel) ತುಂಬಿಸಿಕೊಳ್ಳಲು ದೆಹಲಿ ಸರ್ಕಾರವು ಶೀಘ್ರದಲ್ಲೇ ಪಿಯುಸಿ ಪ್ರಮಾಣಪತ್ರ(Pollution Under Control Certificate)ವನ್ನು ಕಡ್ಡಾಯಗೊಳಿಸಲಿದೆ. ದೆಹಲಿಯಲ್ಲಿ ಮಾಲಿನ್ಯಕಾರಕ ವಾಹನಗಳು ಸಂಚರಿಸುವುದನ್ನು ತಡೆಯಲು ಈ ನೀತಿಯು ನಮಗೆ ಸಹಾಯ ಮಾಡುತ್ತದೆ ಮತ್ತು ಜನರು ಇಲ್ಲಿ ಶುದ್ಧ ಗಾಳಿಯನ್ನು ಉಸಿರಾಡಬಹುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಈ ಕರಡನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಇರಿಸಲಾಗಿದೆ ಮತ್ತು ಜಾರಿಗೊಳಿಸುವ ಮೊದಲು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು …

Read More »

IPS ರವಿ ಡಿ. ಚೆನ್ನಣ್ಣನವರ್ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು : ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾಯಿಸಿದ್ದ ರಾಜ್ಯ ಸರ್ಕಾರ ಇದೀಗ ಆದೇಶಕ್ಕೆ ತಡೆ ಹಿಡಿದಿದೆ. ರಾಜ್ಯ ಸರ್ಕಾರವು ಜನವರಿ 26 ರಂದು ರವಿ ಡಿ.ಚೆನ್ನಣ್ಣನವರ್ ಸೇರಿ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ರವಿ.ಡಿ.ಚೆನ್ನಣ್ಣನವರ್ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯ ಸರ್ಕಾರ ರವಿ. ಡಿ.ಚೆನ್ನಣ್ಣನವರ್ ರನ್ನು ವಾಲ್ಮೀಕಿ ಬುಡಕಟ್ಟು ನಿಗಮದ ಎಂಡಿ ಆಗಿ ವರ್ಗಾವಣೆ ಮಾಡಿತ್ತು.   …

Read More »

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಸಿಎಂ ನಿರ್ದೇಶನ: ಆರಗ ಜ್ಞಾನೇಂದ್ರ.

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಇರುವ ವಾರ್ಷಿಕ ವರಮಾನ ಮಿತಿಯನ್ನು 1.20 ಲಕ್ಷ ರೂ.ಗೆ ಹೆಚ್ಚಿಸಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವರಮಾನ ಮಿತಿ ಹೆಚ್ಚಿಸುವಂತೆ, ವಸತಿ ವಂಚಿತ ಬಡವರು ಮನವಿ ಸಲ್ಲಿಸುತ್ತಾ ಬಂದಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ, ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡುದಾರರ ವರಮಾನ …

Read More »

ನೈಟ್ ಕರ್ಫ್ಯೂ ನಿರ್ಬಂಧ ಸಡಿಲಿಕೆ ಬಗ್ಗೆ ನಿರ್ಧಾರ: ಇಂದು ಸಿಎಂ ಹೈವೋಲ್ಟೇಜ್ ಮೀಟಿಂಗ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚಾಗಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆ ಇರುವುದರಿಂದ ರಾಜ್ಯದಲ್ಲಿ ನಿರ್ಬಂಧ ಸಡಿಲಿಕೆಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.   ಶೇಕಡ 50 ರ ಮಿತಿ ನಿರ್ಬಂಧ ಸಡಿಲಿಕೆ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುವುದು. ಇದರೊಂದಿಗೆ ನೈಟ್ ಕರ್ಫ್ಯೂ ಸಮಯ ಬದಲಾವಣೆ, ಕರ್ಫ್ಯೂ ಮುಂದುವರಿಕೆ, ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿ ಆರಂಭ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸುವ ಸಾಧ್ಯತೆ …

Read More »

ದೈನಂದಿನ ಪ್ರಕರಣಗಳಲ್ಲಿ ತುಸು ಇಳಿಕೆ, 50 ಸಾವು

ಬೆಂಗಳೂರು: ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 31,198 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 50 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕೋವಿಡ್ ಕಾಣಿಸಿಕೊಂಡಾಗಿನಿಂದ ಈವರೆಗೆ 24 ಗಂಟೆಗಳ ಅವಧಿಯಲ್ಲಿ ಚೇತರಿಕೆ ಹೊಂದಿದವರ ಗರಿಷ್ಠ ಸಂಖ್ಯೆ ಇವಾಗಿವೆ. ಒಂದು ದಿನದ ಅವಧಿಯಲ್ಲಿ 1.49 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಶೇ 20.91 ರಷ್ಟಿದೆ. ನಾಲ್ಕು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ನಾಲ್ಕು ಅಂಕಿ, 25 ಜಿಲ್ಲೆಗಳಲ್ಲಿ ಮೂರು ಅಂಕಿಯಲ್ಲಿದೆ. ಬೆಂಗಳೂರಿನಲ್ಲಿ ಪ್ರಕರಣಗಳ …

Read More »

ಬಿಎಸ್‌ವೈ ಮೊಮ್ಮಗಳ ನಿಗೂಢ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ (30) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ‘ಯಡಿಯೂರಪ್ಪ ಪುತ್ರಿ ಪದ್ಮಾವತಿಯವರ ಮಗಳು, ವೈದ್ಯೆಯಾಗಿದ್ದ ಸೌಂದರ್ಯ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯ ಡಾ.ನೀರಜ್‌ ಜೊತೆ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 9 ತಿಂಗಳ ಮಗು ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.   ‘ವಸಂತನಗರದಲ್ಲಿರುವ ಲೆಗೆಸಿ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ …

Read More »

ಭಾರತೀಯ ಜನತಾ ಪಕ್ಷದ ವರಿಷ್ಠರು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಬೆಳಗಾವಿಯ ಉಮೇಶ್ ಕತ್ತಿ ಮನೆಯ ಸಭೆ ಮತ್ತು ಸಿಎಮ್ ಗೆ ನಿಯೋಗ ಭೇಟಿ ವಿಚಾರ ನಡೆದಿದೆ. ಭಾರತೀಯ ಜನತಾ ಪಕ್ಷದ ವರಿಷ್ಠರು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ನಾನು ಮಾಧ್ಯಮಗಳಿಗೆ ವಿನಂತಿಮಾಡುತ್ತೇನೆ. ಊಹಾಪೆÇೀಹಗಳಿಗೆ ತೆರೆ ಎಳೆಯಿರಿ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೆ ವರಿಷ್ಠರು ಬಗೆಹರಿಸುತ್ತಾರೆ. ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಸಭೆ …

Read More »

ಯಾವ ಪಾರ್ಟಿ ಬಳಿ ಎಷ್ಟೊಂದು ಕೋಟಿ ಆಸ್ತಿ ನೋಡಿ?

ನವದೆಹಲಿ : 2019-20ನೇ ಹಣಕಾಸು ವರ್ಷದಲ್ಲಿ ಭಾರತೀಯ ಜನತಾ ಪಾರ್ಟಿ ಬಳಿ 4,847.78 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿದು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನದಲ್ಲಿ ಬಿಎಸ್ಪಿ ಇದ್ದು, ಇದರ ಒಟ್ಟು ಆಸ್ತಿಯ ಮೌಲ್ಯ 698.33 ಕೋಟಿ ರೂ. ಆಗಿದೆ.   ಎಲ್ಲ ರಾಷ್ಟ್ರೀಯ ಪಕ್ಷಗಳ ಪೈಕಿ ಭಾರತೀಯ ಜನತಾ ಪಾರ್ಟಿ ಬಳಿ ಅತ್ಯಧಿಕ ಆಸ್ತಿ ಇದ್ದು, ಕಾಂಗ್ರೆಸ್​​ 588.16 ಕೋಟಿ ರೂ. ಮೌಲ್ಯದ ಆಸ್ತಿ …

Read More »

ಪಡಿತರ ಚೀಟಿ ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : ಉದ್ಯೋಗ ಮತ್ತು ಇತರ ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ವಲಸೆ ಹೋಗುವವರಿಗೆ ಆಹಾರ ಭದ್ರತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಜಾರಿಗೆ ತಂದಿದೆ. ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಅಂತ್ಯೋದಯ ಅನ್ನ ಅಥವಾ ಆದ್ಯತಾ ಪಡಿತರ ಚೀಟಿ ಹೊಂದಿರುವವರು ರಾಷ್ಟ್ರದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪಡಿತರ ಚೀಟಿದಾರರು ತಮ್ಮ …

Read More »