Breaking News

ಮೇ 10ರೊಳಗೆ ಸಂಪುಟ ಪುನಾರಚನೆ: ಅಶೋಕ್, ಸುಧಾಕರ್, ಎಂಟಿಬಿ, ಸೋಮಣ್ಣಗೆ ಕೊಕ್? ಪ್ರೀತಮ್, ಯತ್ನಾಳ್, ವಿಜಯೇಂದ್ರ ಗೆ ಲಕ್?

ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರದ ಸಂಪುಟ ಪುನಾರಚನೆ ಇನ್ನು ಒಂದೆರಡು ದಿನಗಳಲ್ಲಿ ನಡೆಯಲಿದೆ. ಹೀಗಾಗಿ ಮೇ 11 ರಂದು ಗುರುವಾರ ಸಂಪುಟ ಸಭೆ ನಿಗದಿಯಾಗಿದೆ. ಸಂಪುಟ ಪುನಾರಚನೆ ಸಂಬಂಧ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು. ಸಿಎಂ ಬೊಮ್ಮಾಯಿ ಅವರ ಜೊತೆ ಯಾರ್ಯಾರನ್ನು ಕೈ ಬಿಡಬೇಕು ಮತ್ತು ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಸಂಪುಟ ಪುನಾರಚನೆ ನಿರ್ಧಾರದೊಂದಿಗೆ ಅಮಿತ್ …

Read More »

ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಯಿಂದ ಪಿಹೆಚ್​​ಡಿ ವ್ಯಾಸಂಗ; ಇದು ರಾಜ್ಯದಲ್ಲೇ ಮೊದಲು!

ಮೈಸೂರು: ಸಮಾಜದಲ್ಲಿ ಲೈಗಿಂಕ ಅಲ್ಪಸಂಖ್ಯಾತರನ್ನು ಕೀಳಾಗಿ ನೋಡುತ್ತಿರುವ ಬೆಳವಣಿಗೆಗಳು ಮುಂದುವರೆದಿದ್ದರೂ ಕೂಡ ಇದಾವುದಕ್ಕೂ ಗಮನಕೊಡದೆ ಇತರರಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ದೀಪಾ ಬುದ್ಧೆ ಎಚ್.ಜಿ. ದೀಪಾ (32) ತೋರಿಸಿಕೊಟ್ಟಿದ್ದಾರೆ.   ತಾನು ‘ತೃತೀಯ ಲಿಂಗಿ’ ಎಂದೇ ಘೋಷಿಸಿಕೊಂಡಿರುವ ದೀಪಾ ಬುದ್ಧೆಯವರು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿಯೇ ಪಿಹೆಚ್​​ಡಿ ಆರಂಭಿಸಿದ್ದಾರೆ. ಜತೆಗೆ ಪಿಹೆಚ್​ಡಿ ಮಾಡುತ್ತಿರುವ ‘ಕರ್ನಾಟಕದ ಮೊದಲ‌ ಲೈಂಗಿಕ ಅಲ್ಪಸಂಖ್ಯಾತೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ …

Read More »

ಸಾರ್. ‘ಬ್ಯಾಗ್’ನಲ್ಲಿ ಏನ್ ಇದೆ.? ಅಂದ ‘KSRTC ಬಸ್ ಕಂಡಕ್ಟರ್’: ಮುಂದೆ ಆಗಿದ್ದೇನು ಗೊತ್ತಾ.?

ಬೆಂಗಳೂರು: ಸಾರಿಗೆ ಬಸ್ ಗಳಲ್ಲಿ ಸ್ಪೋಟಕ, ನಿಷೇಧಿತ ಸಾಮಗ್ರಿಗಳನ್ನು ಸಾಗಿಸೋದು ಅಪರಾಧವಾಗಿದೆ. ಒಂದು ವೇಳೆ ಹೀಗೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ರೇ.. ಅವರ ವಿರುದ್ಧ ಕೇಸ್ ಫಿಕ್ಸ್.. ಜೈಲೂಟ ಕಾಯಂ. ಇದೇ ಕಾರಣದಿಂದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ( KSRTC Bus ) ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದಂತ ಪ್ರಯಾಣಿಕನೊಬ್ಬನನ್ನು ಕಂಡಕ್ಟರ್, ಸಾರ್.. ಬ್ಯಾಗ್ ನಲ್ಲಿ ಏನ್ ಇದೆ.. ಅಂತ ಕೇಳಿದ್ದೇ ತಡ.. ಮುಂದೆ ಆಗಿದ್ದೇ ಬೇರೆಯಾಗಿತ್ತು. ಅದೇನ್ …

Read More »

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ!

ನೆಲಮಂಗಲ: ಮದ್ವೆಯಾಗಿ ಇಬ್ಬರು ಮಕ್ಕಳಿದ್ದರೂ ಈತನಿಗೆ ನಾದಿನಿ ಮೇಲಿತ್ತು ಮೋಹ. ಇದಕ್ಕೆ ಅಡ್ಡಿಯಾದ ಪತ್ನಿಯನ್ನೇ ಕೊಂದ ಗಂಡ ಸುಳ್ಳು ಕಥೆ ಕಟ್ಟಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ನಡೆದಿದೆ.   ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಲೂರು ಗ್ರಾಮದ ಶ್ವೇತಾ (30) ಮೃತ ದುರ್ದೈವಿ. ಹಿರಿಯೂರು ತಾಲೂಕಿನ ಕುರುಬರಹಳ್ಳಿ ಚೌಡೇಶ್​ (35) ಆರೋಪಿ. 9 ವರ್ಷಗಳ ಹಿಂದೆ ಶ್ವೇತಾ …

Read More »

ರಾಜ್ಯದ ಮೊದಲ ಸಿಎಂ ಕೆ.ಸಿ.ರೆಡ್ಡಿ ಪ್ರತಿಮೆ ವಿಧಾನಸೌಧದ ಆವರಣದಲ್ಲಿ ಅನಾವರಣವಾಗಲಿದೆ: C.M . ಬೊಮ್ಮಾಯಿ

ಬೆಂಗಳೂರು,ಮೇ5-ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪುನಃ ಅನಾವರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಕೆ.ಸಿ.ರೆಡ್ಡಿ ಅವರ 120ನೇ ಜನ್ಮದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಅವರು ಮಾತನಾಡಿದರು. ಈಗಾಗಲೇ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸಿದ್ದಗೊಂಡಿದೆ. ಇದನ್ನು ಅನಾವರಣಗೊಳಿಸುವುದಷ್ಟೇ ಬಾಕಿ ಇದೆ. ಆದಷ್ಟು ಶೀಘ್ರ ವಿಧಾನಸೌಧಕ್ಕೆ ತಂದು ಅನಾವರಣ ಮಾಡಲು ಇಂದೇ ಕಾರ್ಯಾದೇಶ ಮಾಡುವುದಾಗಿ ತಿಳಿಸಿದರು. ಈ …

Read More »

ಮೂರಂಕಿಗಿಂತ ಕೆಳಗಿಳಿದ ಬಿಜೆಪಿ ರಾಜ್ಯಸಭಾ ಸದಸ್ಯರ ಸಂಖ್ಯೆ

ಹೊಸದಿಲ್ಲಿ: ಮೊಟ್ಟಮೊದಲ ಬಾರಿಗೆ ರಾಜ್ಯಸಭೆಯಲ್ಲಿ 100 ಸ್ಥಾನಗಳನ್ನು ದಾಟಿದ ಒಂದು ತಿಂಗಳ ಬಳಿಕ ಮೇಲ್ಮನೆಯಲ್ಲಿ ಮತ್ತೆ ಬಿಜೆಪಿ ಸದಸ್ಯ ಬಲ 95ಕ್ಕೆ ಕುಸಿದಿದೆ. ಮೇಲ್ಮನೆಗೆ ನಾಮನಿರ್ದೇಶನಗೊಂಡಿದ್ದ ಐದು ಮಂದಿ ಸದಸ್ಯರು ಕಳೆದ ಹತ್ತು ದಿನಗಳಲ್ಲಿ ನಿವೃತ್ತರಾಗಿರುವುದು ಇದಕ್ಕೆ ಕಾರಣ.   ಆದರೆ ಈ ವರ್ಗದಲ್ಲಿ ಒಟ್ಟು ಏಳು ಮಂದಿಯನ್ನು ನಾಮಕರಣ ಮಾಡಲು ಸರ್ಕಾರಕ್ಕೆ ಅವಕಾಶ ಇರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆಡಳಿತಾರೂಢ ಪಕ್ಷದ ಸದಸ್ಯಬಲ ಮೂರಂಕಿ ತಲುಪಲಿದೆ. ಆದರೆ ಹೊಸ ಸದಸ್ಯರು …

Read More »

ಬಾದಾಮಿಯಲ್ಲಿ ಸಿದ್ದು ಸ್ಪರ್ಧೆಗೆ ವಿರೋಧದ ಕೂಗು?

ಬಾಗಲಕೋಟೆ: ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಸದ್ಯ ಆಡಳಿತ ಪಕ್ಷ ಬಿಜೆಪಿಯಲ್ಲಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್‌ ಹಾಗೂ ಆಮ್‌ ಆದ್ಮಿ ಪಕ್ಷ ಕೂಡ ಈ ಬಾರಿ ಜಿಲ್ಲೆಯ ಒಂದು ಕ್ಷೇತ್ರದಲ್ಲಾದರೂ ಖಾತೆ ತೆರೆಯಬೇಕೆಂಬ ತವಕದಲ್ಲಿ ಸಂಘಟನೆಯಲ್ಲಿ ತೊಡಗಿವೆ.   ಜಿಲ್ಲೆಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದು, ಅದರಲ್ಲಿ ಬಾದಾಮಿ, ಜಮಖಂಡಿ ಕ್ಷೇತ್ರಗಳು ಕಾಂಗ್ರೆಸ್‌ ಹಿಡಿತದಲ್ಲಿವೆ. ಉಳಿದ 5 ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಎರಡು ಕ್ಷೇತ್ರ ಪ್ರತಿನಿಧಿಸುವ …

Read More »

ಮಾಜಿ ಸಿಎಂ ಪುತ್ರ ಸಹಿತ ಮೂವರ ವಿರುದ್ಧ ಸಿಐಡಿಗೆ ದೂರು

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕೇವಲ ಅಭ್ಯರ್ಥಿಗಳು ಮಾತ್ರವಲ್ಲದೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಪುತ್ರ, ಸಚಿವ ಡಾ| ಅಶ್ವತ್ಥನಾರಾಯಣ ಹಾಗೂ ಈ ಹಿಂದೆ ನೇಮಕಾತಿ ವಿಭಾಗದಲ್ಲಿದ್ದ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ವಿಚಾರಣೆ ನಡೆಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ಎ.ಪಿ. ರಂಗನಾಥ್‌ ನೇತೃತ್ವದ ತಂಡ ಸಿಐಡಿ ಮುಖ್ಯಸ್ಥರಿಗೆ ದೂರು ನೀಡಿದೆ. ಪಿಎಸ್‌ಐ ಪ್ರಶ್ನೆ ಪತ್ರಿಕೆಯಲ್ಲಿ ಈ ಮೂವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ತನಿಖಾಧಿಕಾರಿಗಳು ಇದುವರೆಗೂ …

Read More »

ಮನೆ, ವಾಹನ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ತಟ್ಟಲಿದೆ ಬಡ್ಡಿ ದರದ ಬಿಸಿ

ನವದೆಹಲಿ: ನಾಲ್ಕು ವರ್ಷದ ಬಳಿಕ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಲಾಗಿದೆ. ಹಣದುಬ್ಬರ ಹತ್ತಿಕ್ಕಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಢೀರ್ ನಿರ್ಧಾರ ಕೈಗೊಂಡಿದೆ. ರೆಪೋ ದರ ಶೇಕಡ 0.4 ರಷ್ಟು, ಸಿ.ಆರ್.ಆರ್. ದರ ಶೇಕಡ 0.5 ರಷ್ಟು ಹೆಚ್ಚಳವಾಗಿದೆ. ಇದರಿಂದ ಇಎಂಐ ತುಟ್ಟಿಯಾಗಲಿದೆ. ಆರ್ಬಿಐ ಕೈಗೊಂಡ ಈ ಕ್ರಮದಿಂದ ವಾಹನ, ಗೃಹ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರಗಳು ಏರಿಕೆಯಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ …

Read More »

ಹಾಸನ ಡಿಸಿ ಎಷ್ಟು ದಿನ ಆಟ ಆಡುತ್ತಾರೆ ಎಂದು ನಾನೂ ನೋಡುತ್ತೇನೆ: ಎಚ್‌.ಡಿ. ರೇವಣ್ಣ

ಹಾಸನ, ಮೇ 5: ಚೆನ್ನಾಗಿದ್ದ ತಾಲೂಕು ಕಚೇರಿ ಕಟ್ಟಡವನ್ನು ರಾತ್ರೋರಾತ್ರಿ ಒಡೆದಂತೆ ಡಿಸಿ ಕಚೇರಿಯನ್ನೂ ಒಡೆದರೆ ಪರಿಣಾಮ ಬೇರೆಯಾಗುತ್ತದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದರು. ಹಾಸನದಲ್ಲಿ ಮಾತಾನಾಡಿದ ಅವರು, ಅಧಿಕಾರ ಇದೆ ಎಂದು ದರ್ಪ ನಡೆಸೋದು ಸರಿಯಲ್ಲ. ಹಾಸನ ಜಿಲ್ಲಾಧಿಕಾರಿ ಅನ್ ಫಿಟ್ ಆಗಿದ್ದಾರೆ. ಅವರು ರಬ್ಬರ್ ಸ್ಟಾಂಪ್ ಇದ್ದಂತೆ. ರಾತ್ರೋರಾತ್ರಿ ಕಟ್ಟಡ ಹೊಡೆಯಲು ಅವರನ್ನು ಇಟ್ಟುಕೊಂಡಿದ್ದಾರೆ. ಡಿಸಿ ಎಷ್ಟು ದಿನ ಆಟ ಆಡುತ್ತಾರೆ ನಾನೂ …

Read More »