Breaking News

ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ಕಾರು ಅಪಘಾತ; ಓರ್ವನ ದುರ್ಮರಣ, ಮೂವರಿಗೆ ಗಾಯ

ಬೆಳಗಾವಿ: ಕಾರು ಪಲ್ಟಿಯಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟದ ಹೊರವಲಯದಲ್ಲಿ ಸಂಭವಿಸಿದೆ. ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮುರಗೋಡ ಗ್ರಾಮದ ಸಂಜಯ ಜಯಸಿಂಗ್ ಚೌಗಲೆ (58) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು …

Read More »

ಉತ್ತರ ಪ್ರದೇಶದ ಐತಿಹಾಸಿಕ ದಿನ: 2ನೇ ಬಾರಿ ಯೋಗಿಯವರಿಗೆ ಸಿಎಂ ಗಾದಿ

ಉತ್ತರ ಪ್ರದೇಶಕ್ಕೆ ಇಂದು ಐತಿಹಾಸಿಕ ದಿನವಾಗಿದ್ದು, 2ನೇ ಬಾರಿ ಸಿಎಂ ಆಗಿ ಯೋಗಿ ಆದಿತ್ಯನಾಥ್​​ಗೆ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಉತ್ತರ ಪ್ರದೇಶದ ಐತಿಹಾಸಿಕ ದಿನಕ್ಕೆ ಕ್ಷಣಗಣನೆ ಶುರುವಾಗಿದ್ದು, 2ನೇ ಬಾರಿ ಸಿಎಂ ಆಗಿ ಯೋಗಿ ಆದಿತ್ಯನಾಥ್​​ಗೆ ಪಟ್ಟಾಭಿಷೇಕ ನಡೆಯಲಿದೆ. ಸಂಜೆ 4 ಗಂಟೆಗೆ ಸಿಎಂ ಆಗಿ ಯೋಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ …

Read More »

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಭಗತ್‍ಸಿಂಗ್‍ರವರಿಗೆ ಶ್ರದ್ಧಾಂಜಲಿ

ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಕಮಿಟಿಯ ಅಲ್ಪಸಂಖ್ಯಾತರ ಘಟಕ ವತಿಯಿಂದ ಶಹಿದ ಭಗತ ಸಿಂಗ ಅವರ ಪುಣ್ಯ ತಿಥಿಯ ದಿವಸ ಶ್ರದ್ಧಾಜಂಲಿಯನ್ನು ಸಮರ್ಪಿಸಲಾಯಿತು. ಹೌದು ಬೆಳಗಾವಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಗತ್ ಸಿಂಗ್‍ರವರ ಪುಣ್ಯತಿಥಿಯ ಪ್ರಯುಕ್ತ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಭಗತ್ ಸಿಂಗ್‍ರ ಭಾವಚಿತ್ರಕ್ಕೆ ಪುಷ್ಪ ಮಾಲೆಯನ್ನು ಹಾಕಿ ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ, ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ …

Read More »

ಇಮ್ರಾನ್‌ ಖಾನ್​ಗೆ ಇಂದು ಅಗ್ನಿ ಪರೀಕ್ಷೆ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

2ನೇ ಅವಧಿಗೆ ಸಿಎಂ ಆಗಿ ಯೋಗಿ ಇಂದು ಪ್ರಮಾಣ ವಚನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ ಯೋಗಿ ಎರಡನೇ ಅವಧಿಗೆ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಖನೌನದಲ್ಲಿ ನಡೆಯಲಿರುವ ಅದ್ದೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ಆಡಳಿತದ ಮುಖ್ಯಮಂತ್ರಿಗಳು, ಮುಖೇಶ್ ಅಂಬಾನಿ ಸೇರಿದಂತೆ ಹಲವು ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಿಎಂ ಬೊಮ್ಮಾಯಿ …

Read More »

ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರ ರಿಲೀಸ್​; ಪಟಾಕಿ ಹೊಡೆದು, ಕೇಕೆ ಹಾಕಿ ಅಭಿಮಾನಿಗಳ ಹರ್ಷೋದ್ಘಾರ

ಬೆಂಗಳೂರು: ಬಹುನಿರೀಕ್ಷಿತ ಆರ್​ಆರ್​ಆರ್​ ಸಿನಿಮಾ (RRR Movie) ರಾಜ್ಯಾದ್ಯಂತ 450 ಥಿಯೇಟರ್​ಗಳಲ್ಲಿ ರಿಲೀಸ್ ಆಗಿದೆ. 170ಕ್ಕೂ ಹಚ್ಚು ಸಿಂಗಲ್ ಸ್ಕ್ರೀನ್‌ ಮತ್ತು 450 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಲ್ಲಿ ಆರ್​ಆರ್​ಆರ್​ ಆರ್ಭಟ ಶುರುವಾಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು, ಟಿಕೆಟ್ ಕೂಡ ಸೋಲ್ಡ್​ಔಟಾಗಿ, ನಾಳಿನ ಟಿಕೆಟ್​ಗೂ ಬೇಡಿಕೆ ಹೆಚ್ಚಾಗಿದೆ. ರಾಮ್‌ಚರಣ್, ಜೂ.ಎನ್‌ಟಿಆರ್ ಮತ್ತು ಆಲಿಯಾ ಭಟ್ ಅಭಿನಯದ, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೇ ವೇಳೆ ಜೂ.ಎನ್‌ಟಿಆರ್, ಚರಣ್ ಅಭಿಮಾನಿಗಳ …

Read More »

ದೇವನಹಳ್ಳಿ: ಸಿಮೆಂಟ್ ಲಾರಿಗಳ ಡಿಕ್ಕಿ, ಚಾಲಕ ಸಜೀವ ದಹನ

ಬೆಂಗಳೂರು: ಎರಡು ಸಿಮೆಂಟ್ ಲಾರಿಗಳು ಡಿಕ್ಕಿಯಾಗಿ, ಹೊತ್ತಿಕೊಂಡ ಬೆಂಕಿಯಲ್ಲಿ ಚಾಲಕನೊಬ್ಬ ಸಜೀವ ದಹನವಾಗಿರುವ ಘಟನೆ ದೇವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಭುಕ್ತಿ ಡಾಬಾ ಬಳಿ ಸಂಭವಿಸಿದ ಅಪಘಾತದಲ್ಲಿ ಎರಡೂ ಸಿಮೆಂಟ್ ಸಾಗಣೆ ಲಾರಿಗಳು ಹೊತ್ತಿ ಉರಿದವು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಓರ್ವ ಚಾಲಕನನ್ನು ಸ್ಥಳೀಯರು ರಕ್ಷಿಸಿದರು. ಆದರೆ ಮತ್ತೋರ್ವ ಚಾಲಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟ. ಅಪಘಾತ ಮತ್ತು ಬೆಂಕಿಯಿಂದಾಗಿ ರಾಷ್ಟ್ರೀಯ …

Read More »

ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವುದು ಬಿಜೆಪಿ ಹಿಡನ್ ಅಜೆಂಡಾ- ಸತೀಶ ಜಾರಕಿಹೊಳಿ

ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವುದು ಬಿಜೆಪಿ ಹಿಡನ್ ಅಜೆಂಡಾ- ಸತೀಶ ಜಾರಕಿಹೊಳಿ ಬೆಳಗಾವಿ: ಹಿಂದೂ ದೇವಸ್ಥಾನಗಳಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಹಿಡನ್ ಅಜೆಂಡಾ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ದೇಶ. ವಿವಿಧ ಜಾತಿ, ಧರ್ಮ ಕೂಡಿದ ದೇಶ. ಎಲ್ಲರೊಂದಿಗೂ ಸಂಬಂಧ ಇರುತ್ತದೆ. ಮುಸ್ಲಿಮ್‌ರಿಗೆ ವ್ಯಾಪಾರ ನಿರ್ಬಂಧಿಸುವುದು ಅಸಾಧ್ಯ. ಎಲ್ಲ ಸಮುದಾಯಗಳು …

Read More »

ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ 

ಎಸ್ ಎಲ್ ಸಿ ಪೂರ್ವ ತಯಾರಿಯಲ್ಲಿ ಶೈಕ್ಷಣಿಕ ಜಿಲ್ಲಾ ಸಿದ್ದ   ಈ ಬಾರಿ ಕೋವಿಡ್ ಲಕ್ಷಣಗಳು ಕಡೆಮೇ ಆದರೂ ಸಹ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ತಾಲ್ಲೂಕು ಆಡಳಿತ ಅಧಿಕಾರಿಗಳು ಸೂಕ್ಷ್ಮವಾಗಿ ಪರೀಕ್ಷೆ ಕೊಠಡಿಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಿದ್ದಾರೆ,   ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣ ‌ಅಧಿಕಾರಿ‌ ಬಿ ಇ ಒ ಅವರು ನೇತೃತ್ವದಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಯಾವುದೇ ರೀತಿಯ …

Read More »

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ಏಪ್ರಿಲ್ ನಿಂದ ಗೋಧಿ, 5 ಕೆಜಿ ಅಕ್ಕಿ ಕಟ್

ಬೆಂಗಳೂರು: ಪಡಿತರ ಚೀಟಿದಾರರಿಗೆ ಸರ್ಕಾರ ಶಾಕ್ ನೀಡಿದೆ. ಪಡಿತರ ಚೀಟಿದಾರರಿಗೆ ವಿತರಿಸುವ ರಾಗಿ, ಜೋಳ ಖರೀದಿ ಪ್ರಕ್ರಿಯೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಈ ಕಾರಣದಿಂದ ಏಪ್ರಿಲ್‌ 1ರಿಂದ ಪಡಿತರ ಗೋಧಿಯನ್ನು ಕೈಬಿಡಲಾಗಿದ್ದು, ಕೇವಲ ಅಕ್ಕಿ ಮತ್ತು ಹೆಚ್ಚುವರಿಯಾಗಿ 1 ಕೆ.ಜಿ ರಾಗಿ ಅಥವಾ ಜೋಳ ವಿತರಿಸಲಿದೆ.   ಈವರೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ (ಪಿಎಂಜಿಕೆಎವೈ)ಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ನೀಡಲಾಗ್ತಿತ್ತು. ಕೋವಿಡ್ ಬಾಬ್ತು …

Read More »

ಪಬ್ಲಿಕ್ ಟಿವಿಯ ರಂಗನಾಥ್, ಅರುಣ್ ಬಡಿಗೇರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

ಬೆಂಗಳೂರು, ಮಾ.24: ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್ . ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನುರಹಿತ ಕೇಸ್ ದಾಖಲಿಸಲು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ಫೆಬ್ರವರಿ 3ರಂದು ಪಬ್ಲಿಕ್ ಟಿವಿ ವಾಹಿನಿಯು ‘ವಿದ್ಯಾದೇಗುಲದಲ್ಲಿ ಧರ್ಮ ಯುದ್ಧ ಬಿಗ್ ಬುಲೆಟಿನ್’ ಎಂಬ ಶಿರ್ಷಿಕೆಯಡಿಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ವಾಹಿನಿಯ ಮುಖ್ಯಸ್ಥ ಎಚ್ ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗರ್ ‘ಇದು ಭಾರತ. ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿ’ …

Read More »