Breaking News

ಬಿಎಸ್‌ವೈ ಯುಗ ಅಂತ್ಯವಾಗಿದೆ, ಇನ್ನೂ ಮೂರ್ನಾಲ್ಕು ಜನರ ಯುಗ ಮುಗಿಯಲಿದೆ : ಶಾಸಕ ಯತ್ನಾಳ್

ಬೆಳಗಾವಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಬಂದ ಮೇಲೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಹಾಗೂ ಅವಶ್ಯಕವಾಗಿದೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಎರಡನೇ ನಾಯಕತ್ವ ರಾಜ್ಯಕ್ಕೆ ಬೇಕಾಗಿದೆ. ಬಿಎಸ್‌ವೈ ಯುಗ ಅಂತ್ಯವಾಗಿದೆ. ಅವರ ಸಮಕಾಲೀನ ಇನ್ನೂ ಮೂರ್ನಾಲ್ಕು ಜನರದ್ದು ಯುಗ ಮುಗಿಯಲು ಬಂದಿದೆ. ಬಸವರಾಜ ಬೊಮ್ಮಾಯಿ …

Read More »

ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮುಧೋಳದ ವೈದ್ಯ: ಕೂಲಿ ಮಾಡಿ ಓದಿಸಿದ ತಂದೆಗೆ ಸನ್ಮಾನ

ಬಾಗಲಕೋಟೆ: ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ವಿದ್ಯಾರ್ಥಿ ಡಾ.ಚಿದಾನಂದ ಕುಂಬಾರ ಬೆಳಗಲಿ ನೀಟ್ ಪಿಜಿ ಪರೀಕ್ಷೆಯಲ್ಲಿ 759 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಚಿದಾನಂದ ಕುಂಬಾರ ಅವರು ಮಾಡಿದ ಈ ಸಾಧನೆಗೆ ಅವರ ತಂದೆ ಕಲ್ಲಪ್ಪ ಕುಂಬಾರಗೆ ಬೆಳಗಲಿ ಗ್ರಾಮದ ಮುಖಂಡರು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಕಲ್ಲಪ್ಪ ಕುಂಬಾರ, ಗ್ರಾಮೀಣ ಭಾಗದ ಯುವಕನೊಬ್ಬ ಈ ಮಟ್ಟಿಗೆ ಉನ್ನತ ಸ್ಥಾನಕ್ಕೆ ಏರಿದ್ದು, ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. …

Read More »

88 ಯೋಜನೆಗಳಿಗೆ ಅನುಮೋದನೆ ನೀಡಿದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ, ರಾಜ್ಯದಲ್ಲಿ ಒಟ್ಟು 10,904 ಉದ್ಯೋಗ ಸೃಷ್ಟಿ : ಸಚಿವ ನಿರಾಣಿ

ಬೆಂಗಳೂರು : ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಡಿ ಒಟ್ಟು 2367.99 ಕೋಟಿ ರೂ. ಮೊತ್ತದ 88 ಯೋಜನೆಗಳಿಗೆ ಅನುಮೋದನೆ ನೀಡಿದೆ. ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಒಟ್ಟು 88 ಯೋಜನೆಗಳಿಂದ 2367.99 ಕೋಟಿ ರೂ. …

Read More »

ನನ್ನ ವಿರುದ್ಧ ದೂರು ಕೊಟ್ಟವರು ಎಂಟಿಆರ್ ಫುಡ್ ಇರ್ಬೇಕು: ಸ್ವಪಕ್ಷೀಯರಿಗೆ ರೇಣುಕಾಚಾರ್ಯ ಟಾಂಗ್

ದಾವಣಗೆರೆ: ಯಾರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಅವರು ಎಂಟಿಆರ್ ಫುಡ್ ಇರ್ಬೇಕು. ಆದ್ರೆ ನಾನು ಎಂಟಿಆರ್ ಫುಡ್ ಅಲ್ಲವೆಂದು ಹೇಳುವ ಮೂಲಕ ಸ್ವಪಕ್ಷೀಯ ಸಚಿವರಿಗೆ ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾದಿ ಬೀದಿಯಲ್ಲಿ ಹೋರಾಟ ಮಾಡಿಯೇ ಮೂರು ಬಾರಿ ಶಾಸಕನಾಗಿದ್ದೇನೆ. ಬೀದಿಯಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ರೇ ಸಚಿವ ಸ್ಥಾನ ಸಿಗುತ್ತಾ ಎಂದು ಪಕ್ಷದ ಸಚಿವರ ವಿರುದ್ಧ …

Read More »

ದೆಹಲಿಗೆ ಹಾರಲಿದ್ದಾರಂತೆ ರಮೇಶ್​ ಜಾರಕಿಹೊಳಿ

ಬೆಳಗಾವಿ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವಾಕಾಂಕ್ಷಿಗಳ ಕಸರತ್ತು ಮುಂದುವರೆದಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲ ಶಾಸಕರು ಈಗಾಗಲೇ ಗುಪ್ತ ಸಭೆ, ಮಾತುಕತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಮತ್ತೆ ಸಚಿವರಾಗಬೇಕೆಂದು ತೆರೆಮರೆಯಲ್ಲಿ ಕಸರತ್ತು ಮುಂದುವರೆಸಿರುವ ಮಾಜಿ ಮಂತ್ರಿ ರಮೇಶ್​ ಜಾರಕಿಹೊಳಿ ದೆಹಲಿಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಗೋವಾಕ್ಕೆ ತೆರಳಿರುವ ಮಾಜಿ ಸಚಿವ ಜಾರಕಿಹೊಳಿ, ಅಲ್ಲಿಂದ ದೆಹಲಿಗೆ ತೆರಳಿ ಹೈಕಮಾಂಡ್​ ಭೇಟಿಗೆ ಮುಂದಾಗಲಿದ್ದಾರೆ. ಆ ಮೂಲಕ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು …

Read More »

ಫೆ.7ರಿಂದ ಬಜೆಟ್‌ ಪೂರ್ವಭಾವಿ ಸಿದ್ಧತೆ- ಇಲಾಖಾವಾರು ಚರ್ಚೆಯ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಬಜೆಟ್ ಪೂರ್ವಭಾವಿ ಸಿದ್ಧತೆಗಾಗಿ ಫೆ.7 ರಿಂದ ಇಲಾಖಾವಾರು ಚರ್ಚೆಯ ವೇಳಾಪಟ್ಟಿ ನಿಗದಿ ಮಾಡಲಾಗಿದ್ದು, ಫೆ.10 ಮಧ್ಯಾಹ್ನ 12ಕ್ಕೆ ಸಚಿವ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆಗಳನ್ನು ಮುಂದಿನ ವಾರದಿಂದ ನಡೆಸಲಾಗುವುದು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊರೆಯಲಿರುವ ಸಾಲ ಹಾಗೂ ಅನುದಾನಗಳ ಆಧಾರದ ಮೇಲೆ ರಾಜ್ಯ ಸರ್ಕಾರದ ಆಯವ್ಯಯದ ನಿರ್ಣಯಗಳನ್ನು ಕೈಗೊಳ್ಳಲಾಗುವುದು …

Read More »

ಗೋಕಾಕ ಕ್ಷೇತ್ರದ ಅಭಿವೃದ್ಧಿಗಾಗಿ 52 ಕೋಟಿ ರೂ ಬಿಡುಗಡೆ-ಶಾಸಕ ರಮೇಶ ಜಾರಕಿಹೊಳಿ.!

ಗೋಕಾಕ: ಗೋಕಾಕ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ 31 ಕೋಟಿ ರೂ. ಅಂತರ್ಜಲ ಹೆಚ್ಚಳ ಮಾಡಲು ಹಾಗೂ ಜಾನುವಾರುಗಳ ಕುಡಿಯುವ ನೀರಿಗಾಗಿ 19 ಕೋಟಿ ಮತ್ತು ಮಠಗಳ ಅಭಿವೃದ್ಧಿಗಾಗಿ 2 ಕೋಟಿ ರೂ.ಗಳು ಸೇರಿ ಒಟ್ಟು 52 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿರುವ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಪಂಚಾಯತ ರಾಜ್ಯ ಇಲಾಖೆಯ ಒಟ್ಟು 31 ಕೋಟಿ ರೂ, ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ …

Read More »

ರವಿ ಚೆನ್ನಣ್ಣನವರ್ ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಅಷ್ಟೇ: ಗೃಹ ಸಚಿವ ಆರಗ ಜ್ಞಾನೇಂದ್ರ

ಮೈಸೂರು: ರವಿ ಚನ್ನಣ್ಣನವರ್ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದಿರುವ ದೂರು ಆಧರಿಸಿ ತನಿಖೆ ಶುರುವಾಗಿದೆ. ಯಾರು ಬೇಕಾದರೂ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಇನ್ನೂ ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ವರ್ಗಾವಣೆ ಶಿಕ್ಷೆಯಲ್ಲ. ರವಿ ಚನ್ನಣ್ಣನವರ್​ ಅವರ ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಎಂದು ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿಕೆ ನೀಡಿದ್ದಾರೆ. ರಾಷ್ಟ್ರ ಕಟ್ಟಲು ನಾವು ಬದುಕಬೇಕಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ …

Read More »

ಬೆಂಗಳೂರಲ್ಲಿ ರೋಗಿಯ ಪ್ರಾಣ ಉಳಿಸಲು ಸ್ವತಃ ತಾನೇ ಮೆಕ್ಯಾನಿಕ್ ಆದ ಪೊಲೀಸ್​! ತಪ್ಪಿತು ಅನಾಹುತ, ಪೇದೆ ಕಾರ್ಯಕ್ಕೆ ಶ್ಲಾಘನೆ

ಬೆಂಗಳೂರು: ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯ ಪ್ರಾಣ ಉಳಿಸಲು ಸ್ವತಃ ತಾನೇ ಮೆಕ್ಯಾನಿಕ್ ಆದ ಸಂಚಾರಿ ಪೊಲೀಸ್ ಪೇದೆಯೊಬ್ಬರ ಸ್ಟೋರಿ ಇದು. ಸರಿಯಾದ ಸಮಯಕ್ಕೆ ಈ ಪೊಲೀಸಪ್ಪ ಬಾರದಿದ್ದಲ್ಲಿ ಅನಾಹುತ ಸಂಭವಿಸುತ್ತಿತ್ತು. ಅಷ್ಟರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸಿಬ್ಬಂದಿ ಕಾಸಪ್ಪ ಕಲ್ಲೂರು ಸಮಯ ಪ್ರಜ್ಞೆ ಮೆರೆದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ. ಅಷ್ಟಕ್ಕೂ ಪೊಲೀಸ್ ಸಿಬ್ಬಂದಿ ಮಾಡಿದ ಮತಹ್ವದ​ ಕಾರ್ಯ ಎಂತಹದ್ದು ಗೊತ್ತಾ? ಇದು ನಿನ್ನೆ(ಮಂಗಳವಾರ) ಬೆಂಗಳೂರಲ್ಲಿ …

Read More »

ಸಂಪುಟ ಪುನಾರಚನೆಗೆ ಮುಂದಾದ ಸಿಎಂ ಬೊಮ್ಮಾಯಿ ನಾಳೆ ದೆಹಲಿ ಭೇಟಿ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಪ್ರಧಾನಿ ಮೋದಿಯವರ ಭೇಟಿಗೆ ಸಿಎಂ ಸಮಯ ಕೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಸಂಪುಟ ಪುನಾರಚನೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ಅವರೊಂದಿಗೆ ಸಿಎಂ ಚರ್ಚೆ ನಡೆಸುವ ಸಾಧ್ಯತೆ ಇದೆ. ಮೇಕೆದಾಟು, ಕೃಷ್ಣಾ, ಮಹದಾಯಿ ಸೇರಿದಂತೆ ಅಂತರರಾಜ್ಯ ಜಲವಿವಾದಗಳ ಬಗ್ಗೆ ಸಿಎಂ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ, ರಾಜ್ಯ ಸಂಸದರನ್ನು ಭೇಟಿಯಾಗಿ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಿದ್ದಾರೆ …

Read More »