ಕಾಗವಾಡತಾಲೂಕಿನ ಮಂಗಸೂಳಿ- ಮೋಳೆ ಮಾರ್ಗದಲ್ಲಿರಸ್ತೆ ನಿರ್ಮಾಣಕಾಮಗಾರಿಗೆಶಾಸಕ ಶ್ರೀಮಂತ ಪಾಟೀಲರು ಚಾಲನೆಯನ್ನು ನೀಡಿದರು. ಮಂಗಸೂಳಿ- ಮೋಳೆ ಮಾರ್ಗದಲ್ಲಿಹದಗೆಟ್ಟ ಹೋದರಸ್ತೆ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರದ ಲೋಕೋಪಯೋಗಿಇಲಾಖೆಯ ಲೆಕ್ಕ ಶಿರ್ಷಿಕೆ 5054 ಯೋಜನೆಅಡಿಯಲ್ಲಿ 1.50 ಕೋಟಿರೂ ವೆಚ್ಚದಲ್ಲಿರಸ್ತೆಅಭಿವೃದ್ಧಿಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರುಇಂದು ಸೋಮವಾರದಂದುಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದಆವರುಕಳೆದ ಅನೇಕ ವರ್ಷಗಳಿಂದ ಈ ಮಾರ್ಗದರಸ್ತೆ ಅಭಿವೃದ್ಧಿಗೊಳಿಸಲು ರೈತರು ಕೇಳಿಕೊಂಡಿದ್ದರು, ಅದನ್ನುಗಮನದಲ್ಲಿತೆಗೆದುಕೊಂಡು 1.50 ಕೋಟಿರೂ.ಅನುದಾನ ಮಂಜೂರುಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುತ್ತಿದೆಎಂದರು. ಸರ್ಕಾರದಅನುದಾನ ಬಳಸಿ …
Read More »ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವಕರು ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವಕರು ಪ್ರತಿಭಟನೆ ನಡೆಸಿದರು. ಚಿಕ್ಕೋಡಿ ಪಟ್ಟಣದ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನೆಯು ಬಸವ ವೃತ್ತದ ಮೂಲಕ ಸಾಗಿತು. ಪ್ರತಿಭಟನೆ ಉದ್ದಕೂ ಕಾಂಗ್ರೆಸ್ ಕಾರ್ಯಕರ್ತರು, ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಂತರ ಉಪವಿಭಾಗಧಿಕಾರಿ ಸಂತೋಷ ಕಾಮಗೌಡರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿ ಅಗ್ನಿಪಥ ಯೋಜನೆಯನ್ನು …
Read More »ಸಂಜಯ್ ರಾವುತ್‌ಗೆ ಇಡಿ ಸಮನ್ಸ್ ; ನಾಳೇ… ವಿಚಾರಣೆಗೆ ಹಾಜರಾಗುವಂತೆ ಆದೇಶ…!
ಶಿವಸೇನೆಯ ಎಂಪಿ ಸಂಜಯ ರಾವುತ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಇದೇ ಜೂನ್ ೨೮ ರಂದು ವಿಚಾರಣೆ ಹಾಜರಾಗುವಂತೆ ಇಡಿ ಆದೇಶಿಸಿದೆ. ಪತ್ರಾಚಾಳ್ ಜಮೀನು ಹಗರಣಕ್ಕೆ ಸಂಬoಧಿಸಿದoತೆ ಇಡಿ ಸಂಜಯ ರಾವುತ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಈ ಮೊದಲೂ ಕೂಡ ಇಡಿ ಅವರ ಆಸ್ತಿಯನ್ನು ಮುಟ್ಟುಗೋಲನ್ನು ಹಾಕಿದೆ. ನಾಳೆ ಮಂಗಳವಾರ ೧೧ ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ನಲ್ಲಿ ತಿಳಿಸಿದೆ. ಸಂಜಯ್ ರಾವುತ್ ಅವರ ಅಲಿಬಾಗ್‌ನಲ್ಲಿರುವ flat ಮತ್ತು …
Read More »ತಕ್ಷಣವೇ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ 15ಕ್ಕೂ ಹೆಚ್ಚು ನಗರಸೇವಕರ ಆಗ್ರಹ
ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 8 ತಿಂಗಳು ಕಳೆಯುತ್ತಾ ಬಂದ್ರೂ ಕೂಡ ಇನ್ನು ಮೇಯರ್-ಉಪಮೇಯರ್ ಆಯ್ಕೆಯಾಗಿಲ್ಲ. ಇದರಿಂದ ವಾರ್ಡಗಳಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ತಕ್ಷಣವೇ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ 15ಕ್ಕೂ ಹೆಚ್ಚು ನಗರಸೇವಕರು ಆಗ್ರಹಿಸಿದ್ದಾರೆ. ಹೌದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಸೇವಕರಾಗಿ ಆಯ್ಕೆಯಾಗಿ 8 ತಿಂಗಳು ಆಗುತ್ತಾ ಬಂದಿದೆ. ಆದರೂ ಕೂಡ ಮೇಯರ್-ಉಪಮೇಯರ್ ಚುನಾವಣೆ ನಡೆದಿಲ್ಲ. ನಗರಸೇವಕರಾಗಿ ಆಯ್ಕೆಯಾದರೂ ಇವರಿಗೆ ಯಾವುದೇ ರೀತಿ ಕಾನೂನು ಬದ್ಧ ಅಧಿಕಾರ …
Read More »16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜೋಷಿ ಶ್ರೀನಾಥ್ ಮಹದೇವ್-ಎಸ್ಪಿ, ಲೋಕಾಯುಕ್ತ, ಕೆಂ.ಎಂ ಶಾಂತರಾಜ್-ಬೆಸ್ಕಾಂ, ಸಿ.ಕೆ ಬಾಬಾ-ಆಗ್ನೇಯ ವಿಭಾಗ ಡಿಸಿಪಿ, ಸಂಜೀವ್ ಪಾಟೀಲ್-ಬೆಳಗಾಂ ಎಸ್ಪಿ, ಕಲಾ ಕೃಷ್ಣಸ್ವಾಮಿ-ಪೂರ್ವ ಸಂಚಾರಿ ವಿಭಾಗ ಡಿಸಿಪಿ, ಹರೀಶ್ ಪಾಂಡೇ- ಎಸ್ಪಿ, ಎಸಿಬಿ, ಲಕ್ಷ್ಮಣ್ ಹಿಂಬರಗಿ- ಬೆಂಗಳೂರಿ ಪಶ್ಚಿಮ ವಿಭಾಗ ಡಿಸಿಪಿ, ನಾಗೇಶ್ ಡಿ.ಎಲ್-ಎಸ್ಪಿ, ಚಿಕ್ಕಬಳ್ಳಾಪುರ, …
Read More »ಬೆಳಗಾವಿ ನೂತನ S.P. ಆಗಿ ನೇಮಿಸಿ ಸಂಜೀವ್ ಪಾಟೀಲ ನೇಮಕ,ಬೆಳಗಾವಿ ನೂತನ ಎಸ್ಪಿ ಆಗಿ ನೇಮಿಸಿ
ಧಾರವಾಡ : 16 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಕೂಡ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲೋಕೇಶ್ ಜಗಲಸರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಪಿ.ಕೃಷ್ಣಕಾಂತ್ ಅವರನ್ನು ಬೆಂಗಳೂರಿನ ಸೌತ್ ಡಿವಿಜನ್‌ಗೆ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಇವರಿಂದ ತೆರವಾದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ …
Read More »ಡಿಸಿ ಕಚೇರಿ ಮುಂಭಾಗ ಎಂಇಎಸ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಳಗಾವಿ: ಸರ್ಕಾರಿ ದಾಖಲಾತಿ ಪತ್ರವನ್ನು ಮರಾಠಿ ಭಾಷೆಯಲ್ಲಿ ನೀಡಬೇಕೆಂದು ಒತ್ತಾಯಿಸಿ ಎಂಇಎಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ನಗರದ ಸರ್ದಾರ್ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಪ್ರದರ್ಶಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಎಂಇಎಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ವೇಳೆ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ …
Read More »PUC ಪಾಸಾದವರಿಗೆ ಗುಡ್ ನ್ಯೂಸ್: SDA ಹುದ್ದೆಗಳಿಗೆ ನೇಮಕಾತಿ
ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿ ಗ್ರೂಪ್ ಸಿ ವೃಂದದ ಪರಿಶಿಷ್ಟ ಜಾತಿ ಬ್ಯಾಕ್ ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಪತ್ರದಲ್ಲಿ ರಾಜ್ಯ ಸರ್ಕಾರದಿಂದ ಅಧಿಸೂಚನೆ ಪ್ರಕಟಿಸಲಾಗಿದ್ದು, 155 SDA ಹುದ್ದೆಗಳ ನೇಮಕಾತಿಗೆ ಜುಲೈ 11 ರಿಂದ ಆಗಸ್ಟ್ 10 ರ ವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ಮಂಡಳಿ ನಡೆಸುವ …
Read More »ತನ್ನ ಹೇಳಿಕೆಯಿಂದ U ಟರ್ನ್ ಹೊಡೆದ ಕತ್ತಿ
ಚಿಕ್ಕೋಡಿ:2024ರ ಬಳಿಕ ಕರ್ನಾಟಕದಲ್ಲಿ ಎರಡು ರಾಜ್ಯ ಹಾಗೂ ದೇಶದಲ್ಲಿ 50 ರಾಜ್ಯಗಳು ನಿರ್ಮಾಣ ಆಗುತ್ತವೆ ಎಂದು ಹೇಳಿಕೆ ನೀಡಿದ್ದ ಸಚಿವ ಸಚಿವ ಉಮೇಶ ಕತ್ತಿ ಮತ್ತೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಪದೇ ಪದೇ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಆಗುತ್ತದೆ ಎಂದು ಹೇಳಿಕೆ ನೀಡುತ್ತಲೇ ಬಂದಿದ್ದ ಉಮೇಶ ಕತ್ತಿ ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಭಾನುವಾರ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಜ್ಯ ಸೇರಿ …
Read More »ಅಸ್ಸಾಂನಿಂದ 40 ಶವಗಳು ಹಿಂದಿರುಗಲಿವೆ’ ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗುವುದು’
ಖುರ್ಚಿಗಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಶಿವಸೇನಾ ಸಂಸದ ನಿರಂತರ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ರಾವುತ್ ನೇತೃತ್ವದಲ್ಲಿ ಶಿವಸೇನಾ ಮುಖನರು ಬಂಡೆದ್ದ ಶಾಸಕರ ಮೇಲೆ ನಿರಂತರ ವಾಗ್ದಾಳಿ ಮುಂದುವರೆಸಿದ್ದಾರೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸುಪ್ರಿಮೋ ಶರದ್ ಪವಾರ್ ಅವರು ಮಹಾವಿಕಾಸ್ ಆಘಾಡಿ ಶಾಸಕರ ಜೊತೆಗೆ ಮುಚ್ಚಿದ ಬಾಗಿಲುಗಳ ಹಿಂದೆ ನಿರಂತರ ಸಭೆ ನಡೆಸುತ್ತಿದ್ದಾರೆ. ಇಂದು ಮುಂಬೈ ಮತ್ತು ಪುಣೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸತತ ಎರಡನೇ ದಿನವಾದ ಇಂದೂ ಕೂಡ …
Read More »
Laxmi News 24×7