Breaking News

ಇ-ಸ್ವತ್ತು ತಂತ್ರಾಂಶ ದುರುಪಯೋಗಪಡಿಸಿಕೊಂಡಿದ್ದ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್‌ನನ್ನು ಅಮಾನತು

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶ ದುರುಪಯೋಗಪಡಿಸಿಕೊಂಡಿದ್ದ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್‌ನನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ. 2021ರ ಸೆ.17ರಿಂದ 21ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ-ಖಾತಾ ವಿತರಿಸಲಾಗಿತ್ತು.

Read More »

ಬಿಜೆಪಿಯೇ ನನ್ನ ಗಂಡನನ್ನು ಸಮಾಧಿ ಮಾಡಿಬಿಡ್ತು; ಸಂತೋಷ್‌ ಪತ್ನಿ ಜಯಶ್ರೀ

ಬೆಳಗಾವಿ: ಬಿಜೆಪಿಯೇ ನನ್ನ ಗಂಡನನ್ನು ಸಮಾಧಿ ಮಾಡಿಬಿಡ್ತು ಎಂದು ಸಂತೋಷ್‌ ಪತ್ನಿ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ರಾತ್ರಿ ನನ್ನ ಪತಿ ಸಂತೋಷ್‌ ನನ್ನ ಜೊತೆ ಮಾತನಾಡಿದ್ದರು. ಬೆಳಗ್ಗೆ ವೇಳೆಗೆ ಅವರ ಆತ್ಮಹತ್ಯೆ ಸುದ್ದಿ ಬಂದಿದೆ. ಮದುವೆಯಾಗಿ ಇನ್ನೂ ಮೂರು ವರ್ಷ ಆಗಿದೆ. ನಾನೇನು ಮಾಡಲಿ ಈಗ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನನ್ನ ಬಳೆ, ಸರ ಹೀಗೆ ಎಲ್ಲಾ ಒಡವೆಗಳನ್ನು ಅಡ ಇಟ್ಟು ಕಾಮಗಾರಿಗಳನ್ನು ಮಾಡಿಸಿದ್ದರು. ಆದ್ರೆ, …

Read More »

ತ್ರಿಕೋನ ಪ್ರೇಮ ಕಥೆ ದುರಂತದಲ್ಲಿ ಅಂತ್ಯ; ಮೂವರೂ ಆತ್ಮಹತ್ಯೆಗೆ ಶರಣು!

ರಾಯಚೂರು: ತ್ರಿಕೋನ ಪ್ರೇಮಕಥೆಯೊಂದು ದುರಂತ್ಯ ಅಂತ್ಯಕಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೌದು, ಅವನಿಗೆ ಮದುವೆ ಆಗಿದೆ. ಆದರೂ ಮತ್ತೊಂದು ಯುವತಿಯೊಂದಿಗೆ ಪ್ರೀತಿ ಪ್ರೇಮ ಮುಂದುವರೆಸಿದ್ದನು. ಆದರೆ ಇದೀಗ ಮೂವರು ಸಾವಿನ ದಾರಿ ಹಿಡಿದಿದ್ದಾರೆ.   ಇದೀಗ ಆತ್ಮಹತ್ಯೆಗೆ ಶರಣಾದ ಯುವತಿಯ ಹೆಸರು ಪಾರ್ವತಿ (34). ಈಕೆ ರಾಯಚೂರಿನ ಆರ್‌ ಟಿಪಿಎಸ್‌ ನಲ್ಲಿ ಮಹಿಳಾ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಳು. ಕೈ ತುಂಬಾ ಸಂಬಳ ಬರುವ, ಇರೊಕ್ಕೊಂದು ಕ್ವಾಟ್ರಸ್‌ ಇದ್ದ ಈಕೆ ಬಿದ್ದಿದ್ದು …

Read More »

ಬಿಎಸ್​ವೈ ಭೇಟಿ ಮಾಡಿ ಚರ್ಚಿಸಿದ ಸಿಎಂ : ಇಂದೇ ರಾಜೀನಾಮೆ ನೀಡ್ತಾರಾ ಈಶ್ವರಪ್ಪ?

ಬೆಳಗಾವಿ : ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡ ಹಿನ್ನೆಲೆ ಬಿಎಸ್‌ವೈ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ಪ್ರವಾಸದಲ್ಲಿರುವ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪರನ್ನು ಸಂಕಮ್ ಹೋಟೆಲಿನಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಈಶ್ವರಪ್ಪರಿಂದ ರಾಜೀನಾಮೆ ಪಡೆಯುವ ಬಗ್ಗೆ ಬಿಎಸ್‌ವೈ ಜೊತೆಗೆ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮಾತಿಗೆ ಬಿಎಸ್‌ವೈ ಸಮ್ಮತಿ ನೀಡಿದ್ದಾರಾ ಎಂಬ ಬಗ್ಗೆ ಖಚಿತ ಮಾಹಿತಿ …

Read More »

ಬಿಜೆಪಿಯನ್ನು ಕಿತ್ತೆಸೆಯೋಕೆ‌‌ ಅದೇನು ಕೊತ್ತಂಬರಿ ಸೊಪ್ಪೇ’?: ಸಚಿವ ಶ್ರೀರಾಮುಲು

ಮಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಯಾರಿಗೂ ಬೇಡವಾಗಿರುವ ಕೂಸಾಗಿದ್ದಾರೆ. ಅವರು ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ‘ಬಿಜೆಪಿಯನ್ನು ಕಿತ್ತೆಸೆಯೋಕೆ‌‌ ಅದೇನು ಕೊತ್ತಂಬರಿ ಸೊಪ್ಪೇ’? ಎಂದು ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಇಡೀ ದೇಶದಲ್ಲಿ, ರಾಜ್ಯದಲ್ಲಿ ಆಲದ ಮರವಾಗಿ ಬೆಳೆದು ನಿಂತಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದ್ದು, ಪ್ರಧಾನಿ ಮೋದಿ ದೇಶಕ್ಕೆ ಸಮರ್ಥ ನಾಯಕರಾಗಿದ್ದಾರೆ ಎಂದರು. ದೇಶದಲ್ಲಿ ಕಾಂಗ್ರೆಸ್ ಯಾರಿಗೂ ಬೇಡವಾದ ಪಕ್ಷವಾಗಿದೆ. …

Read More »

ಹಲವು ವರ್ಷಗಳಿಂದ ತಿರುಪತಿಗೆ ಬರುತ್ತಿದ್ದೇವೆ. ಆದರೆ, ಈಗ ಇರುವ ಪರಿಸ್ಥಿತಿ ಈ ಮೊದಲು ಎಂದೂ ಕಂಡಿರಲಿಲ್ಲ ಎಂದು ಭಕ್ತರೊಬ್ಬರು ಆಕ್ರೋಶ

ತಿರುಪತಿ, ಆಂಧ್ರಪ್ರದೇಶ : ಶ್ರೀವಾರಿ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ನೀಡುವ ಮೂರು ಕೇಂದ್ರಗಳಲ್ಲಿ ಭಕ್ತಾದಿಗಳು ಹೆಚ್ಚಾದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಮೂವರಿಗೆ ಗಾಯವಾಗಿದೆ. ಆ ಮೂವರನ್ನು ರುಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ನಂತರ ಗೋವಿಂದರಾಜಸ್ವಾಮಿ ಸತ್ರ, ಶ್ರೀನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್‌ಗಳಲ್ಲಿ ಸರ್ವದರ್ಶನ ಟೋಕನ್‌ಗಳನ್ನು ನೀಡಲಾಗಿರುವ ಕಾರಣದಿಂದ ನೂಕುನುಗ್ಗಲು ಸಂಭವಿಸಿದೆ ಎನ್ನಲಾಗಿದೆ. ಇದರೊಂದಿಗೆ ಸಣ್ಣ ಮಕ್ಕಳಿಗೆ ಆಹಾರ, ಕುಡಿಯುವ ನೀರಿನಂತಹ …

Read More »

ನನ್ನ ಮೇಲೆ ಆಪಾದನೆ ಮಾಡಿದವ್ರು ಕೋರ್ಟ್‌ನಲ್ಲೇ ಪ್ರೂವ್‌ ಮಾಡ್ಬೇಕಿತ್ತು.. ಆತ್ಮಹತ್ಯೆಗೂ ನನ್ಗೂ ಸಂಬಂಧ ಇಲ್ಲ.. ಈಶ್ವರಪ್ಪ

ಮೈಸೂರು : ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಆತ ಯಾರೆಂಬುದು ನನಗೆ ಗೊತ್ತೇ ಇಲ್ಲ ಎಂದು ಸಚಿವ ಈಶ್ವರಪ್ಪ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರಪ್ಪ ಅವರು, ತಮ್ಮ ಇಲಾಖೆಯ ಮೇಲೆ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ಆತ ಯಾರೆಂಬುದು ನನಗೆ ಗೊತ್ತೇ ಇಲ್ಲ. ಈತ ನಮ್ಮ ಇಲಾಖೆಯ ಮೇಲೆ ಆರೋಪ ಮಾಡಿರುವ …

Read More »

ಈಶ್ವರಪ್ಪನವರನ್ನು ಮಾತ್ರ ವಜಾ ಮಾಡೋದಲ್ಲ ಮುಖ್ಯಮಂತ್ರಿಯೇ ರಾಜೀನಾಮೆ ಕೊಡಬೇಕು: ಸುರ್ಜೆವಾಲಾ

ಬೆಂಗಳೂರು : ಸಿಎಂ ಬೊಮ್ಮಾಯಿ‌, ಬಿಜೆಪಿ, ಭಜರಂಗದಳ, ಪಿಎಫ್ಐ, ಸಿಎಫ್ಐ ಈ ರಾಜ್ಯದ ಸಾಮರಸ್ಯ ಹಾಳು ಮಾಡುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಬ್ಬ ಸಚಿವರ ಮೇಲೆ ಆಪಾದನೆ ಬಂದಿದೆ. 40% ಕಮಿಷನ್ ಪಡೀತಿದಾರೆ ಅಂತಾ ಆರೋಪ ಬಂದಿದೆ. ಅವರ ಮೇಲೆ ಕ್ರಮಕೈಗೊಳ್ಳಲಾಗದಷ್ಟು ಸಿಎಂ ವೀಕ್ ಆಗಿದ್ದಾರೆ. ಈಗ ಒಬ್ಬ ಬಿಜೆಪಿ ಕಾರ್ಯಕರ್ತ …

Read More »

ಗುತ್ತಿಗೆದಾರ ಸಂತೋಷ್ ಸಾವು: ‘ಸಚಿವ ಈಶ್ವರಪ್ಪರನ್ನ ಅರೆಸ್ಟ್ ಮಾಡಿ’ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಮೃತದೇಹ ಉಡುಪಿಯ ಹೋಟೆಲ್ ಒಂದರಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈಶ್ವರಪ್ಪ ವಿರುದ್ಧ ಸೆಕ್ಷನ್ 302 ಅಡಿಯಲ್ಲಿ ಕೇಸ್​ ದಾಖಲಿಸಿಕೊಳ್ಳಬೇಕು. ಈ ಕೂಡಲೇ ಈಶ್ವರಪ್ಪರನ್ನ ಬಂಧಿಸಬೇಕು. ಅಲ್ಲದೇ ಬೊಮ್ಮಾಯಿ ಅವರು ಕ್ಯಾಬಿನೆಟ್​ನಿಂದ ವಜಾ ಮಾಡಬೇಕು. ಯಾಕಂದ್ರೆ ಈಶ್ವರಪ್ಪ ಅವರೇ ನನ್ನ …

Read More »

ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರ.. ಬೆಳಗಾವಿಯ ಸಂತೋಷ್​ ಪಾಟೀಲ್​ ಆತ್ಮಹತ್ಯೆ

ಬೆಳಗಾವಿ/ಉಡುಪಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ವಾಟ್ಸಪ್​ನಲ್ಲಿ ಡೆತ್ ನೋಟ್ ಕಳಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯ ಲಾಡ್ಜ್​ನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಉಡುಪಿ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಬಡಸ್ ಗ್ರಾಮದ ಸಂತೋಷ್​ ಪಾಟೀಲ್​ ಸದ್ಯ ವಿಜಯ ನಗರದಲ್ಲಿ ವಾಸವಾಗಿದ್ದರು‌. ಬಿಜೆಪಿ ಸದಸ್ಯರೂ ಆಗಿರುವ ಇವರು ಕೆ.ಎಸ್. …

Read More »