ಬೆಂಗಳೂರು: ಜಾತಿ, ಧರ್ಮಗಳನ್ನು ( Caste, religion ) ಮೀರಿದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ. ಅದುವೇ ಮನುಷ್ಯ ಜಾತಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahamad Khan ) ಅಭಿಪ್ರಾಯ ಪಟ್ಟರು. ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಇಂದು ಡಾ.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬಿಬಿಎಂಪಿಯ ಪೌರ ಕಾರ್ಮಿಕರಿಗೆ ತಮ್ಮ ಕೈಯ್ಯಾರೆ ಭೋಜನ ಉಣಬಡಿಸಿದ …
Read More »ಹೊಸಬರಿಗೆ ಬಿಜೆಪಿ ಮಣೆ?: ಸಚಿವೆ ನಿರ್ಮಲಾಗೆ ಉತ್ತರಪ್ರದೇಶದಿಂದ ರಾಜ್ಯಸಭೆ ಟಿಕೆಟ್?
ಬೆಂಗಳೂರು: ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಹೊಸಮುಖಗಳಿಗೆ ಮನ್ನಣೆ ನೀಡಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೆ.ಸಿ. ರಾಮಮೂರ್ತಿ ಅವರು ಮತ್ತೊಂದು ಅವಧಿಗೆ ಆಯ್ಕೆ ಆಗಲು ಟಿಕೆಟ್ ಬಯಸಿದ್ದರು. ಆದರೆ ರಾಜ್ಯದಿಂದ ಅವರನ್ನು ಆಯ್ಕೆ ಮಾಡುತ್ತಿಲ್ಲ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾಗಿ ಉನ್ನತ ಮೂಲಗಳು ಖಚಿತಪಡಿಸಿವೆ. ನಿರ್ಮಲಾ ಸೀತಾರಾಮನ್ ಅವರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ …
Read More »15 ದಿನ ಅಧಿಕಾರಿಗಳಿಗಿಲ್ಲ ರಜೆ; ಮುಖ್ಯಮಂತ್ರಿ ಕಟ್ಟಪ್ಪಣೆ: ಡಿಸಿ, ಸಿಇಒಗಳೊಂದಿಗೆ ವಿಡಿಯೋ ಸಂವಾದ
ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರಿ ಮಳೆ ಬಾಧಿತ ಪ್ರದೇಶದಲ್ಲಿ ಯುದ್ಧೋಪಾದಿ ತುರ್ತು ಕೆಲಸಗಳ ಜತೆಗೆ ಪರಿಹಾರ ವಿತರಿಸಬೇಕಾಗಿದ್ದು, ಯಾವುದೇ ಅಧಿಕಾರಿಗಳಿಗೆ ಮುಂದಿನ 15 ದಿನ ರಜೆ ಮಂಜೂರು ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟಪ್ಪಣೆ ಮಾಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ವೇದಿಕೆ ಮೂಲಕ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳ ಜತೆಗೆ ಶನಿವಾರ ಸಭೆ ನಡೆಸಿದ ಅವರು, ಮಳೆ ಹಾನಿ ಪರಿಸ್ಥಿತಿ ಹಾಗೂ ಕೈಗೊಂಡ ಕ್ರಮಗಳನ್ನು ಪರಾಮಶಿಸಿದರು. ಎಲ್ಲ ಅಧಿಕಾರಿಗಳು …
Read More »ಜಲಾಶಯ ನೀರು ಬಿಡುಗಡೆ- ಮಹಾರಾಷ್ಟ್ರದ ಜತೆ ಸಮನ್ವಯ, ಮಾಹಿತಿ ವಿನಿಮಯಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ಬೆಳಗಾವಿ: ಎಲ್ಲೆಡೆ ಮಳೆಯಾಗುತ್ತಿರುವುದರಿಂದ ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ರಾಜ್ಯದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಅಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಸಂಗ್ರಹ ಮತ್ತಿತರ ವಿಷಯಗಳ ಕುರಿತು ನಿರಂತರವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸಂಭವನೀಯ ಪ್ರವಾಹ ನಿರ್ವಹಣೆಯ ಸಿದ್ಧತೆಗೆ ಸಂಬಂಧಿಸಿದಂತೆ ಶನಿವಾರ(ಮೇ 21) ಮುಖ್ಯಮಂತ್ರಿಗಳು …
Read More »ಅಜಾನ್ ವಿರುದ್ಧ ಜೂನ್ 1ರಿಂದ ಮತ್ತೆ ಹೋರಾಟ: ಮುತಾಲಿಕ್
ಹಾಸನ, ಮೇ 22: “ಅಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಜೂನ್ 1ರಿಂದ ಎರಡನೇ ಸುತ್ತಿನ ಹೋರಾಟವನ್ನು ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು. ಹಾಸನದಲ್ಲಿ ಮಾತನಾಡಿದ ಅವರು, “ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಸೀದಿಗಳಲ್ಲಿ ಅಜಾನ್ ನಿಲ್ಲಿಸಬೇಕಾಗಿದೆ ಹಾಗೂ ನಿರ್ದಿಷ್ಟ ಪ್ರಮಾಣದ ಧ್ವನಿಯೊಂದಿಗೆ ಅಜಾನ್ ಪ್ರಸಾರ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದರೂ ಸಹ ಬಹುತೇಕ ಮಸೀದಿಗಳಲ್ಲಿ ಇದು ಪಾಲನೆ ಆಗುತ್ತಿಲ್ಲ” …
Read More »ಸಾಮ್ರಾಟರ ಬೆತ್ತಲೆ ಸತ್ಯ ಬಿಚ್ಚಿಟ್ಟ ಮುನಿರಾಜು: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ‘ಅಶೋಕ ಅವರು ಸಾಮ್ರಾಟರಾಗಿ ಬೆಳೆಯಲು ಕಾರಣವಾದ ‘ಬೆತ್ತಲೆ ಸತ್ಯ’ದ ಹುತ್ತ ಬಿಚ್ಚಿಕೊಂಡಿದ್ದು, ಇದಕ್ಕೇನು ಹೇಳುತ್ತೀರಿ ಸಾಮ್ರಾಟರೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ‘1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ ಅವರು ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು. ಅಂಥ …
Read More »ಗೋವಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ಸಾವಿಗೀಡಾಗಿದ್ದಾರೆ.
ಬೆಳಗಾವಿ: ಗೋವಾದ ಮಾಪ್ಸಾ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ದುರ್ಮರಣ ಹೊಂದಿದ್ದಾರೆ. ನಾಯರ್ ಅನಗೋಲ್ಕರ್ (28), ರೋಹನ್ ಗದಗ (26) ಹಾಗೂ ಸನ್ನಿ ಅವನೇಕರ್ (31) ಮೃತಪಟ್ಟಿರುವ ಯುವಕರೆಂದು ಗುರುತಿಸಲಾಗಿದೆ. ಮಾಪ್ಸಾ ಜಿಲ್ಲೆಯ ಕುಛೇಲಿ ಬಳಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕಾರು ಅಪಘಾತ ಸಂಭವಿಸಿತು. ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಪರಿಣಾಮ ದುರ್ಘಟನೆ …
Read More »ಕರ್ನಾಟಕ ಶಿಕ್ಷಕರ ಹುದ್ದೆ ನೇಮಕಾತಿ 2022: ಐವರಲ್ಲಿ ಒಬ್ಬರಿಗೆ ಉದ್ಯೋಗ ಖಚಿತ
ಬೆಂಗಳೂರು,ಮೇ22: ಶಿಕ್ಷಕರಾಗಬೇಕು ಅನ್ನೋ ಹಂಬಲ, ಛಲವನ್ನು ಹೊಂದಿರುವ ಅಭ್ಯರ್ಥಿಗಳು ಈಗಾಗಲೇ ಸಂಪೂರ್ಣ ತಯಾರಿಯನ್ನು ಮುಗಿಸಿ ಶಿಕ್ಷಕರ ಹುದ್ದೆ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಈ ವೇಳೆ ಭಾವಿ ಶಿಕ್ಷಕರಿಗೊಂದು ಗುಡ್ ನ್ಯೂಸ್ ಸಿಕ್ಕಿದೆ. ನೀವು ಶಿಕ್ಷಕರಾಗಬೇಕಾದರೇ ನಾಲ್ವರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದರೇ ಸಾಕು ಸರ್ಕಾರಿ ಶಿಕ್ಷಕ ಹುದ್ದೆ ಖಾತ್ರಿಯಾಗಲಿದೆ. ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಶನಿವಾರ ಮತ್ತು ಮೇ22 ಭಾನುವಾರ ನಡೆಯುತ್ತಿದೆ.ಮೊದಲ ದಿನದ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು …
Read More »ಸಿಲಿಕಾನ್ ಸಿಟಿ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಸವಾರ ಸಾವು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಫ್ಲೈಓವರ್‌ನಲ್ಲಿ ಇಂದು ಮುಂಜಾನೆಯೇ ಬೈಕ್ ಸವಾರ ಮೃತಪಟ್ಟಿದ್ದಾನೆ. ಬೆಂಗಳೂರಿನ ಜಕ್ಕೂರು ಏರೊಡ್ರಮ್ ಬಳಿ ಘಟನೆ ನಡೆದಿದ್ದು, ಏರ್‌ಪೋರ್ಟ್ ಫ್ಲೈಓವರ್ ಮೇಲೆ ಬೈಕ್‍ನಲ್ಲಿ 45 ವರ್ಷದ ಸವಾರ ಮತ್ತು ಹಿಂಬದಿಯಲ್ಲಿ 12 ವರ್ಷದ ಬಾಲಕ ಕುಳಿತುಕೊಂಡಿದ್ದ. ಬೈಕ್ ಎಡಬದಿಯಲ್ಲಿ ಹೋಗುತ್ತಿದ್ದರೂ ಕಾರೊಂದು ರಭಸವಾಗಿ ಬಂದು ಗುದ್ದಿದೆ. ಪರಿಣಾಮ ವಾಹನ ಸವಾರ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ. ಬಾಲಕನಿಗೆ ಗಂಭೀರ ಗಾಯವಾಗಿದೆ. ಆಕ್ಸಿಡೆಂಟ್ ಆದ ಸ್ಥಳದಿಂದ …
Read More »ತುಂಗಭದ್ರಾ ಜಲಾಶಯಕ್ಕೆ ವಾಡಿಕೆಗೂ ಮೊದಲೇ ಭಾರೀ ಒಳ ಹರಿವು ಹೆಚ್ಚಾಳವಾಗಿದ್ದು, ಡ್ಯಾಂ ಹಿನ್ನೀರಿನ ಬೆಳೆ ಜಲಾವೃತ
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ವಾಡಿಕೆಗೂ ಮೊದಲೇ ಭಾರೀ ಒಳ ಹರಿವು ಹೆಚ್ಚಾಳವಾಗಿದ್ದು, ಡ್ಯಾಂ ಹಿನ್ನೀರಿನ ಬೆಳೆ ಜಲಾವೃತವಾಗಿವೆ. ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿನ ಹಿನ್ನೀರಿನಲ್ಲಿ ಮೆಕ್ಕೆಜೋಳ ಬೆಳೆ ನೀರು ಪಾಲಾಗಿದೆ. ಇದರಿಂದ ರೈತ ಮಂಜುನಾಥ್ ಕಂಗಲಾಗಿದ್ದಾರೆ. ಸಾಮಾನ್ಯವಾಗಿ ಜುಲೈ ಕೊನೆಯ ವಾರ ಟಿಬಿ ಡ್ಯಾಂನಲ್ಲಿ ಹೆಚ್ಚಿನ ಒಳ ಹರಿವು ಹೆಚ್ಚಾಗುತ್ತದೆ. ಆದರೆ ಈ ಬಾರಿ ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷೆಗೂ ಮೊದಲೇ 85 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದ್ದು, ಸದ್ಯ ಜಲಾಶಯದಲ್ಲಿ …
Read More »
Laxmi News 24×7