Breaking News

ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು!

ತೀರ್ಥಹಳ್ಳಿ: ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರ ಕಾರು ಎರಡು ದಿನ ಗುಡ್ಡೇಕೊಪ್ಪ (ಗೃಹ ಸಚಿವರ ನಿವಾಸವಿರುವ ಗ್ರಾಮ) ದಲ್ಲಿ ಇತ್ತು. ಅವರ ಜತೆ ಗೃಹಸಚಿವರು ನೇರ ಸಂಪರ್ಕ ಹೊಂದಿದ್ದರು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಗಂಭೀರ ಆರೋಪ ಮಾಡಿದ್ದಾರೆ.   ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪದಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ಪಾದಯಾತ್ರೆಗೆ ಶುಕ್ರವಾರ ಚಾಲನೆ …

Read More »

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಮೇ ಮಾಹೆಗೆ ಪಡಿತರ ನೀಡಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜಿಲ್ಲೆಯ ಅಂತ್ಯೋದಯ(ಎಎವೈ) ಮತ್ತು ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.   ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 15 ಕೆ.ಜಿ. ಜೋಳ ಮತ್ತು 20 ಕೆ.ಜಿ. ಅಕ್ಕಿ ಹಾಗೂ ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿ ಸದ್ಯಸರಿಗೆ 2 …

Read More »

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಇಬ್ಬರು ಮಹಿಳಾ ಅಧಿಕಾರಿಗಳು

ಬೆಂಗಳೂರು, ಮೇ 6: ವಾಣಿಜ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಆಯುಕ್ತೆ ಪ್ರಿಯಾಂಕ ಜೆ.ಸಿ. ಹಾಗೂ ಮಂಡ್ಯ ಜಿಲ್ಲೆಯ ಪರಿಸರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೇಮಲತಾ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.   ಪ್ರಿಯಾಂಕ ಅವರು ಮಂಜುನಾಥ್ ಎಂಬ ಎಲೆಕ್ಟ್ರಿಕಲ್ ಹಾಗೂ ಹಾರ್ಡ್‍ವೇರ್ ಉದ್ಯಮಿಗೆ ಜಿಎಸ್‍ಟಿ ಸರ್ಟಿಫಿಕೇಟ್ ನೀಡಲು 10 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟು, 3 ಸಾವಿರ ರೂ.ಗಳನ್ನು ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ ತೆರೆಯಲು …

Read More »

ಇಬ್ಬರು ಪುಟ್ಟ ಮಕ್ಕಳು ದುರಂತ ಅಂತ್ಯಕಂಡಿದ್ದು. ಈ ದೃಶ್ಯ ನೋಡಿದ್ರೆ ಕರುಳು ಚುರ್​ ಅನ್ನುತ್ತೆ

ಕೊಪ್ಪಳ: ಸಾವು ಯಾವಾಗ? ಹೇಗೆ ಬರುತ್ತೆ? ಎಂದು ಊಹಿಸಲೂ ಸಾಧ್ಯವಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಇಂದು(ಶುಕ್ರವಾರ) ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳು ದುರಂತ ಅಂತ್ಯಕಂಡಿದ್ದು. ಈ ದೃಶ್ಯ ನೋಡಿದ್ರೆ ಕರುಳು ಚುರ್​ ಅನ್ನುತ್ತೆ. ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ? ಎಂದು ಮನದಲ್ಲೇ ಶಪಿಸುತ್ತೀರಿ. ಹೃದಯವಿದ್ರಾವಕ ಘಟನೆ ಕಂಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದ ಶೈಲಮ್ಮ(28) ಮತ್ತು ಇವರ ಮಕ್ಕಳಾದ ಸಾನ್ವಿ(4), ಪವನ್ (2) ಮೃತ …

Read More »

ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ: ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆ

ಮೈಸೂರು: ಕವಲಂದೆಯನ್ನು ಚೋಟಾ ಪಾಕಿಸ್ತಾನ್​​ ಎಂಬ ಆಡಿಯೋ ವೈರಲ್​ ಪ್ರಕರಣ ಸಂಬಂಧ ಆರೋಪಿಗಳ ಕೃತ್ಯವನ್ನು ಸ್ಥಳೀಯ ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ. ಭಾರತ ನಮ್ಮ ದೇಶ, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಬದುಕುತ್ತೇವೆ. ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಘಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಸ್ಲಿಂ ಮುಖಂಡರು, ಇದು ನಾವು ಹುಟ್ಟಿ ಬೆಳೆದ ದೇಶ, 8-10 ತಲೆಮಾರುಗಳಿಂದ ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಭಾರತ ಒಂದು ಸುಂದರವಾದ ಬೊಂಬೆಯಂತೆ. ಘಟನೆ …

Read More »

ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ, ಶಿವಾಜಿ ಮೂರ್ತಿ ಭಗ್ನ

ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ಮಧ್ಯೆ ಅನ್ಯ ಕೋಮಿನ ಗುಂಪೊಂದು ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ನೂರ್ ಖಾನ್ ಕಾಲೋನಿಯ ಜೈ ಭವಾನಿ ಪಾಸ್‍ಫುಡ್ ಹೋಟೆಲ್‍ನಲ್ಲಿ ನಡೆದಿದೆ. ಗೋ ರಕ್ಷಣೆ ಸೇರಿದಂತೆ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಎಂಬ ಕಾರಣಕ್ಕೆ ಬಜರಂಗದಳದ ಕಾರ್ಯಕರ್ತನ ಮೇಲೆ ಗಂಭೀರವಾಗಿ ಅನ್ಯಕೋಮಿನ ಜನರು ಹಲ್ಲೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ತಡರಾತ್ರಿ ಹೋಟೆಲ್‍ಗೆ ಬಂದು ಊಟದ ವಿಚಾರಕ್ಕೆ ಗಲಾಟೆ …

Read More »

ರಾಜ್ಯದಲ್ಲಿ ದೇಶದ್ರೋಹಿ ಶಕ್ತಿ ಇನ್ನೂ ಜೀವಂತ : ಮುತಾಲಿಕ್

ಮಡಿಕೇರಿ: ಹಿಜಬ್ ಪ್ರಕರಣದಿಂದ ರಾಜ್ಯದಲ್ಲಿ ದೊಡ್ಡಮಟ್ಟದ ಚಿಂತನಾ ಮಂಥನ ಉಂಟಾಗಿದ್ದು, ಇದರಿಂದ ಹಿಂದೂ ಸಮಾಜ ಜಾಗೃತವಾಗುತ್ತಿದೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕೊಡಗಿನ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಎಡವಿರುವ ಹಿಂದೂ ಸಮಾಜ ಸುಧಾರಿಸಿಕೊಳ್ಳುತ್ತಿದೆ. ಇಲ್ಲಿವರೆಗಿನ ಹಿಂದೂ ಸಂಘಟನೆಗಳ ಜಾಗೃತಿ ಹೋರಾಟ ಯಶಸ್ವಿಯಾಗಿದೆ. ಮುಂದೆ ವಕ್ಛ್ ಬೋರ್ಡ್ ಗೋಲ್ಮಾಲ್, ಅಜಾನ್ ಮೈಕ್ ಕಿರಿಕಿರಿ, ಗೋಹತ್ಯೆ, ಬೈಬಲ್ ಬೋಧನೆ ವಿರೋಧಿ ಹೋರಾಟ ಮತ್ತು ಮತಾಂತರ ನಿಷೇದ ಕಾಯ್ದೆ …

Read More »

ನಕಲಿ ನೋಟು ಮತ್ತು ಅಸಲಿ ನೋಟುಚಲಾವಣೆ ಜಾಲದ ವ್ಯವಹಾರವನ್ನು ಬಯಲಿಗೆ

ಅಂಕೋಲಾ: ನಕಲಿ ನೋಟು ಮತ್ತು ಅಸಲಿ ನೋಟು ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಅಂತಾರಾಜ್ಯ ಖೋಟಾ ನೋಟು ಚಲಾವಣೆ ಜಾಲದ ವ್ಯವಹಾರವನ್ನು ಬಯಲಿಗೆಳಿದ್ದಿದ್ದಾರೆ. ಕಾರವಾರದ ಕೊಡಿಭಾಗದ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ಪ್ರವೀಣ್ ರಾಜನ ನಾಯರ್, ಗೋವಾ ರಾಜ್ಯದ ಮಡಗಾಂವ್ ನಿವಾಸಿ ಲೋಯ್ಡ್‌ ಲಾರೆನ್ಸ್ ಸ್ಟೇವಿಸ್, ಗೋವಾ ಪತ್ರೋಡಾದ ಲಾರ್ಸನ್ ಲೂಯಿಸ್ ಸಿಲ್ವಾ, ಮಡಗಾಂವ್ ಪ್ರನೋಯ ಫರ್ನಾಂಡಿಸ್ ಬಂಧಿತ ಆರೋಪಿಗಳು. ಈ ಜಾಲದ ಪ್ರಮುಖ ಆರೋಪಿ …

Read More »

ನಾನು ಜನ್ಮ ದಿನಾಚರಣೆ ಆಚರಿಸಲ್ಲ, ಜಾಹೀರಾತು ನೀಡೋದಾದ್ರೇ ಕಾಂಗ್ರೆಸ್ ಹೋರಾಟ, ಪ್ರತಿಭಟನೆ ಬಗ್ಗೆ ನೀಡಿ – ಡಿಕೆ ಶಿವಕುಮಾರ್

ಬೆಂಗಳೂರು: ಮೇ.15ರಂದು ನನ್ನ ಜನ್ಮ ದಿನಾಚರಣೆಯನ್ನು ನಾನು ಆಚರಿಸಿಕೊಳ್ಳೋದಿಲ್ಲ. ನನ್ನ ಮನೆ ಬಳಿಗೆ ಬರಬೇಡಿ. ನಾನು ಉದಯಪುರದಲ್ಲಿ ಇರುತ್ತೇನೆ. ನನ್ನ ಜನ್ಮ ದಿನಾಚರಣೆ ನಿಮಿತ್ತ ಮಾಧ್ಯಮಗಳಿಗೆ ಜಾಹೀರಾತು ಕೊಡೋ ಬದಲಾಗಿ ಕಾಂಗ್ರೆಸ್ ಪಕ್ಷದಿಂದ ( Congress Party ) ಸರ್ಕಾರದ ವಿರುದ್ಧ ನಡೆಸಿದಂತ ಹೋರಾಟ, ಪ್ರತಿಭಟನೆಗಳ ಬಗ್ಗೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ …

Read More »

ನಿಮ್ಮನ್ನು ಸಿಎಂ ಮಾಡ್ತೇವೆ 2500 ಕೋಟಿ ಕೊಡಿ ಎಂದಿದ್ರು: ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್

ಬೆಳಗಾವಿ: ನಿಮ್ಮನ್ನು ಸಿಎಂ ಮಾಡುತ್ತೇವೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಮಾತನಾಡಿದ ಅವರು, 2500 ಕೋಟಿ ರೂ. ಕೇಳಿದಾಗ ನಾನು 2500 ಕೋಟಿ ಅಂದರೆ ಏನು ಅಂತ ತಿಳಿದಿದ್ದೀರಿ ಎಂದು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೇಗೆ ಇಡುವುದು? ಕೋಣೆಯಲ್ಲಿ ಇಡುವುದಾ? ಗೋದಾಮಿನಲ್ಲಿ ಇಡುವುದಾ? ಎಂದಿದ್ದೆ. ಟಿಕೆಟ್ ಕೊಡಿಸುತ್ತೇವೆ …

Read More »