ಬೆಳಗಾವಿ – ಭಾರಿ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ತಾಲೂಕಿನ ಶಾಲೆ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಡಿಡಿಪಿಐ ಬಸವರಾಜ ನಾಲತವಾಡ ಪ್ರಗತಿವಾಹಿನಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ತಾಲೂಕಿನ 22 ಶಾಲೆಗಳಿಗೆ ಈಗಾಗಲೆ ರಜೆ ಘೋಷಿಸಲಾಗಿತ್ತು. ಈಗ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಕಳೆದ ರಾತ್ರಿಯಿಂದ …
Read More »ಮತ್ತೆ ಸಿ ಎಂ ಬದಲಾವಣೆ ಚರ್ಚೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಹುಬ್ಬಳ್ಳಿ: ಸದ್ಯ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನನಗೆ ಪಕ್ಷದ ವರಿಷ್ಠರು ಕರೆ ಮಾಡಿ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಈ ರೀತಿಯಾಗಿ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು. ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ಆಗಿಲ್ಲ. ಆದರೆ, ಆ ಕಾರ್ಯಕ್ರಮದಿಂದ ಕಾಂಗ್ರೆಸ್ಗೆ ಸೈಡ್ …
Read More »ಎಸ್‌ಪಿ ನಾಯಕರ ಕಾರ್ಗೆ ಡಿಕ್ಕಿ ಹೊಡೆದು 500 ಮೀಟರ್‌ಗಳವರೆಗೆ ಎಳೆದೊಯ್ದ ಟ್ರಕ್!
ಉತ್ತರಪ್ರದೇಶದಲ್ಲಿ ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಮೈನಪುರಿಯಲ್ಲಿ ಎಸ್‌ಪಿ ನಾಯಕರ ಕಾರ್ಗೆ ಟ್ರಕ್ ಡಿಕ್ಕಿ ಹೊಡೆದಿದ್ದಲ್ಲದೇ, ಆ ಕಾರನ್ನು 500 ಮೀಟರ್‌ಗಳವರೆಗೆ ಎಳೆದೊಯ್ದಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಎಸ್‌ಪಿ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಕಾರ್ಗೆ ಡಿಕ್ಕಿ ಹೊಡೆದ ಲಾರಿ ಸುಮಾರು 500 ಮೀಟರ್‌ಗಳವರೆಗೆ ಎಳೆದೊಯ್ದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಟಾವಾ ಮೂಲದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮೈನ್ಪುರಿ ಎಸ್‌ಪಿ ಕಮಲೇಶ್ ದೀಕ್ಷಿತ್ ಹೇಳಿಕೆ ನೀಡಿದ್ದಾರೆ.
Read More »ದರ್ಶನ್ ಕ್ಷಮೆ ಕೇಳಲೇಬೇಕು ಪುನೀತ್ ಫ್ಯಾನ್ಸ್ ಆಕ್ರೋಶ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ‘ಕ್ರಾಂತಿ’ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದರ್ಶನ್ ಸಂದರ್ಶನವೊಂದರಲ್ಲಿ ಆಡಿದ ಮಾತು ವಿವಾದಕ್ಕೆ ತಿರುಗಿದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ದರ್ಶನ್ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಕೊಟ್ಟ ಒಂದೇ ಒಂದು ಹೇಳಿಕೆ ಈಗ ಪುನೀತ್ ಅಭಿಮಾನಿಗಳ ನಿದ್ದೆಕೆಡಿಸಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ಮಾತಾಡಿದ್ದು, ಅಪ್ಪು ಫ್ಯಾನ್ಸ್ ಆಕ್ರೋಶಕ್ಕೆ ಕಾರಣ. ಇನ್ನೇನು …
Read More »ಬಬಲೇಶ್ವರ ಪಾಕಿಸ್ತಾನದಲ್ಲಿ ಇದೆಯಾ: ಸವದಿ ಪ್ರಶ್ನೆ
ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರವೇನು ಪಾಕಿಸ್ತಾನದಲ್ಲಿ ಇದೆಯಾ? ಅದು ಕರ್ನಾಟಕ ರಾಜ್ಯದಲ್ಲಿ ಇದೆ ತಾನೇ? ಹೀಗೆಂದು ಪ್ರಶ್ನಿಸಿದವರು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ. ನಾಗಠಾಣದಲ್ಲಿ ಭಾನುವಾರ ನಡೆದ ನೂತನ ಬಸ್ ನಿಲ್ದಾಣ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದ ನೀವು ಸ್ಪರ್ಧಿಸುತ್ತೀರಿ ಎಂಬ ಮಾತು ಕೇಳಿಬರುತ್ತಿದೆ ನಿಜಾನಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು. ‘ನಾನು ಸದ್ಯ ವಿಧಾನ …
Read More »ನಾನು ಹಾಕಿದ್ದು ಬಟ್ಟೆ ಶೂ, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ : ಕತ್ತಿ ಪ್ರತಿಕ್ರಿಯೆ
ಹನೂರು: ಇಂದು ಮೈಸೂರಿನ ವೀರನಹೊಸಹಳ್ಳಿಯಲ್ಲಿ ಶೂ ಹಾಕಿಕೊಂಡು ಗಜಪಡೆಗೆ ಪೂಜೆ ಸಲ್ಲಿಸಿ ಸಾಕಷ್ಟು ಟೀಕೆಗೆ ಗುರಿಯಾದ ಕುರಿತು ಅರಣ್ಯ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹನೂರು ತಾಲೂಕಿನ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಉಮೇಶ್ ಕತ್ತಿ ತಾನು ಹಾಕಿರುವುದು ಬಟ್ಟೆ ಶೂ ಆಗಿದ್ದು, ಮಳೆ ಆಗಿದ್ದರಿಂದ ಶೂ ಬಿಚ್ಚಲಿಲ್ಲ, ಪೂಜೆ ಮಾಡುವ ಮುನ್ನ ಬಿಚ್ಚಿದ್ದೆ ಬಳಿಕ ಆನೆಗಳಿಗೆ ಸ್ವಾಗತ ಕೋರುವಾಗ ಹಾಕಿಕೊಂಡಿದ್ದೆ, …
Read More »ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯಲು ಒತ್ತಾಯ
ಬೈಲಹೊಂಗಲ: ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಡಿವೈಎಸ್ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ತೆರಳಿ ಅಸಮಾಧಾನ ಹೊರ ಹಾಕಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಪೊಲೀಸರು ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವುದು ಬಿಟ್ಟು ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದು ಅಕ್ಷಮ್ಯ …
Read More »ಎಲ ಹಳ್ಳಿಗಳಲ್ಲೂ ಜೆಜೆಎಂ ಕಾಮಗಾರಿ ಪ್ರಗತಿ: ಯಾದವಾಡ
ರಾಮದುರ್ಗ: ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿವ ನೀರು ಕಲ್ಪಿಸಬೇಕೆಂಬ ಉದ್ದೇಶದೊಂದಿಗೆ ಮೊದಲ ಆದ್ಯತೆ ನೀಡಿ ಕೋಟ್ಯಾಂತರ ಅನುದಾನ ನೀಡಿದ್ದು, ತಾಲೂಕಿನಲ್ಲಿ ಎಲ್ಲ ಹಳ್ಳಿಗಳಲ್ಲಿಯೂ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ಹೊಸಕೇರಿ ಗ್ರಾಮದಲ್ಲಿ ಗ್ರಾಮೀಣ ಕುಡಿವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ 99.47 ಲಕ್ಷ ರೂ. ಅನುದಾನದಲ್ಲಿ ಮನೆ- ಮನೆಗೆ ನಲ್ಲಿ ಜೋಡಣೆ ಕಾಮಗಾರಿಗೆ ಹಾಗೂ ಶಾಸಕರ ಪ್ರದೇಶಾಭಿವೃದ್ಧಿಯ 10 …
Read More »ಅತಿವೃಷ್ಟಿ ಹಾನಿ ಒಳಗಾದ ಮನೆಗಳನ್ನು ಸರ್ವೇ ಸರಿಯಾಗಿ ಮಾಡಿ: ಸಾರ್ವಜನಿಕರ ಆಕ್ರೋಶ
ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಯಿಂದ ಧರೆಗುರುಳಿದ ಮನೆಗಳ ಸರ್ವೆ ಕಾರ್ಯ ಸರಿಯಾಗಿ ನಡೆದಿಲ್ಲ. ಸಾಕಷ್ಟು ಸಾರ್ವಜನಿಕ ಮನೆಗಳಿಗೆ ಪರಿಹಾರ ಪಟ್ಟಿಯಿಂದ ವಜಾಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾನಾಪುರ ತಾಲ್ಲೂಕಿನಲ್ಲಿ ಕೇರವಾಡ ಗ್ರಾವi ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂದುರ್ ಗ್ರಾಮದಲ್ಲಿ ಶೋಭಾ .ಉ. ಹಿರೇಮಠ ಅವರ ಮನೆ ಎರಡು ತಿಂಗಳ ಹಿಂದೆ ನಿರಂತರ ಮಳೆಯಿಂದ ಬಹಳಷ್ಟು ಹಾನಿಯಾಗಿದ್ದು. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು …
Read More »ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್‌ವೊಂದು ಅಪಘಾತಕ್ಕೀಡಾದ ಘಟನೆ ಪುಣಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ನಡೆದಿದೆ. ಹೌದು ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್‌ವೊಂದು ಬೆಳಗಾವಿ ಹಿರೇಬಾಗೇವಾಡಿ ಮಧ್ಯೆ ಕಮಕಾರಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಬಸ್ ಪಲ್ಟಿಯಾಗಿದೆ.. ಸರಕಾರಿ ಬಸ್ ಕೊಲ್ಹಾಪೂರದಿಂದ ರಾಣೇಬೆನ್ನೂರಿಗೆ ಪ್ರಯಾಣ ಬೆಳೆಸಿತ್ತು. ಇದರಲ್ಲ್ಲಿ ಒಟ್ಟು ೩೫ ಜನ ಪ್ರಯಾಣ ಮಾಡುತ್ತಿದ್ದರು. ಜಿಟಿ ಜಿಟಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ …
Read More »
Laxmi News 24×7