Breaking News

ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ.

ಮಂಡ್ಯ: ಕಾಯಿಲೆಯಿದೆ ಎಂದು ಮಗುವನ್ನು ಬಿಟ್ಟು ಹೋದ ಘಟನೆ ನಗರದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ನಡೆದಿದೆ. ನಮಗೆ ಒಂದು ಹೊತ್ತಿನ ಊಟವಿಲ್ಲದಿದ್ದರೂ ಪರವಾಗಿಲ್ಲ. ಮಗುವಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅದೇಷ್ಟೋ ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಿದ್ದಾರೆ. ಅಂತಹದರಲ್ಲಿ ತಮ್ಮ ಮಗುವಿಗೆ ಕಾಯಿಲೆ ಇದೆ ಎಂದು ಆ ಮಗುವನ್ನು ಅನಾಥ ಮಾಡಿ ಪೋಷಕರು ಬಿಟ್ಟು ಹೋಗಿದ್ದು, ಇತ್ತ ತಂದೆ ತಾಯಿಗಳ ಲಾಲನೆ …

Read More »

ಶಾಸಕರಾಗುವುದಕ್ಕಿಂತ ಮೊದಲೇ ಬೆನಕೆ ಬೆಳಗಾವಿ ಮಹಾನಗರ ಅಧ್ಯಕ್ಷರಾಗಿದ್ದರು. ಇದೀಗ 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇ

ಬೆಳಗಾವಿ: ಶಾಸಕ ಅನಿಲ್ ಬೆನಕೆ ಅವರನ್ನು ಬೆಳಗಾವಿ ಬಿಜೆಪಿ ನಗರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಾಸಕರಾಗುವುದಕ್ಕಿಂತ ಮೊದಲೇ ಬೆನಕೆ ಬೆಳಗಾವಿ ಮಹಾನಗರ ಅಧ್ಯಕ್ಷರಾಗಿದ್ದರು. ಇದೀಗ 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಹಾಲಿ ಶಾಸಕರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ ಬಗ್ಗೆ ಬೆಳಗಾವಿ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅನಿಲ್ ಬೆನಕೆಗೆ ಬಿಜೆಪಿ ಟಿಕೆಟ್ ಕೈ ತಪ್ಪುತ್ತಾ? ಪಕ್ಷ ಸಂಘಟನೆ ದೃಷ್ಟಿಯಿಂದ ಈ ಜವಾಬ್ದಾರಿ ನೀಡಲಾಗಿದೆಯೇ? ಎಂಬ ಬಗ್ಗೆ ಚರ್ಚೆಗಳು …

Read More »

ಬಿಎಸ್ ವೈ ಪಕ್ಷದ ದೊಡ್ಡ ಶಕ್ತಿ, : ಬಿ.ಶ್ರೀರಾಮುಲು

ಬಳ್ಳಾರಿ: ಬಿಜೆಪಿ ಪಕ್ಷದ ದೊಡ್ಡ ಶಕ್ತಿಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಿಂದ ಸೈಡ್ ಲೈನ್ ಮಾಡುವ ಮಾತೇ ಇಲ್ಲ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್‌ಯಡಿಯೂರಪ್ಪನವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಪಕ್ಷದ ದೊಡ್ಡ ಶಕ್ತಿ. ಅವರ ಶಕ್ತಿ ಕುಗ್ಗಿಸುವ ಕೆಲಸ ಪಕ್ಷದಲ್ಲಿ ಎಂದೂ ನಡೆಯುವುದಿಲ್ಲ. ಎಂಥ ಪರಿಸ್ಥಿತಿಯಲ್ಲೂ ಬಿಎಸ್ …

Read More »

ಪೆಟ್ರೋಲ್-ಡೀಸೆಲ್ ಕೊರತೆ ; ಪೆಟ್ರೋಲ್ ಬಂಕ್ ಗಳು ಖಾಲಿ ಖಾಲಿ-

ಕೋಲಾರ: ಕೋಲಾರ ಜಿಲ್ಲೆಯಲ್ಲಿನ ಬಹುತೇಕ ಭಾರತ್ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ತೀವ್ರವಾಗುತ್ತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ ˌ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪೆಟ್ರೋಲ್ ಬಂಕ್‌ಗಳ ಮಾಲೀಕರು ಕಳೆದೊಂದು ವಾರದಿಂದ ಭಾರತ್ ಪೆಟ್ರೋಲ್ ಸರಬರಾಜಿನಲ್ಲಿ ತೀವ್ರ ಕೊರತೆ ಉಂಟಾಗಿದ್ದು ಕಳೆದೆರಡು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಸಂಪೂರ್ಣ ಖಾಲಿ ಯಾಗಿದೆ. ಆದರೆ ಈ ಕೊರತೆ ಯಾಕೆ ಆಗುತ್ತಿದೆಯೆಂಬುದೂ ಸಹ ನಮಗೇ ತಿಳಿದಿಲ್ಲ ಎಂದರು. ಇನ್ನು …

Read More »

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್ ಪುರಾಣ.

ಬೆಂಗಳೂರು : ಮೇ.12ರಂದು ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ಬಿ.ಕೆ.ಸುಮಾ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಹಿನ್ನೆಲೆಯಲ್ಲಿ ಮಧ್ಯಾಹ್ನ ಇನ್ಸ್‌ಪೆಕ್ಟರ್‌ ರವಿಕುಮಾರ್‌ ಮುಂದೆ ಹಾಜರಾದ ಸುಮಾ ಅವರನ್ನು ನಾಲ್ಕು ತಾಸು ಸುದೀರ್ಘವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ ತನ್ನ ಮೇಲಿನ ಆರೋಪಗಳನ್ನು ಸುಮಾ ನಿರಾಕರಿಸಿದ್ದಾರೆ. ಇತ್ತೀಚಿಗೆ ವೈಯಕ್ತಿಕ ಕಾರಣಕ್ಕೆ ಅನಂತರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ತಮ್ಮ ಪತಿಗೆ ಸಾವಿಗೆ …

Read More »

ಪಬ್ಜಿ ಆಡಬೇಡ ಎಂದು ತಂದೆ-ಮಗನ ಮಧ್ಯೆ ಜಗಳ, ಇಬ್ಬರ ಜಗಳದಲ್ಲಿ ಪ್ರಾಣ ಕಳೆದುಕೊಂಡ ತಾಯಿ

ಚಿಕ್ಕಮಗಳೂರು: ಜಿಲ್ಲೆಯ ಹಾಗಲಖಾನ್ ಎಸ್ಟೇಟ್ನಲ್ಲಿ ಭೀಕರ ದುರ್ಘಟನೆಯೊಂದು ಸಂಭವಿಸಿದೆ. ಮಗನ ಪಬ್ಜಿ ಹುಚ್ಚಿಗೆ ತಾಯಿ ಬಲಿಯಾಗಿದ್ದಾರೆ. ಮೈಮುನಾ(40) ಕೊಲೆಯಾದ ಮಹಿಳೆ. ಪಬ್ಜಿ ಆಡದಂತೆ ಮಗನ ಜೊತೆ ತಂದೆ ಇಮ್ತಿಯಾಜ್ ಜಗಳವಾಡುತ್ತಿದ್ದರು. ಈ ವೇಳೆ ನಿನ್ನ ಸಾಯಿಸುತ್ತೇನೆಂದು ಅಪ್ಪ ಮಗನಿಗೆ ಕೋವಿ ಹಿಡಿದಿದ್ದ. ಕೋಪದಲ್ಲಿ ಗುಂಡು ಹಾಕಿಸಿದರೆ ಮಗನ ಪ್ರಾಣ ಹೋಗುತ್ತೆ ಎಂದು ತಾಯಿ ಮೈಮುನಾ ಅಡ್ಡ ಬಂದಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಇಮ್ತಿಯಾಜ್ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆಗೈದಿದ್ದಾರೆ. …

Read More »

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್

ಸಮಾಜ ಕಲ್ಯಾಣ ಇಲಾಖೆಯಿಂದ 2022-23ನೇ ಸಾಲಿಗೆ 5 ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಖಾಸಗಿ ಶಾಲೆಗಳಲ್ಲಿ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ.   ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳಿಂದ ಅರ್ಜಿ ಪಡೆದು, ಮೇ 31 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಡಯಟ್ ಮೂಲಕ ಪ್ರವೇಶ ಪರೀಕ್ಷೆ ಜೂ.5 ಆಗಿರುತ್ತದೆ. …

Read More »

ಚಿಕ್ಕೋಡಿ: ಕಲಿಕೆಯಿಂದ ದೂರ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು

ಚಿಕ್ಕೋಡಿ: ಪಟ್ಟಣದ ವಿವಿಧೆಡೆ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗುವುದು ಕಂಡುಬರುತ್ತಿದೆ. ಶಾಲೆಗಳು ಪುನರರಾರಂಭವಾಗಿದ್ದರೂ ಅವರು ಕಲಿಕೆಯಿಂದ ದೂರ ಉಳಿದಿದ್ದಾರೆ. ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಈ ಸಾಮಾಜಿಕ ಪಿಡುಗು ರಾಜಾರೋಷವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.   ಪಟ್ಟಣದ ಬಸವ ವೃತ್ತ, ಕೋರ್ಟ್‌ ಸಂಕೀರ್ಣದ ಎದುರು, ಕೇಂದ್ರ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಬಳಿ ಮಕ್ಕಳು ಗುಂಪು ಗುಂಪಾಗಿ ಬೇಡುವುದು ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ಹದಿಹರೆಯದವರೆಗಿನವರು …

Read More »

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಣದಲ್ಲಿ ಕೋಟ್ಯಾಧೀಶರು

ಬೆಳಗಾವಿ: ಇದೇ ಮೊದಲ ಬಾರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ನಾಯಕ ಪ್ರಕಾಶ ಹುಕ್ಕೇರಿ ಕೋಟ್ಯಾಧಿ‍ಪತಿ. ಅವರ ಪತ್ನಿ ನೀಲಾಂಬಿಕಾ ಅವರೂ ಕೋಟಿ ಒಡತಿ. ಪ್ರಕಾಶ ಹುಕ್ಕೇರಿ ಹೆಸರಿನಲ್ಲಿ ₹ 3.27 ಕೋಟಿ ಮೌಲ್ಯದ ಚರಾಸ್ತಿ ಇದೆ. ಅವರ ಪತ್ನಿ ಹೆಸರಿನಲ್ಲಿ 2.56 ಕೋಟಿ ಆಸ್ತಿ ಇದೆ. ಅವಿಭಕ್ತ ಕುಟುಂಬದ ಹೆಸರಿನಲ್ಲಿ ₹ 2.42 ಕೋಟಿ ಚರಾಸ್ತಿ ಇದೆ ಎಂದು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ನೀಡಿದ್ದಾರೆ. …

Read More »

ಯಾಸೀನ್ ಮಲಿಕ್‌ಗೆ ಮರಣ ದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮನವಿ

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ದೋಷಿಯಾಗಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸೀನ್ ಮಲಿಕ್‌ಗೆ ಮರಣ ದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮನವಿ ಮಾಡಿದೆ. ಬುರ್ಹಾನ್‌ವಾನಿ ಎನ್‌ಕೌಂಟರ್ ಆದ 30 ನಿಮಿಷಗಳಲ್ಲಿ ನನ್ನನ್ನು ಬಂಧಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಪಾಸ್‌ಪೋರ್ಟ್ ಮಂಜೂರು ಮಾಡಿದ್ದರು ಹಾಗೂ ನಾನು ಅಪರಾಧಿ ಅಲ್ಲ ಎಂಬ ಕಾರಣಕ್ಕೆ ನನಗೆ ಹೇಳಿಕೆ ನೀಡಲು ಭಾರತ ಅವಕಾಶ ಮಾಡಿಕೊಟ್ಟಿತು ಎಂದು ಯಾಸಿನ್ ಮಲಿಕ್ …

Read More »