Breaking News

ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಮತಯಾಚನೆ

ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಚುನಾವಣೆ ಅಂಗವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಶ್ರೀಮತಿ ಸ್ಪೂರ್ತಿ ಪಾಟೀಲ ( ಅಂಗಡಿ ) , ಶ್ರೀಮತಿ ಶೃದ್ಧಾ ಶೆಟ್ಟರ್ ಅಂಗಡಿ ಅವರ ಜತೆಗೆ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆ, ರೈಲ್ ನಗರ, ಪಿ ಡಬ್ಲ್ಯೂ ಡಿ ಕ್ವಾರ್ಟರ್ಸ್ ನಲ್ಲಿ ಮನೆಮನೆಗೆ ತೆರಳಿ ಶಿಕ್ಷಕರ ಹಾಗೂ ಪದವೀಧರರ ಭೇಟಿಯಾಗಿ …

Read More »

ಬಿತ್ತನೆ ಮುಂದೂಡುವಂತೆ ರೈತರಿಗೆ ಕೃಷಿ ಇಲಾಖೆ ಸಲಹೆ

ಬೆಳಗಾವಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ವಿಜಯಪುರ ಜಿಲ್ಲೆಯಾದ್ಯಂತ ಕಳೆದ ವಾರ ಸುರಿದ ಅಕಾಲಿಕವಾಗಿರುವ ಮಳೆ ನೈಸರ್ಗಿಕ ಮಾನ್ಸೂನುಗಳಿಂದಾದುದಲ್ಲ ಬದಲಾಗಿ ಸೈಕ್ಲೋನ್‌ ಪರಿಣಾಮದಿಂದಾದ ಮಳೆಯಾಗಿರುತ್ತದೆ. ಆದ್ದರಿಂದ ರೈತರಿಗೆ ಸದ್ಯ ಬಿತ್ತುಣಿಕೆಗೆ ಭೂಮಿಯನ್ನು ಹದ ಮಾಡಿಕೊಳ್ಳಲು ಮತ್ತು ಮಾಗಿ ಉಳುಮೆ ಮಾಡಲು ಅವಕಾಶ ಇದೆ.   ಪ್ರಸ್ತುತ ಭೂಮಿಯ ತೇವಾಂಶ ಸಂಪೂರ್ಣ ಹೊಂದಿದ್ದರೂ ಕೂಡ ಮುಂಗಾರು ಬಿತ್ತನೆಗೆ ಇದು ಸೂಕ್ತ ಸಮಯವಲ್ಲ. ಈಗ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿರುವುದರ ಜೊತೆಗೆ ಮುಂಗಾರು …

Read More »

ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಿ ವಿವಾದ ಎಬ್ಬಿಸಬೇಡಿ’-ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್

ನವದೆಹಲಿ: ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ವಿಷಯಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗ’ವನ್ನು ಹುಡುಕುವ ಮೂಲಕ ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.   ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸುವುದು ಒಂದು ಅಪವಾದ ಎಂದು ಆರ್‌ಎಸ್‌ಎಸ್ …

Read More »

ಮಹಾನಗರ ಪಾಲಿಕೆ ಆಯುಕ್ತರೇ ಲಂಚಕ್ಕಾಗಿ ಕೈಯೊಡ್ದಿ A.C.B. ಬಲೆಗೆ

ಕಲಬುರ್ಗಿ: ಮಹಾನಗರ ಪಾಲಿಕೆ ಆಯುಕ್ತರೇ ಲಂಚಕ್ಕಾಗಿ ಕೈಯೊಡ್ದಿ ಎಸಿಬಿ ಬಲೆಗೆ ಬಿದ್ದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ  ಕೋವಿಡ್ ಸುರಕ್ಷತಾ ಚಕ್ರದ ಹೆಲ್ಪ್ ಲೈನ್ ನಿರ್ದೇಶಕ ಶರಣಬಸಪ್ಪ ಬಳಿ ಪಾಲಿಕೆ ಆಯುಕ್ತ ಶಂಕ್ರಣ್ಣ 7 ಲಕ್ಷದ 50 ಸಾವಿರ ಬಿಲ್ ಮಾಡಲು ಶೇ.2ರಷ್ಟು ಲಂಚಕ್ಕೆ ಬೇಡಿಕೆ …

Read More »

ಮೋದಿ ಅಧಿಕಾರಕ್ಕೆ ಬಂದ್ಮೇಲೆ ಪ್ರತಿಯೊಬ್ಬರ ಮೇಲೆ 1.70 ಲಕ್ಷ ಸಾಲ ಹೊರಿಸಿದ್ದಾರೆ – ಸಿದ್ಧರಾಮಯ್ಯ

ಬೆಂಗಳೂರು: ರಾಜ್ಯ ಮತ್ತು ದೇಶ ಸಾಲದ ಸುಳಿಯಲ್ಲಿ ಸಿಲುಕಿವೆ. 2014-15ರಲ್ಲಿ ದೇಶದ ಮೇಲಿನ ಸಾಲ 53 ಲಕ್ಷದ 11 ಸಾವಿರ ಕೋಟಿ ಇತ್ತು, ಈಗ ಮಾರ್ಚ್ ಕೊನೆವರೆಗೆ ಸಾಲ 155 ಲಕ್ಷ ಕೋಟಿಯಾಗಿದೆ. ಮೋದಿ ಅಧಿಕಾರಕ್ಕೆ ( PM Modi ) ಬಂದು 8 ವರ್ಷದಲ್ಲಿ 100 ಲಕ್ಷಕ್ಕೂ ಹೆಚ್ಚು ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೋಬ್ಬರ ಮೇಲೆ 1 ಲಕ್ಷದ 70 ಸಾವಿರ ಸಾಲ ಇದೆ ಎಂಬುದಾಗಿ ವಿಪಕ್ಷ ನಾಯಕ …

Read More »

2023 ರ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯತಂತ್ರ

2023 ರ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಕಾರ್ಯತಂತ್ರಗಳನ್ನು ರೂಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ನವಸಂಕಲ್ಪ ಶಿಬಿರದ ಮೊದಲನೇ ದಿನ ಕಾಂಗ್ರೆಸ್ ಮುಖಂಡರ ಜೊತೆ ಭಾಗಿಯಾದೆ. ಈ ನವಸಂಕಲ್ಪ ಶಿಬಿರ ಪಕ್ಷಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಲಿದ್ದು, ಇದು ಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನಾಂದಿಯಾಗಲಿದೆ. ಬರುವ ಚುನಾವಣೆಯಯನ್ನು ನಾವೆಲ್ಲರೂ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಕೂಡಿಕೊಂಡು ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ಅಭಿಯಾನದಲ್ಲಿ ನಮ್ಮ ಎಲ್ಲ …

Read More »

ಜೂನ್ 8 ರಿಂದ ಬಿಜೆಪಿಯ ಶಾಸಕರ ಕಚೇರಿ, ಮನೆ ಮುಂದೆ ಧರಣಿ ಸತ್ಯಾಗ್ರಹ: ಪ್ರಮೋದ್ ಮುತಾಲಿಕ್

ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್​ಸ್ಪೀಕರ್ ಬಳಕೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಕೊನೆಯಾಗಿದ್ದು, ಜೂನ್ 8 ರಿಂದ ಬಿಜೆಪಿಯ ಶಾಸಕರ ಕಚೇರಿ, ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಿ. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯಬೇಕು. ರಾತ್ರಿ …

Read More »

ಅಂಬೇಡ್ಕರ್ ಅವರ ಸ್ಮಾರಕಭವನ ನಿರ್ಮಾಣ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿ

ಹುಬ್ಬಳ್ಳಿಯ ಸಿದ್ಧಾರ್ಥ ಕಾಲೋನಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕಭವನ ನಿರ್ಮಾಣ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. ನಗರದ ಅಂಬೇಡ್ಕರ್ ಸರ್ಕಲ್ ನಿಂದ ಆರಂಭಗೊಂಡ ಪ್ರತಿಭಟನೆಯ ರ್ಯಾಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯವರೆಗೆ ನಡೆಸಲಾಯಿತು. ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಕೂಡಲೇ ಸ್ಮಾರಕ ಭವನ‌ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.

Read More »

ಪೋಡಿ, ಭೂಪರಿವರ್ತನೆ, 11ಇ ಸ್ಕೆಚ್, ಹದ್ದುಬಸ್ತ್ ಮತ್ತಿತರ ನಕ್ಷೆ ಆನ್ ಲೈನ್ ನಲ್ಲಿ ಲಭ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, ಜೂ.3 11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿಯನ್ನು ನಾಗರಿಕರು ಆನ್ ಲೈನ್( ONLINE )ನಲ್ಲಿ rdservices.karnataka.gov.in ಮುಖಾಂತರ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮೇಲ್ಕಂಡ ಸೇವೆಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ, ನಾಗರಿಕರು ಅರ್ಜಿಗಳಿಗೆ ಹಣವನ್ನು ಪಾವತಿಸುತ್ತಾರೆ. ಆದ್ದರಿಂದ, ಅವರ ನಕ್ಷೆಯನ್ನು ಅನುಮೋದಿಸಿದ ತಕ್ಷಣ, ಕೆಳಗೆ ನೀಡಲಾದ ವೆಬ್‌ಸೈಟ್ ಲಿಂಕ್‌ನಲ್ಲಿ ಅದನ್ನು ಮುದ್ರಿಸಲು …

Read More »

ಬೆಳಗಾವಿ ನಗರದಲ್ಲಿ ದಿಂಡಿ ಪಾದಯಾತ್ರೆಗೆ ಭವ್ಯ ಸ್ವಾಗತ:

ಬೇಲೂರ್ ಪಾಯೆ ಧಾರವಾಡದದಿಂದ  ನಿನ್ನೆ ಬೆಳಗಾವಿ ನಗರದಕ್ಕೆ ತಲುಪಿತು. ಈ ವೇಳೆ ದಿಂಡಿ ಕಾರ್ಯಕ್ರಮಕ್ಕೆ ಅದ್ಧೂರಿ ಸ್ವಾಗತವನ್ನು ಕೋರಲಾಯಿತು. ನಿನ್ನೆ ಬುಧವಾರ ದಿನಾಂ 1ರಂದು ಬೆಳಗಾವಿಯಲ್ಲಿ ದಿಂಡಿ ಆಗಮಿಸಿತು. ಈ ವೇಳೆ ನ್ಯಯವಾದಿಗಳಾದ ಸದಾಶಿವ ಹಿರೇಮಠರವರ ಕುಟುಂಬದವರು ತಮ್ಮ ನಿವಾಸದಲ್ಲಿ ದಿಂಡಿಯನ್ನು ಸ್ವಾಗತ ಮಾಡಿಕೊಂಡರು. ಈ ವೇಳೆ ಭಜನೆ, ಕೀರ್ತನೆ, ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಭಕ್ತರಿಗೆ ಮಹಾಪ್ರಸಾದವನ್ನು ವಿತರಣೆ ಮಾಡಲಾಯಿತು. ಈ ವೇಳೆ ಕೀರ್ತನಕಾರರಾದ ದೇವಪ್ಪಾ …

Read More »