Breaking News

ಭಾರತದ ನೂತನ ಉಪರಾಷ್ಟ್ರಪತಿಯಾಗಿ ‘ಜಗದೀಪ್ ಧನಕರ್’ ಆಯ್ಕೆ

ನವದೆಹಲಿ : ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಧನಕರ್, ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವಾ ಅವ್ರನ್ನ ಮಣಿಸಿ, ಉಪರಾಷ್ಟ್ರಪತಿ ಗದ್ದುಗೆ ಏರಿದ್ದಾರೆ.   ಅಂದ್ಹಾಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಶ್ರೀಮತಿ ಆಳ್ವಾ ಅವ್ರ ಹೆಸರನ್ನ ನಿರ್ಧರಿಸುವಾಗ ಸಮಾಲೋಚನೆಗಳ ಕೊರತೆಯಿದೆ ಎಂದು ಆರೋಪಿಸಿ, ಮತದಾನದಿಂದ ದೂರ ಉಳಿದಿತ್ತು. ಈ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕುಗಳು …

Read More »

ಗದಗ: ಹೊಟ್ಟೆಯೊಳಗೆ ಬೆಳೆದ ಬೃಹತ್ ಗಡ್ಡೆ, ವೃದ್ಧನ ನರಕಯಾತನೆ

ಗದಗ : ವೃದ್ಧರೊಬ್ಬರ ಹೊಟ್ಟೆಯಲ್ಲಿ ಗಡ್ಡೆ ಬೆಳೆದು ಅವರು ನಡೆಯಲಾರದ ಪರಿಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಬುಲ್ಡೋಜರ್ ನಗರ ನಿವಾಸಿ ಹನುಮಂತಪ್ಪ (69) ತಮ್ಮ ಹೊಟ್ಟೆಯಲ್ಲಿರುವ ಈ ಗಡ್ಡೆಯಿಂದಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಅಲೆಮಾರಿ ಜನಾಂಗದವರಾದ ಇವರು ಕಳೆದ ಹಲವು ವರ್ಷಗಳಿಂದ ಈ ರೋಗಕ್ಕೆ ತುತ್ತಾಗಿದ್ದಾರೆ. ಗಡ್ಡೆ ದೊಡ್ಡದಾಗಿ ಹೊಟ್ಟೆಯೊಳಗಿನಿಂದ ಜೋತು ಬಿದ್ದಿದೆ. ಯಾವುದೇ ನೋವು ಇಲ್ಲದಿದ್ದರೂ ಓಡಾಡಲು ಇವರಿಗೆ ಕಷ್ಟವಾಗುತ್ತಿದೆ. ಸದ್ಯ ಪತ್ನಿಯೇ ಇವರಿಗೆ ಆಧಾರ. ದುಡಿದು ಸಾಕಲು …

Read More »

ರಾಜ್ಯದ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ,

ಬೆಂಗಳೂರು: 2024 ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗಲಿದ್ದು ಕಾರ್ಯತಂತ್ರ ನಡೆಯುತ್ತಿದೆ. ಹಿರಿಯ ಸಂಸದರಿಗೆ ಟಿಕೆಟ್ ನೀಡುವುದು ಬಹುತೇಕ ಅನುಮಾನ. ಹೊಸ ಮುಖಗಳಿಗೆ ಈಗಾಗಲೇ ಸದ್ದಿಲ್ಲದೇ ಶೋಧ ಶುರುವಾಗಿದೆ. 70-75 ವರ್ಷ ದಾಟಿದ ಸಂಸದರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಕ್ ನೀಡುವುದು ಖಚಿತವಾಗಿದ್ದು, ಯುವಕರತ್ತ ಕೇಸರಿ ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದೆ. ಮೂಲಗಳ ಪ್ರಕಾರ, ಆರರಿಂದ ಏಳು ಲೋಕಸಭಾ ಕ್ಷೇತ್ರದ ಹಾಲಿ ಎಂಪಿಗಳನ್ನು ಕೈ ಬಿಡುವ ಸಾಧ್ಯತೆ …

Read More »

2023ರ ವಿಧಾನಸಭೆ ಚುನಾವಣೆಗೆ ತಾಲೀಮು

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್‍ ಜನತಾ ಜಲಧಾರೆ ಸಮಾವೇಶದ ಮೂಲಕ ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿದೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಿಸುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿ ಚುನಾವಣಾ ಸಿದ್ಧತೆಗೆ ಮುನ್ನುಡಿ ಎಂದೇ ಅರ್ಥೈಸಬಹುದು. ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಸಿಎಂ …

Read More »

ಬಿಜೆಪಿ ಶಾಸಕರಿಗೆ ಗೌನ್ ಉಡುಗೊರೆ- ಶಾಸಕ ಸತೀಶ್ ಜಾರಕಿಹೊಳಿ

ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಮೇಯರ್, ಉಪಮೇರ್ ಆಗಿರುವ ಸ್ಥಳೀಯ ಬಿಜೆಪಿ ಶಾಸಕರಿಗೆ ಆ.9 ರಂದು ಕಾಂಗ್ರೆಸ್ ನಿಂದ ಗೌನ್ ಉಡುಗರೆ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. : ಇಂದು ಶನಿವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ರವರು, ವಿಧಾನ ಸಭೆಯ ಚುನಾವಣೆ ಮುಗಿಯುವವರೆಗೂ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಈಗಾಗಲೇ ಅನಧಿಕೃತವಾಗಿ ಬೆಳಗಾವಿಯ …

Read More »

ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1 ಇಂದು ಆರಂಭ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌

ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1 ಇಂದು ಆರಂಭವಾಗಿದ್ದು ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಕಷ್ಟು ಕಾಂಟ್ರವರ್ಸಿ ಜೊತೆ ತಮ್ಮ ಜೋತಿಷ್ಯದ ಮೂಲಕ ಚಿರಪರಿಚಿತರಾದ ಆರ್ಯವರ್ಧನ್ ಗುರೂಜಿ‌ ಈಗ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1ರ ಮೊದಲ ಸ್ಪರ್ಧಿಯಾಗಿದ್ದಾರೆ.   ಇನ್ನೂಆರ್ಯವರ್ಧನ್ ಗುರೂಜಿ‌ಯನ್ನಸ್ಟೇಜ್‌ ಮೇಲೆ ಬರಮಾಡಿಕೊಂಡ ಅಭಿನಯ ಚಕ್ರವರ್ತಿ ಸುದೀಪ್ ಅವರು, ಆರ್ಯವರ್ಧನ್ ಜೊತೆ ಕೆಲಕಾಲ ಮಾತನಾಡಿದರು. ಈ ವೇಳೆ ಮಾತನಾಡೋದಕ್ಕೆ ತುಂಬಾ ಚಡಪಡಿಸುತ್ತಿದ್ದ ಆರ್ಯವರ್ಧನ್ …

Read More »

ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯನ ಬಂದನ

ಬಾಗಲಕೋಟೆ: ಗರ್ಭ ಧರಿಸಿದ್ದ ಎಮ್ಮೆಗೆ ನಕಲಿ ವೈದ್ಯನೊಬ್ಬ ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿ ಎಮ್ಮೆ ಮತ್ತು ಕರು ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ನಕಲಿ ವೈದ್ಯನ ಹೆಸರು ಶಿವಾನಂದ ಮಲ್ಲಪ್ಪ ರುದ್ರಪ್ಪನವರ. ಈತ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಲಿ ಗ್ರಾಮದವ. ಮುಧೋಳ ತಾಲೂಕಿನ ಕನಸಗೇರಿ ಗ್ರಾಮದ ಹನುಮಂತ ಬಾಳಪ್ಪ ಪೂಜೇರಿ ಅವರಿಗೆ ಸೇರಿದ ಎಮ್ಮೆ ಗರ್ಭ ಧರಿಸಿ ಹಲವು ತಿಂಗಳಾಗಿತ್ತು. ಅನಾರೋಗ್ಯ ಕಾರಣ ಮಾಲೀಕರು ಪಶು …

Read More »

ಬಿಜೆಪಿಯವರಿಗೇನು ಗೊತ್ತು ನನ್ನ ಹುಟ್ಟಿದ ದಿನ, ನನ್ನ ಡೇಟ್ ಆಫ್ ಬರ್ತ್ ನನ್ನಪ್ಪ-ಅವ್ವನಿಗೆ ಗೊತ್ತು: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಸಿದ್ದರಾಮಯ್ಯನವರಿಗೆ 75 ವರ್ಷ ಆಗಿಲ್ಲ, ರಾಜಕೀಯಕ್ಕೆ ಬೇಕಾಗಿ ಸಿದ್ದರಾಮೋತ್ಸವವನ್ನು ಆಚರಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ಅವರಿಗೇನು ಗೊತ್ತು ನನ್ನ ಡೇಟ್ ಆಫ್ ಬರ್ತ್, ನನ್ನ ಹುಟ್ಟಿದ ದಿನ ನನ್ನ ಅವ್ವನಿಗೆ, ನಮ್ಮ ಅಪ್ಪನಿಗೆ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾರೆ.   ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮೋತ್ಸವ ಇಷ್ಟೊಂದು ಯಶಸ್ವಿಯಾಯಿತಲ್ಲ, ಆ ಕಾರಣಕ್ಕೆ ಹೊಟ್ಟೆ ಉರಿಯಿಂದ ಬಿಜೆಪಿಯವರು ಹೀಗೆ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಹೇಳಲು ಯಾವುದೇ ವಿಚಾರಗಳಿಲ್ಲ, ಅವರ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದು …

Read More »

ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಆಂಬುಲೆನ್ಸ್ ದೇಣಿಗೆ ನೀಡಿದ ನಟ ಪ್ರಕಾಶ್‌ ರಾಜ್

ಮೈಸೂರು, ಆಗಸ್ಟ್‌ 6: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್ ನೆನಪಿಗಾಗಿ ಬಹುಭಾಷಾ ನಟ ಪ್ರಕಾಶ್ ರಾಜ್ ‘ಅಪ್ಪು ಎಕ್ಸ್‌ಪ್ರೆಸ್’ ಆಂಬುಲೆನ್ಸ್ ಅನ್ನು ಮಿಷನ್‌ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ಪುನೀತ್ ರಾಜ್ ಕುಮಾರ್ ಕನ್ನಡ ನಾಡಿನ ಕಣ್ಮಣಿ. ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವದಾದ್ಯಂತ ತನ್ನ ಸಜ್ಜನಿಕೆ, ಸಮಾಜಸೇವೆ, ಒಳ್ಳೆಯತನ ಮತ್ತು ಅಭಿನಯದಿಂದ ಹೆಸರು ಮಾಡಿದ್ದಾರೆ. ಎಲ್ಲರ ಮನದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ. ಕರ್ನಾಟಕದಾದ್ಯಂತ …

Read More »

ಹೇಗಾದ್ರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಅಮೃತ್ ಪೌಲ್ ರಂಪಾಟ

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪೌಲ್ ಖಿನ್ನತೆಗೆ ಒಳಗಾಗಿ ಜೈಲಿನಲ್ಲಿ ರಂಪಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ಪೌಲ್ ಅವರು ನಾನು ಹಿರಿಯ ಅಧಿಕಾರಗಳನ್ನು ನಂಬಿ ಮೋಸ ಹೋದೆ ಶಾಂತಕುಮಾರ್ ನಂಬಿ ನನ್ನ ಲೈಫ್ ಹಾಳಾಯ್ತು. ಹೇಗಾದ್ರೂ ಮಾಡಿ ಜೈಲಿನಿಂದ ನನ್ನ ಹೊರಗಡೆ ಕರೆತನ್ನಿ ಎಂದು ಕುಟುಂಬಸ್ಥರ ಬಳಿ ಗೋಗರೆಯುತ್ತಿದ್ದಾರೆ. ಇನ್ನೂ ಅಮೃತ್ ಪೌಲ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತ್ಯೇಕ …

Read More »